ಫ್ರಾಂಚೈಸಿಗಳ ಕಣ್ಣು ತೆರೆಸಿದ ಆ ಎರಡು ತಂಡಗಳು​; IPLಗೆ ಕೊನೆಗೂ ಬಂತು ಒಂದು ಹೊಸ ಕಳೆ..!

author-image
Ganesh
Updated On
ಫ್ರಾಂಚೈಸಿಗಳ ಕಣ್ಣು ತೆರೆಸಿದ ಆ ಎರಡು ತಂಡಗಳು​; IPLಗೆ ಕೊನೆಗೂ ಬಂತು ಒಂದು ಹೊಸ ಕಳೆ..!
Advertisment
  • ವಿದೇಶಿ ಕೋಚ್​ಗಳ ಕಾರುಬಾರಿಗೆ ಬೀಳುತ್ತಾ ಬ್ರೇಕ್?
  • ಭಾರತೀಯರ ಹಿಂದೆ ಬಿದ್ದಿದ್ಯಾಕೆ ಫ್ರಾಂಚೈಸಿಗಳು..?
  • ಫಾರಿನ್ ಕೋಚ್​​ಗ​​​​ಳಿಗೆ ಗೇಟ್​​ಪಾಸ್​ ನೀಡಲು ರೆಡಿ

ಇಂಡಿಯನ್ ಪ್ರಿಮೀಮಿರ್​ ಲೀಗ್​ನಲ್ಲಿ ಭಾರತೀಯ ಕೋಚ್​ಗಳು ಅಂದ್ರೆ ಲೆಕಕ್ಕೇ ಇರಲಿಲ್ಲ. ಆದ್ರೀಗ ಕಾಲ ಬದಲಾಗಿದೆ. ಫಾರಿನ್ ಕೋಚ್​​​​ಗಳಿಗೆ ಗೇಟ್​​ಪಾಸ್​ ನೀಡಲು ರೆಡಿಯಾಗಿದ್ದಾರೆ.

ಐಪಿಎಲ್​.. ಇದು ಹೆಸರಿಗೆ ಇಂಡಿಯನ್ ಪ್ರಿಮಿಯರ್ ಲೀಗೇ ಆಗಿದ್ರೂ ನಡೆಯುತ್ತಿದ್ದು ಮಾತ್ರ ವಿದೇಶಿ ಕೋಚ್​ಗಳ ಕಾರುಬಾರಾಗಿದೆ. ಇದಕ್ಕೆ ಬೆಸ್ಟ್​ ಎಕ್ಸಾಂಪಲ್​. 10 ಐಪಿಎಲ್​​ ತಂಡಗಳ ಪೈಕಿ ಕೇವಲ ಎರಡೇ ಎರಡು ತಂಡಗಳ ಕೋಚ್​ಗಳು ಮಾತ್ರವೇ ಭಾರತದ ಕೋಚ್​ಗಳಾಗಿದ್ದಾಗಿದೆ. ಆದ್ರೀಗ ಇದು ಸಂಪೂರ್ಣ ಬದಲಾಗ್ತಿದೆ. ಹಿಂದೆ ಇಂಡಿಯನ್ ಕೋಚ್​ಗಳು ಬೇಡ ಅಂತಿದ್ದ ಫ್ರಾಂಚೈಸಿಗಳೇ, ಈಗ ಇಂಡಿಯನ್ ಕೋಚ್​ಗಳ ಹಿಂದೆ ಬಿದ್ದಿವೆ.

ಇದನ್ನೂ ಓದಿ:ಕೇರಳ ಭೂಕುಸಿತಕ್ಕೆ 3 ಕಾರಣಗಳು; ಬೆಟ್ಟ, ಗುಡ್ಡ ಕುಸಿಯುವ ಹಿಂದಿನ ಸತ್ಯ ಬಿಚ್ಚಿಟ್ಟ ವಿಜ್ಞಾನಿ..!

publive-image

ಇಂಡಿಯನ್ ಕೋಚ್​ಗಳಿಗೆ ಡಿಮ್ಯಾಂಡ್​..!
ಸೀಸನ್-18ರ ಐಪಿಎಲ್​​ ಸಿದ್ಧತೆ ಜೋರಾಗಿದ್ದು, ಈಗಾಗಲೇ ಫ್ರಾಂಚೈಸಿಗಳು ಭರದ ಸಿದ್ದತೆಯಲ್ಲಿ ನಿರತವಾಗಿವೆ. ಆಟಗಾರರ ರಿಟೈನ್, ರಿಲೀಸ್ ಲೆಕ್ಕಚಾರದ ಜೊತೆ ಜೊತೆಗೆ ಕೋಚ್​ಗಳ ಬದಲಾವಣೆ ಮಾಡೋ ಪ್ಲಾನ್​ನಲ್ಲಿರುವ ಫ್ರಾಂಚೈಸಿಗಳು, ವಿದೇಶಿ ಕೋಚ್​​ಗಳ ಬದಲಾಗಿ ಇಂಡಿಯನ್​ ಕೋಚ್​ಗಳ ಮೇಲೆ ಭಾರೀ ಒಲವು ತೋರುತ್ತಿವೆ. ಈ ನಿಟ್ಟಿನಲ್ಲೇ ರಿಕಿ ಪಾಂಟಿಂಗ್​ಗೆ ಗುಡ್​ ಬೈ ಹೇಳಿರುವ ಡೆಲ್ಲಿ ಕ್ಯಾಪಿಟಲ್ಸ್, ಸೌರವ್ ಗಂಗೂಲಿಗೆ ಪಟ್ಟ ಕಟ್ಟಿದೆ. ಇದು ಜಸ್ಟ್​ ಡೆಲ್ಲಿ ಫ್ರಾಂಚೈಸಿವೊಂದರ ನಿಲುವಲ್ಲ. ಬಹುತೇಕ ತಂಡಗಳ ಆಸಕ್ತಿಯೂ ಇದೇ ಆಗಿದೆ.

  • ರಾಹುಲ್ ದ್ರಾವಿಡ್-ರಾಜಸ್ಥಾನ್ ರಾಯಲ್ಸ್​
  • ಯುವರಾಜ್ ಸಿಂಗ್​​​-ಗುಜರಾತ್ ಟೈಟನ್ಸ್​
  • ಆಶಿಶ್ ನೆಹ್ರಾ-ಕೊಲ್ಕತ್ತಾ ನೈಟ್ ರೈಡರ್ಸ್
  • ವಿವಿಎಸ್ ಲಕ್ಷ್ಮಣ್​-ಲಕ್ನೋ ಸೂಪರ್ ಜೈಂಟ್ಸ್​

ಭಾರತೀಯರ ಹಿಂದೆ ಬಿದ್ದಿದ್ಯಾಕೆ ಫ್ರಾಂಚೈಸಿಗಳು?

ಫ್ರಾಂಚೈಸಿಗಳು ಭಾರತೀಯ ಕೋಚ್​​​ಗಳತ್ತ ಮುಖಮಾಡಲು ಪ್ರಮುಖ ಕಾರಣ, ಗುಜರಾತ್ ಟೈಟನ್ಸ್ ಹಾಗೂ ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳ ಸೂಪರ್ ಸಕ್ಸಸ್. 2022ರಲ್ಲಿ ಗುಜರಾತ್​ ಚಾಂಪಿಯನ್ ಪಟ್ಟಕ್ಕೇರಲು ಹೆಡ್ ಕೋಚ್ ಆಶಿಶ್ ನೆಹ್ರಾ ಆ್ಯಂಡ್ ಸೋಲೊಂಕಿ ಗೇಮ್​​​ಪ್ಲಾನ್​​, ಸ್ಟಾಟರ್ಜಿ ಎಷ್ಟು ಪ್ರಮುಖವಾಗಿತ್ತು. 2024ರಲ್ಲಿ ಕೊಲ್ಕತ್ತಾ ಟ್ರೋಫಿಗೆ ಮುತ್ತಿಡುವ ಹಿಂದಿನ ರೂವಾರಿಗಳೇ ಇಂಡಿಯನ್ ಕೋಚ್​ಗಳಾಗಿದ್ದ ಗೌತಮ್ ಗಂಭೀರ್, ಪಂಡಿತ್ ಚಂದ್ರಕಾಂತ್, ಅಭಿಷೇಕ್ ನಾಯರ್​​ ಶ್ರಮವೂ ಅಪಾರವಾಗಿತ್ತು. ಇದೇ ಕಾರಣಕ್ಕೀಗ ಐಪಿಎಲ್ ಫ್ರಾಂಚೈಸಿಗಳು ಭಾರತೀಯರ ಹಿಂದೆ ಬಿದ್ದಿವೆ. ಇದಿಷ್ಟೇ ಅಲ್ಲ.! ಮತ್ತಷ್ಟು ಕಾರಣಗಳೂ ಇವೆ..!

ಭಾರತೀಯರ ಹಿಂದೆ ಬಿದ್ದಿದ್ಯಾಕೆ..?

  • ವಿದೇಶಿ ಕೋಚ್​ಗಳು ಎಲ್ಲಾ ಟೈಮ್​ನಲ್ಲಿ ಲಭ್ಯ ಇರಲ್ಲ
  • ಭಾರತೀಯ ಕೋಚ್​ಗಳು ದೇಶದಲ್ಲೇ ಇರ್ತಾರೆ
  • ಹೆಚ್ಚುವರಿ ಟೈಮ್ ತಂಡಕ್ಕಾಗಿ ಮೀಸಲು ಇಡ್ತಾರೆ
  • ವಿದೇಶಿಗರು ಹರಾಜು ಮತ್ತು ಐಪಿಎಲ್ ವೇಳೆ ಮಾತ್ರ ಲಭ್ಯ
  • ಭಾರತೀಯ ಆಟಗಾರರ ಜೊತೆಗಿನ ಸಂವಹನಕ್ಕೆ ಸುಲಭ
  • ಇಂಡಿಯನ್ ಪಿಚ್​​ ಕಂಡೀಷನ್ಸ್​ ಬಗ್ಗೆ ಚೆನ್ನಾಗಿ ಗೊತ್ತಿರುತ್ತದೆ

ಇದನ್ನೂ ಓದಿ:Landslide: 5 ವರ್ಷದ ಹಿಂದೆ ಕೇರಳ ಪುತ್ತುಮಲೆ ದುರಂತ.. ಅದೇ ಜಾಗದಿಂದ 2 ಕಿಮೀ ದೂರದಲ್ಲಿ ಪರ್ವತ ಪ್ರವಾಹ..!

publive-image

ಇದು ಸಹಜವಾಗೇ ತಂಡದ ಸಕ್ಸಸ್​ಗೂ ಕಾರಣವಾಗುತ್ತೆ. ಇದೇ ಸ್ಟ್ರಾಟರ್ಜಿಯೇ ಗುಜರಾತ್ ಟೈಟನ್ಸ್​ ಹಾಗೂ ಕೊಲ್ಕತ್ತಾ ನೈಟ್​ ರೈಡರ್ಸ್ ತಂಡದ ಯಶಸ್ಸಿಗೂ ಕಾರಣವಾಗಿತ್ತು. ಹೀಗಾಗಿಯೇ ಆ ತಂಡಗಳ ಸ್ಟ್ರಾಟರ್ಜಿಯನ್ನೇ ಈಗ ಫಾಲೋ ಮಾಡಲು ಇತರೆ ತಂಡಗಳು ಹೊರಟಿವೆ. ಒಟ್ಟಿನಲ್ಲಿ ಮೆಗಾ ಹರಾಜಿಗೂ ಮುನ್ನ ಕೆಲ ವಿದೇಶಿ ಕೋಚ್​​​​​​​ಗಳಿಗೆ ಗೇಟ್​ಪಾಸ್ ನೀಡೋದು ಫಿಕ್ಸ್ ಆಗಿದ್ದು, ಅವರ ಜಾಗದಲ್ಲಿ ಭಾರತೀಯ ಕೋಚ್ ಬರೋದು ಬಹುತೇಕ ಕನ್ಫರ್ಮ್.

ವಿಶೇಷ ವರದಿ: ಸಂತೋಷ್

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment