/newsfirstlive-kannada/media/media_files/2025/07/31/rohit_sharma_babar-2025-07-31-21-10-48.jpg)
2025ರ ಪುರುಷರ ಏಷ್ಯಾ ಕಪ್ ಟೂರ್ನಿ ಇದೇ ಸೆಪ್ಟೆಂಬರ್​ 9 ರಿಂದ 28ರ ವರೆಗೆ ಯುನಿಟೆಡ್​ ಅರಬ್​ ಎಮಿರೇಟ್ಸ್​ (ಯುಎಇ)ನಲ್ಲಿ ನಡೆಯಲಿದೆ ಎಂದು ಏಷ್ಯಾ ಕ್ರಿಕೆಟ್​ ಕೌನ್ಸಿಲ್​ (ಎಸಿಸಿ) ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ.
ಮಹತ್ವದ ಟೂರ್ನಿಯಾದ ಏಷ್ಯಾ ಕಪ್​ಗೆ ಇದ್ದಂತಹ ಎಲ್ಲ ಅಡೆತಡೆಗಳು ಪರಿಹಾರಗೊಂಡಿದ್ದು ಇದೇ ಸೆಪ್ಟೆಂಬರ್​ 9 ರಿಂದ 28ರ ವರೆಗೆ ಟೂರ್ನಿ ಯುಎಇನಲ್ಲಿ ನಡೆಯಲಿದೆ. ಸ್ಥಳ, ದಿನಾಂಕ ಇರುವ ವಿವರವಾದ ವೇಳಾಪಟ್ಟಿ ಶೀಘ್ರದಲ್ಲೇ ರಿಲೀಸ್ ಮಾಡಲಾಗುವುದು ಎಂದು ಎಸಿಸಿ ಹಾಗೂ ಪಿಸಿಬಿ ಅಧ್ಯಕ್ಷ ಮೊಹ್ಸಿನ್ ನಖ್ವಿ ಹೇಳಿದ್ದಾರೆ.
ಭಾರತ ಮತ್ತು ಪಾಕಿಸ್ತಾನ ಎರಡು ತಂಡಗಳು ಗ್ರೂಪ್ ಎನಲ್ಲಿ ಸ್ಥಾನ ಪಡೆದುಕೊಂಡಿವೆ. ಈ ಎರಡರ ನಡುವೆ ಮೂರು ಪಂದ್ಯಗಳು ನಡೆಯುವ ಸಾಧ್ಯತೆ ಇದೆ. ಭಾರತ ಮತ್ತು ಪಾಕಿಸ್ತಾನದ ನಡುವಿನ ಮೊದಲ ಲೀಗ್ ಪಂದ್ಯ ಸೆಪ್ಟೆಂಬರ್ 14 ರಂದು ನಡೆಯಲಿದೆ. ಇದು ಬಿಟ್ಟರೇ ಕ್ವಾಲಿಫೈ ಸ್ಟೇಜ್​ನಲ್ಲಿ ಸೆಪ್ಟೆಂಬರ್ 21 ರಂದು ಸೂಪರ್​-4 ಹಂತದಲ್ಲಿ ಪೈಪೋಟಿ ನಡೆಯಲಿದೆ. ಇದು ಬಿಟ್ಟರೇ ಉಳಿದಂತೆ ಫೈನಲ್​ನಲ್ಲಿ ಭಾರತ ಪಾಕಿಸ್ತಾನದ ನಡುವೆ ಘರ್ಷಣೆ ನಡೆಯುವ ಸಾಧ್ಯತೆ ಇದೆ ಎನ್ನಲಾಗಿದೆ.
ಸಂಪೂರ್ಣವಾದ ವೇಳಾ ಪಟ್ಟಿಯನ್ನು ಶನಿವಾರ ಅಂದರೆ ಆಗಸ್ಟ್​ 2 ರಂದು ಪ್ರಕಟಣೆ ಮಾಡಲಾಗುವುದು. ಇದರಲ್ಲಿ ಎ ಮತ್ತು ಬಿ ಎಂದು ಎರಡು ಗುಂಪುಗಳಿರಲಿದ್ದು, ಒಟ್ಟು 19 ಪಂದ್ಯಗಳು ನಡೆಯಲಿವೆ. ಕೊನೆಯ ಪಂದ್ಯ ಸೆಪ್ಟೆಂಬರ್ ಕೊನೆ ವಾರದಲ್ಲಿ ನಡೆಯಲಿದೆ. ದುಬೈ ಹಾಗೂ ಅಬುಧಾಬಿ ನಗರಗಳಲ್ಲಿ ಪಂದ್ಯಗಳು ನಡೆಯುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಗ್ರೂಪ್-ಎ: ಭಾರತ, ಪಾಕಿಸ್ತಾನ, ಯುಎಇ ಮತ್ತು ಒಮನ್
ಗ್ರೂಪ್-ಬಿ: ಶ್ರೀಲಂಕಾ, ಬಾಂಗ್ಲಾದೇಶ, ಅಫ್ಘಾನಿಸ್ತಾನ, ಹಾಂಗ್​​ಕಾಂಗ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us