/newsfirstlive-kannada/media/post_attachments/wp-content/uploads/2025/04/RCB_TEAM-2.jpg)
IPL ಸೀಸನ್ 18ರ ಫಸ್ಟ್ ಹಾಫ್ ಮುಗಿದಾಯ್ತು. ಈಗ ಪ್ಲೇ ಆಫ್ ಲೆಕ್ಕಾಚಾರ ಐಪಿಎಲ್ ಅಂಗಳದಲ್ಲಿ ಜೋರಾಗಿದೆ. ಯಾವ ತಂಡ ಪ್ಲೇ ಆಫ್ಗೆ ಎಂಟ್ರಿ ಕೊಡುತ್ತೆ? ಯಾವ ತಂಡ ಔಟ್ ಆಗುತ್ತೆ? ಅನ್ನೋ ಚರ್ಚೆ ಶುರುವಾಗಿದೆ.
ಫಸ್ಟ್ ಟೀಮ್ ಆಗಿ ಪ್ಲೇ ಆಫ್ಗೆ ಗುಜರಾತ್ ಎಂಟ್ರಿ!
ಕಳೆದ ಸೀಸನ್ನಲ್ಲಿ ಪಾತಾಳಕ್ಕೆ ಕುಸಿದಿದ್ದ ಗುಜರಾತ್ ಟೈಟನ್ಸ್ ಈ ಸೀಸನ್ನಲ್ಲಿ ಸೂಪರ್ ಡೂಪರ್ ಪರ್ಫಾಮೆನ್ಸ್ ನೀಡ್ತಿದೆ. ಈಗಾಗಲೇ ಆಡಿರುವ 8 ಪಂದ್ಯಗಳ ಪೈಕಿ 6 ಮ್ಯಾಚ್ಗಳಲ್ಲಿ ಗುಜರಾತ್ ಗೆದ್ದು ಬೀಗಿದೆ. +1.104 ರನ್ರೇಟ್ ಹೊಂದಿರೋ ಗುಜರಾತ್ ಪಾಯಿಂಟ್ಸ್ ಟೇಬಲ್ನಲ್ಲಿ ನಂಬರ್ 1 ಸ್ಥಾನದಲ್ಲಿದೆ. ಉಳಿದ 6 ಪಂದ್ಯಗಳಲ್ಲಿ 4 ಪಂದ್ಯ ಗೆದ್ರೆ ಸಲೀಸಾಗಿ ಪ್ಲೇ ಆಫ್ಗೆ ಕ್ವಾಲಿಫೈ ಆಗಲಿದೆ.
ಇದನ್ನೂ ಓದಿ: ಈ ಬಾರಿ ಸೋಲುವುದರಲ್ಲೇ ಧೋನಿ ದಾಖಲೆ.. ಚೆನ್ನೈಗೆ ನಿನ್ನೆ ಎಷ್ಟನೇ ಸೋಲು..?
ಸಲೀಸಾಗಿ ಕ್ವಾಲಿಫೈ ಆಗುತ್ತಾ ಡೆಲ್ಲಿ ಕ್ಯಾಪಿಟಲ್ಸ್?
ಆಡಿರೋ 8 ಪಂದ್ಯಗಳಲ್ಲಿ 6 ಪಂದ್ಯ ಗೆದ್ದಿರೋ ಡೆಲ್ಲಿ ಕ್ಯಾಪಿಟಲ್ಸ್ ಪ್ಲೇ ಆಫ್ಗೆ ಎಂಟ್ರಿ ಕೊಡೋಕೆ ತುದಿಗಾಲಲ್ಲಿ ನಿಂತಿದೆ. ಬೌಲಿಂಗ್, ಬ್ಯಾಟಿಂಗ್ ಎರಡರಲ್ಲೂ ಬ್ಯಾಲೆನ್ಸಿಂಗ್ ಅಟವಾಡ್ತಿರೋ ಡೆಲ್ಲಿ ತಂಡ ಸದ್ಯ ಆತ್ಮವಿಶ್ವಾಸದ ಅಲೆಯಲ್ಲಿದೆ. ಇನ್ನುಳಿದ 6 ಪಂದ್ಯಗಳ ಪೈಕಿ 4 ಮ್ಯಾಚ್ ಗೆದ್ರೆ ಸಾಕು ಡೆಲ್ಲಿ ಡೈರೆಕ್ಟ್ ಎಂಟ್ರಿ ಕೊಡಲಿದೆ. ರನ್ರೇಟ್ ಕೂಡ ಉತ್ತಮವಾಗಿರೋದ್ರಿಂದ ಡೆಲ್ಲಿನ ತಡೆಯೋಕೆ ಆಗಲ್ಲ.
ಪ್ಲೇ ಆಫ್ಗೆ ಬೆಂಗಳೂರು ‘ರಾಯಲ್’ ಎಂಟ್ರಿ?
ಹೊಸ ಕ್ಯಾಪ್ಟನ್ ರಜತ್ ಪಟಿದಾರ್ ನಾಯಕತ್ವದಡಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ರಾಯಲ್ ಪರ್ಫಾಮೆನ್ಸ್ ನೀಡ್ತಾ ಇದೆ. 9 ಪಂದ್ಯಗಳಲ್ಲಿ 6 ಪಂದ್ಯ ಗೆದ್ದು ಬೀಗಿರೋ ಆರ್ಸಿಬಿಯ ರನ್ರೇಟ್ ಕೂಡ ಉತ್ತಮವಾಗಿದೆ. ಸೇಫ್ ಆಗಬೇಕಂದ್ರೆ ಇನ್ನುಳಿದಿರೋ 5 ಪಂದ್ಯಗಳ ಪೈಕಿ ಕನಿಷ್ಟ 3 ಗೆಲ್ಲಬೇಕಿದೆ.
ಮುಂಬೈ ಹೈ ಜಂಪ್, ಪ್ಲೇ ಆಫ್ ರೇಸ್ಗೆ ಎಂಟ್ರಿ
ರಣರೋಚಕ ಕಮ್ಬ್ಯಾಕ್ ಮಾಡಿರೋ ಮುಂಬೈ ಇಂಡಿಯನ್ಸ್ ಸದ್ಯ ಪ್ಲೇ ಆಫ್ಗೆ ಎಂಟ್ರಿ ಕೊಡೋ ಹಾಟ್ ಫೇವರಿಟ್ ಅನಿಸಿದೆ. ಪಾಯಿಂಟ್ಸ್ ಟೇಬಲ್ನ ತಳದಿಂದ 4ನೇ ಸ್ಥಾನಕ್ಕೆ ಹೈ ಜಂಪ್ ಮಾಡಿರೋ ಮುಂಬೈ 10 ಅಂಕಗಳನ್ನ ಹೊಂದಿದೆ. ಉಳಿದ 5 ಮ್ಯಾಚ್ಗಳಲ್ಲಿ 4 ಪಂದ್ಯ ಗೆದ್ರೆ ಮುಂಬೈ ಎಂಟ್ರಿಯಂತೂ ಪಕ್ಕಾ.
ಇದನ್ನೂ ಓದಿ: ಆರ್ಆರ್ ವಿರುದ್ಧ ಗೆದ್ದ ಬೆನ್ನಲ್ಲೇ ಆರ್ಸಿಬಿಗೆ ಮತ್ತೊಂದು ಖುಷಿ ಸುದ್ದಿ; ಫ್ಯಾನ್ಸ್ ಖುಷ್..!
ಪವರ್ಫುಲ್ ಪಂಜಾಬ್ನ ತಡಿಯೋದು ಕಷ್ಟ
ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಘರ್ಜಿಸ್ತಾ ಇರೋ ಪಂಜಾಬ್ ಲಯನ್ಸ್ ಬೊಂಬಾಟ್ ಆಡವಾಡ್ತಿದೆ. ಆಡಿದ ಪಂದ್ಯಗಳಲ್ಲಿ 5ರಲ್ಲಿ ಗೆದ್ದು 3 ಪಂದ್ಯ ಸೋತಿದೆ. 10 ಪಾಯಿಂಟ್ಸ್ ಜೊತೆಗೆ ಪಾಯಿಂಟ್ಸ್ ಟೇಬಲ್ನಲ್ಲಿ 5ನೇ ಸ್ಥಾನದಲ್ಲಿರೋ ಪಂಜಾಬ್ನ ಕಡೆಗಣಿಸುವಂತೆ ಇಲ್ಲ. ಉಳಿದಿರೋ 6 ಪಂದ್ಯಗಳಲ್ಲಿ 4 ಗೆದ್ರೆ ಪ್ಲೇ ಆಫ್ ಟಿಕೆಟ್ಗಿಟ್ಟಿಸಿಕೊಳ್ಳಲಿದೆ. ಸದ್ಯಕ್ಕಿರೋ ತಂಡದ ಆಟ ನೋಡಿದ್ರೆ ಇದೇನೂ ಕಷ್ಟದ ವಿಚಾರವಲ್ಲ.
ನಂಬರ್ ಗೇಮ್ನಲ್ಲಿ ಲಕ್ನೋಗೆ ಲಕ್ ಖುಲಾಯಿಸುತ್ತಾ?
ಪಾಯಿಂಟ್ಸ್ ಟೇಬಲ್ನಲ್ಲಿ 6ನೇ ಸ್ಥಾನದಲ್ಲಿರೋ ಲಕ್ನೋ ಸೂಪರ್ ಜೈಂಟ್ಸ್ಗೂ ಇನ್ನೂ ಚಾನ್ಸ್ ಇದೆ. 9 ಪಂದ್ಯಗಳಲ್ಲಿ 5 ಗೆದ್ದು 4ರಲ್ಲಿ ಸೋತಿರೋ ಲಕ್ನೋ ಸೂಪರ್ ಜೈಂಟ್ಸ್ ಅಕೌಂಟ್ನಲ್ಲಿ 10 ಪಾಯಿಂಟ್ಸ್ ಇದೆ. ಉಳಿದ 5 ಪಂದ್ಯಗಳ ಪೈಕಿ ಇನ್ನು 4 ಪಂದ್ಯಗಳನ್ನ ಭರ್ಜರಿಯಾಗಿ ಗೆದ್ದು ರನ್ರೇಟ್ ಹೆಚ್ಚಿಸಿಕೊಂಡ್ರೆ ಲಕ್ನೋಗೂ ಪ್ಲೇ ಆಫ್ ಡೋರ್ ತೆರೆಯಲಿದೆ. ಇನ್ಕನ್ಸಿಸ್ಟೆಂಟ್ ಪರ್ಫಾಮೆನ್ಸ್ ನೀಡ್ತಿರೋ ಲಕ್ನೋಗೆ ಸ್ವಲ್ಪ ಲಕ್ ಬೇಕಿದೆ.
ಸೀಸನ್ನಲ್ಲಿ ಹೀನಾಯ ಪರ್ಫಾಮೆನ್ಸ್ ನೀಡಿರೋ ರಾಜಸ್ಥಾನ್ ರಾಯಲ್ಸ್, ಚೆನ್ನೈ ಸೂಪರ್ ಕಿಂಗ್ಸ್ ಕಥೆ ಬಹುತೇಕ ಮುಗಿದಿದೆ. ಹಾಲಿ ಚಾಂಪಿಯನ್ ಕೊಲ್ಕತ್ತಾ ನೈಟ್ ರೈಡರ್ಸ್, ಸನ್ರೈಸರ್ಸ್ ಹೈದ್ರಾಬಾದ್ ಪಾಲಿಗೆ ಇನ್ನೂ ಪ್ಲೇ ಆಫ್ ಡೋರ್ ಮುಚ್ಚಿಲ್ಲ. ಮುಂದಿನ ಎಲ್ಲಾ ಪಂದ್ಯಗಳನ್ನೂ ಗೆದ್ದರೆ ಚಾನ್ಸ್ ಇದೆ. ಜೊತೆಗೆ ರನ್ರೇಟ್ ಕಡೆಗೆ ಗಮನ ಹರಿಸಬೇಕಿದೆ.
ಇದನ್ನೂ ಓದಿ: ನಿನ್ನೆಯೂ ಕೋಪಿಸಿಕೊಂಡ ವಿರಾಟ್ ಕೊಹ್ಲಿ.. ಕೈಮುಗಿದು ಆಕ್ರೋಶ ವ್ಯಕ್ತಪಡಿಸಿದ್ದು ಯಾರಿಗೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್