IPL ಅಭಿಮಾನಿಗಳಿಗೆ ಸಿಹಿಸುದ್ದಿ.. ಬೆಂಗಳೂರಿನಲ್ಲಿ ನಡೆಯುತ್ತೆ ಮುಂದಿನ ಎಲ್ಲಾ ಪಂದ್ಯಗಳು..?

author-image
Ganesh
Updated On
RCB ಅಭಿಮಾನಿಗಳಿಗೆ ಬಿಗ್ ಶಾಕ್‌.. ಆಸ್ಟ್ರೇಲಿಯಾದ ಸ್ಟಾರ್ ಆಟಗಾರರು ಕೈ ಕೊಡೋದು ಫಿಕ್ಸ್!
Advertisment
  • ದೇಶದಲ್ಲಿ ಯುದ್ಧದ ವಾತಾವರಣ, IPL ಪಂದ್ಯ ಸಸ್ಪೆಂಡ್
  • ಮುಂದಿನ ವಾರ ನಿರ್ಧಾರ ಪ್ರಕಟ ಎಂದಿರುವ ಬಿಸಿಸಿಐ
  • ದಕ್ಷಿಣ ಭಾರತದಲ್ಲಿ ಐಪಿಎಲ್ ಪಂದ್ಯ ನಡೆಸಲು ಚಿಂತನೆ

2025ರ ಐಪಿಎಲ್​ ಟೂರ್ನಿಯನ್ನ ಮುಂದಿನ ಒಂದು ವಾರಗಳ ಕಾಲ ಮುಂದೂಡಲು ಬಿಸಿಸಿಐ ನಿರ್ಧರಿಸಿದೆ. ನಂತರದ ವೇಳಾಪಟ್ಟಿ, ಟೂರ್ನಿ ನಡೆಯುವ ಸ್ಥಳಗಳ ಮಾಹಿತಿಯನ್ನ ನಂತರದಲ್ಲಿ ನೀಡಲಾಗುವುದು ಎಂದು ಬಿಸಿಸಿಐ ತಿಳಿಸಿದೆ.

ಈ ಕಠಿಣ ಪರಿಸ್ಥಿತಿಯಲ್ಲಿ ಬಿಸಿಸಿಐ ದೇಶದ ಜೊತೆಗೆ ನಿಲ್ಲುತ್ತದೆ. ಭಾರತ ಸರ್ಕಾರ, ಭಾರತೀಯ ಸೇನೆ, ಹಾಗೂ ಈ ದೇಶದ ಜನರೊಂದಿಗೆ ನಿಲ್ಲುತ್ತೇವೆ. ಕ್ರಿಕೆಟ್​ ಈ ದೇಶದ ಪ್ಯಾಷನ್​. ಈ ದೇಶಕ್ಕಿಂತ ಯಾವುದು ದೊಡ್ಡದಿಲ್ಲ. ಸಶಸ್ತ್ರ ಪಡೆಗಳ ಧೈರ್ಯ, ಶೌರ್ಯ ಮತ್ತು ನಿಸ್ವಾರ್ಥ ಸೇವೆಯನ್ನ ಗೌರವಿಸುತ್ತೇವೆ. ಆಪರೇಷನ್​ ಸಿಂಧೂರ ಅಡಿಯಲ್ಲಿ ರಾಷ್ಟ್ರವನ್ನ ರಕ್ಷಿಸುತ್ತಿರೋ ಸೇನೆಗೆ ಸೆಲ್ಯೂಟ್​ ಎಂದು ಬಿಸಿಸಿಐ ತಿಳಿಸಿದೆ.

ಬೆಂಗಳೂರು, ಹೈದ್ರಾಬಾದ್​ನಲ್ಲಿ ಪಂದ್ಯಗಳು?

ಒಂದು ವಾರದ ಬಳಿಕ ಪರಿಸ್ಥಿತಿ ಸುದಾರಿಸಿದ್ರೂ ರಿಸ್ಕ್​ ತೆಗೆದುಕೊಳ್ಳಲು ಬಿಸಿಸಿಐ ರೆಡಿಯಿಲ್ಲ. ಹೀಗಾಗಿ ಗಡಿ ಭಾಗದ ಬದಲಾಗಿ ಸೌತ್​ ಇಂಡಿಯಾದಲ್ಲಿ ಉಳಿದ ಪಂದ್ಯಗಳನ್ನ ಆಯೋಜಿಸೋ ಬಗ್ಗೆ ಚರ್ಚೆ ನಡೆದಿದೆ. ಬೆಂಗಳೂರು, ಹೈದ್ರಾಬಾದ್​​ನಲ್ಲಿ ಬಹುತೇಕ ಉಳಿದ ಪಂದ್ಯಗಳನ್ನ ನಡೆಸೋ ಸಾಧ್ಯತೆಗಳಿವೆ ಎಂದು ಹೇಳಲಾಗಿದೆ.

ಇದನ್ನೂ ಓದಿ: ಪಾಕ್​ ದಾಳಿಗೆ ಜಮ್ಮು ಅಧಿಕಾರಿ ಹುತಾತ್ಮ.. ನಿನ್ನೆಯಷ್ಟೇ ಕಾಶ್ಮೀರದ ಭದ್ರತಾ ಸಭೆಯಲ್ಲಿ ಭಾಗಿಯಾಗಿದ್ದ ಆಫೀಸರ್​..

publive-image

ಒಂದು ವೇಳೆ ಸಾಧ್ಯವಾಗದಿದ್ದರೆ ಸಪ್ಟೆಂಬರ್​ ಬಳಿಕವೇ ಐಪಿಎಲ್​ ನಡೆಯೋ ಸಾಧ್ಯತೆಯಿದೆ. ಮುಂದಿನ ತಿಂಗಳು ಸೌತ್​ ಆಫ್ರಿಕಾ-ಆಸ್ಟ್ರೇಲಿಯಾ ನಡುವೆ ವಿಶ್ವ ಟೆಸ್ಟ್​ ಚಾಂಪಿಯನ್​ಶಿಪ್​ ನಡೆಯಲಿದೆ. ಭಾರತ ತಂಡ ಇಂಗ್ಲೆಂಡ್​ ಪ್ರವಾಸಕ್ಕೆ ತೆರಳಲಿದೆ. ಅಗಸ್ಟ್​ನಲ್ಲಿ ನಡೆಸೋದಾದ್ರೆ ಟೀಮ್​ ಇಂಡಿಯಾದ ಬಾಂಗ್ಲಾದೇಶ ಟೂರ್ ಡಿಶೆಡ್ಯೂಲ್​ ಮಾಡಬೇಕಾಗುತ್ತದೆ. ಜೊತೆಗೆ ಇಂಗ್ಲೆಂಡ್​​ ಹಾಗೂ ಸೌತ್​ ಆಫ್ರಿಕಾ ನಡುವೆ ಅಗಸ್ಟ್​​ನಲ್ಲಿ ವೈಟ್​ಬಾಲ್​​​ ಸರಣಿಯಿದೆ. ಸೆಪ್ಟೆಂಬರ್​ನಲ್ಲಿ 2 ವಾರಗಳ ವಿಂಡೋ ಸಿಗಲಿದೆ. ಅದೇ ತಿಂಗಳು ನಡೆಯೋ ಏಷ್ಯಾಕಪ್​ ಟೂರ್ನಿಯನ್ನೂ ಕ್ಯಾನ್ಸಲ್​ ಮಾಡಿ ಐಪಿಎಲ್​ ನಡೆಸೋ ಚರ್ಚೆಯೂ ಇದೆ.

ಇದನ್ನೂ ಓದಿ: ಪಾಕ್ ದಾಳಿಗೆ ಹುತಾತ್ಮರಾದ ವೀರಯೋಧ ಮುರುಳಿ ನಾಯಕ್ ಯಾರು..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ 

Advertisment