/newsfirstlive-kannada/media/post_attachments/wp-content/uploads/2025/05/SUYASH_SHARMA_RCB.jpg)
ಐಪಿಎಲ್​-2025 ಹಬ್ಬಕ್ಕೆ ಇಂದು ತೆರೆ ಬೀಳಲಿದೆ. ಖುಷಿಯ ವಿಚಾರ ಅಂದರೆ ಈ ಬಾರಿ ನಮ್ಮ ಆರ್​ಸಿಬಿ ಫೈನಲ್​ಗೆ ಎಂಟ್ರಿ ನೀಡಿದ್ದು, ಪಂಜಾಬ್ ವಿರುದ್ಧ ಸೆಣಸಾಟ ನಡೆಸಲಿದೆ. ಐಪಿಎಲ್ ಟ್ರೋಫಿಗಾಗಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ಹಾಗೂ ಪಂಜಾಬ್ ಕಿಂಗ್ಸ್​ ಸೆಣಸಾಟ ನಡೆಸಲಿವೆ.
ಗೆದ್ದವರು ಟ್ರೋಫಿ ಎತ್ತಿ ಹಿಡಿಯಲಿದ್ದಾರೆ. ಇನ್ನು ಇವತ್ತಿನ ಪಂದ್ಯದಲ್ಲಿ ಆರ್​ಸಿಬಿ ತನ್ನ ಪ್ಲೇಯಿಂಗ್-11ನಲ್ಲಿ ಬದಲಾವಣೆ ಮಾಡಲಿದೆಯಾ ಎಂಬ ಕುತೂಹಲ ಇದೆ. ಮಾಹಿತಿಗಳ ಪ್ರಕಾರ, ಫಿಲ್ ಸಾಲ್ಟ್ ಇವತ್ತಿನ ಪಂದ್ಯಕ್ಕೆ ಅಲಭ್ಯರಾಗಲಿದ್ದಾರೆ ಎನ್ನಲಾಗಿತ್ತು. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ ಸಾಲ್ಟ್ ಕೂಡ ಆಡಲಿದ್ದಾರೆ. ಮತ್ತೊಂದು ಕಡೆ ಗಾಯದ ಸಮಸ್ಯೆಯಿಂದ ತಂಡಕ್ಕೆ ಅಲಭ್ಯರಾಗಿದ್ದ ಟಿಮ್ ಡೆವಿಡ್ ಕೂಡ ಇಂದು ಫಿನಿಶರ್ ರೋಲ್​ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಹೀಗಾಗಿ ಇವತ್ತಿನ ಆರ್​ಸಿಬಿ ಮತ್ತಷ್ಟು ಸ್ಟ್ರಾಂಗ್ ಆಗಲಿದೆ.
ಇದನ್ನೂ ಓದಿ: ಈ ಸಲ ಆರ್​ಸಿಬಿಯದ್ದೇ ಟ್ರೋಫಿ ಪಕ್ಕಾ.. ಆ ಮಹತ್ವವನ್ನ ಐಪಿಎಲ್​ ಇತಿಹಾಸವೇ ಹೇಳುತ್ತೆ!
ಸಂಭಾವ್ಯ ಬಲಿಷ್ಠ ಆರ್​ಸಿಬಿ ತಂಡ:
ವಿರಾಟ್ ಕೊಹ್ಲಿ, ಫಿಲಿಪ್ ಸಾಲ್ಟ್, ರಜತ್ ಪಾಟೀದಾರ್ (ಕ್ಯಾಪ್ಟನ್), ಜಿತೇಶ್ ಶರ್ಮಾ (ವಿಕೆಟ್ ಕೀಪರ್​), ಟಿಮ್ ಡೆವಿಡ್, ರೊಮಾರಿಯೋ ಶೆಫೆರ್ಡ್, ಕೃನಾಲ್ ಪಾಂಡ್ಯ, ಭುವನೇಶ್ವರ್ ಕುಮಾರ್, ಯಶ್ ದಯಾಳ್, ಜೋಶ್ ಹೇಜಲ್​ವುಡ್​, ಸುಯೇಶ್ ಶರ್ಮಾ
ಇಂಪ್ಯಾಕ್ಟ್ ಪ್ಲೇಯರ್: ಮಯಾಂಕ್ ಅಗರ್ವಾಲ್​
ಪಂಜಾಬ್ ಕಿಂಗ್ಸ್​: ಪ್ರಿಯಾಂಶ್ ಆರ್ಯ, ಜೋಶ್ ಇಂಗ್ಲಿಷ್ (ವಿಕೆಟ್ ಕೀಪರ್), ಶ್ರೇಯಸ್ ಅಯ್ಯರ್, ನೇಹಲ್ ವದೇರಾ, ಮಾರ್ಕಸ್ ಸ್ಟೋನಿಸ್, ಶಶಾಂಕ್ ಸಿಂಗ್, ಒಮರ್​​ಜಾಯ್, ಕೈಲ್ ಜೆಮಿಸನ್, ವಿಜಯಕುಮಾರ್ ವೈಶಾಕ್, ಅರ್ಷದೀಪ್ ಸಿಂಗ್, ಚಹಾಲ್
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us