IPL ಫೈನಲ್​ ಮ್ಯಾಚ್ ಕೋಲ್ಕತ್ತಾದಲ್ಲಿ ನಡೆಯೋದು ಡೌಟ್​.. ಕಾರಣ ಏನು ಗೊತ್ತಾ?

author-image
Bheemappa
Updated On
IPL ಮೆಗಾ ಹರಾಜಿಗೆ ಅಡ್ಡಿ.. ಬಿಸಿಸಿಐನಿಂದ ಭಾರೀ ಬದಲಾವಣೆ..!
Advertisment
  • ಟೂರ್ನಿ ಆರಂಭಿಸಲು ಬಿಸಿಸಿಐ ಮತ್ತು ಐಪಿಎಲ್​ ಸಿಬ್ಬಂದಿ ಚರ್ಚೆ
  • ಐಪಿಎಲ್ ಟೂರ್ನಿಯ ಫೈನಲ್​ ಮ್ಯಾಚ್ ನಡೆಯುವುದು ಎಲ್ಲಿ..?
  • ಬಿಸಿಸಿಐ ಹೊಸ ವೇಳಾಪಟ್ಟಿ ಯಾವಾಗ ಬಿಡುಗಡೆ ಮಾಡುತ್ತದೆ?

ಭಾರತ ಹಾಗೂ ಪಾಕಿಸ್ತಾನದ ಘರ್ಷಣೆ ತಾರಕಕ್ಕೇರಿದ ಮೇಲೆ 2025ರ ಗ್ರ್ಯಾಂಡ್ ಐಪಿಎಲ್ ಟೂರ್ನಿಯನ್ನು ಒಂದು ವಾರ ಮುಂದೂಡಿಕೆ ಮಾಡಲಾಗಿತ್ತು. ಇದರ ಬೆನ್ನಲ್ಲೇ ಉಳಿದ ಐಪಿಎಲ್ ಪಂದ್ಯಗಳನ್ನು ಮೇ 16 ರಿಂದ ಪುನರಾರಂಭ ಮಾಡಲಾಗುತ್ತಿದೆ. ಆದರೆ ಫೈನಲ್ ಪಂದ್ಯವನ್ನು ಕೋಲ್ಕತ್ತಾ ಬಿಟ್ಟು ಬೇರೆ ನಗರದಲ್ಲಿ ನಡೆಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಮೇ 10 ರಂದು ಭಾರತ ಮತ್ತು ಪಾಕಿಸ್ತಾನ ಎರಡು ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಗೆ ಸೂಚಿಸಿವೆ. ಇದು ಮೇ 8 ರಿಂದ ಒಂದು ವಾರದವರೆಗೆ ಸ್ಥಗಿತಗೊಳಿಸಲಾಗಿದ್ದ ಐಪಿಎಲ್ ಟೂರ್ನಿಯನ್ನು ಮತ್ತೆ ಆರಂಭಿಸಲು ದಾರಿ ಮಾಡಿಕೊಟ್ಟಿದೆ. ಟೂರ್ನಿಯನ್ನು ಆರಂಭಿಸಲು ಬಿಸಿಸಿಐ ಹಾಗೂ ಐಪಿಎಲ್ ಆಡಳಿತ ಮಂಡಳಿ ಸದಸ್ಯರು ಚರ್ಚೆ ಮಾಡಿದ್ದಾರೆ. ಹೊಸ ವೇಳಾಪಟ್ಟಿ ರಚಿಸಲಾಗುತ್ತಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.

ಇದನ್ನೂ ಓದಿ:ಆಪರೇಷನ್ ಸಿಂಧೂರ; ಭಾರತದ ದಾಳಿಗೆ ಜೀವ ಬಿಟ್ಟ 100ಕ್ಕೂ ಹೆಚ್ಚು ಉಗ್ರರು, 35- 40 ಪಾಕ್ ಯೋಧರು

publive-image

ದೆಹಲಿ ಹಾಗೂ ಧರ್ಮಶಾಲಾ ಕ್ರಿಕೆಟ್​ ಸ್ಟೇಡಿಯಂನಲ್ಲಿ ಪಂದ್ಯಗಳನ್ನು ಆಯೋಜಿಸುವ ಸಾಧ್ಯತೆ ತೀರ ಕಡಿಮೆ ಇದೆ. ದಕ್ಷಿಣ ಭಾರತದ ನಗರಗಳಲ್ಲಿ ಪಂದ್ಯಗಳನ್ನು ಆಡಿಸುವುದಕ್ಕೆ ಚರ್ಚೆ ಮಾಡಲಾಗಿದೆ. ಸದ್ಯಕ್ಕೆ ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಇನ್ನೊಂದು ಸ್ಥಳವನ್ನು ಗುರುತಿಸಲಾಗಿದ್ದು ಹೊಸ ವೇಳಾಪಟ್ಟಿಯಲ್ಲಿ ನೀಡುವಾಗ ಎಲ್ಲ ಮಾಹಿತಿ ತಿಳಿಸಲಾಗುತ್ತದೆ.

ಇದನ್ನೂ ಓದಿ: IPL ಅಭಿಮಾನಿಗಳಿಗೆ ಗುಡ್​ನ್ಯೂಸ್​; ಈ ದಿನಾಂಕದಿಂದ ಪಂದ್ಯಗಳು ನಡೆಯೋದು ಫಿಕ್ಸ್!

ಕ್ವಾಲಿಫೈಯರ್ 1 ಹಾಗೂ ಎಲಿಮಿನೇಟರ್ ಪಂದ್ಯಗಳು ಮೊದಲೇ ತಿಳಿಸಿದಂತೆ ಹೈದರಾಬಾದ್​ನಲ್ಲಿ ನಡೆಸಲಾಗುತ್ತದೆ. ಇದರಲ್ಲಿ ಯಾವುದೇ ಬದಲಾವಣೆಗಳು ಇರುವುದಿಲ್ಲ. ಆದರೆ ನಗರದಲ್ಲಿ ಮಳೆಯ ಮುನ್ಸೂಚನೆಯ ಕಾರಣ ಕೋಲ್ಕತ್ತಾದ ಈಡನ್​ ಗಾರ್ಡನ್ಸ್​ ಸ್ಟೇಡಿಯಂನಲ್ಲಿ ನಡೆಯುವ ಫೈನಲ್ ಪಂದ್ಯವನ್ನು ಸ್ಥಳಾಂತರ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ. ಬಿಸಿಸಿಐ ಅಧಿಕೃತವಾಗಿ ಪುನರಾರಂಭವಾಗುವ ಐಪಿಎಲ್ ಟೂರ್ನಿಯ ವೇಳಾಪಟ್ಟಿ ಬಿಡುಗಡೆ ಮಾಡಿದರೆ ಈ ಎಲ್ಲದರ ಬಗ್ಗೆ ನಿಖರ ಮಾಹಿತಿ ಲಭ್ಯವಾಗುತ್ತದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment