/newsfirstlive-kannada/media/post_attachments/wp-content/uploads/2025/02/SHREYANKA.jpg)
3ನೇ ಆವೃತ್ತಿಯ ಮಹಿಳಾ ಪ್ರೀಮಿಯರ್ ಲೀಗ್ಗೆ ಕೌಂಟ್ಡೌನ್ ಶುರುವಾಗಿದೆ. ಫೆಬ್ರವರಿ 14 ರಿಂದ WPL ಟೂರ್ನಿ ಆರಂಭವಾಗಲಿದ್ದು ಫ್ರಾಂಚೈಸಿಗಳ ವಲಯದಲ್ಲಿ ಚಟುವಟಿಕೆಗಳು ಗರಿಗೆದರಿವೆ. ಪ್ರ್ಯಾಕ್ಟಿಸ್ ಕ್ಯಾಂಪ್, ಟೀಮ್ ಬಾಂಡಿಂಗ್ ಸೆಷನ್, ಫೋಟೋ ಶೂಟ್ ಅಂತಾ ಚುಟುಕು ಲೀಗ್ ಫೈಟ್ನ ಫೀವರ್ ಕ್ರಿಕೆಟ್ ವಲಯದಲ್ಲಿ ಹೆಚ್ಚಾಗ್ತಿದೆ.
RCB ಹುಡುಗಿಯರಿಗೆ ಹೊಸ ಜೆರ್ಸಿ
ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟೈಟಲ್ ಡಿಫೆಂಡ್ ಮಾಡಿಕೊಳ್ಳಲು ಸಜ್ಜಾಗ್ತಿದೆ. ಈಗಾಗಲೇ ಬೆಂಗಳೂರಿನಲ್ಲಿ ಕ್ಯಾಂಪ್ ಶುರುವಾಗಿದ್ದು ಸ್ಮೃತಿ ಮಂದಾನ ಬಳಗ ಭರ್ಜರಿಯಾಗಿ ಅಭ್ಯಾಸ ನಡೆಸ್ತಿದೆ. ಅಭ್ಯಾಸದ ನಡುವೆ ಫೋಟೋಶೂಟ್ ನಡೆದಿದ್ದು, ಆಟಗಾರ್ತಿಯರು ಹೊಸ ಜೆರ್ಸಿ ತೊಟ್ಟು ಮಿಂಚಿದ್ದಾರೆ. ಶೂಟ್ ವೇಳೆ ಕ್ಯಾಪ್ಟನ್ ಸ್ಮೃತಿ ಮಂದಾನ, ಶ್ರೇಯಾಂಕ ಪಾಟೀಲ್, ಕನಿಕಾ ಅಹುಜಾ, ರೇಣುಕಾ ಸಿಂಗ್ ಸೇರಿದಂತೆ ಎಲ್ಲಾ ಆಟಗಾರ್ತಿಯರು ಪರಸ್ಪರ ಕಾಲೆಳೆದುಕೊಂಡು ಫುಲ್ ಮಸ್ತಿ ಮಾಡಿದ್ದಾರೆ.
ಇದನ್ನೂ ಓದಿ: ಟೀಮ್ ಇಂಡಿಯಾ ಮುಖ್ಯ ಕೋಚ್ ಗಂಭೀರ್ ವಿರುದ್ಧ ಕಠಿಣಕ್ರಮ; ಬಿಸಿಸಿಐನಿಂದ ಮಹತ್ವದ ನಿರ್ಧಾರ
ಮುಂಬೈನಲ್ಲಿ ಫುಲ್ ಸೌಂಡ್
3ನೇ ಸೀಸನ್ಗೆ ಮುಂಬೈ ಇಂಡಿಯನ್ಸ್ ತಂಡ ಡಿಫ್ರೆಂಟ್ ಸಿದ್ಧತೆ ಆರಂಭಿಸಿದೆ. ಅಭ್ಯಾಸದ ಜೊತೆ ಜೊತೆಗೆ ಟೀಮ್ ಬಾಂಡಿಂಗ್ಗೆ ಹೆಚ್ಚು ಒತ್ತು ನೀಡಿದೆ. ಇದರ ಭಾಗವಾಗಿ ಟೀಮ್ ಹೋಟೆಲ್ನಲ್ಲಿ ಫ್ರಾಂಚೈಸಿ ಸ್ಪೆಷಲ್ ಪಾರ್ಟಿ ಆಯೋಜಿಸಿತ್ತು. ಪಾರ್ಟಿಯಲ್ಲಿ ಭಾಗಿಯಾದ ಆಟಗಾರ್ತಿಯರು ಹಾಡಿ, ಕುಣಿದು ಸಂಭ್ರಮಿಸಿದ್ದಾರೆ. ಸಪೋರ್ಟ್ ಸ್ಟಾಫ್ ಕೂಡ ಆಟಗಾರ್ತಿಯರ ಜೊತೆ ಮಸ್ತಿ ಮಾಡಿದ್ದಾರೆ. ಚಾರ್ಲೆಟ್ ಎಡ್ವರ್ಡ್ಸ್, ಜುಲಾನ್ ಗೋಸ್ವಾಮಿ, ಕಿರಣ್ ಮೋರೆ ಕೂಡ ಸ್ಟೆಪ್ಸ್ ಹಾಕಿದ್ದಾರೆ.
ಇದನ್ನೂ ಓದಿ: ಇನ್ಮುಂದೆ ಐಫೋನ್ 16 ಬ್ಯಾನ್; ಹೊಸ ಕಾನೂನಿಗೆ ಬೆಚ್ಚಿಬಿದ್ದ ಜನ; ನೀವು ಓದಲೇಬೇಕಾದ ಸ್ಟೋರಿ
ಗುಜರಾತ್ ರೆಡಿ..
ಸೀಸನ್ಗೂ ಮುನ್ನ ತಂಡಕ್ಕೆ ಸರ್ಜರಿ ಮಾಡಿರೋ ಗುಜರಾತ್ ಜೈಂಟ್ಸ್ ತಂಡ ಬೆತ್ ಮೊನಿಗೆ ನಾಯಕತ್ವದಿಂದ ಕೊಕ್ ಕೊಟ್ಟಿದೆ. ಬೆತ್ ಮೊನಿ ಬದಲು ಆ್ಯಶ್ಲೆ ಗಾರ್ಡ್ನರ್ ನಾಯಕತ್ವದಲ್ಲಿ ಹೊಸ ಹುರುಪಿನೊಂದಿಗೆ ಸೀಸನ್ ಆರಂಭಿಸಲು ಸಜ್ಜಾಗಿದೆ. ಈಗಾಗಲೇ ಗುಜರಾತ್ ಟೀಮ್ನ ಪ್ರಾಕ್ಟಿಸ್ ಕ್ಯಾಂಪ್ ಶುರುವಾಗಿದ್ದು, ಆಟಗಾರ್ತಿಯರು ಭರ್ಜರಿ ಅಭ್ಯಾಸವನ್ನೂ ನಡೆಸಿದ್ದಾರೆ.
ಡೆಲ್ಲಿ ಕಠಿಣ ಅಭ್ಯಾಸ
ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯಲ್ಲೂ ಸೀಸನ್ 3ಕ್ಕೆ ಭಾರೀ ಸಿದ್ಧತೆ ನಡೀತಿದೆ. ಬಹುತೇಕ ಪ್ಲೇಯರ್ಸ್ ತಂಡ ಕೂಡಿಕೊಂಡಿದ್ದು, ಅಭ್ಯಾಸ ಆರಂಭಿಸಿದ್ದಾರೆ. ಇದ್ರ ನಡುವೆ ಫನ್ ಕ್ಷಣಗಳನ್ನೂ ಕಳೆದಿದ್ದಾರೆ.
ಯುಪಿಗೆ ಬೇಸರ
ಎಲ್ಲಾ ಫ್ರಾಂಚೈಸಿಗಳಲ್ಲಿ ಸಂಭ್ರಮ ಮನೆ ಮಾಡಿದ್ರೆ, ಯುಪಿ ಫ್ರಾಂಚೈಸಿ ಬೇಸರದಲ್ಲಿದೆ. ತಂಡದ ನಾಯಕಿ ಅಲಿಸಾ ಹೀಲಿ ಇಂಜುರಿಗೆ ತುತ್ತಾಗಿ ಟೂರ್ನಿಯಿಂದ ಹೊರಬಿದ್ದಿದ್ದಾರೆ. ಸೀಸನ್ ಆರಂಭಕ್ಕೂ ಮುನ್ನವೇ ಆಘಾತ ಎದುರಾಗಿದ್ದು, ಬೇಸರದಲ್ಲೇ ಯುಪಿ ಫ್ರಾಂಚೈಸಿ ಅಲಿಸಾ ಹೀಲಿಗೆ ಗುಡ್ ಬೈ ಹೇಳಿದೆ. ಒಟ್ಟಿನಲ್ಲಿ, WPL ಫೀವರ್ ನಿಧಾನಕ್ಕೆ ಕ್ರಿಕೆಟ್ ವಲಯವನ್ನ ಆವರಿಸುತ್ತಿದೆ. ಮಹಿಳಾ ಪ್ರೀಮಿಯರ್ ಲೀಗ್ನ ಮಹಾ ಕದನಗಳನ್ನ ನೋಡಲು ಫ್ಯಾನ್ಸ್ ಕೂಡ ಕಾತರಾಗಿದ್ದಾರೆ. ಅಖಾಡದಲ್ಲಿ ಆಟ ಶುರುವಾಗೋದಷ್ಟೇ ಬಾಕಿ.
ಇದನ್ನೂ: ಕೇಜ್ರಿವಾಲ್ ಹ್ಯಾಟ್ರಿಕ್ ಕನಸು ಭಗ್ನ ಎಂದಿರುವ ಸಮೀಕ್ಷೆಗಳು.. ದೆಹಲಿ ದಂಗಲ್ ಕ್ಲೈಮ್ಯಾಕ್ಸ್ನಲ್ಲಿ ಭಾರೀ ಕುತೂಹಲ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್