ಅನಗತ್ಯವಾಗಿ ಕೈ ಸುಟ್ಟುಕೊಂಡ ರಾಹುಲ್.​. ಫೈನಲ್ ಟೆಸ್ಟ್​ನ ಮೊದಲ ದಿನ ಭಾರತಕ್ಕೆ ಆಘಾತ..!

ಇಂಡೋ-ಇಂಗ್ಲೆಂಡ್​ ಅಂತಿಮ ಟೆಸ್ಟ್​ ಫೈಟ್​ನಲ್ಲಿ ಆತಿಥೇಯ ಇಂಗ್ಲೆಂಡ್​​ ದರ್ಬಾರ್ ನಡೆಸಿದೆ. ಮೊದಲ ದಿನದಾಟದ ಅಂತ್ಯಕ್ಕೆ ಟೀಮ್​ ಇಂಡಿಯಾ 6 ವಿಕೆಟ್​​ ನಷ್ಟಕ್ಕೆ 204 ರನ್​ಗಳಿಸಿದೆ. 52 ರನ್​ಗಳೊಂದಿಗೆ ಕರುಣ್​ ನಾಯರ್​, 19 ರನ್​ಗಳೊಂದಿಗೆ ವಾಷಿಂಗ್ಟನ್​ ಸುಂದರ್​​ ಕ್ರಿಸ್​ ಕಾಯ್ದುಕೊಂಡಿದ್ದಾರೆ

author-image
Ganesh
KL RAHUL Test

ಕೆ.ಎಲ್.ರಾಹುಲ್

Advertisment
  • ಭಾರತ-ಇಂಗ್ಲೆಂಡ್​ 5ನೇ ಟೆಸ್ಟ್​ ಪಂದ್ಯ
  • ಹೋರಾಟದ ಇನ್ನಿಂಗ್ಸ್​ ಕಟ್ಟಿದ ಸಾಯಿ ಸುದರ್ಶನ್​
  • ವಿಕೆಟ್​​ ದಾನ ಮಾಡಿದ ‘ಕರ್ಣ’ ಶುಭ್​ಮನ್​

ಇಂಡೋ-ಇಂಗ್ಲೆಂಡ್​ ಅಂತಿಮ ಟೆಸ್ಟ್​ ಫೈಟ್​ನಲ್ಲಿ ಆತಿಥೇಯ ಇಂಗ್ಲೆಂಡ್​​ ದರ್ಬಾರ್ ನಡೆಸಿದೆ. ಮೊದಲ ದಿನದಾಟದ ಅಂತ್ಯಕ್ಕೆ ಟೀಮ್​ ಇಂಡಿಯಾ 6 ವಿಕೆಟ್​​ ನಷ್ಟಕ್ಕೆ 204 ರನ್​ಗಳಿಸಿದೆ. 52 ರನ್​ಗಳೊಂದಿಗೆ ಕರುಣ್​ ನಾಯರ್​, 19 ರನ್​ಗಳೊಂದಿಗೆ ವಾಷಿಂಗ್ಟನ್​ ಸುಂದರ್​​ ಕ್ರಿಸ್​ ಕಾಯ್ದುಕೊಂಡಿದ್ದಾರೆ

ಒಲ್ಡ್​​ ಟ್ರಾಫರ್ಡ್​ ಮೈದಾನದಲ್ಲಿ ಕೆಚ್ಚೆದೆಯ ಹೋರಾಟ ನಡೆಸಿದ್ದ ಟೀಮ್​ ಇಂಡಿಯಾ, ದಿ ಓವಲ್​​ನಲ್ಲಿ ಪರದಾಡಿತು. ಇಂಗ್ಲೆಂಡ್​ನ ಭರ್ಜರಿ ಬೌಲಿಂಗ್​ ಮುಂದೆ ಇಂಡಿಯನ್​ ಬ್ಯಾಟರ್ಸ್​ ತಿಣುಕಾಡಿದ್ರು. ಅತಿರಥ ಮಹಾರಾಥರು ಪೆವಿಲಿಯನ್​ ಪರೇಡ್​ ನಡೆಸಿದ್ದಾರೆ.

ಇಂಡೋ-ಇಂಗ್ಲೆಂಡ್​ ಅಂತಿಮ ಟೆಸ್ಟ್​ ಫೈಟ್​ನಲ್ಲಿ ಆತಿಥೇಯ ಇಂಗ್ಲೆಂಡ್​​ ದರ್ಭಾರ್​ ನಡೆಸಿದೆ. ಇಂಗ್ಲೆಂಡ್​ ಬೌಲರ್​ಗಳ ಟ್ರ್ಯಾಪ್​​ಗೆ ಇಂಡಿಯನ್​ ಬ್ಯಾಟರ್ಸ್​ ಬಿದ್ದ ಪರಿಣಾಮ ಟೀಮ್​ ಇಂಡಿಯಾ ಸಂಕಷ್ಟಕ್ಕೆ ಸಿಲುಕಿದೆ. ಮೊದಲ ದಿನದಾಟದಲ್ಲಿ ಬೌಲರ್​ಗಳ ದರ್ಬಾರ್​ನ ಮುಂದೆ ಬ್ಯಾಟ್ಸ್​ಮನ್​ಗಳು ಮಂಕಾಗಿದ್ದಾರೆ.

ಆರಂಭದಲ್ಲೇ ಆಘಾತ, ಜೈಸ್ವಾಲ್​​ ಫ್ಲಾಪ್

ಟಾಸ್​​ ಸೋತು ಮೊದಲು ಬ್ಯಾಟಿಂಗ್​ಗೆ ಬಂದ ಟೀಮ್ ಇಂಡಿಯಾ ಮಹತ್ವದ ಪಂದ್ಯದಲ್ಲೂ ಗುಡ್​ ಸ್ಟಾರ್ಟ್​ ಸಿಗಲಿಲ್ಲ. ಓಪನರ್​ ಯಶಸ್ವಿ ಜೈಸ್ವಾಲ್​​​ ಜಸ್ಟ್​​ 2 ರನ್​ಗಳಿಸಿ ಔಟಾದ್ರು. ಬಳಿಕ ಕ್ರಿಸ್​​ನಲ್ಲಿ ಜೊತೆಯಾದ ಕೆ.ಎಲ್​ ರಾಹುಲ್​, ಸಾಯಿ ಸುದರ್ಶನ್​​ ಎಚ್ಚರಿಕೆಯ ಆಟವಾಡಿದ್ರು. 2ನೇ ವಿಕೆಟ್​​ಗೆ 72 ಎಸೆತಗಳನ್ನ ಎದುರಿಸಿದ ಈ ಜೋಡಿ ಚೇತರಿಕೆ ನೀಡೋ ಯತ್ನ ಮಾಡಿತು. ಅನಗತ್ಯ ಹೊಡೆತಕ್ಕೆ ಕೈ ಹಾಕಿ ರಾಹುಲ್​​ ಕೈ ಸುಟ್ಟು ಕೊಂಡರು. 

ಇದನ್ನೂ ಓದಿ:ಬ್ರೆಡ್​, ಬಿಸ್ಕತ್, ಚಿಪ್ಸ್ ಸೇರಿ ಇತರೆ​​ ಪ್ಯಾಕೆಟ್​ಗಳ ಮೇಲೆ ಈ ಕಲರ್​ ಚಿಹ್ನೆ, ಡಾಟ್​ ಇದ್ರೆ ಏನ್ ಅರ್ಥ?

Karun nair (4)
ಕರುಣ್ ನಾಯರ್

40 ಎಸೆತಗಳನ್ನ ಎಚ್ಚರಿಕೆಯಿಂದ ಎದುರಿಸಿದ್ದ ಕೆ.ಎಲ್​.ರಾಹುಲ್​ 1 ಬೌಂಡರಿ ಸಹಿತ 14 ರನ್​ಗಳಿಸಿ ಔಟಾದರು. ಆ ಬಳಿಕ ಕ್ರಿಸ್​ನಲ್ಲಿ ಜೊತೆಯಾದ ಸಾಯಿ ಸುದರ್ಶನ್​-ಶುಭ್​ಮನ್​ ಗಿಲ್​ ಭರವಸೆಯ ಜೊತೆಯಾಟವಾಡಿದ್ರು. ಮಳೆ ಅಡ್ಡಿಪಡಿಸಿದ ಪರಿಣಾಮ ನಿಗದಿತ ಸಮಯಕ್ಕಿಂತ ಮುನ್ನವೇ ಮೊದಲ ಸೆಷನ್​ ಅಂತ್ಯವಾಯ್ತು. ಸೆಷನ್​ ಅಂತ್ಯದ ವೇಳೆಗೆ 2 ವಿಕೆಟ್​ ನಷ್ಟಕ್ಕೆ ಟೀಮ್​ ಇಂಡಿಯಾ 72 ರನ್​ಗಳಿಸಿತು. 

ವಿಕೆಟ್​​ ದಾನ ಮಾಡಿದ ‘ಕರ್ಣ’ ಶುಭ್​ಮನ್​

ವೆಟ್​ ಔಟ್​ಫೀಲ್ಡ್​​ ಕಾರಣಕ್ಕೆ ತಡವಾಗಿ ಆರಂಭದ ಸೆಕೆಂಡ್​ ಸೆಷನ್​ ಮಳೆಯ ಕಾಟದಿಂದಾಗಿ 10 ನಿಮಿಷಕ್ಕೆ ಅಂತ್ಯವಾಯ್ತು. ಈ 10 ನಿಮಿಷದ ಅಂತರದಲ್ಲಿ ಬಿಗ್​ ಮಿಸ್ಟೇಕ್​​ ನಡೆದುಹೋಯ್ತು. 35 ಎದುರಿಸಿದ 35 ಎಸೆತಗಳಲ್ಲೇ 4 ಕ್ಲಾಸಿಕ್​​ ಬೌಂಡರಿ ಬಾರಿಸಿ 21 ರನ್​ಗಳಿಸಿದ್ದ ಕ್ಯಾಪ್ಟನ್​ ಗಿಲ್​ ಅವಸರಕ್ಕೆ ಬಿದ್ದು, ವಿಕೆಟ್​ ಅನಾವಶ್ಯಕ ರನೌಟ್​​ಗೆ ಬಲಿಯಾದರು.

ಹೋರಾಟದ ಇನ್ನಿಂಗ್ಸ್​ ಕಟ್ಟಿದ ಸಾಯಿ ಸುದರ್ಶನ್

3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಸಾಯಿ ಸುದರ್ಶನ್​ ಟೀಮ್​ ಇಂಡಿಯಾ ಪಾಲಿಗೆ ಆಪ್ತರಕ್ಷಕನಂತೆ ಹೋರಾಡಿದರು. ತಾಳ್ಮೆಯಿಂದ ಇಂಗ್ಲೆಂಡ್​ ಬೌಲಿಂಗ್​ ದಾಳಿಯನ್ನ ಸಮರ್ಥವಾಗಿ ಎದುರಿಸಿದ್ರು. ಶುಭ್​ಮನ್​ ಗಿಲ್​, ಕರುಣ್​ ನಾಯರ್​ ಜೊತೆಗೂಡಿ ಜೊತೆಯಾಟವಾಡಿದ್ರು.  

ಇದನ್ನೂ ಓದಿ:ಶಿಶು ಹುಟ್ಟಿನಿಂದ 6 ತಿಂಗಳವರೆಗೆ.. ಪೋಷಕರು ಈ ಸಲಹೆಗಳನ್ನು ಫಾಲೋ ಮಾಡಿ..

Sai sudarshan test
ಸಾಯಿ ಸುದರ್ಶನ್

ಬರೋಬ್ಬರಿ 108 ಎಸೆತಗಳನ್ನ ಎದುರಿಸಿದ ಸಾಯಿ ಸುದರ್ಶನ್​, 6 ಬೌಂಡರಿ ಬಾರಿಸಿದ್ರು. 38 ರನ್​ಗಳಿಸಿ ಭರವಸೆ ಮೂಡಿಸಿದ್ದ ಎಡಗೈ ಬ್ಯಾಟರ್​​, ಜೋಶ್​​ ಟಂಗ್​ ಎಸೆದ ಅದ್ಭುತ ಎಸೆತಕ್ಕೆ ಔಟಾದ್ರು. ಬಳಿಕ ಕಣಕ್ಕಿಳಿದ ರವೀಂದ್ರ ಜಡೇಜಾ 9 ರನ್​ಗಳಿಸುವಷ್ಟರಲ್ಲಿ ಸುಸ್ತಾದರು. 7ನೇ ವಿಕೆಟ್​ಗೆ ಕನ್ನಡಿಗ ಕರುಣ್​ ನಾಯರ್​, ದೃವ್​ ಜುರೇಲ್​ ಕೆಲ ಕಾಲ ಹೋರಾಡಿದರು. ಕರುಣ್​ ನಾಯರ್​ ಎಚ್ಚರಿಕೆಯ ಆಟವಾಡಿದ್ರೆ, ದೃವ್​ ಜುರೇಲ್​ ಸೆಟಲ್​ ಆದ ಕೂಡಲೇ ರನ್​ಗಳಿಸಲು ಆರಂಭಿಸಿ ಹಳ್ಳಕ್ಕೆ ಬಿದ್ರು. 19 ರನ್​ಗಳಿಗೆ ಜುರೇಲ್​ ಆಟ ಅಂತ್ಯವಾಯ್ತು. 

ಕನ್ನಡಿಗ ಕರುಣ್​ ನಾಯರ್​ ತಂಡಕ್ಕೆ ಆಸರೆ

ಒಂದೆಡೆ ವಿಕೆಟ್​ ಉರುಳಿದ್ರೂ ಕನ್ನಡಿಗ ಕರುಣ್​ ನಾಯರ್​ ದಿಟ್ಟ ಹೋರಾಟ ನಡೆಸ್ತಿದ್ದಾರೆ. ಇಂಗ್ಲೆಂಡ್​ ಬೌಲರ್​​ಗಳ ದಾಳಿಯನ್ನ ಮೆಟ್ಟಿನಿಂತಿರೋ ಕನ್ನಡಿಗ ಹಾಫ್​ ಸೆಂಚುರಿ ಸಿಡಿಸಿದ್ರು. ಕಮ್​ಬ್ಯಾಕ್​ನ ಬಳಿಕ ಕನ್ನಡಿಗ ಸಿಡಿಸಿದ ಚೊಚ್ಚಲ ಹಾಫ್​ ಸೆಂಚುರಿ ಇದು. ಕರುಣ್​ ನಾಯರ್​ಗೆ ವಾಷಿಂಗ್ಟನ್​​ ಸುಂದರ್​ ಸಾಥ್​ ನೀಡ್ತಿದ್ದಾರೆ. ದಿನದ ಅಂತ್ಯದಲ್ಲಿ ಇಬ್ಬರ ಜೊತೆಯಾಟ ತಂಡಕ್ಕೆ ಚೇತರಿಕೆ ನೀಡಿದ್ರು, ಮೊದಲ ದಿನದಾಟದ ಅಂತ್ಯಕ್ಕೆ ಟೀಮ್​ ಇಂಡಿಯಾ 6 ವಿಕೆಟ್​​ ನಷ್ಟಕ್ಕೆ 204 ರನ್​ಗಳಿಸಿದೆ. 52 ರನ್​ಗಳೊಂದಿಗೆ ಕರುಣ್​ ನಾಯರ್​, 19 ರನ್​ಗಳೊಂದಿಗೆ ವಾಷಿಂಗ್ಟನ್​ ಸುಂದರ್​​ ಕ್ರಿಸ್​ ಕಾಯ್ದುಕೊಂಡಿದ್ದಾರೆ.

ಇದನ್ನೂ ಓದಿ: ಶಾರುಖ್​​​ ಖಾನ್​ ಜತೆ ಮಾಡಿದ್ದು ಒಂದೇ ಒಂದು ಸಿನಿಮಾ.. ಈಗ 45,000 ಕೋಟಿ ರೂಪಾಯಿ ಒಡತಿ ಈ ಹೀರೋಯಿನ್!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

England vs India
Advertisment