Mega Auction; ಎಲ್ಲಾ ಫ್ರಾಂಚೈಸಿಗಿಂತ RCB ಪರ್ಸ್​​ನಲ್ಲೇ ಹೆಚ್ಚು ಹಣ.. ಕೇವಲ 5 ಕೋಟಿ ಉಳಿಸಿಕೊಂಡ ಟೀಮ್?

author-image
Bheemappa
Updated On
Mega Auction; ಎಲ್ಲಾ ಫ್ರಾಂಚೈಸಿಗಿಂತ RCB ಪರ್ಸ್​​ನಲ್ಲೇ ಹೆಚ್ಚು ಹಣ.. ಕೇವಲ 5 ಕೋಟಿ ಉಳಿಸಿಕೊಂಡ ಟೀಮ್?
Advertisment
  • ಮೊದಲ ದಿನದ ಆಕ್ಷನ್​​ನಲ್ಲಿ ಭರ್ಜರಿಯಾಗಿ ನಡೆದ ವ್ಯಾಪಾರ
  • ಯಾರ ಯಾರ ಬಳಿ ಎಷ್ಟು ಎಷ್ಟು ಕೋಟಿ ಹಣ ಉಳಿದಿದೆ.?
  • ಉಳಿದ ಎಲ್ಲ ಹಣವನ್ನು ಇಂದು ಖರ್ಚು ಮಾಡುತ್ತವೆಯೇ?

ಇಂಡಿಯನ್ ಪ್ರೀಮಿಯರ್ ಲೀಗ್ 2025 ರ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾ ನಗರದಲ್ಲಿ ಮೊದಲ ದಿನ ಭರ್ಜರಿಯಾಗಿ ನಡೆಯಿತು. ಲಕ್ನೋ ಹಾಗೂ ಪಂಜಾಬ್ ಕಿಂಗ್ಸ್​ ದಾಖಲೆ ಮಟ್ಟದಲ್ಲಿ ಪಂತ್ ಮತ್ತು ಶ್ರೇಯಸ್ ಅಯ್ಯರ್​​ನ್ನ ಕೊಂಡುಕೊಂಡವು. ಸದ್ಯ ಇಂದು ಕೂಡ ಹರಾಜು ನಡೆಯಲಿದ್ದು ಯಾವ್ಯಾವ ತಂಡದ ಪಾಕೆಟ್​ನಲ್ಲಿ ಎಷ್ಟೆಷ್ಟು ಕೋಟಿ ಇದೆ ಎನ್ನುವ ಮಾಹಿತಿ ಇಲ್ಲಿದೆ.

ಮೊದಲ ದಿನದ ಹರಾಜಿನಲ್ಲಿ ಫ್ರಾಂಚೈಸಿಗಳು ಎಲ್ಲವೂ ತಮ್ಮ ನೆಚ್ಚಿನ ಪ್ಲೇಯರ್ಸ್​​ ಅನ್ನು ಆಯ್ಕೆ ಮಾಡಿಕೊಂಡಿವೆ. ಇದರಲ್ಲಿ ಆರ್​ಸಿಬಿ ಫ್ರಾಂಚೈಸಿಯು 6 ಆಟಗಾರರನ್ನು ಖರೀದಿ ಮಾಡಿದರೆ, ಹೈದ್ರಾಬಾದ್ ಟೀಮ್ 8 ಪ್ಲೇಯರ್​ಗಳನ್ನು ಖರೀದಿ ಮಾಡಿದೆ. ಇನ್ನು ರಾಜಸ್ಥಾನ್ 5 ಆಟಗಾರರನ್ನ ಖರೀದಿ ಮಾಡಿದೆ. ಪಂಜಾಬ್, ಲಕ್ನೋ ಹೀಗೆ ಎಲ್ಲ ಟೀಮ್​ಗಳನ್ನು ಪ್ಲೇಯರ್ಸ್ ಅನ್ನು ಖರೀದಿ ಮಾಡಿವೆ. ಸದ್ಯಕ್ಕೆ ಅವರ ಪರ್ಸ್​ನಲ್ಲಿ ಈಗ ಎಷ್ಟು ಹಣ ಇದೆ ಎಂದರೆ..

ಇದನ್ನೂ ಓದಿ: IPL 2025 Auction; ಚಹಾಲ್​ಗಿಂತ ಅತ್ಯಂತ ಕಡಿಮೆ ದುಡ್ಡು ಪಡೆದ KL ರಾಹುಲ್​.. ಎಷ್ಟು ಕೋಟಿಗೆ ಸೇಲ್ ಆದ್ರು?

publive-image

  • ಆರ್​​ಸಿಬಿ- 30.65 ಕೋಟಿ ರೂ. ಇದೆ
  • ಮುಂಬೈ- 26.10 ಕೋಟಿ ರೂ.
  • ಪಂಜಾಬ್- 22.50 ಕೋಟಿ ರೂ.
  • ಗುಜರಾತ್- 17 ಕೋಟಿ ರೂ.
  • ರಾಜಸ್ಥಾನ್- 17.50 ಕೋಟಿ ರೂ.
  • ಚೆನ್ನೈ ಕಿಂಗ್ಸ್​- 15.6 ಕೋಟಿ ರೂ.
  • ಲಕ್ನೋ ಟೀಮ್- 14.85 ಕೋಟಿ ರೂ.
  • ಡೆಲ್ಲಿ ಕ್ಯಾಪಿಟಲ್ಸ್- 13.8 ಕೋಟಿ ರೂ.
  • ಕೋಲ್ಕತ್ತಾ ಟೀಮ್- 10.5 ಕೋಟಿ ರೂ.
  • ಹೈದ್ರಾಬಾದ್ ಟೀಮ್- 5.15 ಕೋಟಿ ರೂ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment