/newsfirstlive-kannada/media/post_attachments/wp-content/uploads/2025/04/RCB-VS-PBKS.jpg)
ಗುಜರಾತ್ ಅಹ್ಮದಾಬಾದ್ನ ಶ್ರೀ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಐಪಿಎಲ್-2025 ಫೈನಲ್ ಮ್ಯಾಚ್ ಆರಂಭವಾಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿ ಆಗಿವೆ. ಟಾಸ್ ಪ್ರಕ್ರಿಯೆಯಲ್ಲಿ ಪಂಜಾಬ್ ಕಿಂಗ್ಸ್ ಗೆದ್ದಿದೆ.
ಟಾಸ್ ಗೆದ್ದಿರುವ ಪಂಜಾಬ್ ಕಿಂಗ್ಸ್ ಚೇಸಿಂಗ್ ಆಯ್ಕೆ ಮಾಡಿಕೊಂಡಿದ್ದು, ಆರ್ಸಿಬಿ ಮೊದಲು ಬ್ಯಾಟಿಂಗ್ ಮಾಡಲಿದೆ. ಇನ್ನುಳಿದಂತೆ ಆರ್ಸಿಬಿ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ.
ಬಲಿಷ್ಠ ಆರ್ಸಿಬಿ ತಂಡ ಪ್ರಕಟ:
ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟೀದಾರ್ (ಕ್ಯಾಪ್ಟನ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಲಿಯಾಮ್ ವಿಲಿಂಗ್ಸ್ಟೋನ್, ರೊಮಾರಿಯೋ ಶೆಫೆರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್ವುಡ್, ಮಯಾಂಕ್ ಅಗರ್ವಾಲ್. ಇಂಪ್ಯಾಕ್ಟ್ ಪ್ಲೇಯರ್ ಆಗಿ ಸುಯೇಶ್ ಶರ್ಮಾ ಆಡಲಿದ್ದಾರೆ.
ಇದನ್ನೂ ಓದಿ: RCBಗೋಸ್ಕರ ಮದುವೆ ಮುಂದೂಡಿದ್ದ ಕ್ಯಾಪ್ಟನ್ ಪಾಟಿದಾರ್.. ರಜತ್ ತ್ಯಾಗದ ಸ್ಟೋರಿ ನಿಮ್ಗೆ ಗೊತ್ತಾ?
ಪಂಜಾಬ್ ಕಿಂಗ್ಸ್: ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಷ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ನೇಹಲ್ ವದೇರಾ, ಮಾರ್ಕಸ್ ಸ್ಟೋನಿಸ್, ಶಶಾಂಕ್ ಸಿಂಗ್, ಒಮರ್ಜಾಯ್, ಕೈಲ್ ಜೆಮಿಸನ್, ವಿಜಯಕುಮಾರ್ ವೈಶಾಕ್, ಅರ್ಷದೀಪ್ ಸಿಂಗ್, ಚಹಾಲ್. ಇಂಪ್ಯಾಕ್ಟ್ ಪ್ಲೇಯರ್ ಆಗಿ ಪ್ರಭಸಿಮ್ರಾನ್ ಬರಲಿದ್ದಾರೆ.
ಐಪಿಎಲ್ ಟೂರ್ನಿ ಆರಂಭವಾಗಿ 18 ವರ್ಷಗಳು ಕಳೆದಿವೆ. ಪಂಜಾಬ್ ಕಿಂಗ್ಸ್ ಹಾಗೂ ಆರ್ಸಿಬಿ ಇಲ್ಲಿಯವರೆಗೆ ಒಂದೇ ಒಂದು ಟ್ರೋಫಿಯನ್ನು ಎತ್ತಿ ಹಿಡಿದಿಲ್ಲ. ಹೀಗಾಗಿ 18 ವರ್ಷಗಳ ಟ್ರೋಫಿ ಬರ ನೀಗಿಸಿಕೊಳ್ಳಲು ಎರಡು ತಂಡಗಳು ಸೆಣಸಾಟ ನಡೆಸುತ್ತಿವೆ. ಆರ್ಸಿಬಿ ತಂಡವನ್ನು ರಜತ್ ಪಾಟೀದಾರ್ ಮುನ್ನಡೆಸುತ್ತಿದ್ದರೆ, ಪಂಜಾಬ್ ಕಿಂಗ್ಸ್ ತಂಡವನ್ನು ಶ್ರೇಯಸ್ ಅಯ್ಯರ್ ಲೀಡ್ ಮಾಡ್ತಿದ್ದಾರೆ.
ಇದನ್ನೂ ಓದಿ: ಇವತ್ತು ಶಾಕಿಂಗ್ ನ್ಯೂಸ್ ಕೊಡ್ತಾರಾ ಕೊಹ್ಲಿ.. ವಿರಾಟ್ ಅಭಿಮಾನಿಗಳಿಗೆ ಢವಢವ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ