ಅಭಿಮಾನಿಗಳ ಪಿತ್ತ ನೆತ್ತಿಗೇರಿಸಿದ ಕೊಹ್ಲಿಯ ಅಣ್ಣ.. ವಿರಾಟ್ ವಿರುದ್ಧವೂ ನಿಗಿನಿಗಿ ಕೆಂಡ.. ಆಗಿದ್ದೇನು?

ಬಹಳ ದಿನಗಳ ಹಿಂದಲ್ಲ. ನಮ್ಮಲ್ಲಿ ಒಂದು ಟೆಸ್ಟ್ ತಂಡವಿತ್ತು. ಅಲ್ಲಿ ನಮ್ಮ ಬೌಲರ್‌ಗಳು 20 ವಿಕೆಟ್‌ಗಳನ್ನ ಪಡೆಯುತ್ತಿದ್ದರು ಎಂದು ವಿಕಾಸ್ ಕೊಹ್ಲಿ ಟೀಕಿಸಿದ್ದಾರೆ. ಕೊಹ್ಲಿ ಸಹೋದರನ ಈ ಪ್ರತಿಕ್ರಿಯೆಗೆ ವಿರೋಧ ವ್ಯಕ್ತವಾಗಿದೆ.

author-image
Ganesh
Virat kohli brother vikas kohli

ವಿರಾಟ್ ಕೊಹ್ಲಿ, ವಿಕಾಸ್ ಕೊಹ್ಲಿ

Advertisment

    ಮ್ಯಾಂಚೆಸ್ಟರ್ ಟೆಸ್ಟ್​ ಮುಗಿದ ಅಧ್ಯಾಯ. ಈಗ ಟೀಮ್ ಇಂಡಿಯಾ ಟಾರ್ಗೆಟ್​ ಕನ್ಜಿಂಗ್ಟನ್​ ಓವಲ್​​​​​​​​​ನ ಕೊನೆಯ ಮ್ಯಾಚ್. ಈಗಾಗಲೇ ಪಂದ್ಯ ಶುರುವಾಗಿದೆ. ಈ ಟೆಸ್ಟ್​ ಆರಂಭಕ್ಕೂ ಮುನ್ನ ಭಾರತೀಯ ಕ್ರಿಕೆಟ್ ಅಭಿಮಾನಿಗಳು, ವಿರಾಟ್ ಕೊಹ್ಲಿ ವಿರುದ್ಧವೇ ತಿರುಗಿ ಬಿದ್ದಿದ್ದಾರೆ. ಟೆಸ್ಟ್ ಸರಣಿಯಲ್ಲಿ ವಿರಾಟ್​ ಕೊಹ್ಲಿ ಆಡದಿದ್ದರು. ಕೊಹ್ಲಿ ವಿರುದ್ಧ ಗರಂ ಆಗಿದ್ದಾರೆ. 

    ಬೌಲರ್​ಗಳ ಬಗ್ಗೆ  ಕೊಹ್ಲಿ ಅಣ್ಣನ ಟೀಕೆ

    ಮ್ಯಾಂಚೆಸ್ಟರ್​​​ ಟೆಸ್ಟ್​ನಲ್ಲಿ ಟೀಮ್ ಇಂಡಿಯಾ ಸೋಲಿನಿಂದ ಪಾರಾಯ್ತು. ಬ್ಯಾಟರ್​​ಗಳ ಕೆಚ್ಚೆದೆಯ ಹೋರಾಟದ ಪ್ರತಿಫಲವಾಗಿ ಪಂದ್ಯ ಡ್ರಾನಲ್ಲಿ ಅಂತ್ಯವಾಯ್ತು. ಓಲ್ಡ್​ ಟ್ರಾಫರ್ಡ್​ ಸ್ಟೇಡಿಯಂನಲ್ಲಿ ಟೀಮ್ ಇಂಡಿಯಾ ಬೌಲರ್​ಗಳ ನಿರಾಸ ಪ್ರದರ್ಶನ ಎಲ್ಲರ ಕೆಂಗಣ್ಣಿಗೆ ಗುರಿಯಾಗಿಸಿತ್ತು. ಈ ಬಗ್ಗೆ ನಾನಾ ಟೀಕೆಗಳನ್ನು ಎದುರಿಸಬೇಕಾಯ್ತು. ಈ ಪೈಕಿ ವಿರಾಟ್ ಕೊಹ್ಲಿ (Virat Kohli brother) ಸಹೋದರ ವಿಕಾಸ್ ಕೊಹ್ಲಿಯೂ ಒಬ್ಬ. 

    ಬೌಲರ್ಸ್ ಆಟಕ್ಕೆ ಟೀಕೆ

    ಬಹಳ ದಿನಗಳ ಹಿಂದಲ್ಲ. ನಮ್ಮಲ್ಲಿ ಒಂದು ಟೆಸ್ಟ್ ತಂಡವಿತ್ತು. ಅಲ್ಲಿ ನಮ್ಮ ಬೌಲರ್‌ಗಳು 20 ವಿಕೆಟ್‌ಗಳನ್ನ ಪಡೆಯುತ್ತಿದ್ದರು-ವಿಕಾಸ್ ಕೊಹ್ಲಿ, ಕೊಹ್ಲಿ ಸಹೋದರ

    ಟೀಮ್ ಇಂಡಿಯಾ ಬೌಲರ್​​ಗಳ ಪ್ರದರ್ಶನ ಟೀಕಿಸಿದ್ದ ವಿಕಾಸ್ ಕೊಹ್ಲಿ, ಪರೋಕ್ಷವಾಗಿ ​ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾವನ್ನು ಕೊಂಡಾಡಿದ್ದರು. ವಿರಾಟ್​ ನಾಯಕತ್ವದ ಟೆಸ್ಟ್​ ತಂಡದಲ್ಲಿ ಸುಲಭಕ್ಕೆ 20 ವಿಕೆಟ್ ಉರುಳಿಸುತ್ತಿದ್ದರು ಎಂದಿದ್ದ ವಿಕಾಸ್ ಕೊಹ್ಲಿ, ಈಗಿನ ಟೀಮ್ ಇಂಡಿಯಾ ಬಗ್ಗೆ ಲಘುವಾಗಿ ಮಾತನಾಡಿದ್ದರು. ಇದು ಟೀಮ್ ಇಂಡಿಯಾ ಅಭಿಮಾನಿಗಳ ಪಿತ್ತ ನೆತ್ತಿಗೇರಿಸಿತ್ತು. ಗರಂ ಆಗಿದ್ದ ಫ್ಯಾನ್ಸ್​, ವಿರಾಟ್​ ಕೊಹ್ಲಿಗೆ ಅಣ್ಣನಿದ್ದಾನಾ ಎಂದೇ ಪ್ರಶ್ನಿಸಿದ್ರು. ಪಬ್ಲಿಸಿಟಿಗೆ ಈಗೆಲ್ಲಾ ಮಾಡ್ತೀರಾ ಎಂದೇ ಪ್ರಶ್ನಿಸಿದ್ದಾರೆ.  ನಿಮ್ಮ ಸಹೋದರನ 2020 ಟು 2025ರ ಬ್ಯಾಟಿಂಗ್ ಅವರೇಜ್​​ ಒಮ್ಮೆ ಚೆಕ್​ ಮಾಡುವ ಸಲಹೆ ಕೊಟ್ಟಿದ್ದಾರೆ.

    ಕೊಹ್ಲಿ ವಿರುದ್ಧವೂ ಸಿಡಿದೆದ್ದ ಫ್ಯಾನ್ಸ್

    ಕೊಹ್ಲಿ ಅಣ್ಣ ಸೋಶಿಯಲ್ ಮೀಡಿಯಾದಲ್ಲಿ ಮಾಡಿದ್ದ ಪೋಸ್ಟ್​ ಕೇವಲ ವಿಕಾಸ್ ಕೊಹ್ಲಿಯ ಟೀಕೆಗೆ ನಿಲ್ಲಲಿಲ್ಲ.  ಕೊಹ್ಲಿಯ ವಿರುದ್ಧವೂ ಸಿಡಿದೇಳುವಂತೆ ಮಾಡ್ತು. ಕೆಂಡಮಂಡಲ ಆಗುವಂತೆ ಮಾಡ್ತು. ವಿರಾಟ್​ ಕೊಹ್ಲಿ ನಾಯಕತ್ವದಲ್ಲಿ ಟೀಮ್ ಇಂಡಿಯಾ ಕಂಡಿದ್ದ ಫಲಿತಾಂಶಗಳು ಕೆದಕುವಂತೆ ಮಾಡ್ತು. ವೈಫಲ್ಯದ ಬಗ್ಗೆ ಟೀಕಿಸುವಂತೆ ಮಾಡ್ತು. ಕಾಮೆಂಟ್​​ಗಳ ಮೂಲಕ ಕೊಹ್ಲಿಯ ಜನ್ಮಜಾಲಾಡಿದ ಫ್ಯಾನ್ಸ್​, ಟೀಕೆಗಳ ಸುರಿಮಳೆಯನ್ನೇ ಗೈದರು.

    ಕೊಹ್ಲಿ ಬ್ಯಾಟಿಂಗ್, ಕ್ಯಾಪ್ಟನ್ಸಿಗೆ ಫ್ಯಾನ್ಸ್​ ಕೌಂಟರ್​

    ಕೊಹ್ಲಿ, ಟೆಸ್ಟ್​ ಕ್ರಿಕೆಟ್​ನ ಗ್ರೇಟೆಸ್ಟ್​ ಕ್ಯಾಪ್ಟನ್​, ಗ್ರೇಟೆಸ್ಟ್​ ಬ್ಯಾಟ್ಸ್​ಮನ್ ಅನ್ನೋದ್ರಲ್ಲಿ ಡೌಟಿಲ್ಲ. ವಿರಾಟ್​ ನಾಯಕತ್ವದಲ್ಲೂ ಕಳೆಪೆ ಆಟವಾಡಿದ್ದಿದೆ. ಬೇಡವಾದ ದಾಖಲೆ ಬರೆದಿದೆ. ಫ್ಯಾನ್ಸ್​ ಕಾಮೆಂಟ್ ಸೆಕ್ಷನ್​​ನಲ್ಲಿ ಉಲ್ಲೇಖಿಸಿದ್ದಾರೆ. ನಮ್ಮ ಟೀಮ್​​ನಲ್ಲಿ ಸೆಕೆಂಡ್ ಡೌನ್ ಬ್ಯಾಟಿಂಗ್ ಬರ್ತಿದ್ದ ಒಬ್ಬ, ಕಳೆದ 5 ವರ್ಷಗಳಿಂದ ಕೇವಲ 15ರ ಅವರೇಜ್​​ ಹೊಂದಿದ್ದಾನೆ ಎಂದು ಕಾಲೆಳೆದಿದ್ದಾರೆ. ಇಷ್ಟಕ್ಕೆ ಸುಮ್ಮನಾಗದ ಫ್ಯಾನ್ಸ್, ಟೆಸ್ಟ್​ ಮ್ಯಾಚ್ ಎರಡ್ಮೂರು ದಿನಕ್ಕೆ ಮುಗಿತಿತ್ತು. ಇಡೀ ಟೀಮ್ 30, 40 ರನ್​ಗೆ ಆಲೌಟ್​ ಆಗಿತ್ತು ಎಂದು ಕೌಂಟರ್ ನೀಡಿದ್ದಾರೆ. ಎರಡೂ ಕಾಲಘಟ್ಟದ ಪಿಚ್​ಗಳ ನಡುವಿನ ವ್ಯತ್ಯಾಸ ತಿಳಿಸುತ್ತಾ ಆಕ್ರೋಶ ಹೊರಹಾಕಿದ್ದಾರೆ.

    ಮ್ಯಾಂಚೆಸ್ಟರ್​​ನಲ್ಲಿ ಟೀಮ್ ಇಂಡಿಯಾ ಬೌಲರ್​ಗಳ ಪ್ರದರ್ಶನ ಕೆಟ್ಟದಾಗಿತ್ತು ನಿಜ.  ಬೌಲರ್​ಗಳನ್ನು ಟೀಕಿಸುವ ಭರದಲ್ಲಿ ಕೊಹ್ಲಿ ನಾಯಕತ್ವದ ಅಡಿಯಲ್ಲಿ ಬೌಲರ್​ಗಳು ನೀಡಿದ ಪ್ರದರ್ಶನ ಬಗ್ಗೆ ಕೊಂಡಾಡಿದ್ದಾರೆ. ಇದು ಸಹಜವಾಗಿಯೇ ಟೀಮ್ ಇಂಡಿಯಾ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿಸುವಂತೆ ಮಾಡಿದೆ.

    ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

    Virat Kohli Cricket news in Kannada
    Advertisment