/newsfirstlive-kannada/media/post_attachments/wp-content/uploads/2024/05/VIRAT_KOHLI_BATTING_1.jpg)
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಕಪ್ ಗೆಲ್ಲದಿದ್ದರೂ ಪರವಾಗಿಲ್ಲ. ಆದರೆ ಚೆನ್ನೈ ವಿರುದ್ಧ ಮ್ಯಾಚ್ ಗೆಲ್ಲಬೇಕು ಎನ್ನುವುದು ಬಹುತೇಕ ಆರ್ಸಿಬಿ ಫ್ಯಾನ್ಸ್ಗಳ ಆಶಯವಾಗಿದೆ. ಅದರಂತೆ ಇಂದು ಸಂಜೆ ಚೆನ್ನೈ ವಿರುದ್ಧ ಬೆಂಗಳೂರಿನಲ್ಲಿ ರಣರೋಚಕ ಪಂದ್ಯ ನಡೆಯುತ್ತಿದ್ದು ಇದರಲ್ಲಿ ವಿರಾಟ್ ಕೊಹ್ಲಿ ಬ್ಯಾಟಿಂಗ್ ಧಗಧಗ ಉರಿಯೋದು ಪಕ್ಕಾ ಎನ್ನಲಾಗ್ತಿದೆ. ಏಕೆಂದರೆ ಆರ್ಸಿಬಿ ಫ್ರಾಂಚೈಸಿ ಮಾಡಿರೋ ಆ ಒಂದು ಎಕ್ಸ್ ಪೋಸ್ಟ್ ಇತಿಹಾಸವನ್ನು ಕೆದಕಿದೆ.
ಇದನ್ನೂ ಓದಿ: RCB ಅಭಿಮಾನಿಗಳಿಗೆ ಬಿಗ್ ಶಾಕ್.. ಸಿಎಸ್ಕೆ ವಿರುದ್ಧ ಪಂದ್ಯ ನಡೆಯುವ ಮೊದಲೇ ವಿಘ್ನ.. ವಿಘ್ನ..!
ಆರ್ಸಿಬಿ ಫ್ರಾಂಚೈಸಿ ತನ್ನ ಅಧಿಕೃತ ಎಕ್ಸ್ ಅಕೌಂಟ್ನಲ್ಲಿ ಒಂದು ಪೋಸ್ಟ್ವೊಂದನ್ನ ಶೇರ್ ಮಾಡಿದೆ. ಇದರಲ್ಲಿ ದಿನಾಂಕ 18 ರಂದು ನಡೆದ ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ರಣಾರ್ಭಟದ ಬ್ಯಾಟಿಂಗ್ ಮಾಡಿದ್ದಾರೆ. ಹಗಲಿನಲ್ಲೇ ಎದುರಾಳಿ ತಂಡಕ್ಕೆ ನಕ್ಷತ್ರಗಳನ್ನು ತೋರಿಸಿದ್ದಾರೆ. ಬೆಂಗಳೂರು ತಂಡದ ಇತಿಹಾಸ ಕೆದಕಿ ನೋಡಿದಾಗ ಕಿಂಗ್ ಕೊಹ್ಲಿ ಮೇ 18ನೇ ದಿನಾಂಕದಂದು ಅಕ್ಷರಶಃ ವಿಶ್ವರೂಪ ತಾಳಿದ್ದಾರೆ.
ಇದನ್ನೂ ಓದಿ:ಚೆನ್ನೈ ತಂಡದಲ್ಲಿ ಹೊಂಚು ಹಾಕಿ ಕುಳಿತ ಬಾಂಬೆ ಬಾಯ್ಸ್.. ಪಂದ್ಯದ ವೇಳೆ ಆರ್ಸಿಬಿಗೆ ವಿಲನ್ ಆಗ್ತಾರಾ..!
- 2013 ಮೇ 18 ರಂದು ಸಿಎಸ್ಕೆ ವಿರುದ್ಧ ನಡೆದ ಐಪಿಎಲ್ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಕೇವಲ 29 ಎಸೆತದಲ್ಲಿ ಹಾಫ್ ಸೆಂಚುರಿ (57) ಸಿಡಿಸಿ ನಾಟೌಟ್ ಆಗಿ ಉಳಿದ್ದಾರೆ.
- 2016ರ ಮೇ 18 ರಂದು ಪಂಜಾಬ್ ತಂಡದ ಜೊತೆ ಕೇವಲ 50 ಎಸೆತಗಳಲ್ಲಿ ಸೆಂಚುರಿ (113) ಸಿಡಿಸಿ ಮಿಂಚಿದ್ದಾರೆ.
- ಕಳೆದ ವರ್ಷ ಅಂದರೆ 2023 ಮೇ 18 ರಂದು ಕೊಹ್ಲಿ ಮತ್ತೆ ಬ್ಯಾಟಿಂಗ್ನಲ್ಲಿ ಪ್ರಾಬಲ್ಯ ಮೆರೆದಿದ್ದಾರೆ. ಹೈದ್ರಾಬಾದ್ ವಿರುದ್ಧದ ಪಂದ್ಯದಲ್ಲಿ 63 ಎಸೆತಗಳಲ್ಲಿ ಶತಕ ಸಿಡಿಸಿ ಮೈದಾನದಲ್ಲಿ ಸಂಭ್ರಮಿಸಿದ್ದಾರೆ.
Our No.18 loves the 18th of May and we are sure he knows what's the date today ?#PlayBold#ನಮ್ಮRCB#IPL#OnThisDay@imVkohlipic.twitter.com/WCIAl8JtDL
— Royal Challengers Bengaluru (@RCBTweets)
Our No.18 loves the 18th of May and we are sure he knows what's the date today 😉#PlayBold#ನಮ್ಮRCB#IPL#OnThisDay@imVkohlipic.twitter.com/WCIAl8JtDL
— Royal Challengers Bengaluru (@RCBTweets) May 18, 2024
">May 18, 2024
ಐಪಿಎಲ್ನಲ್ಲಿ ಮೇ 18 ರ ಇತಿಹಾಸ ಹೀಗೆ ಹೇಳುತ್ತದೆ ಎಂದರೆ ಇಂದು ಚೆನ್ನೈ ತಂಡದ ವಿರುದ್ಧ ವಿರಾಟ್ ಕೊಹ್ಲಿ ಆರ್ಭಟಿಸೋ ಮುನ್ಸೂಚನೆ ಎಲ್ಲ ಇದೆ. ಒಂದು ವೇಳೆ ಮಳೆ ಬಾರದೇ ಇದ್ದರೇ ಸಿಎಸ್ಕೆ ಟೀಮ್ ಮೇಲೆ ಕಿಂಗ್ ಕೊಹ್ಲಿ ಎರಗುವುದಂತೂ ಗ್ಯಾರಂಟಿ ಎಂದು ಹೇಳಲಾಗ್ತಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ