ಇಂದು ಚೆಪಾಕ್ನಲ್ಲಿ ಕ್ವಾಲಿಫೈಯರ್-2 ದಂಗಲ್..!
ಗೆದ್ದರೆ ಉಳಿಗಾಲ.. ಸೋತರೆ ಟೂರ್ನಿಗೆ ಗುಡ್ಬೈ..!
SRH ಬ್ಯಾಟಿಂಗ್ v/a RR ಬೌಲಿಂಗ್ ಬ್ಯಾಟಲ್
ಐಪಿಎಲ್ ದಂಗಲ್ನಲ್ಲಿಂದು ಫ್ಯಾನ್ಸ್ಗೆ ಫುಲ್ ಟ್ರೀಟ್ ಕಾದಿದೆ. ಕ್ವಾಲಿಫೈಯರ್-2ನಲ್ಲಿ ಬಲಾಢ್ಯ ಸನ್ರೈಸರ್ಸ್ ಹೈದ್ರಾಬಾದ್ ಹಾಗೂ ರಾಜಸ್ಥಾನ ರಾಯಲ್ಸ್ ಸೆಣಸಾಡಲಿವೆ. ಉಭಯ ತಂಡಗಳಲ್ಲಿ ಹೋರಾಟದ ಕಿಚ್ಚಿದೆ. ಹೈದ್ರಾಬಾದ್ ಬ್ಯಾಟಿಂಗ್ ಹಾಗೂ ರಾಜಸ್ಥಾನ ಬೌಲಿಂಗ್ ನೆಚ್ಚಿಕೊಂಡಿದ್ದು, ಫೈನಲ್ನಲ್ಲಿ ಕೆಕೆಆರ್ ಎದುರಾಳಿ ಯಾರು ಸಾಕಷ್ಟು ಕುತೂಹಲ ಕೆರಳಿಸಿದೆ.
ಇಂದು ಚೆಪಾಕ್ನಲ್ಲಿ ಕ್ವಾಲಿಫೈಯರ್-2 ದಂಗಲ್..!
ಸೀಸನ್ -17ನೇ ಐಪಿಎಲ್ನ 2ನೇ ಫೈನಲಿಸ್ಟ್ ಯಾರು? ಸೂಪರ್ ಸಂಡೇ ನಡೆಯುವ ಫೈನಲ್ ದಂಗಲ್ನಲ್ಲಿ ಕೆಕೆಆರ್ ಎದುರಾಳಿ ಯಾರಾಗ್ತಾರೆ? ಈ ಮಿಲಿಯನ್ ಪ್ರಶ್ನೆಗೆ ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಆನ್ಸರ್ ಸಿಗಲಿದೆ. ಇಂದು ನಡೆಯುವ ಕ್ವಾಲಿಫೈಯರ್-2 ಬ್ಯಾಟಲ್ನಲ್ಲಿ ಬಲಿಷ್ಠ ಸನ್ರೈಸರ್ಸ್ ಹೈದ್ರಾಬಾದ್ ತಂಡಕ್ಕೆ ರಾಜಸ್ಥಾನ ರಾಯಲ್ಸ್ ಸವಾಲೆಸೆಯಲಿದೆ. ಉಭಯ ತಂಡಕ್ಕೆ ಇದು ಡು ಆರ್ ಡೈ ಕಾಳಗ. ಹೀಗಾಗಿ ತೆರೆಮರೆಯಲ್ಲೇ ಇನ್ನಿಲ್ಲದ ತಂತ್ರ-ಪ್ರತಿತಂತ್ರ ರೂಪಿಸ್ತಿದ್ದು ಕದನ ಕುತೂಹಲ ಕೆರಳಿಸಿದೆ.
ಇದನ್ನೂ ಓದಿ:ಕರ್ನಾಟಕದಿಂದ ತಿರುಪತಿಗೆ ಹೊರಟಿದ್ದ ಕಾರು ಭೀಕರ ಅಪಘಾತ.. ನಾಲ್ವರು ಸಾವು
SRH ಬ್ಯಾಟಿಂಗ್ V/S RR ಬೌಲಿಂಗ್.. ಯಾರಾಗ್ತಾರೆ ಕಿಂಗ್..?
ಇಂದಿನ ಕ್ವಾಲಿಫೈಯರ್-2 ಹೈದ್ರಾಬಾದ್ ಬ್ಯಾಟಿಂಗ್ ವರ್ಸಸ್ ರಾಜಸ್ಥಾನ ಬೌಲಿಂಗ್ ಎಂದೇ ಬ್ಯಾಟಲ್ ಎಂದೇ ಬಿಂಬಿತವಾಗಿದೆ. ವಿಧ್ವಂಸಕ ಆಟದಿಂದ ಹೈದ್ರಾಬಾದ್ ತಂಡ ಎದುರಾಳಿ ನಡುಕು ಹುಟ್ಟಿಸಿದೆ. ಒಂಟಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಡೆಡ್ಲಿ ಬ್ಯಾಟರ್ಸ್ ಕಮಿನ್ಸ್ ಬಳಗದಲ್ಲಿದ್ದಾರೆ. ಇನ್ನೊಂದೆಡೆ ಹೈದ್ರಾಬಾದ್ ಬಲಿಷ್ಠ ಬ್ಯಾಟಿಂಗ್ ಕೋಟೆಯನ್ನ ಛಿದ್ರಗೊಳಿಸುವ ಬೌಲರ್ಸ್ ರಾಜಸ್ಥಾನ ತಂಡದಲ್ಲಿದ್ದಾರೆ. ಈ ಬ್ಯಾಟಿಂಗ್ ವರ್ಸಸ್ ಬೌಲಿಂಗ್ ಹಣಾಹಣಿ ಪಂದ್ಯದ ಕ್ರೇಜ್ ಅನ್ನ ಇಮ್ಮಡಿಗೊಳಿಸಿದೆ.
ಇದನ್ನೂ ಓದಿ:ಆರ್ಸಿಬಿಯಲ್ಲಿ ಕಾರ್ತಿಕ್ಗೆ ಮಹತ್ವದ ಜವಾಬ್ದಾರಿ..? ಕುತೂಹಲ ಮೂಡಿಸಿದ RCB ಮುಖ್ಯ ಕೋಚ್ ನೀಡಿದ ಹೇಳಿಕೆ
ಹೈದ್ರಾಬಾದ್ನಲ್ಲಿ ಗೇಮ್ಚೇಂಜರ್, ಬಿಗ್ ಹಿಟ್ಟರ್ಗಳ ದಂಡು..!
ಪ್ರಸಕ್ತ ಐಪಿಎಲ್ನಲ್ಲಿ ಹೈದ್ರಾಬಾದ್ಗೆ ಬ್ಯಾಟ್ಸ್ಮನ್ಗಳೇ ದೊಡ್ಡ ಶಕ್ತಿ. ನೆಕ್ಸ್ಟ್ ಲೆವೆಲ್ನಲ್ಲಿ ಬ್ಯಾಟ್ ಬೀಸಿ, ಎದುರಾಳಿ ತಂಡಕ್ಕೆ ಸೋಲಿನ ರುಚಿ ತೋರಿಸ್ತಿದ್ದಾರೆ. ಗೇಮ್ಚೇಂಜರ್, ಬಿಗ್ ಹಿಟ್ಟರ್ ಹಾಗೂ ಫಿನಿಶರ್ಗಳ ದಂಡಿದ್ದು, ಟೂರ್ನಿಯುದ್ದಕ್ಕೂ ರನ್ ಹೊಳೆಯನ್ನೇ ಹರಿಸಿದ್ದಾರೆ.
IPL 2024 ರಲ್ಲಿ SRH ಬ್ಯಾಟ್ಸ್ಮನ್
ಮೊದಲ ಬಾಲ್ನಿಂದಲೇ ಆರ್ಭಟಿಸುವ ಟ್ರಾವಿಡ್ ಹೆಡ್ ಟೂರ್ನಿಯಲ್ಲಿ 533 ರನ್ ಗಳಿಸಿದ್ರೆ, ಇವರಿಗೆ ಉತ್ತಮ ಸಾಥ್ ಕೊಡ್ತಿರೋ ಅಭಿಷೇಕ್ ಶರ್ಮಾ 470 ರನ್ ಚಚ್ಚಿದ್ದಾರೆ. ಅಲ್ಲದೇ ಗೇಮ್ ಚೇಂಜರ್ ಹೆನ್ರಿಚ್ ಕ್ಲಾಸೆನ್ 413 ಹಾಗೂ ಆಲ್ರೌಂಡರ್ ನಿತೀಶ್ ರೆಡ್ಡಿ 285 ರನ್ ಗಳಿಸಿದ್ದಾರೆ.
RR ಬೆಂಕಿ ಬೌಲಿಂಗ್.. ಎದೆಯೊಡ್ಡಿ ನಿಲ್ಲುತ್ತಾ ಹೈದ್ರಾಬಾದ್..?
ರಾಜಸ್ಥಾನ ತಂಡದಲ್ಲಿ ಬೆಂಕಿ-ಬಿರುಗಾಳಿ ಬೌಲರ್ಗಳಿದ್ದಾರೆ. ಎಫೆಕ್ಟಿವ್ ಸ್ಪೆಲ್ ನಡೆಸಿ ಬ್ಯಾಟರ್ಗಳನ್ನ ಯಾವುದೇ ಕ್ಷಣದಲ್ಲಿ ಖೆಡ್ಡಾಗೆ ಕೆಡವಬಲ್ಲರು. ಟ್ರೆಂಟ್ ಬೌಲ್ಟ್, ಆವೇಶ್ ಖಾನ್, ಸ್ಪಿನ್ ಮ್ಯಜಿಶಿಯನ್ ಚಹಲ್ ಹಾಗೂ ಆರ್ ಅಶ್ವಿನ್ ವಿಕೆಟ್ ಸರಮಾಲೆ ಕಟ್ಟಿ ಮೆರೆದಾಡ್ತಿದ್ದಾರೆ.
ಇದನ್ನೂ ಓದಿ: ‘ಸೋಲಿನಲ್ಲಿ ನೋವು ಇರುತ್ತದೆ, ಆದರೆ..’ RCB ಸೋತ ಬಗ್ಗೆ ಎಬಿಡಿ ಹೇಳಿದ್ದೇನು..?
IPL 2024 ರಲ್ಲಿ ರಾಜಸ್ಥಾನ ಬೌಲರ್ಸ್
ಸ್ಪಿನ್ ಮಾಂತ್ರಿಕ ಯುಜವೇಂದ್ರ ಚಹಲ್ 18 ವಿಕೆಟ್ನೊಂದಿಗೆ ರಾರಾಜಿಸ್ತಿದ್ರೆ, ಆವೇಶ್ ಖಾನ್ 16 ವಿಕೆಟ್ ಕಬಳಿಸಿದ್ದಾರೆ. ಡೇಂಜರಸ್ ಟ್ರೆಂಟ್ ಬೌಲ್ಟ್ 13 ವಿಕೆಟ್ ಪಡೆದ್ರೆ ಕೇರಂ ಸ್ಪೆಷಲಿಸ್ಟ್ ಆರ್ ಅಶ್ವಿನ್ 9 ವಿಕೆಟ್ ಬೇಟೆಯಾಡಿದ್ದಾರೆ. ಒಟ್ಟಿನಲ್ಲಿ ಇಂದಿನ ಕ್ವಾಲಿಫೈಯರ್ -2 ಪಂದ್ಯ SRH ಬ್ಯಾಟಿಂಗ್ V/S RR ಬೌಲಿಂಗ್ ಬ್ಯಾಟಲ್ ಎಂದೇ ಕರೆಯಲ್ಪಡ್ತಿದೆ. ಈ ಬ್ಯಾಟಿಂಗ್, ಬೌಲಿಂಗ್ ವಾರ್ನಲ್ಲಿ ಗೆಲ್ಲೋದ್ಯಾರು? ಯಾರಿಗೆ ಯಾರು ಚೆಕ್ಮೇಟ್ ಕೊಡ್ತಾರೆ? ಯಾರು ಫೈನಲ್ ಟಿಕೆಟ್ ಗಿಟ್ಟಿಸಿಕೊಳ್ತಾರೆ ಅನ್ನೋದನ್ನು ಕಾದು ನೋಡಬೇಕು.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್