/newsfirstlive-kannada/media/post_attachments/wp-content/uploads/2024/11/RCB.jpg)
ಇಂಡಿಯನ್ ಪ್ರಿಮೀಯರ್​ ಲೀಗ್​ 2025ರ ವೇಳಾಪಟ್ಟಿಯಲ್ಲಿ ಆರ್ಗನೈಸರ್ಸ್​ ಈಗಾಗಲೇ ಬಿಡುಗಡೆ ಮಾಡಿದೆ. ಮೊದಲ ಪಂದ್ಯದದಲ್ಲಿಯೇ ಬೆಂಗಳೂರು ರಾಯಲ್ ಚಾಲೆಂರ್ಜ್ಸ್​ ಕೊಲ್ಕತ್ತಾ ನೈಟ್​ ರೈಡರ್ಸ್​​ ತಂಡಗಳು ಮಾರ್ಚ್​ 22ರಂದು ಎದುರಾಗುವ ಮೂಲಕ ಐಪಿಎಲ್​2025 ಶುರುವಾಗಲಿದೆ. ಫಿನಾಲೆ ಪಂದ್ಯವನ್ನು ಮೇ 25 ರಂದು 2024ರ ಐಪಿಎಲ್ ಗೆದ್ದ ತಂಡದ ತವರನಲ್ಲಿ ಆಡಿಸಲು ನಿರ್ಣಯಿಸಲಾಗಿದೆ. ಅಂದ್ರೆ ಕೊಲ್ಕತ್ತಾದಲ್ಲಿಯೇ ಫೈನಲ್ ಪಂದ್ಯ ನಡೆಯಲಿದೆ.
/newsfirstlive-kannada/media/post_attachments/wp-content/uploads/2025/02/IND-VS-PAK-2.jpg)
ಒಟ್ಟಾರೆ ಭಾರತದ 13 ಸ್ಥಳಗಳಲ್ಲಿ 74 ಪಂದ್ಯಗಳನ್ನು ಆಯೋಜಿಸಲಾಗಿದೆ ಎಂದು ಬಿಸಿಸಿಐ ಘೋಷಿಸಿದೆ. ಮೊದಲ ದಿನ ಕೊಲ್ಕತ್ತಾ ಮತ್ತು ಬೆಂಗಳೂರು ತಂಡಗಳು ಸೆಣೆಸಿದರೆ. ಎರಡನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಮುಂಬೈ ಇಂಡಿಯನ್ಸ್​ ಚೆನ್ನೈನಲ್ಲಿ ಸೆಣಸಾಡಲಿವೆ. ಅದೇ ದಿನ ಅಂದ್ರೆ ಮಾರ್ಚ್​ 23 ರಂದು ರಾಜಸ್ಥಾನ ರಾಯಲ್ಸ್ ಹಾಗೂ ಸನ್​​ರೈಸರ್ಸ್ ಹೈದ್ರಾಬಾದ್ ತಂಡಗಳು ಮಾರ್ಚ್​ 23 ರಂದು ಸೆಣೆಸಲಿವೆ.
/newsfirstlive-kannada/media/post_attachments/wp-content/uploads/2025/02/IND-VS-PAK-3.jpg)
ಒಟ್ಟು 10 ತಂಡಗಳ ನಡುವಿನ ಕಾದಾಟವನ್ನು ವಿಶಾಖಪಟ್ಟಣಂ, ಗುವಹಾಟಿ ಮತ್ತು ಧರ್ಮಶಾಲಾದಲ್ಲಿ ದೆಹಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ಮತ್ತು ರಾಜಸ್ಥಾನ ರಾಯಲ್ಸ್​ಗಳ ಪಂದ್ಯಗಳು ನಡೆಯಲಿವೆ. ಬಿಸಿಸಿಐ ಚೆನ್ನೈ ಸೂಪರ್​ ಕಿಂಗ್ಸ್​ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ರಾಯಲ್ ಚಾಲೆಂಜರ್ಸ್​ ಬೆಂಗಳೂರು ನಡುವೆ ಎರಡೆರಡು ಪಂದ್ಯಗಳನ್ನು ಏರ್ಪಡಿಸಲು ತುಂಬಾ ಉತ್ಸಾಹದಿಂದ ಇದೆ.
ಐಪಿಎಲ್ 2025 ಲೀಗ್ ಸ್ಟೇಜ್ ಪಂದ್ಯಾವಳಿಗಳು ಮೇ 18ಕ್ಕೆ ಮುಗಿಯಲಿದ್ದು ಪ್ಲೇಆಫ್​ ಪಂದ್ಯಾವಳಿಗಳನ್ನು ಹೈದ್ರಾಬಾದ್ ಹಾಗೂ ಕೊಲ್ಕತ್ತಾ ಆತಿಥ್ಯವಹಿಸಲಿವೆ. ಮೊದಲ ಕ್ವಾಲಿಫೈಯರ್ ಹಾಗೂ ಎಲಿಮಿನೇಟರ್​ ಹೈದ್ರಾಬಾದ್​ನಲ್ಲಿ ಸೆಣೆಸಿದರೆ ಎರಡನೇ ಕ್ವಾಲಿಫೈಯರ್​ ಮತ್ತು ಫೈನಲ್​ ಕೊಲ್ಕತ್ತಾದಲ್ಲಿ ನಡೆಯಲಿದೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us