newsfirstkannada.com

RR ಬೆಂಕಿ ಬೌಲಿಂಗ್​​​.. ಎದೆಯೊಡ್ಡಿ ನಿಲ್ಲುತ್ತಾ SRH..? ಫೈನಲ್​ ಟಿಕೆಟ್ ಯಾರಿಗೆ?

Share :

Published May 24, 2024 at 9:32am

Update May 24, 2024 at 9:33am

  ಇಂದು ಚೆಪಾಕ್​ನಲ್ಲಿ ಕ್ವಾಲಿಫೈಯರ್​​​​-2 ದಂಗಲ್​​​​​​..!

  ಗೆದ್ದರೆ ಉಳಿಗಾಲ.. ಸೋತರೆ ಟೂರ್ನಿಗೆ ಗುಡ್​​ಬೈ..!

  SRH ಬ್ಯಾಟಿಂಗ್​​​​​ v/a RR ಬೌಲಿಂಗ್​​​​ ಬ್ಯಾಟಲ್

ಐಪಿಎಲ್​​​​​​​ ದಂಗಲ್​​ನಲ್ಲಿಂದು ಫ್ಯಾನ್ಸ್​​ಗೆ ಫುಲ್ ಟ್ರೀಟ್ ಕಾದಿದೆ. ಕ್ವಾಲಿಫೈಯರ್​​​​​​-2ನಲ್ಲಿ ಬಲಾಢ್ಯ ಸನ್​ರೈಸರ್ಸ್​ ಹೈದ್ರಾಬಾದ್​ ಹಾಗೂ ರಾಜಸ್ಥಾನ ರಾಯಲ್ಸ್ ಸೆಣಸಾಡಲಿವೆ. ಉಭಯ ತಂಡಗಳಲ್ಲಿ ಹೋರಾಟದ ಕಿಚ್ಚಿದೆ. ಹೈದ್ರಾಬಾದ್​​ ಬ್ಯಾಟಿಂಗ್​ ಹಾಗೂ ರಾಜಸ್ಥಾನ ಬೌಲಿಂಗ್​ ನೆಚ್ಚಿಕೊಂಡಿದ್ದು, ಫೈನಲ್​​​ನಲ್ಲಿ ಕೆಕೆಆರ್ ಎದುರಾಳಿ ಯಾರು ಸಾಕಷ್ಟು ಕುತೂಹಲ ಕೆರಳಿಸಿದೆ.

ಸೀಸನ್​​​ -17ನೇ ಐಪಿಎಲ್​​​​ನ 2ನೇ ಫೈನಲಿಸ್ಟ್​ ಯಾರು? ಸೂಪರ್​ ಸಂಡೇ ನಡೆಯುವ ಫೈನಲ್​​​​ ದಂಗಲ್​​ನಲ್ಲಿ ಕೆಕೆಆರ್​​​ ಎದುರಾಳಿ ಯಾರಾಗ್ತಾರೆ? ಈ ಮಿಲಿಯನ್​ ಪ್ರಶ್ನೆಗೆ ಇನ್ನು ಕೆಲವೇ ಕೆಲವು ಗಂಟೆಗಳಲ್ಲಿ ಆನ್ಸರ್ ಸಿಗಲಿದೆ. ಇಂದು ನಡೆಯುವ ಕ್ವಾಲಿಫೈಯರ್​​​-2 ಬ್ಯಾಟಲ್​​ನಲ್ಲಿ ಬಲಿಷ್ಠ ಸನ್​ರೈಸರ್ಸ್​ ಹೈದ್ರಾಬಾದ್​​​ ತಂಡಕ್ಕೆ ರಾಜಸ್ಥಾನ ರಾಯಲ್ಸ್​ ಸವಾಲೆಸೆಯಲಿದೆ. ಉಭಯ ತಂಡಕ್ಕೆ ಇದು ಡು ಆರ್ ಡೈ ಕಾಳಗ. ಹೀಗಾಗಿ ತೆರೆಮರೆಯಲ್ಲೇ ಇನ್ನಿಲ್ಲದ ತಂತ್ರ-ಪ್ರತಿತಂತ್ರ ರೂಪಿಸ್ತಿದ್ದು ಕದನ ಕುತೂಹಲ ಕೆರಳಿಸಿದೆ.

ಇದನ್ನೂ ಓದಿ:ಕರ್ನಾಟಕದಿಂದ ತಿರುಪತಿಗೆ ಹೊರಟಿದ್ದ ಕಾರು ಭೀಕರ ಅಪಘಾತ.. ನಾಲ್ವರು ಸಾವು

SRH ಬ್ಯಾಟಿಂಗ್​​​​​ V/S RR ಬೌಲಿಂಗ್​​​​.. ಯಾರಾಗ್ತಾರೆ ಕಿಂಗ್​​..?
ಇಂದಿನ ಕ್ವಾಲಿಫೈಯರ್​​​​-2 ಹೈದ್ರಾಬಾದ್​ ಬ್ಯಾಟಿಂಗ್​ ವರ್ಸಸ್ ರಾಜಸ್ಥಾನ ಬೌಲಿಂಗ್ ಎಂದೇ ಬ್ಯಾಟಲ್​​ ಎಂದೇ ಬಿಂಬಿತವಾಗಿದೆ. ವಿಧ್ವಂಸಕ ಆಟದಿಂದ ಹೈದ್ರಾಬಾದ್​ ತಂಡ ಎದುರಾಳಿ ನಡುಕು ಹುಟ್ಟಿಸಿದೆ. ಒಂಟಿಯಾಗಿ ಪಂದ್ಯ ಗೆಲ್ಲಿಸಿಕೊಡಬಲ್ಲ ಡೆಡ್ಲಿ ಬ್ಯಾಟರ್ಸ್​ ಕಮಿನ್ಸ್ ಬಳಗದಲ್ಲಿದ್ದಾರೆ. ಇನ್ನೊಂದೆಡೆ ಹೈದ್ರಾಬಾದ್​​​​​ ಬಲಿಷ್ಠ ಬ್ಯಾಟಿಂಗ್ ಕೋಟೆಯನ್ನ ಛಿದ್ರಗೊಳಿಸುವ ಬೌಲರ್ಸ್​ ರಾಜಸ್ಥಾನ ತಂಡದಲ್ಲಿದ್ದಾರೆ. ಈ ಬ್ಯಾಟಿಂಗ್​ ವರ್ಸಸ್ ಬೌಲಿಂಗ್ ಹಣಾಹಣಿ ಪಂದ್ಯದ ಕ್ರೇಜ್​ ಅನ್ನ ಇಮ್ಮಡಿಗೊಳಿಸಿದೆ.

ಇದನ್ನೂ ಓದಿ:ಆರ್​ಸಿಬಿಯಲ್ಲಿ ಕಾರ್ತಿಕ್​​ಗೆ ಮಹತ್ವದ ಜವಾಬ್ದಾರಿ..? ಕುತೂಹಲ ಮೂಡಿಸಿದ RCB ಮುಖ್ಯ ಕೋಚ್ ನೀಡಿದ ಹೇಳಿಕೆ

ಹೈದ್ರಾಬಾದ್​​ನಲ್ಲಿ ಗೇಮ್​ಚೇಂಜರ್​​​, ಬಿಗ್​​ ಹಿಟ್ಟರ್​ಗಳ ದಂಡು..!
ಪ್ರಸಕ್ತ ಐಪಿಎಲ್​​ನಲ್ಲಿ ಹೈದ್ರಾಬಾದ್​ಗೆ ಬ್ಯಾಟ್ಸ್​​​ಮನ್​ಗಳೇ ದೊಡ್ಡ ಶಕ್ತಿ. ನೆಕ್ಸ್ಟ್​ ಲೆವೆಲ್​ನಲ್ಲಿ ಬ್ಯಾಟ್ ಬೀಸಿ, ಎದುರಾಳಿ ತಂಡಕ್ಕೆ ಸೋಲಿನ ರುಚಿ ತೋರಿಸ್ತಿದ್ದಾರೆ. ಗೇಮ್​ಚೇಂಜರ್​​​, ಬಿಗ್​ ಹಿಟ್ಟರ್ ಹಾಗೂ ಫಿನಿಶರ್​ಗಳ ದಂಡಿದ್ದು, ಟೂರ್ನಿಯುದ್ದಕ್ಕೂ ರನ್ ಹೊಳೆಯನ್ನೇ ಹರಿಸಿದ್ದಾರೆ.

IPL 2024 ರಲ್ಲಿ SRH ಬ್ಯಾಟ್ಸ್​​​​ಮನ್​​
ಮೊದಲ ಬಾಲ್​​ನಿಂದಲೇ ಆರ್ಭಟಿಸುವ ಟ್ರಾವಿಡ್ ಹೆಡ್​​​​ ಟೂರ್ನಿಯಲ್ಲಿ 533 ರನ್ ಗಳಿಸಿದ್ರೆ, ಇವರಿಗೆ ಉತ್ತಮ ಸಾಥ್​​ ಕೊಡ್ತಿರೋ ಅಭಿಷೇಕ್​ ಶರ್ಮಾ 470 ರನ್ ಚಚ್ಚಿದ್ದಾರೆ. ಅಲ್ಲದೇ ಗೇಮ್​​ ಚೇಂಜರ್​​ ಹೆನ್ರಿಚ್ ಕ್ಲಾಸೆನ್​​​ 413 ಹಾಗೂ ಆಲ್​ರೌಂಡರ್​​​​ ನಿತೀಶ್​ ರೆಡ್ಡಿ 285 ರನ್ ಗಳಿಸಿದ್ದಾರೆ.

RR ಬೆಂಕಿ ಬೌಲಿಂಗ್.. ಎದೆಯೊಡ್ಡಿ ನಿಲ್ಲುತ್ತಾ ಹೈದ್ರಾಬಾದ್​​..?
ರಾಜಸ್ಥಾನ ತಂಡದಲ್ಲಿ ಬೆಂಕಿ-ಬಿರುಗಾಳಿ ಬೌಲರ್​ಗಳಿದ್ದಾರೆ. ಎಫೆಕ್ಟಿವ್ ಸ್ಪೆಲ್ ನಡೆಸಿ ಬ್ಯಾಟರ್​​ಗಳನ್ನ ಯಾವುದೇ ಕ್ಷಣದಲ್ಲಿ ಖೆಡ್ಡಾಗೆ ಕೆಡವಬಲ್ಲರು. ಟ್ರೆಂಟ್​​​ ಬೌಲ್ಟ್​​​, ಆವೇಶ್​ ಖಾನ್​​​, ಸ್ಪಿನ್ ಮ್ಯಜಿಶಿಯನ್​ ಚಹಲ್​​​​ ಹಾಗೂ ಆರ್​​​ ಅಶ್ವಿನ್​ ವಿಕೆಟ್​​ ಸರಮಾಲೆ ಕಟ್ಟಿ ಮೆರೆದಾಡ್ತಿದ್ದಾರೆ.

ಇದನ್ನೂ ಓದಿ‘ಸೋಲಿನಲ್ಲಿ ನೋವು ಇರುತ್ತದೆ, ಆದರೆ..’ RCB ಸೋತ ಬಗ್ಗೆ ಎಬಿಡಿ ಹೇಳಿದ್ದೇನು..?

IPL 2024 ರಲ್ಲಿ ರಾಜಸ್ಥಾನ ಬೌಲರ್ಸ್​
ಸ್ಪಿನ್ ಮಾಂತ್ರಿಕ ಯುಜವೇಂದ್ರ ಚಹಲ್​ 18 ವಿಕೆಟ್​ನೊಂದಿಗೆ ರಾರಾಜಿಸ್ತಿದ್ರೆ, ಆವೇಶ್ ಖಾನ್​ 16 ವಿಕೆಟ್ ಕಬಳಿಸಿದ್ದಾರೆ. ಡೇಂಜರಸ್​​​​​ ಟ್ರೆಂಟ್ ಬೌಲ್ಟ್​​​ 13 ವಿಕೆಟ್​ ಪಡೆದ್ರೆ ಕೇರಂ ಸ್ಪೆಷಲಿಸ್ಟ್​ ಆರ್​ ಅಶ್ವಿನ್​ 9 ವಿಕೆಟ್ ಬೇಟೆಯಾಡಿದ್ದಾರೆ. ಒಟ್ಟಿನಲ್ಲಿ ಇಂದಿನ ಕ್ವಾಲಿಫೈಯರ್​​​ -2 ಪಂದ್ಯ SRH ಬ್ಯಾಟಿಂಗ್​​​​​ V/S RR ಬೌಲಿಂಗ್ ಬ್ಯಾಟಲ್ ಎಂದೇ ಕರೆಯಲ್ಪಡ್ತಿದೆ. ಈ ಬ್ಯಾಟಿಂಗ್​​​, ಬೌಲಿಂಗ್​​​ ವಾರ್​ನಲ್ಲಿ ಗೆಲ್ಲೋದ್ಯಾರು? ಯಾರಿಗೆ ಯಾರು ಚೆಕ್​ಮೇಟ್ ಕೊಡ್ತಾರೆ? ಯಾರು ಫೈನಲ್ ಟಿಕೆಟ್​​ ಗಿಟ್ಟಿಸಿಕೊಳ್ತಾರೆ ಅನ್ನೋದನ್ನು ಕಾದು ನೋಡಬೇಕು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

RR ಬೆಂಕಿ ಬೌಲಿಂಗ್​​​.. ಎದೆಯೊಡ್ಡಿ ನಿಲ್ಲುತ್ತಾ SRH..? ಫೈನಲ್​ ಟಿಕೆಟ್ ಯಾರಿಗೆ?

https://newsfirstlive.com/wp-content/uploads/2024/05/SRH-VS-RR-1.jpg

Load More