/newsfirstlive-kannada/media/post_attachments/wp-content/uploads/2024/10/KL-RAHUL-2.jpg)
2025ನೇ ಐಪಿಎಲ್​​​​ ರಿಟೆನ್ಷನ್​​​​ ಲಿಸ್ಟ್​ ಹೊರ ಬಿದ್ದಾಗಿದೆ. ಮೆಗಾ ಹರಾಜು ಯಾವಾಗ ಅನ್ನೋ ಡೇಟ್​ ಕೂಡ ಫಿಕ್ಸಾಗಿದೆ. ಹರಾಜಿನ ಕಣದಲ್ಲಿರುವ ಆಟಗಾರರ ಲಿಸ್ಟ್ ಕೂಡ ಬಹಿರಂಗವಾಗಿದೆ. ಈ ನಡುವೆ ಫ್ರಾಂಚೈಸಿಗಳ ತೆರೆ ಹಿಂದಿನ ಪ್ಲಾನ್​ ಜೋರಾಗಿ ನಡೀತಿದೆ.
ಬಹು ನಿರೀಕ್ಷಿತ 18ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್​ ಲೀಗ್​ ಸಿದ್ಧತೆ ಜೋರಾಗಿದೆ. ಈಗಾಗಲೇ ಆಟಗಾರರ ರಿಟೈನ್ ಪ್ರಕ್ರಿಯೆ ಮುಗಿದಿದ್ದು, ಇದೀಗ ಆಟಗಾರರ ಮೆಗಾ ಹರಾಜಿನ ದಿನಾಂಕ ಕೂಡ ಫಿಕ್ಸ್ ಆಗಿದೆ. ಇದರಂತೆ ನವೆಂಬರ್ 24, 25ರಂದು ಸೌದಿ ಅರೇಬಿಯಾದ ಜಿದ್ದಾದಲ್ಲಿ ಮೆಗಾ ಹರಾಜು ನಡೆಯಲಿದ್ದು, ಬರೋಬ್ಬರಿ 1574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಮೆಗಾ ಹರಾಜಿನಲ್ಲಿ ಸ್ಟ್ರಾಂಗ್ ಟೀಮ್ ಕಟ್ಟೋ ಲೆಕ್ಕಾಚಾರದಲ್ಲಿವೆ. ಈ ಹರಾಜಿನ ಕಣದ ಸುತ್ತ ಕೆಲವು ಇಂಟ್ರೆಸ್ಟಿಂಗ್ ಕಹಾನಿಗಳ ಸದ್ದು ಮಾಡ್ತಿದೆ.
KL ರಾಹುಲ್, ಪಂತ್, ಶ್ರೇಯಸ್ ಬೇಸ್ ಪ್ರೈಸ್​​​​​​​​​​​​​​​ 2 ಕೋಟಿ
ಐಪಿಎಲ್​ ಮೆಗಾ ಹರಾಜಿನ ಕಣದಲ್ಲಿ ಬರೋಬ್ಬರಿ 1574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪೈಕಿ 1,165 ಮಂದಿ ಭಾರತೀಯರು ಅನ್ನೋದು ವಿಶೇಷ. ಕಳೆದ ಸೀಸನ್​ನಲ್ಲಿ ನಾಯಕರಾಗಿದ್ದ ಕೆ.ಎಲ್.ರಾಹುಲ್​, ರಿಷಬ್ ಪಂತ್, ಶ್ರೇಯಸ್ ಅಯ್ಯರ್​, ಮೆಗಾ ಹರಾಜಿನಲ್ಲಿನಲ್ಲಿ 2 ಕೋಟಿ ಬೇಸ್ ಪ್ರೈಸ್ ಹೊಂದಿದ್ದಾರೆ. ಇಶಾನ್ ಕಿಶನ್, ಪಡಿಕ್ಕಲ್, ಅರ್ಷದೀಪ್ ಸಿಂಗ್, ಮೊಹಮ್ಮದ್ ಶಮಿ, ಮೊಹಮ್ಮದ್ ಸಿರಾಜ್ ಕೂಡ 2 ಕೋಟಿಯ ಬೇಸ್ ಪ್ರೈಸ್ ಹೊಂದಿದ್ದಾರೆ. ಕ್ಯೂರಿಯಾಸಿಟಿ ಅಂದ್ರೆ ಅನ್​​ಸೋಲ್ಡ್ ಆಗಿದ್ದ ಸ್ಟೀವ್ ಸ್ಮಿತ್, 2 ಕೋಟಿ ಮೂಲ ಬೆಲೆ ಮೂಲಕ ಅದೃಷ್ಟದ ಪರೀಕ್ಷೆಗೆ ಇಳಿದಿದ್ದಾರೆ.
ಅಚ್ಚರಿ ಮೂಡಿಸಿದ ಪೃಥ್ವಿ ಶಾ, ಸರ್ಫರಾಜ್ ಮೂಲ ಬೆಲೆ
ಪೃಥ್ವಿ ಶಾ, ಸರ್ಫರಾಜ್​ ಖಾನ್​ ಬೇಸ್ ಪ್ರೈಸ್ ಅಚ್ಚರಿ ಮೂಡಿಸಿದೆ. ಅಟ್ಯಾಕಿಂಗ್ ಬ್ಯಾಟಿಂಗ್​ಗೆ ಹೆಸರುವಾಸಿಯಾದ ಮುಂಬೈಕರ್ ಪೃಥ್ವಿ ಶಾ, ಇದೇ ಮೊದಲ ಬಾರಿ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಅದು ಕೂಡ 75 ಲಕ್ಷ ರೂಪಾಯಿದೆ. ಇದು ಮುಂಬೈ ರಣಜಿ ತಂಡದ ಎಫೆಕ್ಟ್​ ಹಿಂದಿನ ಸೀಕ್ರೆಟ್​ ಎಂಬ ಅನುಮಾನ ಮೂಡಿಸಿದೆ. ಈ ಹಿಂದೆ ಅನ್​ಸೋಲ್ಡ್ ಆಗಿದ್ದ ಸರ್ಫರಾಜ್​ ಖಾನ್​​​​​, ಪೃಥ್ವಿ ಶಾರನ್ನೇ ಫಾಲೋ ಮಾಡಿದ್ದಾರೆ.
ಬೆನ್ ಸ್ಟೋಕ್ಸ್ ಇಲ್ಲ
ಇಂಗ್ಲೆಂಡ್​ನ 52 ಆಟಗಾರರು ಮೆಗಾ ಹರಾಜಿನಲ್ಲಿ ಕಾಣಿಸಿಕೊಂಡಿದ್ದಾರೆ. ಇಂಗ್ಲೆಂಡ್​ನ ಟೆಸ್ಟ್ ಕ್ಯಾಪ್ಟನ್ ಬೆನ್ ಸ್ಟೋಕ್ಸ್​ ಐಪಿಎಲ್​​​ನಿಂದ ದೂರ ಉಳಿದಿದ್ದಾರೆ. ಇದಕ್ಕೆ ಕಾರಣ ಮುಂಬರುವ ಆ್ಯಶಸ್ ಸರಣಿ ಎನ್ನಲಾಗಿದೆ. ಪ್ರತಿಷ್ಠಿತ ಟೆಸ್ಟ್ ಸರಣಿಯ ಸಿದ್ಧತೆಗಾಗಿ ಬೆನ್ ಸ್ಟೋಕ್ಸ್, ಐಪಿಎಲ್​ನಿಂದ ಹೊರಗುಳಿದ್ದಾರೆ.
ಇದನ್ನೂ ಓದಿ:ಧನರಾಜ್ ಮೇಲೆ ಮೋಕ್ಷಿತಾ ಫೈರ್​; ಆ ಒಂದು ಮಾತಿಗೆ ಕಣ್ಣೀರಿಟ್ಟ ಧನು..!
ಹರಾಜಿನ ಕಣದಲ್ಲಿ ಇಂಗ್ಲೆಂಡ್ ಬೌಲಿಂಗ್ ಕೋಚ್
ಐಪಿಎಲ್​ ಅಂದ್ರೆ ಸ್ಟಾರ್ ಆಟಗಾರರ ಎಂಟ್ರಿ ಇದ್ದೇ ಇರುತ್ತೆ. ಇದಕ್ಕೆ ಭಿನ್ನ ಜೇಮ್ಸ್​ ಆ್ಯಂಡರ್ಸನ್. ಇಂಗ್ಲೆಂಡ್​ನ ಮೋಸ್ಟ್​ ಸಕ್ಸಸ್​ ಫುಲ್ ಬೌಲರ್​​ ಆಗಿದ್ದರೂ ಐಪಿಎಲ್​ನತ್ತ ಒಮ್ಮೆಯೂ ಜೇಮ್ಸ್ ಆ್ಯಂಡರ್ಸನ್​ ಮುಖ ಮಾಡಿರಲಿಲ್ಲ. 17 ವರ್ಷಗಳ ಬಳಿಕ ಹೆಸರು ನೋಂದಾಯಿಸಿಕೊಂಡಿದ್ದಾರೆ. ಇಂಟ್ರೆಸ್ಟಿಂಗ್ ಅಂದ್ರೆ ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿರುವ 42 ವರ್ಷದ ಆ್ಯಂಡರ್ಸನ್, ಇಂಗ್ಲೆಂಡ್​ನ ಬೌಲಿಂಗ್ ಕೋಚ್ ಆಗಿದ್ದಾರೆ. ಹೀಗಾಗಿ 1.5 ಕೋಟಿ ಮೂಲ ಬೆಲೆಯ ಆ್ಯಂಡರ್ಸನ್ ಯಾವ ತಂಡದ ಪಾಲಾಗ್ತಾರೆ ಅನ್ನೋ ಕ್ಯೂರಿಯಾಸಿಟಿ ಮನೆ ಮಾಡಿದೆ.
ಹರಾಜಿನಲ್ಲಿದ್ದಾರೆ ಇಟಾಲಿಯನ್ ಆಟಗಾರ
ಥಾಮಸ್ ಜ್ಯಾಕ್ ಡ್ರಾಕಾ, ಇದೇ ವರ್ಷ ಇಟಲಿ ಪರ ಟಿ20ಗೆ ಪದಾರ್ಪಣೆ ಮಾಡಿರುವ ಈತ, 4 ಪಂದ್ಯಗಳಿಂದ 8 ವಿಕೆಟ್ ಉರುಳಿಸಿದ್ದಾರೆ. ಹರಾಜಿನಲ್ಲಿ ಕಾಣಿಸಿಕೊಂಡಿರುವ ಮೊದಲ ಇಟಲಿ ಆಟಗಾರನಾಗಿರುವ ಜ್ಯಾಕ್ ಡ್ರಾಕಾ, UAEಯ ಇಂಟರ್​​ನ್ಯಾಷನಲ್​ ಲೀಗ್ ಟಿ20ಯಲ್ಲಿ ಮುಂಬೈ ಎಮಿರೇಟ್ಸ್​ ಪರ ಕಾಣಿಸಿಕೊಂಡಿದ್ದಾರೆ. ಗ್ಲೋಬಲ್ ಟಿ20 ಕನಡಾ ಲೀಗ್​ನಲ್ಲಿ ಡೇವಿಡ್ ವಾರ್ನರ್ ನಾಯಕತ್ವದ ಬ್ರಾಂಪ್ಟನ್ ವೋಲ್ವ್ಸ್ ಪರ ಆಡಿರುವ ಜ್ಯಾಕ್​, 2023ರಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಸಾಧನೆ ಮಾಡಿದ್ರೆ. 2024ರ ಲೀಗ್​ನಲ್ಲಿ ಜಂಟಿ 2ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದಾರೆ. ಹೀಗಾಗಿ ಈತ ಮುಂಬೈ ಸೇರ್ತಾರಾ ಎಂಬ ಕ್ಯುರಿಯಾಸಿಟಿ ಹೆಚ್ಚಾಗಿದೆ. ಮೆಗಾ ಹರಾಜಿನ ಕಣದಲ್ಲಿರುವ ಆಟಗಾರರ ಪಟ್ಟಿ ಪ್ರಕಟವಾಗಿದೆ. ಈ ಬೆನ್ನಲ್ಲೇ ಫ್ರಾಂಚೈಸಿಗಳ ಚಟುವಟಿಕೆ ಗರಿಗೆದರಿದೆ. ಯಾವ ಫ್ರಾಂಚೈಸಿ, ಯಾರನ್ನು ಮೆಗಾ ಹರಾಜಿನಲ್ಲಿ ಟಾರ್ಗೆಟ್ ಮಾಡುತ್ತೆಂಬ ಕ್ಯೂರಿಯಾಸಿಟಿ ಮನೆ ಮಾಡಿದೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us