/newsfirstlive-kannada/media/post_attachments/wp-content/uploads/2025/03/RCB-2.jpg)
ಐಪಿಎಲ್ ಮೆಗಾ ಫೆಸ್ಟಿವಲ್ ಬಂದೇ ಬಿಡ್ತು. ದೇಶದಲ್ಲಿ ಕಲರ್ಫುಲ್ ಟೂರ್ನಿ ಆರಾಧನೆ ಜೋರಾಗಿದೆ. ಆರ್ಸಿಬಿ ಅಭಿಮಾನಿಗಳ ಜೋಶ್ ಅಂತೂ ಹೇಳತೀರದು. ಆರ್ಸಿಬಿ ಅಭ್ಯಾಸದ ಅಖಾಡಕ್ಕಿಳಿದಿದ್ದೇ ತಡ, ಈ ಸಲ ಕಪ್ ನಮ್ದೆ ಅನ್ನೋ ಕನಸು ಕಾಣೋಕೆ ಶುರು ಮಾಡಿದ್ದಾರೆ.
ಮಾರ್ಚ್ 22 ರಿಂದ ಐಪಿಎಲ್ ಜಾತ್ರೆ ಆರಂಭಗೊಳ್ಳಲಿದೆ. ಉದ್ಘಾಟನಾ ಪಂದ್ಯದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಹಾಲಿ ಚಾಂಪಿಯನ್ಸ್ ಕೊಲ್ಕತ್ತಾ ಎದುರು ಸೆಣಸಾಡಲಿದೆ. ಈ ಮೆಗಾ ಬ್ಯಾಟಲ್ಗೆ 10 ದಿನಗಳು ಮಾತ್ರ ಬಾಕಿಯಿದೆ. ತೆರೆ ಮರೆಯಲ್ಲೇ ಗೇಮ್ ಪ್ಲಾನ್, ಸ್ಟ್ರಾಟರ್ಜಿಗಳನ್ನು ರೂಪಿಸ್ತಿರುವ ಟೀಮ್ಗಳು ಅಭ್ಯಾಸ ಅಖಾಡಕ್ಕೆ ಧುಮುಕಿವೆ.
ನ್ಯೂ ಸೀಸನ್.. ನ್ಯೂ ಚಾಲೆಂಜಸ್
ನ್ಯೂ ಸೀಸನ್.. ನ್ಯೂ ಚಾಲೆಂಜಸ್.. ನ್ಯೂ ಕ್ಯಾಪ್ಟನ್ನೊಂದಿಗೆ ಆರ್ಸಿಬಿಯ, ಸೀಸನ್-18ರ ಕ್ಲಾಸ್ಗಳು ಶುರುವಾಗಿದೆ. ಚಿನ್ನಸ್ವಾಮಿಯಲ್ಲಿ ರಜತ್ ಪಾಟಿದಾರ್ ನಾಯಕತ್ವದ ಆರ್ಸಿಬಿ, ಹಳೇ ಗುರಿಯೊಂದಿಗೆ ಹೊಸ ಆಧ್ಯಾಯಕ್ಕೆ ನಾಂದಿಯಾಡ್ತಿದೆ. ಪಾಸಿಟಿವ್ ವೈಬ್ಸ್ನೊಂದಿಗೆ ಟ್ರೋಫಿ ಗೆದ್ದು ಹೊಸ ಚರಿತ್ರೆ ಸೃಷ್ಟಿಸುವ ಇರಾದೆಯಲ್ಲಿದೆ. ಈ ನಿಟ್ಟಿನಲ್ಲೇ ಮೊದಲ ಸೆಷನ್ ಆರಂಭಿಸಿದೆ.
ಮೊದಲ ಸೆಷನ್ನಲ್ಲೇ ಕ್ಯಾಪ್ಟನ್ ರಜತ್ ಪಾಟಿದಾರ್, ಆಟಗಾರರಿಗೆ ಟ್ರೋಫಿ ಗೆಲ್ಲುವ ಕರೆ ನೀಡಿದ್ದಾರೆ. ಈ ಹಿಂದಿಗಿಂತಲೂ ಅತ್ಯುತ್ತಮ ಬೌಲಿಂಗ್ ಅಟ್ಯಾಕ್ ನಮ್ಮದಿದೆ ಎಂಬ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಎಲ್ಲರಿಗೂ ಸ್ವಾಗತ. ಒಂದು ಉದ್ದೇಶಕ್ಕಾಗಿ ನಾವಿಲ್ಲಿದ್ದೇವೆ. ಎಲ್ಲರೂ ಮಾನಸಿಕ ಒಂದೇ ದಾರಿಯಲ್ಲಿ ಇದ್ದೇವೆ. ಜೊತೆಯಾಗಿ ನೆನಪುಗಳನ್ನು ತೆಗೆದುಕೊಂಡು ಹೋಗೋಣ. ಎಲ್ಲರಿಗೂ ಗುಡ್ ಲಕ್. ನಾವು ಎಲ್ಲಾ ವಿಭಾಗದಲ್ಲೂ ಉತ್ತಮ ಆಟಗಾರರನ್ನು ಹೊಂದಿದ್ದೇವೆ.ವೈಯಕ್ತಿಕವಾಗಿ ಈ ಸಲ ಬೆಸ್ಟ್ ಬೌಲಿಂಗ್ ಅಟ್ಯಾಕ್ ಇದೆ. ಅದಕ್ಕೆ ನಾನು ಆತ್ಮವಿಶ್ವಾಸದಲ್ಲಿದ್ದೇನೆ -ರಜತ್ ಪಾಟಿದಾರ್, ಆರ್ಸಿಬಿ ನಾಯಕ
ಹೊಸ ಕ್ಯಾಪ್ಟನ್.. ಹೊಸ ಹುರುಪು..
ಸೀಸನ್-18ರ ಐಪಿಎಲ್ನೊಂದಿಗೆ ಹೊಸ ಶಕೆ ಆರಂಭಿಸ್ತಿರುವ ಆರ್ಸಿಬಿ, ಹೊಸ ಕ್ಯಾಪ್ಟನ್ನೊಂದಿಗೆ ಕಣಕ್ಕಿಳಿಯುತ್ತಿದೆ. ಅನುಭವಿ ಹಾಗೂ ಯುವ ಉತ್ಸಾಹಿ ಪಡೆಯನ್ನೇ ಹೊಂದಿರುವ ರಜತ್ ಪಾಟಿದಾರ್ ನಾಯಕತ್ವದ ರೆಡ್ ಆರ್ಮಿ, ಹೊಸ ಹುರುಪಿನಲ್ಲಿದೆ. 17 ವರ್ಷಗಳಿಂದ ಕಪ್ ಗೆಲ್ಲದ ಕೊರಗಿಗೆ ಯಂಗ್ ಕ್ಯಾಪ್ಟನ್ ರಜತ್ ಬ್ರೇಕ್ ಹಾಕುವ ಲೆಕ್ಕಾಚಾರದಲ್ಲಿದ್ದಾರೆ. ಈ ನಿಟ್ಟಿನಲ್ಲಿ ಅಭಿಮಾನಿಗಳಿಗೆ ಕರೆ ನೀಡಿದ್ದಾರೆ.
ಇದನ್ನೂ ಓದಿ: RCBಗೆ ಎಂಟ್ರಿ ಕೊಡುವ ಮೊದಲೇ ನ್ಯೂ ಹೇರ್ಸ್ಟೈಲ್.. ವಿರಾಟ್ ಕೊಹ್ಲಿ ಹೊಸ ಲುಕ್ ಹೇಗಿದೆ?
"𝘊𝘰𝘢𝘤𝘩𝘪𝘯𝘨 𝘪𝘴 𝘢 𝘴𝘦𝘳𝘷𝘪𝘤𝘦 𝘪𝘯𝘥𝘶𝘴𝘵𝘳𝘺! 𝘐𝘵’𝘴 𝘭𝘪𝘬𝘦 𝘩𝘰𝘴𝘱𝘪𝘵𝘢𝘭𝘪𝘵𝘺. 𝘠𝘰𝘶 𝘩𝘢𝘷𝘦 𝘵𝘰 𝘸𝘰𝘳𝘬 𝘧𝘰𝘳 𝘵𝘩𝘦 𝘤𝘳𝘪𝘤𝘬𝘦𝘵𝘦𝘳𝘴, 𝘦𝘷𝘦𝘳𝘺𝘵𝘩𝘪𝘯𝘨 𝘪𝘴 𝘢𝘣𝘰𝘶𝘵 𝘵𝘩𝘦𝘮, 𝘯𝘰𝘵𝘩𝘪𝘯𝘨 𝘪𝘴 𝘢𝘣𝘰𝘶𝘵 𝘺𝘰𝘶. 𝘚𝘰 𝘺𝘰𝘶 𝘵𝘢𝘬𝘦 𝘢… pic.twitter.com/EEcr9vFqhL
— Royal Challengers Bengaluru (@RCBTweets) March 14, 2025
ಕೋಚಿಂಗ್ ಸ್ಟಾಫ್ ಬಗ್ಗೆ ಗುಣಗಾನ
ಪ್ರತಿ ಸಲ ಆರ್ಸಿಬಿಯ ಕೋಚಿಂಗ್ ಸ್ಟಾಫ್ ಬಗ್ಗೆ ಒಂದಿಲ್ಲೊಂದು ಅಪಸ್ವರ ಕೇಳಿ ಬರ್ತಿತ್ತು. ಇಂಡಿಯನ್ ಕೋಚಿಂಗ್ ಗ್ರೂಪ್ ಇಲ್ಲ ಎಂದು ಟೀಕೆಗೂ ಗುರಿಯಾಗಿದ್ದಿದೆ. ಈ ಸಲ ಆರ್ಸಿಬಿ ಇದರಿಂದ ಎಚ್ಚೆತ್ತುಕೊಂಡಿದೆ. ಫಾರೀನ್ ಕೋಚ್ಗಳ ಮೇಲೆಯೇ ಡಿಪೆಂಡ್ ಆಗ್ತಿದ್ದ ಆರ್ಸಿಬಿಯಲ್ಲಿ ಈಗ ಇಂಡಿಯನ್ ಫ್ಲೇವರ್ ಸಿಕ್ಕಿದೆ.
ನಾವು ಡಿಫರೆಂಟ್ ಕೋಚಿಂಗ್ ಟೀಮ್ನ ಹೊಂದಿದ್ದೇವೆ. ಡಿಕೆ ನಮ್ಮ ಮೆಂಟರ್ ಅಂಡ್ ಬ್ಯಾಟಿಂಗ್ ಸ್ಪೆಷಲಿಸ್ಟ್. ಒಂಕಾರ್ ಸಾಲ್ವಿ ನಮ್ಮ ಫಾಸ್ಟ್ ಬೌಲಿಂಗ್ ಕೋಚ್ ಆಗಿದ್ದಾರೆ. ಕೋಚಿಂಗ್ ಗ್ರೂಪ್ನಲ್ಲಿ ಇಂಡಿಯನ್ ಪ್ಲೇವರ್ ಇದೆ. ಇದು ನಿಜಕ್ಕೂ ಒಳ್ಳೆಯ ನಡೆಯಾಗಿದೆ-ಆ್ಯಂಡಿ ಫ್ಲವರ್, ಹೆಡ್ ಕೋಚ್
ಆರ್ಸಿಬಿ ಕ್ಯಾಪ್ಟನ್ ರಜತ್ ಪಾಟಿದಾರ್, ಕೋಚ್ ಆ್ಯಂಡಿ ಫ್ಲವರ್. ಆರ್ಸಿಬಿ ಟೀಮ್ ಹಾಗೂ ಕೋಚಿಂಗ್ ಸ್ಟಾಫ್ ಬಗ್ಗೆ ಕೊಂಡಾಡ್ತಿದ್ದಾರೆ. ಬಹುತೇಕ ಆಟಗಾರರ ಆರ್ಸಿಬಿ ಕ್ಯಾಂಪ್ ಸೇರಿದ್ದಾಗಿದೆ. ಆದ್ರೆ, ಈ ಸಲ ಕಪ್ ಗೆಲ್ಲುವ ಕೊರಗು ನೀಗುತ್ತಾ ಅನ್ನೋದು ಮಾತ್ರ ಅಭಿಮಾನಿಗಳ ಮನದಲ್ಲಿ ಕಾಡ್ತಿದೆ.
ಒಟ್ನಲ್ಲಿ, ಸೀಸನ್-18ರ ಐಪಿಎಲ್ ಸಿದ್ಧತೆ ಆರಂಭಿಸಿರುವ ಆರ್ಸಿಬಿ, ಟ್ರೋಫಿ ಗೆಲುವಿನ ನಿಟ್ಟಿನಲ್ಲೇ ಬಲಿಷ್ಠ ತಂಡ ಕಟ್ಟಿದೆ. ನ್ಯೂ ಪ್ಲೇಯರ್ಗಳೊಂದಿಗೆ ನ್ಯೂ ಸಪೋರ್ಟಿಂಗ್ ಸ್ಟಾಫ್ನೊಂದಿಗೆ ಅಖಾಡಕ್ಕಿಳಿಯುತ್ತಿದೆ.
ಇದನ್ನೂ ಓದಿ: ಹುಬ್ಬಳ್ಳಿ-ಧಾರವಾಡದಲ್ಲಿ ರಿಯಲ್ ಎಸ್ಟೇಟ್ ವಂಚನೆ; ನ್ಯೂಸ್ಫಸ್ಟ್ ರಹಸ್ಯ ಕಾರ್ಯಾಚರಣೆ ಬೆನ್ನಲ್ಲೇ ಎಚ್ಚೆತ್ತ ಪ್ರಾಧಿಕಾರ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್