Advertisment

ಪಾಂಡ್ಯಗೆ ಇಲ್ಲ ಎಕ್ಸ್​​ಕ್ಯೂಸ್​.. ರೋಹಿತ್ ಇಟ್ಟ ಷರತ್ತು ಒಪ್ಪಿಕೊಂಡ MI..? ಭಾರೀ ಬದಲಾವಣೆ!

author-image
Ganesh
Updated On
ಪಾಂಡ್ಯಗೆ ಇಲ್ಲ ಎಕ್ಸ್​​ಕ್ಯೂಸ್​.. ರೋಹಿತ್ ಇಟ್ಟ ಷರತ್ತು ಒಪ್ಪಿಕೊಂಡ MI..? ಭಾರೀ ಬದಲಾವಣೆ!
Advertisment
  • ಮುಂಬೈ ಇಂಡಿಯನ್ಸ್​ನಲ್ಲಿ ಭಾರಿ ಬದಲಾವಣೆಯ ಮಾತು
  • ಸೂರ್ಯ, ಬೂಮ್ರಾ, ರೋಹಿತ್ ಉಳಿಸಿಕೊಳ್ಳಲು ಕಸರತ್ತು
  • ರೋಹಿತ್ ಶರ್ಮಾ ಫ್ರಾಂಚೈಸಿಗೆ ಇಟ್ಟ ಷರತ್ತುಗಳು ಏನೇನು?

ಐಪಿಎಲ್-2025ರ ಸಿದ್ಧತೆಗಳು ಜೋರಾಗಿದ್ದು, ಎಲ್ಲಾ ಫ್ರಾಂಚೈಸಿಗಳು ಮೆಗಾ ಹರಾಜಿಗಾಗಿ ಕಾದು ಕೂತಿವೆ. ಇದಕ್ಕೆ ಮುಂಬೈ ಇಂಡಿಯನ್ಸ್ ಹೊರತಾಗಿಲ್ಲ. ಕಳೆದ ಐಪಿಎಲ್​ನಲ್ಲಿ ಕ್ಯಾಪ್ಟನ್ಸಿ ವಿಚಾರದಲ್ಲಿ ದೊಡ್ಡ ವಿವಾದ ಸೃಷ್ಟಿಸಿದ್ದ ಮುಂಬೈ ಇಂಡಿಯನ್ಸ್​, ಈ ವರ್ಷ ಏನು ಮಾಡಲಿದೆ ಅಂತಾ ತೀವ್ರ ಕುತೂಹಲ ಮೂಡಿಸಿದೆ.

Advertisment

ಯಾಕೆಂದರೆ ಕಳೆದ ಬಾರಿ ರೋಹಿತ್ ಶರ್ಮಾ ಅವರಿಗೆ ಕ್ಯಾಪ್ಟನ್ಸಿಯಿಂದ ಕೊಕ್ ನೀಡಿ, ಗುಜರಾತ್ ತಂಡದ ನಾಯಕರಾಗಿದ್ದ ಹಾರ್ದಿಕ್ ಪಾಂಡ್ಯರನ್ನು ಕರೆದುಕೊಂಡು ಬಂದಿತ್ತು. ಇದು ಮುಂಬೈ ಇಂಡಿಯನ್ಸ್​ನ ಕೆಲವು ಆಟಗಾರರು ಹಾಗೂ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿತ್ತು. ಪರಿಣಾಮ ಐಪಿಎಲ್​​ ಪಂದ್ಯಗಳಲ್ಲಿ ಮುಂಬೈ ಇಂಡಿಯನ್ಸ್ ಹೀನಾಯವಾಗಿ ಸೋಲನ್ನು ಕಂಡಿತು. ಹೀಗಾಗಿ ಮುಂಬೈ ಇಂಡಿಯನ್ಸ್​ ಈ ವರ್ಷ ಪಾಂಡ್ಯಗೆ ಗೇಟ್ ಪಾಸ್ ನೀಡಲಿದೆ ಎನ್ನಲಾಗ್ತಿದೆ. ಇದರ ಮಧ್ಯೆ ಸೋಶಿಯಲ್ ಮೀಡಿಯಾದಲ್ಲಿ ಮುಂಬೈ ಫ್ರಾಂಚೈಸಿ ಬಗ್ಗೆ ಭಾರೀ ಚರ್ಚೆ ಆಗ್ತಿದೆ.

ಇದನ್ನೂ ಓದಿ:ಕೊಹ್ಲಿಗೊಂದು ನ್ಯಾಯ? ಬೇರೆಯವ್ರಿಗೆ ಇನ್ನೊಂದು ನ್ಯಾಯ.. ಬಿಸಿಸಿಐನ ಸುಣ್ಣ, ಬೆಣ್ಣೆ ಆಟಕ್ಕೆ ಆಕ್ರೋಶ..!

ಹಾರ್ದಿಕ್ ಪಾಂಡ್ಯಗೆ ತಂಡದಿಂದ ಗೇಟ್ ಪಾಸ್ ನೀಡಲಾಗುತ್ತದೆ. ಈ ಸಂಬಂಧ ಮುಂಬೈ ಇಂಡಿಯನ್ಸ್ ಮಾಜಿ ನಾಯಕ ರೋಹಿತ್ ಶರ್ಮಾ ಜೊತೆ ಮಹತ್ವದ ಮಾತುಕತೆ ನಡೆಸಿದೆ. ರೋಹಿತ್ ಶರ್ಮಾ ಇಟ್ಟಿರುವ ಷರತ್ತುಗಳನ್ನು ಮುಂಬೈ ಇಂಡಿಯನ್ಸ್ ಒಪ್ಪಿಕೊಂಡಿದೆ. ಸೂರ್ಯಕುಮಾರ್ ಯಾದವ್ ನಾಯಕರಾಗಬೇಕೋ ಅಥವಾ ಅವರೇ ನಾಯಕರಾಗಬೇಕೋ ಅನ್ನೋದನ್ನು ರೋಹಿತ್ ನಿರ್ಧರಿಸಲಿದ್ದಾರೆ. ಸೂರ್ಯ ಮುಂದಿನ ನಾಯಕನಾಗಬಹುದು. ರೋಹಿತ್ ಅವರನ್ನು ಉಳಿಸಿಕೊಳ್ಳಲು ಮುಂಬೈ ಶಕ್ತಿಮೀರಿ ಪ್ರಯತ್ನ ಮಾಡುತ್ತಿದೆ. ಜೊತೆಗೆ ಸೂರ್ಯ ಮತ್ತು ಜಸ್ಪ್ರೀತ್ ಬುಮ್ರಾ ಅವರನ್ನು ಉಳಿಸಿಕೊಳ್ಳಲು ಪ್ರಯತ್ನಿಸುತ್ತದೆ ಎಂಬ ಚರ್ಚೆ ಶುರುವಾಗಿದೆ.

Advertisment

ಇದನ್ನೂ ಓದಿ:ಪ್ರೊ ಕಬಡ್ಡಿ ಬಿಡ್ಡಿಂಗ್! 5 ಆಟಗಾರರ ಮೇಲೆ ಕೋಟಿ ಕೋಟಿ ಹಣ.. ಸಚಿನ್ ಅತ್ಯಂತ ದುಬಾರಿ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment
Advertisment
Advertisment