/newsfirstlive-kannada/media/post_attachments/wp-content/uploads/2024/05/DINESH-KARTHIK-2.jpg)
ಇಂಡಿಯನ್ ಪ್ರೀಮಿಯರ್ ಲೀಗ್‌ನ ಅತ್ಯಂತ ಪ್ರಸಿದ್ಧ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಕೂಡ ಒಂದು. 17 ವರ್ಷಗಳಿಂದ ಆಡುತ್ತಿರುವ ಆರ್​ಸಿಬಿ ಇನ್ನೂ ಒಂದೇ ಒಂದು ಪ್ರಶಸ್ತಿ ಗೆದ್ದಿಲ್ಲ. ಹೀಗಾಗಿ ವಿಭಿನ್ನ ತಂತ್ರದೊಂದಿಗೆ IPL 2025ರ ಮೆಗಾ ಹರಾಜಿನಲ್ಲಿ ಇಳಿಯಲು ಫ್ರಾಂಚೈಸಿ ಪ್ಲಾನ್ ಮಾಡಿಕೊಂಡಿದೆ.
ಅಂತೆಯೇ ಆರ್​ಸಿಬಿಗೆ ಚುರುಕು ಆಗಿರುವ ವಿಕೆಟ್ ಕೀಪರ್​ ಒಬ್ಬರ ಅಗತ್ಯ ಇದೆ. ದಿನೇಶ್ ಕಾರ್ತಿಕ್ ಈ ವರ್ಷದಿಂದ ಫೀಲ್ಡಿಗೆ ಇಳಿಯುತ್ತಿಲ್ಲ. ಸದ್ಯ ಇರುವ ಅನುಜ್ ರಾವತ್​​ ಅಷ್ಟೊಂದು ಇಂಪ್ರೆಸೀವ್ ಆಗಿಲ್ಲ. ಹೀಗಾಗಿ ಅವರನ್ನು ತಂಡದಿಂದ ಕೈಬಿಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಆರ್​ಸಿಬಿ ಹೊಸ ವಿಕೆಟ್ ಕೀಪರ್ ಹುಡುಕಾಟದಲ್ಲಿದೆ.
ಇದನ್ನೂ ಓದಿ:ದ್ರಾವಿಡ್-ಗಂಭೀರ್ ಬೇರೆ ಬೇರೆ, ವ್ಯತ್ಯಾಸ ಇದೆ -ದೊಡ್ಡ ವಿಚಾರ ಬಹಿರಂಗ ಮಾಡಿದ ಪಂತ್
ವರದಿಗಳ ಪ್ರಕಾರ.. ಫಿಲ್ ಸಾಲ್ಟ್ ಮೇಲೆ ಆರ್​ಸಿಬಿ ಕಣ್ಣಿಟ್ಟಿದೆ. ಫಿಲ್ ಸಾಲ್ಟ್ ಒಬ್ಬ ಅದ್ಭುತ ಬ್ಯಾಟ್ಸ್‌ಮನ್. ಆರ್‌ಸಿಬಿ ಡು ಪ್ಲೆಸಿಸ್ ಅವರನ್ನು ಕೈಬಿಟ್ಟರೆ ಅವರ ಸ್ಥಾನದಲ್ಲಿ ಸಾಲ್ಟ್ ಸ್ಫೋಟಕ ಓಪನಿಂಗ್ ನೀಡಬಹುದು. ದಿನೇಶ್ ಕಾರ್ತಿಕ್ ನಿರ್ಗಮನದ ನಂತರ ಆರ್‌ಸಿಬಿಗೆ ವಿಕೆಟ್ ಕೀಪರ್ ಅಗತ್ಯವಿದ್ದು, ಆ ಸ್ಥಾನವನ್ನೂ ಆರ್​ಸಿಬಿ ತುಂಬಬಹುದು ಎಂಬ ಲೆಕ್ಕಾಚಾರದಲ್ಲಿ ಆರ್​ಸಿಬಿ ಇದೆ. ಕೋಲ್ಕತ್ತ ನೈಟ್ ರೈಡರ್ಸ್​ ಪರ ಆಡುತ್ತಿರುವ ಇಂಗ್ಲೆಂಡ್​​ನ ಈ ದೈತ್ಯ ಬ್ಯಾಟ್ಸ್​​ಮನ್​​ ಖರೀದಿಸಲು ಆರ್​ಸಿಬಿ ಬಿಗ್ ಪ್ಲಾನ್ ಮಾಡಿಕೊಂಡಿದೆ ಎನ್ನಲಾಗಿದೆ. ಈ ಮೂಲಕ ಓಪನಿಂಗ್ ಬ್ಯಾಟಿಂಗ್ ಹಾಗೂ ಕೀಪಿಂಗ್ ಎರಡು ವಿಭಾಗದಲ್ಲೂ ತಂಡವನ್ನು ಸರಿದೂಗಿಸಬಹುದು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ