/newsfirstlive-kannada/media/post_attachments/wp-content/uploads/2024/11/LALIT-MODI.jpg)
2010ರಲ್ಲಿ ಐಪಿಎಲ್ ಹಗರಣ ಈ ದೇಶದಲ್ಲಿ ದೊಡ್ಡ ಸುದ್ದಿಯನ್ನೇ ಮಾಡಿತ್ತು. ಲಲಿತ್ ಮೋದಿ ಮೇಲೆ ಬಹುಕೋಟಿ ಹಗರಣದ ಬಗ್ಗೆ ಗಂಭೀರ ಆರೋಪ ಕೇಳಿ ಬಂದಿತ್ತು. 14 ವರ್ಷಗಳ ಬಳಿಕ ಇದೇ ಮೊದಲ ಬಾರಿ ಈ ಬಗ್ಗೆ ಲಲಿತ ಮೋದಿ ಮೌನ ಮುರಿದಿದ್ದಾರೆ. ಐಪಿಎಲ್ ಒಡಲಾಳದಲ್ಲಿ ಹುದುಗಿಕೊಂಡಿದ್ದ ಹಲವು ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ. ಅದರಲ್ಲೂ ಸಂಸದ ಶಶಿ ತರೂರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಶಶಿ ತರೂರ್ ಪತ್ನಿ ದಿವಂಗತ ಸುನಂದ ಪುಷ್ಕರ್ ನಯಾಪೈಸೆ ಬಂಡವಾಳ ಹೂಡಿರಲಿಲ್ಲ. ಆದರೇ ಲಾಭದಲ್ಲಿ 15 ಪರ್ಸೆಂಟ್ನಷ್ಟು ಪಡೆಯುವ ಬಗ್ಗೆ ಉಲ್ಲೇಖವಾಗಿತ್ತು. ಇದನ್ನು ನೋಡಿ ನಾನು ಅಗ್ರಿಮೆಂಟ್ಗೆ ಸಹಿ ಹಾಕಲ್ಲ ಎಂದೆ ತಕ್ಷಣವೇ ಶಶಿ ತರೂರ್ ನನಗೆ ಫೋನ್ ಮಾಡಿದ್ದರು. ನಿಮ್ಮ ಮೇಲೆ ಐಟಿ,ಇಡಿ ದಾಳಿ ಮಾಡಿಸುವುದಾಗಿ ಧಮ್ಕಿ ಹಾಕಿದ್ದರು ಎಂದು ಲಲಿತ ಮೋದಿ ಆರೋಪಿಸಿದ್ದಾರೆ.
ಇದನ್ನೂ ಓದಿ:Umpire Jobs: ಕ್ರಿಕೆಟ್ ಅಂಪೈರ್ ಆಗೋದು ಹೇಗೆ..? ಲಕ್ಷ ಲಕ್ಷ ಸ್ಯಾಲರಿ..! ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ..?
ಈ ಹಿಂದೆ 2010ರಲ್ಲಿ ಅವರ ಮೇಲೆ ಬಹುಕೋಟಿ ಹಗರಣದ ಆರೋಪ ಕೇಳಿ ಬಂದಿತ್ತು. ನಾನಾ ವಿವಾದಗಳು ಸುತ್ತಿಕೊಂಡ ಬಳಿಕ ಲಲಿತ್ ಮೋದಿ ದೇಶವನ್ನು ತೊರೆದು ಪಲಾಯನ ಮಾಡಿದ್ದರು. ಆದ್ರೆ ನಾನು ಭಾರತದಿಂದ ಪಲಾಯನ ಮಾಡಿದ್ದು ಭ್ರಷ್ಟಚಾರ ಹಗರಣಗಳ ಕೇಸ್ಗಳಿಗೆ ಹೆದರಿ ಅಲ್ಲ. ದಾವೂದ್ ಇಬ್ರಾಹಿಂನಿಂದ ನಿರಂತರ ಬೆದರಿಕೆ ಕರೆಗಳು ಬಂದಿದ್ದರಿಂದ ನಾನು ದೇಶವನ್ನು ತೊರೆದು ಹೋಗಬೇಕಾಯ್ತು. ನನಗ ಮ್ಯಾಚ್ ಫಿಕ್ಸಿಂಗ್ನಲ್ಲಿ ತೊಡಗಿಕೊಳ್ಳುವಂತೆ ನಿರಂತರ ಬೆದರಿಕೆಗಳು ಬಂದಿದ್ದವು ಎಂದು ಆರೋಪಿಸಿದ್ದಾರೆ.
ಇದನ್ನೂ ಓದಿ:ಆರ್ಸಿಬಿಗೆ ಕಿಂಗ್ ಆಫ್ ಸ್ವಿಂಗ್ ಎಂಟ್ರಿ.. ಬೆಂಗಳೂರು ತಂಡದ ಬಗ್ಗೆ ಭುವಿ ಮನದಾಳದ ಮಾತು..!
ಇನ್ನೂ ಇದೇ ಸಮಯದಲ್ಲಿ ಐಪಿಎಲ್ನ ಬಗ್ಗೆ ಹಲವು ವಿಷಯಗಳನ್ನು ಹಂಚಿಕೊಂಡ ಲಲಿತ್ ಮೋದಿ ಶಾರುಖ್ ಖಾನ್ ಅವರ ಖರೀದಿ ಮಾಡುವ ಮೊದಲ ಟೀಂ ಮುಂಬೈ ಟೀಮ್ ಆಗಿತ್ತು. ಆದರೆ ಅದನ್ನು ಅಂಬಾನಿ ಖರೀದಿಸಿದರು. ನಂತರ ಬೆಂಗಳೂರಿನ ಆರ್ಸಿಬಿ ತಂಡ ಖರೀದಿಗೆ ಮುಂದಾಗಿದ್ದರು ಅದನ್ನು ಮಲ್ಯ ಖರೀದಿಸಿದರು. ದೆಹಲಿ ಟೀಂ ಖರೀದಿಗೂ ಕೂಡ ಶಾರುಖ್ ಪ್ರಯತ್ನಿಸಿದ್ದರು. ಅದು ಜಿಎಂಆರ್ ಪಾಲಾಯಿತು. ಶಾರುಖ್ ಬಳಿ ಬಿಡ್ ಮಾಡಲು 70 ರರಿಂದ 80 ಮಿಲಿಯನ್ ಡಾಲರ್ ಮಾತ್ರ ಇತ್ತು ಹೀಗಾಗಿ ಕೊನೆಗೆ ಕೋಲ್ಕತ್ತಾ ಟೀಮ್ ಖರೀದಿಸಿದರು ಎಂದು ಲಲಿತ್ ಮೋದಿ ಹೇಳಿದ್ದಾರೆ.
ಇನ್ನೂ ಅಂದಿನ ಬಿಸಿಸಿಐ ಅಧ್ಯಕ್ಷರಾಗಿದ್ದ ಶ್ರೀನಿವಾಸನ್ ಅಂಪೈರ್ಗಳನ್ನು ಫಿಕ್ಸ್ ಮಾಡುತ್ತಿದ್ದರು ಎಂದು ಕೂಡ ಲಲಿತ್ ಮೋದಿ ಆರೋಪ ಮಾಡಿದ್ದಾರೆ. ಚೆನ್ನೈ ಟಈಮ್ ಪಂದ್ಯಗಲಿಗೆ ಶ್ರೀನಿವಾಸನ್ ಚೆನ್ನೈ ಅಂಪೈರ್ಗಳನ್ನೆ ಹಾಕಿಸುತ್ತಿದ್ದರು ಎಂದು ಲಲಿತ್ ಮೋದಿ ಆರೋಪ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ