/newsfirstlive-kannada/media/post_attachments/wp-content/uploads/2025/06/RCB-28.jpg)
ಆರ್‌ಸಿಬಿ ಫ್ರಾಂಚೈಸಿ ಮಾಲೀಕತ್ವದ ಕಂಪನಿ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ (USL). ಈ ಕಂಪನಿಯು ಡಿಯಾಜಿಯೊದ (Diageo) ಅಂಗಸಂಸ್ಥೆಯಾಗಿದೆ. RCB ಫ್ರಾಂಚೈಸಿಯನ್ನು ಡಿಯಾಜಿಯೊ ಇಂಡಿಯಾದ ಮುಖ್ಯ ವಾಣಿಜ್ಯ ಅಧಿಕಾರಿ ಅಧ್ಯಕ್ಷ ಪ್ರಥಮೇಶ್ ಮಿಶ್ರಾ ನೋಡಿಕೊಳ್ಳುತ್ತಾರೆ. ಪ್ರಥಮೇಶ್ ಮಿಶ್ರಾ IPL 2025ರಲ್ಲಿ ಮೆಗಾ ಹರಾಜಿನಲ್ಲಿ ಭಾಗಿಯಾಗಿದ್ದರು. ಈಗ RCB ಮೊದಲ IPL ಪ್ರಶಸ್ತಿ ಗೆದ್ದಿದೆ.
ಆರ್‌ಸಿಬಿಗೆ ಸಿಕ್ಕ ಬಹುಮಾನ ಎಷ್ಟು..?
ಫೈನಲ್ನಲ್ಲಿ ಆರ್‌ಸಿಬಿ, ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಐಪಿಎಲ್ ಪ್ರಶಸ್ತಿ ಗೆದ್ದಿದ್ದಕ್ಕಾಗಿ ಆರ್‌ಸಿಬಿಗೆ 20 ಕೋಟಿ ರೂಪಾಯಿ ಬಹುಮಾನ ಸಿಕ್ಕಿದೆ. ಬಹುಮಾನದ ಹಣದಲ್ಲಿ ಶೇಕಡಾ 30 ರಷ್ಟು ತೆರಿಗೆಗೆ ಹೋಗಲಿದೆ. ಕೇವಲ 9 ಕೋಟಿ 10 ಲಕ್ಷ ರೂಪಾಯಿ ತಂಡದ ಖಾತೆಗೆ ಹೋಗುತ್ತದೆ.
ಇದನ್ನೂ ಓದಿ: ಕಿರುತೆರೆ ಸ್ಟಾರ್ಗಳಲ್ಲಿ ಸಂಭ್ರಮ.. ಶೈನ್ ಶೆಟ್ಟಿ, ದಿವ್ಯಾ ಉರುಡುಗ, ಕಾರ್ತಿಕ್ RCB Fans ಕ್ರೇಜ್ ಹೇಗಿತ್ತು?
ವಿಷಯ ಅದಲ್ಲ.. ಫ್ರಾಂಚೈಸಿಗಳು ತಂಡ ಕಟ್ಟಲು ಕೋಟ್ಯಂತರ ರೂಪಾಯಿ ಖರ್ಚು ಮಾಡುತ್ತದೆ. ಉದಾಹರಣೆಗೆ ರಿಷಭ್ ಪಂತ್, ಈ ಋತುವಿನಲ್ಲಿ ಅತ್ಯಂತ ದುಬಾರಿ ಆಟಗಾರರಾದರು. ಅವರನ್ನು 27 ಕೋಟಿ ರೂಪಾಯಿಗೆ ಖರೀದಿಸಲಾಯಿತು. ಇಂಥ ಸಮಯದಲ್ಲಿ, ಐಪಿಎಲ್ ಬಹುಮಾನ 20 ಕೋಟಿ ರೂಪಾಯಿ. ಹೀಗಿರುವಾಗ ತಂಡದ ಮಾಲೀಕರು ಹೇಗೆ ಲಾಭ ಗಳಿಸುತ್ತಾರೆ ಅನ್ನೋ ಪ್ರಶ್ನೆ ಸಹಜವಾಗಿಯೇ ಮೂಡುತ್ತದೆ.
RCB ಮಾಲೀಕರು ಎಷ್ಟು ಲಾಭ ಗಳಿಸಿದರು?
ಐಪಿಎಲ್ ಕೇವಲ ಲೀಗ್ ಅಲ್ಲ. ಈ ಟೂರ್ನಿಮೆಂಟ್ ಒಂದು ಬ್ಯುಸಿನೆಸ್. ತಂಡದ ಮಾಲೀಕರಿಗೆ ಆದಾಯದ ಮೂಲವೆಂದರೆ ಬಹುಮಾನದ ಹಣ ಮಾತ್ರವಲ್ಲ. ಈ ಆಟದಿಂದ ಬರುವ ಆದಾಯವೂ ಇದೆ. ತಂಡದ ಮಾಲೀಕರು ಮಾಧ್ಯಮ ಹಕ್ಕುಗಳು ಮತ್ತು ಪ್ರಾಯೋಜಕತ್ವದಿಂದಲೂ ಸಾಕಷ್ಟು ಹಣ ಪಡೆಯುತ್ತಾರೆ. ಅನೇಕ ಬ್ರಾಂಡ್‌ಗಳ ಲೋಗೋಗಳನ್ನು ಆರ್‌ಸಿಬಿ ಜೆರ್ಸಿ ಮೇಲೆ ಮುದ್ರಿಸಲಾಗಿದೆ. ಈ ಪ್ರಾಯೋಜಕರು ತಮ್ಮ ಹೆಸರನ್ನು ಜೆರ್ಸಿಯ ಮೇಲೆ ಮುದ್ರಿಸಲು ಭಾರಿ ಮೊತ್ತವನ್ನು ಪಾವತಿಸುತ್ತಾರೆ.
ಇದನ್ನೂ ಓದಿ: ಈ ವೇಗಿ ಹೆಚ್ಚು ಡಾಟ್ ಬಾಲ್ ಎಸೆದರು.. ಟ್ರೋಫಿ ಜೊತೆಗೆ 10 ಲಕ್ಷ ಬಹುಮಾನ ಗೆದ್ದರು..!
ಇದೆಲ್ಲದರ ಹೊರತಾಗಿ ತಂಡದ ಮಾಲೀಕರು ಟಿಕೆಟ್ ಮಾರಾಟದಲ್ಲಿ ದೊಡ್ಡ ಪಾಲನ್ನು ಪಡೆಯುತ್ತಾರೆ. ಮಾಧ್ಯಮಗಳ ವರದಿಗಳ ಪ್ರಕಾರ, ಒಂದು ಪಂದ್ಯದಲ್ಲಿ ಮಾರಾಟವಾಗುವ ಟಿಕೆಟ್‌ಗಳಲ್ಲಿ 80 ಪ್ರತಿಶತ ತಂಡದ ಮಾಲೀಕರಿಗೆ ಹೋಗುತ್ತದೆ. ಐಪಿಎಲ್ ಟಿಕೆಟ್‌ನ ಬೆಲೆ ಮೂರು ಸಾವಿರ ರೂಪಾಯಿಗಳಿಂದ ಮೂವತ್ತು ಸಾವಿರ ರೂಪಾಯಿಗಳವರೆಗೆ ಇರುತ್ತದೆ. ಐಪಿಎಲ್ ಫೈನಲ್‌ನ ಟಿಕೆಟ್‌ಗಳ ಬೆಲೆ ಲೀಗ್ ಪಂದ್ಯಗಳ ಟಿಕೆಟ್‌ಗಳಿಗಿಂತ ಹೆಚ್ಚಾಗಿದೆ.
ಐಪಿಎಲ್ ಫೈನಲ್ ಪಂದ್ಯವನ್ನು ಅಹಮದಾಬಾದ್‌ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಸಲಾಯಿತು. ಇದು ದೇಶದ ಅತಿದೊಡ್ಡ ಕ್ರೀಡಾಂಗಣ. ಸುಮಾರು 1 ಲಕ್ಷ 35 ಸಾವಿರ ಜನರು ಪಂದ್ಯವನ್ನು ವೀಕ್ಷಿಸಬಹುದು. ಒಂದು ಟಿಕೆಟ್‌ನ ಬೆಲೆ 5,000 ರೂಪಾಯಿ ಎಂದು ಪರಿಗಣಿಸಿದರೆ ಮತ್ತು ಫೈನಲ್ನಲ್ಲಿ ಸುಮಾರು ಒಂದು ಲಕ್ಷ ಅಭಿಮಾನಿಗಳು ಹಾಜರಿದ್ದರು ಅಂತಾ ಭಾವಿಸಿದ್ದರೂ ಟಿಕೆಟ್‌ಗಳ ಮಾರಾಟದಿಂದ 50 ಕೋಟಿ ರೂಪಾಯಿ ವ್ಯವಹಾರ ನಡೆದಿದೆ. ಬೆಲೆ ಇದಕ್ಕಿಂತ ಹೆಚ್ಚಾಗಿರಬಹುದು. ಏಕೆಂದರೆ ಕ್ರೀಡಾಂಗಣದಲ್ಲಿನ ಮುಖ್ಯ ಸ್ಟ್ಯಾಂಡ್‌ನ ಬೆಲೆ ತುಂಬಾ ಹೆಚ್ಚಾಗಿದೆ.
ಇದನ್ನೂ ಓದಿ: BREAKING: ಚಿನ್ನಸ್ವಾಮಿ ಸ್ಟೇಡಿಯಂ ಕಾಲ್ತುಳಿತಕ್ಕೆ ಮೂವರು ಬಲಿ; 17ಕ್ಕೂ ಹೆಚ್ಚು ಮಂದಿ ಅಸ್ವಸ್ಥ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ