newsfirstkannada.com

×

ಕಪ್ ಗೆದ್ದಿಲ್ಲ ಅನ್ನೊದ್ಕಿಂತ ಆರ್​ಸಿಬಿಗೆ ಕಾಡ್ತಿದೆ ಮತ್ತೊಂದು ನೋವು.. IPL ಫ್ರಾಂಚೈಸಿಯ ದೊಡ್ಡ, ದೊಡ್ಡ ಬ್ಲಂಡರ್ಸ್​..!

Share :

Published April 24, 2024 at 9:23am

    3 ವರ್ಷದ ಹಿಂದೆ ಮಾಡಿದ ತಪ್ಪು ಇಂದಿಗೂ ಕಾಡ್ತಿದೆ

    ಲೆಕ್ಕಾಚಾರಗಳನ್ನೆ ಬುಡಮೇಲು ಮಾಡಿದ ಆ ತಪ್ಪುಗಳು

    ವರ್ಷಾಂತ್ಯದಲ್ಲಿ ನಡೆಯಲಿದೆ ಮತ್ತೆ ಮೆಗಾ ಹರಾಜು

2021ರ ಐಪಿಎಲ್​ ಮೆಗಾ ಆಕ್ಷನ್​ ಮುಗಿದು 3 ವರ್ಷ ಆಯ್ತು. 2 ಸೀಸನ್ ಯಶಸ್ವಿಯಾಗಿ​ ಮುಗಿದು 3ನೇ ಸೀಸನ್​ ಐಪಿಎಲ್​ ಟೂರ್ನಿಯೂ ನಡೀತಾಯಿದೆ. ಇದೇ ವರ್ಷಾಂತ್ಯದಲ್ಲಿ ಮತ್ತೆ ಮೆಗಾ ಹರಾಜು ಪ್ರಕ್ರಿಯೆಯೂ ನಡೆಯಲಿದೆ. 3 ವರ್ಷದ ಹಿಂದೆ ಮಾಡಿದ ಯಡವಟ್ಟು ಇಂದಿಗೂ ಕೆಲ ಫ್ರಾಂಚೈಸಿಗಳನ್ನ ಕಾಡ್ತಿದೆ. ಲೆಕ್ಕಾಚಾರಗಳನ್ನೆ ಬುಡಮೇಲು ಮಾಡಿದ ಆ ಬ್ಲಂಡರ್​​ಗಳೇನು?

ಐಪಿಎಲ್​ ಟೂರ್ನಿಯ ನಡುವೆಯೆ ಮುಂಬರುವ ಮೆಗಾ ಆಕ್ಷನ್​ನ ಲೆಕ್ಕಾಚಾರ ಫ್ರಾಂಚೈಸಿಗಳಲ್ಲಿ ಸದ್ದಿಲ್ಲದೇ ಶುರುವಾಗಿದೆ. ಫ್ರಾಂಚೈಸಿಗಳು ಅಳೆದು ತೂಗಿ ಲೆಕ್ಕಾಚಾರ ಹಾಕ್ತಿವೆ. 2021 ಮೆಗಾ ಹರಾಜಿನಲ್ಲಿ ಮಾಡಿದ ಯಡವಟ್ಟುಗಳು ಇಂದಿಗೂ ತಂಡಗಳನ್ನ ಕಾಡ್ತಿವೆ.

RCBಗೆ ಕಾಡ್ತಿದೆ ಚಹಲ್​ ಕಳೆದುಕೊಂಡ ನೋವು..!

ಆರ್​​ಸಿಬಿ ತಂಡಕ್ಕೆ ಐಪಿಎಲ್​ನಲ್ಲಿ ಇದುವರೆಗೂ ಕಪ್​ ಗೆದ್ದಿಲ್ಲ ಅನ್ನೋ ಕೊರಗಿಗಿಂತ ಚಹಲ್​ನ​ ಕೈ ಬಿಟ್ಟ ನೋವೇ ಹೆಚ್ಚು ಕಾಡ್ತಿದೆ. 2014ರಿಂದ 2021ರವರೆಗೆ ಆರ್​​​ಸಿಬಿಯಲ್ಲಿದ್ದ ಚಹಲ್​ ತಂಡದ ಮೋಸ್ಟ್​ ಸಕ್ಸಸ್​​ಫುಲ್​ ಬೌಲರ್​ ಅನಿಸಿಕೊಂಡಿದದ್ರು. ಚಿನ್ನಸ್ವಾಮಿಯಂತ ಚಿಕ್ಕ ಗ್ರೌಂಡ್​ನಲ್ಲೂ ಬ್ಯಾಟ್ಸ್​ಮನ್​ಗಳಿಗೆ ಚಳ್ಳೆಹಣ್ಣು ತಿನ್ನಿಸ್ತಿದ್ರು. ಇಂತಹ ಚಹಲ್​ರನ್ನ ರಿಲೀಸ್​ ಮಾಡಿದ ಆರ್​​ಸಿಬಿಗೆ ಇದುವರೆಗೂ ಮತ್ತೊಬ್ಬ ಒಳ್ಳೆ ಸ್ಪಿನ್ನರ್​ ಖರೀದಿ ಸಾಧ್ಯವಾಗಲೇ ಇಲ್ಲ.

ಮುಂಬೈ ಇಂಡಿಯನ್ಸ್​ಗಿದೆ ಟ್ರೆಂಟ್​ ಬೋಲ್ಟ್​ ಬಿಟ್ಟ ಕೊರಗು

ಮುಂಬೈ ಇಂಡಿಯನ್ಸ್ ತಂಡದ ಇತಿಹಾಸದ ಯಶಸ್ವಿ ಆಟಗಾರ ಪಟ್ಟಿಯಲ್ಲಿ ಟ್ರೆಂಟ್​ ಬೋಲ್ಟ್​​ ಕೂಡ ಒಬ್ರು. ಬೂಮ್ರಾ-ಬೋಲ್ಟ್​​ ಮುಂಬೈನ ಬೌಲಿಂಗ್​ ಯುನಿಟ್​​ನ ಜೋಡೆತ್ತುಗಳಾಗಿದ್ರು. ಇಂತಹ ಬೋಲ್ಟ್​​​ರನ್ನ ಮುಂಬೈ ಫ್ರಾಂಚೈಸಿ ರಿಟೈನ್​ ಮಾಡಿಕೊಳ್ಳೋದ್ರ ಬದಲು ರಿಲೀಸ್​ ಮಾಡ್ತು. ಆಕ್ಷನ್​ನಲ್ಲೂ ಬಿಡ್​ ಮಾಡಲಿಲ್ಲ. ಬಳಿಕ ರಾಜಸ್ಥಾನ್​ ಕ್ಯಾಂಪ್​ ಸೇರಿದ ಬೋಲ್ಟ್​ ಬೆಂಕಿ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಇಲ್ಲಿ ಬೂಮ್ರಾ ಒಬ್ಬಂಟಿಯಾಗಿದ್ದಾರೆ.

ಇದನ್ನೂ ಓದಿ:ದೇಶಕ್ಕಾಗಿ ನನ್ನ ತಾಯಿಯ ಮಂಗಲಸೂತ್ರ ಬಲಿದಾನ -ಮೋದಿ ಹೇಳಿಕೆ ಖಂಡಿಸಿ ಪ್ರಿಯಾಂಕ ಗಾಂಧಿ ಎಮೋಷನಲ್

ಶುಭ್​​ಮನ್​ ಕೈಬಿಟ್ಟು ತಪ್ಪು ಮಾಡಿದ ಕೊಲ್ಕತ್ತಾ ನೈಟ್​ ರೈಡರ್ಸ್​

2018ರಿಂದ 2021ರವರೆಗೆ ಶುಭ್​ಮನ್​ ಗಿಲ್​ ಕೆಕೆಆರ್​ ತಂಡದಲ್ಲಿದ್ರು. 2020 ಹಾಗೂ 2021ರಲ್ಲಿ ತಂಡದ ಪರ 400+ ರನ್​ ಕೂಡ ಸಿಡಿಸಿದ್ರು. ಫ್ಯೂಚರ್​ ಸ್ಟಾರ್ ಆಗಿ ರೂಪುಗೊಳ್ತಿದ್ದ ಗಿಲ್​ನ 2021ರ ಹರಾಜಿಗೂ ಮುನ್ನ ಕೆಕೆಆರ್​​​ ರಿಲೀಸ್​ ಮಾಡ್ತು. ಅವಕಾಶದಲ್ಲಿ ಗುಜರಾತ್​ ಬುಟ್ಟಿಗೆ ಹಾಕಿಕೊಳ್ತು. ತನ್ನ ಬ್ಯಾಟಿಂಗ್​ನಿಂದ ಸೆನ್ಸೇಷನ್​ ಸೃಷ್ಟಿಸಿರುವ ಗಿಲ್​, ಟೀಮ್​ ಇಂಡಿಯಾ ಯುವರಾಜ ಎನಿಸಿಕೊಂಡಿದ್ದಾರೆ.

ರಶೀದ್​ ಖಾನ್​​ಗೆ ಕೊಕ್​, ಯಡವಟ್ಟು ಮಾಡಿಕೊಂಡ SRH

ಅಫ್ಘನ್​ ಸ್ಪಿನ್​ ಮೆಜಿಶೀಯನ್​​ ರಶೀದ್​ ಖಾನ್​ ಕೂಡ 2021ರ ಆಕ್ಷನ್​ಗೂ ಮುನ್ನ ಸನ್​ರೈಸರ್ಸ್​ ಹೈದ್ರಾಬಾದ್​ ತಂಡದಲ್ಲಿದ್ರು. ಫ್ರಾಂಚೈಸಿಯ ಬಿಗ್ಗೆಸ್ಟ್​ ವೆಪನ್​ ಆಗಿಯೂ ಗುರುತಿಸಿಕೊಂಡಿದ್ರು. ರಶೀದ್​ ಖಾನ್​ರನ್ನ ಸರ್​​ಪ್ರೈಸ್​ ರೀತಿಯಲ್ಲಿ ಫ್ರಾಂಚೈಸಿ ರಿಲೀಸ್​ ಮಾಡಿ ಬಿಡ್ತು. ಬಳಿಕ ರಶೀದ್​ ಖಾನ್​ ಗುಜರಾತ್​ ಟೈಟನ್ಸ್​ ಸೇರಿದ್ರು. ಹೈದ್ರಾಬಾದ್​ಗೆ ರಶೀದ್​​ರಂತಾ ಸಾಲಿಡ್​ ಸ್ಪಿನ್ನರ್​ ಇನ್ನೂ ಸಿಕ್ಕಿಲ್ಲ.

ಇದನ್ನೂ ಓದಿ:ಟಿ20 ವಿಶ್ವಕಪ್ ಗೆಲ್ಲಲು ಟಾಪ್ ಆರ್ಡರ್​​ನಲ್ಲಿ ಈ ಮೂವರು ಇರಲೇಬೇಕು ಎಂದ ಮಾಜಿ ಕ್ರಿಕೆಟಿಗ

ರಬಾಡಗೆ​ ಗೇಟ್​ಪಾಸ್​​, ಡೆಲ್ಲಿ ಲೆಕ್ಕಾಚಾರ ಉಲ್ಟಾ, ಪಲ್ಟಾ
ಸೌತ್​ ಆಫ್ರಿಕಾದ ಮಿಸೈಲ್​ಗಳಾದ​​ ಕಗಿಸೋ ರಬಾಡ, ಎನ್ರಿಚ್​ ನೋಕಿಯಾ ಡೆಲ್ಲಿ ಕ್ಯಾಪಿಟಲ್ಸ್​ ತಂಡದಲ್ಲಿದ್ರು. 2021ರ ಮೆಗಾ ಆಕ್ಷನ್​ಗೂ ಮುನ್ನ ಡೆಲ್ಲಿ ಫ್ರಾಂಚೈಸಿ ಭಾರೀ ಲೆಕ್ಕಾಚಾರ ನೋಕಿಯಾನ ಉಳಿಸಿಕೊಂಡು ರಬಾಡರನ್ನ ರಿಲೀಸ್ ಮಾಡಿತು. ಹರಾಜಿನಲ್ಲಿ ರಬಾಡ ಪಂಜಾಬ್​ ಕಿಂಗ್ಸ್​ ಪಾಲಾದ್ರು. ಪಂಜಾಬ್​ ಪರ ರಬಾಡ ಉತ್ತಮ ಪ್ರದರ್ಶನ ನೀಡ್ತಿದ್ರೆ, ನೋಕಿಯಾ ರಿಧಮ್​ ಕಂಡುಕೊಳ್ಳಲಾಗದೇ ಪರದಾಡ್ತಿದ್ದಾರೆ.

ಇದನ್ನೂ ಓದಿ:8 ವರ್ಷವಾದರೂ ಪೂರ್ಣಗೊಳ್ಳದ ಸೇತುವೆ ಹಠಾತ್ ಕುಸಿತ; 65 ಪ್ರಯಾಣಿಕರು ಜಸ್ಟ್​ ಮಿಸ್​..

ಒಟ್ಟಿನಲ್ಲಿ, 2021ರ ಮೆಗಾ ಹರಾಜಿನಲ್ಲಿ ಯಡವಟ್ಟು ಮಾಡಿದ ಫ್ರಾಂಚೈಸಿಗಳು, ಈ ಬಾರಿಯ ಮೆಗಾ ಆಕ್ಷನ್​​ಗೂ ಮುನ್ನವಾದ್ರೂ ಎಚ್ಚೆತ್ತುಕೊಳ್ತವಾ? ಅಥವಾ ಮತ್ತೆ ರಿಟೈನ್​ ವಿಚಾರದಲ್ಲಿ ಯಡವಟ್ಟು ಮಾಡಿಕೊಂಡು REGRETಗೆ ಒಳಗಾಗ್ತವಾ? ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಕಪ್ ಗೆದ್ದಿಲ್ಲ ಅನ್ನೊದ್ಕಿಂತ ಆರ್​ಸಿಬಿಗೆ ಕಾಡ್ತಿದೆ ಮತ್ತೊಂದು ನೋವು.. IPL ಫ್ರಾಂಚೈಸಿಯ ದೊಡ್ಡ, ದೊಡ್ಡ ಬ್ಲಂಡರ್ಸ್​..!

https://newsfirstlive.com/wp-content/uploads/2024/04/RCB-31.jpg

Load More