/newsfirstlive-kannada/media/post_attachments/wp-content/uploads/2025/05/RCB_TEAM_NEW.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಮಹತ್ವದ ಪಂದ್ಯಕ್ಕೆ ಸಜ್ಜುಗೊಂಡಿದೆ. ಇಂದು ಲಕ್ನೋದಲ್ಲಿ ನಡೆಯಲಿರೋ ಪಂದ್ಯದಲ್ಲಿ ಆರ್ಸಿಬಿ, ಸನ್ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ಸೋಲಿನ ರುಚಿ ತೋರಿಸೋ ಲೆಕ್ಕಾಚಾರದಲ್ಲಿದೆ. ಅಷ್ಟೇ ಅಲ್ಲ, ಈ ಪಂದ್ಯವನ್ನ ಗೆದ್ದು ಪಾಯಿಂಟ್ ಟೇಬಲ್ನಲ್ಲಿ ಟಾಪ್ 2 ಸ್ಥಾನದಲ್ಲಿ ಉಳಿಯೋ ಲೆಕ್ಕಾಚಾರದಲ್ಲಿದೆ. ಹಾಗಾದ್ರೆ ಈ ಪಂದ್ಯಕ್ಕೆ ಬೆಂಗಳೂರು ತಂಡದ ಪ್ರಿಪರೇಷನ್ ಹೇಗಿದೆ?.
ಐಪಿಎಲ್ ಸೀಸನ್-18ರ ಪ್ಲೇ ಆಫ್ಗೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಎಂಟ್ರಿ ಕೊಟ್ಟಾಯ್ತು. ಪ್ಲೇ ಆಫ್ಗೆ ಎಂಟ್ರಿ ಕೊಟ್ಟ ಸಮಾಧಾನ ಆರ್ಸಿಬಿಗಿದೆ. ಆದ್ರೀಗ ಬೆಂಗಳೂರು ತಂಡಕ್ಕೆ, ಮತ್ತೊಂದು ಟೆನ್ಶನ್ ಶುರುವಾಗಿದೆ. ಲೀಗ್ ಸ್ಟೇಜ್ನಲ್ಲಿ ಆರ್ಸಿಬಿ ಅದ್ಭುತ ಪ್ರದರ್ಶನ ನೀಡಿದೆ ನಿಜ. ಆದ್ರೆ ಪ್ಲೇ ಆಫ್ಗೂ ಮುನ್ನ ನಡೆಯೋ ಕ್ಲೈಮ್ಯಾಕ್ಸ್ ಪಂದ್ಯಗಳಲ್ಲಿ, ಆರ್ಸಿಬಿಗೆ ನಿಜವಾದ ಅಗ್ನಿ ಪರೀಕ್ಷೆ ಎದುರಾಗಿದೆ.
ಬ್ರೇಕ್ನ ಬಳಿಕ RCBಯ ಮೊದಲ ಪಂದ್ಯ..!
ಆಪರೇಷನ್ ಸಿಂಧೂರ್ ಬಳಿಕ ಆರ್ಸಿಬಿ, ಇದೇ ಮೊದಲ ಐಪಿಎಲ್ ಪಂದ್ಯವನ್ನ ಆಡಲಿದೆ. ಬ್ರೇಕ್ನ ಬಳಿಕ ಐಪಿಎಲ್ ಟೂರ್ನಿ ಶುರುವಾದ್ರೂ, ಮಳೆಯಿಂದ ಆರ್ಸಿಬಿ ಮತ್ತು ಕೆಕೆಆರ್ ಪಂದ್ಯ ರದ್ದಾಗಿತ್ತು. ಹಾಗಾಗಿ ಇಂದು ನಡೆಯೋ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧದ ಪಂದ್ಯ, ಆರ್ಸಿಬಿಗೆ ಅತ್ಯಂತ ಮಹತ್ವದ ಪಂದ್ಯ. ಈ ಪಂದ್ಯವನ್ನ ಆರ್ಸಿಬಿ ಗೆಲ್ಲಲೇಬೇಕಿದೆ.
ಟಾಪ್ 2 ಸ್ಥಾನದ ಮೇಲೆ ಬೆಂಗಳೂರು ಕಣ್ಣು..!
ಆರ್ಸಿಬಿ ಆಡಿರೋ 12 ಪಂದ್ಯಗಳಲ್ಲಿ, 8 ಪಂದ್ಯಗಳನ್ನ ಗೆದ್ದಿದೆ. 3 ಪಂದ್ಯಗಳನ್ನ ಸೋತಿದೆ. ಒಂದು ಪಂದ್ಯ ಮಳೆಯಿಂದ ರದ್ದಾದ ಕಾರಣ, ಫಲಿತಾಂಶ ಬಂದಿಲ್ಲ. ಸದ್ಯ 17 ಅಂಕಗಳೊಂದಿಗೆ ಪಾಯಿಂಟ್ ಟೇಬಲ್ನಲ್ಲಿ 2ನೇ ಸ್ಥಾನದಲ್ಲಿರುವ ಆರ್ಸಿಬಿ, ಉಳಿದೆರೆಡು ಪಂದ್ಯಗಳನ್ನ ಗೆಲ್ಲಲೇಬೇಕಿದೆ. ಆ ಎರಡೂ ಪಂದ್ಯಗಳನ್ನ ಗೆದ್ರೆ ಆರ್ಸಿಬಿ, 21 ಅಂಕಗಳಿಸಲಿದೆ. ಆ ಮೂಲಕ ಬೆಂಗಳೂರು ತಂಡಕ್ಕೆ ಟಾಪ್ 2ನಲ್ಲಿ, ಒಂದು ಸ್ಥಾನ ಫಿಕ್ಸ್ ಆಗಲಿದೆ.
ಕಿಂಗ್ ವಿರಾಟ್ ಕೊಹ್ಲಿಯತ್ತ ಎಲ್ಲರ ಕಣ್ಣು..!
ಆರ್ಸಿಬಿಯ ಬ್ಯಾಟಿಂಗ್ ಸ್ಟಾರ್, ವಿರಾಟ್ ಕೊಹ್ಲಿ. ಈ ಸೀಸನ್ನಲ್ಲಿ ಕೊಹ್ಲಿ ಕನ್ಸಿಸ್ಟೆಂಟ್ ಆಗಿ ಪರ್ಫಾಮ್ ಮಾಡ್ತಿದ್ದಾರೆ. ಅದ್ರಲ್ಲೂ ಚೇಸಿಂಗ್ನಲ್ಲಿ ವಿರಾಟ್, ಮಾಸ್ಟರ್ನಂತೆ ರನ್ಗಳಿಸುತ್ತಿದ್ದಾರೆ. ಕೊಹ್ಲಿ ಆಡಿರೋ 11 ಪಂದ್ಯಗಳಲ್ಲಿ 143.46ರ ಸ್ಟ್ರೈಕ್ರೇಟ್ನಲ್ಲಿ 505 ರನ್ಗಳಿಸಿದ್ದಾರೆ. 7 ಆಕರ್ಷಕ ಅರ್ಧಶತಕಗಳು, ಕೊಹ್ಲಿ ಬ್ಯಾಟ್ನಿಂದ ದಾಖಲಾಗಿದೆ. ವಿರಾಟ್ ಬೆಂಗಳೂರಿನ ಬ್ಯಾಟಿಂಗ್ ಬೆನ್ನೆಲುಬು ಎನಿಸಿಕೊಂಡಿದ್ದಾರೆ. ಹಾಗಾಗಿ ಇಂದು ಕೊಹ್ಲಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ.
ತಂಡಕ್ಕೆ ಕಾಡುತ್ತಾ ಹೇಝಲ್ವುಡ್ ಅಲಭ್ಯತೆ..?
ಹೈದ್ರಾಬಾದ್ನಂತಹ ಡೇಂಜರಸ್ ಟೀಮ್ ವಿರುದ್ಧ ಆರ್ಸಿಬಿ, ಜೋಷ್ ಹೇಝಲ್ವುಡ್ನಂತಹ ಅನುಭವಿ ವೇಗಿಯನ್ನ ಮಿಸ್ ಮಾಡಿಕೊಳ್ಳುತ್ತದೆ. ಜೇಝಲ್ವುಡ್ ಇದ್ರೆ, ಬೌಲಿಂಗ್ ಅಟ್ಯಾಕ್ನಲ್ಲಿ ಫುಲ್ ಜೋಷ್ ಇರುತ್ತೆ. AWAY ಮ್ಯಾಚ್ಗಳಲ್ಲಿ 10 ವಿಕೆಟ್ ಪಡೆದು ಗೇಮ್ ಚೇಂಜರ್ ಎನಿಸಿಕೊಂಡಿದ್ದ ಜೋಷ್ ಅಲಭ್ಯತೆ, ಕಂಡಿತ ಆರ್ಸಿಬಿಗೆ ಕಾಡಲಿದೆ. ಆದ್ರೆ ಯಾರೇ ರೀಪ್ಲೇಸ್ಮೆಂಟ್ ಬಂದ್ರು, ಹೇಝಲ್ವುಡ್ ಸ್ಥಾನವನ್ನ ತುಂಬೋದು ಕಷ್ಟವೇ ಬಿಡಿ.
3ನೇ ವೇಗಿಯಾಗ್ತಾರಾ 6.8 ಎತ್ತರದ ಬ್ಲೆಸಿಂಗ್ ಮುಜರಬಾನಿ..?
ವರ್ಲ್ಡ್ ಟೆಸ್ಟ್ ಚಾಂಪಿಯನ್ಶಿಪ್ ಫೈನಲ್ ಪ್ರಿಪರೇಶನ್ಗಾಗಿ, ವೇಗಿ ಲುಂಗಿ ಎಂಗಿಡಿ ಆರ್ಸಿಬಿ ತಂಡವನ್ನ ತೊರೆಯುತ್ತಿದ್ದಾರೆ. ಇವ್ರ ಸ್ಥಾನಕ್ಕೆ ಜಿಂಬಾಬ್ವೆಯ 6.8 ಅಡಿ ಎತ್ತರದ ವೇಗಿ ಬ್ಲೆಸಿಂಗ್ ಮುಜರಬಾನಿ, ಎಂಟ್ರಿ ಕೊಟ್ಟಿದ್ದಾರೆ. ಈಗಾಗಲೇ ಸಾಕಷ್ಟು ಗ್ಲೋಬಲ್ ಟಿ-ಟ್ವೆಂಟಿ ಲೀಗ್ಗಳನ್ನ ಆಡಿರುವ ಮುಜರಾಬಾನಿ, ಉಪಖಂಡದಲ್ಲಿ ಸಿಕ್ಕಾಪಟ್ಟೆ ಎಫೆಕ್ಟೀವ್ ಬೌಲರ್ ಎನಿಸಿಕೊಂಡಿದ್ದಾರೆ. ಇಂದು ಮುಜರಾಬಾನಿಯನ್ನ ಸರ್ಪ್ರೈಸ್ ಆಗಿ ಕಣಕ್ಕಿಳಿಸುತ್ತಾರಾ ಅನ್ನೋದು ಕುತೂಹಲ ಕೆರಳಿಸಿದೆ.
ಜೇಕಬ್ ಬೆಥಲ್ ಬದಲು ಟಿಮ್ ಸೀಫರ್ಟ್ ಎಂಟ್ರಿ..!
ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗಾಗಿ ಇಂಗ್ಲೆಂಡ್ನ ಜೇಕಬ್ ಬೆಥಲ್, ಆರ್ಸಿಬಿ ತಂಡವನ್ನ ತೊರೆಯುತ್ತಿದ್ದಾರೆ. ಇವ್ರ ಸ್ಥಾನಕ್ಕೆ ನ್ಯೂಜಿಲೆಂಡ್ನ ಟಿ-ಟ್ವೆಂಟಿ ಸ್ಪೆಷಲಿಸ್ಟ್ ಟಿಮ್ ಸೀಫರ್ಟ್, ಆರ್ಸಿಬಿ ಕ್ಯಾಂಪ್ ಸೇರ್ಪಡೆಗೊಂಡಿದ್ದಾರೆ. ಆರಂಭದಲ್ಲಿ ಅಬ್ಬರಿಸಿದ ಫಿಲ್ ಸಾಲ್ಟ್ ನಂತರ ಫುಲ್ ಸೈಲೆಂಟ್ ಆಗ್ಬಿಟ್ರು. ಸಾಲ್ಟ್ ಇನ್ಕನ್ಸಿಸ್ಟೆನ್ಸಿ ಮತ್ತು ಬೆಥಲ್ ನಿರ್ಗಮನದಿಂದ ಆರ್ಸಿಬಿ, ಕಿವೀಸ್ ಟಿ-ಟ್ವೆಂಟಿ ಸ್ಪೆಷಲಿಸ್ಟ್ ಸೀಫರ್ಟ್ನ ರಿಸ್ಕ್ ತೆಗೆದುಕೊಂಡು ಆಡಿಸಬೇಕಾ ಬೇಡವಾ ಅನ್ನೋ ಚಿಂತೆಯಲ್ಲಿದೆ.
ಇದನ್ನೂ ಓದಿ:RCBಗೆ ಇಂದು ಮಹತ್ವದ ಪಂದ್ಯ.. ಎದುರಾಳಿಯ 5 ಬ್ಯಾಟರ್ಸ್ ಔಟ್ ಮಾಡೋದೆ ಚಾಲೆಂಜ್!
RCB ಪಾರ್ಟಿ ಕೆಡಿಸಲು ಹೈದ್ರಾಬಾದ್ ರೆಡಿ ..!
ಐಪಿಎಲ್ ಆರಂಭದಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ಸಿಕ್ಕಾಪಟ್ಟೆ ಸೌಂಡ್ ಮಾಡಿತ್ತು. ಸೂಪರ್ ಬ್ಯಾಟಿಂಗ್ ಲೈನ್ಅಪ್ ಮತ್ತು ಬ್ಯಾಲೆನ್ಸ್ಡ್ ಬೌಲಿಂಗ್ ಅಟ್ಯಾಕ್ ಹೊಂದಿದ್ದ ಎಸ್ಆರ್ಹೆಚ್, ಟೂರ್ನಿ ಗೆಲ್ಲೋ ಫೇವರಿಟ್ ತಂಡಗಳಲ್ಲಿ ಒಂದು ಎನಿಸಿಕೊಂಡಿತ್ತು. ಆದ್ರೆ ಹೈದ್ರಾಬಾದಾದ್ ತಂಡದ ಸಡನ್ ಫೇಲ್ಯೂರ್, ತಂಡಕ್ಕೆ ಭಾರೀ ಹಿನ್ನಡೆ ಉಂಟುಮಾಡಿತು. ಕಳೆದ ಪಂದ್ಯದಲ್ಲಿ ಲಕ್ನೋ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ಹೈದ್ರಾಬಾದ್, ಇಂದು ಬೆಂಗಳೂರು ತಂಡದ ಗೆಲುವಿಗೆ ಮುಳುವಾಗೋಕೆ ಮುಂದಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಈ ಪಂದ್ಯ ಅತ್ಯಂತ ಮಹತ್ವದಾದ್ರೆ, ಹೈದ್ರಾಬಾದ್ ತಂಡಕ್ಕೆ ಉಳಿದೆರೆಡು ಪಂದ್ಯಗಳನ್ನ ಗೆದ್ದು, ಟೂರ್ನಿಗೆ ಗುಡ್ಬೈ ಹೇಳೋ ಲೆಕ್ಕಾಚಾರವಾಗಿದೆ. ಲಕ್ನೋದಲ್ಲಿ ಯಾವ ತಂಡಕ್ಕೆ ಲಕ್ ಒಲಿಯಲಿದೆ ಅನ್ನೋದನ್ನ, ಕಾದು ನೋಡೋಣ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ