newsfirstkannada.com

RCB vs CSK: ಇಂದಿನಿಂದ ಐಪಿಎಲ್ ಜಾತ್ರೆ.. 10 ತಂಡ, 74 ಪಂದ್ಯಗಳು.. ಈ ಸ್ಟಾರ್​ ಪ್ಲೇಯರ್ಸ್​ ಮೇಲೆ ಎಲ್ಲರ ಕಣ್ಣು..!

Share :

Published March 22, 2024 at 7:20am

    ಆರ್​ಸಿಬಿ-ಸಿಎಸ್​ಕೆಯ ಉದ್ಘಾಟನಾ ಪಂದ್ಯ ನಡೆಯುತ್ತಿರುವುದೆಲ್ಲಿ?

    ಕಪ್ ಗೆಲ್ಲುವ ಉತ್ಸಾದಲ್ಲಿ ಅಖಾಡಕ್ಕೆ ಇಳಿಯುತ್ತಿದೆ ಬೆಂಗಳೂರು

    ಚೆನ್ನೈ ಕ್ಯಾಕ್ಟನ್ಸಿಗೆ ಧೋನಿ ರಾಜೀನಾಮೆ, ಹೊಸ ನಾಯಕ ಯಾರು?

ಇಂಡಿಯನ್ ಪ್ರೀಮಿಯರ್​ ಲೀಗ್ ಸೀಸನ್- 17ರ ವೇದಿಕೆ ಗ್ರ್ಯಾಂಡ್ ಆಗಿ ರೆಡಿಯಾಗಿದ್ದು ಅದ್ಧೂರಿ ಸಮಾರಂಭದ ಮೂಲಕ ಇಂದು ಸಂಜೆ ಚಾಲನೆ ಸಿಗಲಿದೆ. ಮೊದಲ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಜೊತೆ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್ ಕಿಂಗ್ಸ್​ ಅಖಾಡಕ್ಕೆ ಇಳಿಯಲಿದೆ. ಒಟ್ಟು 10 ತಂಡಗಳಿಂದ ರೋಚಕವಾದ ಸಿಕ್ಸರ್​ಗಳು, ಬೌಂಡರಿ, ವಿಕೆಟ್​ಗಳ ಬೇಟೆ, ರನ್​ಗಳ ಸುರಿಮಳೆ ಸೇರಿದಂತೆ ಪಂದ್ಯಗಳಲ್ಲಿ ಕೆಲವೊಂದು ಸನ್ನಿವೇಶಗಳನ್ನು ಐಪಿಎಲ್ ಫ್ಯಾನ್ಸ್​ ಎಂಜಾಯ್ ಮಾಡಲಿದ್ದಾರೆ.

ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ಇಂದು ಸಂಜೆ ಅದ್ಧೂರಿ ಕಾರ್ಯಕ್ರಮದ ಬಳಿಕ ಮೊದಲ ಪಂದ್ಯ 8 ಗಂಟೆಗೆ ಆರಂಭವಾಗಲಿದೆ. ಆರ್​ಸಿಬಿ ಪರ ಫಾಫ್​ ಡುಪ್ಲೆಸ್ಸಿ ನಾಯಕತ್ವ ವಹಿಸಿದ್ರೆ, ಅತ್ತ ಧೊನಿ ಕ್ಯಾಪ್ಟನ್ಸಿಗೆ ರಾಜೀನಾಮೆ ನೀಡಿದ್ದರಿಂದ ಚೆನ್ನೈ ಸಾರಥ್ಯವನ್ನು ಋತುರಾಜ್​ ಗಾಯಕ್ವಾಡ್ ವಹಿಸಲಿದ್ದಾರೆ. ಮೊದಲೇ ಬೆಂಗಳೂರು ಮತ್ತು ಚೆನ್ನೈ ಪಂದ್ಯವೆಂದರೆ ಐಪಿಎಲ್​ ಫ್ಯಾನ್ಸ್​ಗೆ ಎಲ್ಲಿಲ್ಲದ ಕುತೂಹಲ. ಕಪ್ ಗೆದ್ದಿಲ್ಲವೆಂದರೂ ಪರವಾಗಿಲ್ಲ, ಚೆನ್ನೈಯನ್ನು ಆರಂಭಿಕ ಪಂದ್ಯದಲ್ಲೇ ಸೋಲಿಸಿದರೆ ಅದೇ ನಮಗೆ ದೊಡ್ಡ ಗೆಲುವು ಎನ್ನುವುದು ಆರ್​ಸಿಬಿ ಫ್ಯಾನ್ಸ್​ಗಳ ಮನದಾಳ ಮಾತಾಗಿದೆ.

16 ಸೀಸನ್​ಗಳನ್ನ ಆಡಿ 17 ಸೀಸನ್​ಗೆ ಆಡಿರುವ ಆರ್​ಸಿಬಿ ಟೀಮ್ ಕಪ್​ ಗೆಲ್ಲುವ ಉತ್ಸಾಹದಲ್ಲಿ ಈ ಬಾರಿ ಅಖಾಡಕ್ಕೆ ಇಳಿಯುತ್ತಿದೆ. ಈ ಹಿಂದೆಯು 3 ಬಾರಿ ಫೈನಲ್​ಗೆ ಪ್ರವೇಶ ಪಡೆದಿದ್ದರೂ ಕಪ್​ ಗೆಲ್ಲಲಾಗಿರಲಿಲ್ಲ. ಈ ಬಾರಿಯ 2ನೇ ಆವೃತ್ತಿಯಲ್ಲೇ ಮಹಿಳಾ ಆರ್​​ಸಿಬಿ ಟೀಮ್ ಕಪ್​​ಗೆ ಮುತ್ತಿಟ್ಟಿದೆ. ಹೀಗಾಗಿ ಆರ್​ಸಿಬಿಯ ಪುರುಷರ ಟೀಮ್​ ಮೇಲೆ ತುಸು ಒತ್ತಡ ಹೆಚ್ಚಾಗಿದೆ. ಇವತ್ತಿನ ಪಂದ್ಯದಲ್ಲಿ ವಿರಾಟ್​ ಕೊಹ್ಲಿ ಮತ್ತು ಧೋನಿಯ ಎಲ್ಲರ ಕಣ್ಣು ನೆಟ್ಟಿದೆ. ಆಕ್ರಮಣಕಾರಿ ಕಿಂಗ್​ ಕೊಹ್ಲಿ ಹಾಗೂ ಕೂಲ್​ ಕ್ಯಾಪ್ಟನ್​ ನಡುವೆ ಗೆಲ್ಲುವುದು ಯಾರೆಂಬುದು ಕುತೂಹಲ ಇನ್ನಷ್ಟು ದುಪ್ಪಾಟ್ಟಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB vs CSK: ಇಂದಿನಿಂದ ಐಪಿಎಲ್ ಜಾತ್ರೆ.. 10 ತಂಡ, 74 ಪಂದ್ಯಗಳು.. ಈ ಸ್ಟಾರ್​ ಪ್ಲೇಯರ್ಸ್​ ಮೇಲೆ ಎಲ್ಲರ ಕಣ್ಣು..!

https://newsfirstlive.com/wp-content/uploads/2024/03/RCB-1-1.jpg

Load More