/newsfirstlive-kannada/media/post_attachments/wp-content/uploads/2025/04/sonu-gowda.jpg)
ಬೆಂಗಳೂರು: ಸೋಷಿಯಲ್ ಮೀಡಿಯಾದಲ್ಲಿ ರೀಲ್ಸ್ ಮಾಡುವ ಸ್ಟಾರ್‌ಗಳಿಗೆ ಬಿಗ್ ಶಾಕ್ ಎದುರಾಗಿದೆ. ಹಣದ ಆಸೆಗೆ ಸ್ಟೋರಿ ಹಾಕಿ ಪ್ರಮೋಟ್ ಮಾಡ್ತಿದ್ದ ರೀಲ್ಸ್ ಸ್ಟಾರ್‌ಗಳಿಗೆ ಪೊಲೀಸರು ಖಡಕ್ ವಾರ್ನಿಂಗ್ ಕೊಟ್ಟಿದ್ದಾರೆ.
ಇದನ್ನೂ ಓದಿ: ಸೀರಿಯಲ್ ಮುಗಿಯುತ್ತಿದ್ದಂತೆ ಸಖತ್ ಬ್ಯುಸಿಯಾದ ಲಕ್ಷ್ಮೀ; ನಟಿ ಭೂಮಿಕಾ ರಮೇಶ್ ನೆಕ್ಸ್ಟ್ ಪ್ಲಾನ್ ಏನು?
ಏನಿದು ಆರೋಪ..?
ರೀಲ್ಸ್ ಸ್ಟಾರ್ಗಳು IPL ಬೆಟ್ಟಿಂಗ್ ಬಗ್ಗೆ ಸ್ಟೋರಿಗಳನ್ನ ಹಾಕುತ್ತಿದ್ದರು. ಗೆಲ್ಲುವ ಟೀಂ, ಸೋಲುವ ಟೀಂ ಯಾವುದೆಂದು ಹೇಳಿ ಅಂತ ಸ್ಟೇಟಸ್ ಹಾಕುತ್ತಿದ್ದರಂತೆ. ಆ ಮೂಲಕ ಗೆಲುವು ಹಾಗೂ ಸೋಲಿನ ಬಗ್ಗೆ ಜನರ ಅಭಿಪ್ರಾಯ ತಿಳಿದುಕೊಳ್ಳುತ್ತಿದ್ದರಂತೆ. IPL ಬೆಟ್ಟಿಂಗ್ ಬುಕ್ಕಿಗಳು ನೀಡೋ ಡೀಟೇಲ್ಸ್ ಮೇರೆಗೆ ಸ್ಟೋರಿ ಅಪ್ಲೋಡ್ ಮಾಡುತ್ತಿದ್ದರು ಅನ್ನೋದು ಇಲ್ಲಿ ಆರೋಪ. ಇದೀಗ ಹಣದ ಆಸೆಗೆ ಸ್ಟೋರಿ ಹಾಕಿ ಪ್ರಮೋಟ್ ಮಾಡ್ತಿದ್ದ ರೀಲ್ಸ್ ಸ್ಟಾರ್‌ಗಳಿಗೆ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ.
ಯಾರೆಲ್ಲ ವಿಚಾರಣೆ..?
ಪೊಲೀಸರು ಕನ್ನಡದ ಬಹುತೇಕ ರೀಲ್ಸ್ ಸ್ಟಾರ್ಗಳ ಇನ್ಸ್ಟಾಗ್ರಾಮ್ಗಳನ್ನು ಪರಿಶೀಲನೆ ಮಾಡಿ ಕರೆ ಮಾಡಿ ವಿಚಾರಣೆಗೆ ಕರೆದಿದ್ದಾರೆ. ಈಗಾಗಲೇ ಪೊಲೀಸರಿಂದ 20ಕ್ಕೂ ಹೆಚ್ಚು ರೀಲ್ಸ್ ಸ್ಟಾರ್ಗಳ ವಿಚಾರಣೆ ನಡೆದಿದೆ. ಬೆಂಗಳೂರು, ಮಂಗಳೂರು, ಮಂಡ್ಯ, ಹುಬ್ಬಳ್ಳಿಯಿಂದ ರೀಲ್ಸ್ ಸ್ಟಾರ್ಗಳನ್ನು ಕರೆಸಿ ವಿಚಾರಣೆ ನಡೆಸಿದ್ದಾರೆ. ಸೋನು ಶ್ರೀನಿವಾಸ್‌ಗೌಡ, ದೀಪಕ್‌ಗೌಡ, ವರುಣ್ ಆರಾದ್ಯ, ದಚ್ಚು ಸೇರಿ ನೂರಕ್ಕೂ ಹೆಚ್ಚು ಮಂದಿ ರೀಲ್ಸ್ ಸ್ಟಾರ್‌ಗಳಿಗೆ ನೋಟಿಸ್ ಕೊಟ್ಟು ವಿಚಾರಣೆ ಮಾಡಿದ್ದಾರೆ. ಅಲ್ಲದೇ ಇನ್ಮುಂದೆ ಬೆಟ್ಟಿಂಗ್ ಪ್ರಮೋಷನ್ ಮಾಡದಂತೆ ಪೊಲೀಸರು ವಾರ್ನ್ ಮಾಡಿದ್ದಾರೆ ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ