/newsfirstlive-kannada/media/post_attachments/wp-content/uploads/2025/04/Bumrah_RCB.jpg)
2025ರ ಐಪಿಎಲ್ ಸೀಸನ್- 18 ಕೊನೆ ಹಂತಕ್ಕೆ ಬಂದಿದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಹಾಗೂ ಲಕ್ನೋ ತಂಡದ ನಡುವಿನ ಇಂದಿನ ಪಂದ್ಯದೊಂದಿಗೆ ಲೀಗ್ ಪಂದ್ಯಗಳು ಕೊನೆಯಾಗಲಿವೆ. ಇನ್ನೆನಿದ್ದರೂ ಪ್ಲೇ ಆಫ್ ಮ್ಯಾಚ್ಗಳು ನಡೆಯಲಿವೆ. 2008ರಿಂದ ಇಲ್ಲಿವರೆಗೆ ಅತಿ ಹೆಚ್ಚು ಬಾರಿ ಪ್ಲೇ ಆಫ್ಗೆ ಹೋಗಿರುವ ಐಪಿಎಲ್ ಟೀಮ್ ಯಾವುದು?.
ಐಪಿಎಲ್ನಲ್ಲಿ ಇದುವರೆಗೂ ಒಟ್ಟು 18 ಸೀಸನ್ಗಳು ನಡೆದಿವೆ. ಈ 18 ಸೀಸನ್ಗಳಲ್ಲಿ ಅತಿ ಹೆಚ್ಚು ಬಾರಿ ಪ್ಲೇ ಆಫ್ಗೆ ಹೋಗಿರುವ ತಂಡ ಯಾವುದು ಎನ್ನುವುದು ಅಭಿಮಾನಿಗಳಲ್ಲಿ ಕುತೂಹಲ ಸಾಮಾನ್ಯವಾಗಿ ಇರುತ್ತದೆ. ಸದ್ಯ ಈ ಕುತೂಹಲಕ್ಕೆ ಇಲ್ಲಿ ಉತ್ತರ ಇದೆ. ನೀವು ಅಂದುಕೊಂಡಂತೆ ಪ್ಲೇ ಆಫ್ಗೆ ಹೆಚ್ಚು ಬಾರಿ ಎಂಟ್ರಿ ಕೊಟ್ಟಿರುವ ತಂಡ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಲ್ಲವೇ ಅಲ್ಲ.
ಆರ್ಬಿಸಿಯ ಬದ್ಧವೈರಿ ಎಂದೇ ಕರೆಯಲಾಗುವ ಚೆನ್ನೈ ಸೂಪರ್ ಕಿಂಗ್ಸ್, ಇಡೀ ಐಪಿಎಲ್ ಇತಿಹಾಸದಲ್ಲಿ ಹೆಚ್ಚು ಬಾರಿ ಪ್ಲೇ ಆಫ್ಗೆ ಎಂಟ್ರಿಕೊಟ್ಟ ತಂಡವಾಗಿದೆ. ಇದುವರೆಗೆ 18 ಸೀಸನ್ಗಳಲ್ಲಿ ಸಿಎಸ್ಕೆ ಒಟ್ಟು 12 ಬಾರಿ ಪ್ಲೇ ಆಫ್ಗೆ ಹೋಗಿದೆ. 2 ವರ್ಷ ಬ್ಯಾನ್ನಿಂದ ಐಪಿಎಲ್ ಆಡಿಲ್ಲ. 12 ಪ್ಲೇ ಆಫ್ಗಳಲ್ಲಿ 10 ಬಾರಿ ಫೈನಲ್ಗೆ ಹೋಗಿದ್ದು ಇದರಲ್ಲಿ 5 ಬಾರಿ ಟ್ರೋಫಿಗೆ ಮುತ್ತಿಕ್ಕಿದೆ.
ಚೆನ್ನೈ ನಂತರದ ಸ್ಥಾನದಲ್ಲಿ ಬೆಂಗಳೂರು ತಂಡ ಇಲ್ಲ. ಬದಲಾಗಿ ಮುಂಬೈ ಇಂಡಿಯನ್ಸ್ ಇದೆ. 18 ಸೀಸನ್ಗಳಲ್ಲಿ ಈ ಸಲನೂ (2025) ಸೇರಿ ಮುಂಬೈ ಇಂಡಿಯನ್ಸ್ 11 ಬಾರಿ ಪ್ಲೇ ಆಫ್ಗೆ ಬಂದಿದ್ದು ಇದರಲ್ಲಿ 7 ಬಾರಿ ರೋಹಿತ್ ಶರ್ಮಾ ನೇತೃತ್ವದಲ್ಲಿ ಎನ್ನುವುದು ಗಮನಾರ್ಹವಾಗಿದೆ. 2010ರಲ್ಲಿ ಫೈನಲ್ ಆಡಿದ್ದ ಮುಂಬೈ ಇದಾದ ಮೇಲೆ 2014 ರಿಂದ 2023ರವರೆಗೆ ಉತ್ತಮ ಸಾಧನೆ ಮಾಡಿದೆ. ಇದರಲ್ಲಿ ಒಟ್ಟು 5 ಟ್ರೋಫಿ ತನ್ನದಾಗಿಸಿಕೊಂಡಿದೆ.
ಇದನ್ನೂ ಓದಿ:RCBಗೆ ಗುಡ್ನ್ಯೂಸ್; ವಾಪಸ್ ಬಂದ ಬಲಿಷ್ಠ ಪ್ಲೇಯರ್.. ತಂಡಕ್ಕೆ ಬಂತು ಆನೆಬಲ
ಚೆನ್ನೈ, ಮುಂಬೈ ಆದ ಮೇಲೆ ನೀವು ಅಂದುಕೊಂಡಂತೆ ಆರ್ಸಿಬಿ ಸ್ಥಾನ ವಿದೆ. ಪ್ಲೇ ಆಫ್ಗೆ ಹೆಚ್ಚು ಬಾರಿ ಎಂಟ್ರಿಕೊಟ್ಟ 3ನೇ ತಂಡವಾಗಿ ಆರ್ಸಿಬಿ ಇದೆ. ಇದುವರೆಗೆ ಆರ್ಸಿಬಿ ಒಟ್ಟು 10 ಬಾರಿ ಪ್ಲೇ ಆಫ್ಗೆ ಬಂದಿದೆ. ಇದರಲ್ಲಿ ಮೂರು ಬಾರಿ ಅಂದರೆ 2009, 2011 ಹಾಗೂ 2016ರಲ್ಲಿ ಫೈನಲ್ ಪಂದ್ಯ ಆಡಿ ಸೋತು ಹೋಗಿ ಕೊಂಚದರಲ್ಲೇ ಟ್ರೋಫಿಯನ್ನು ಕಳೆದುಕೊಂಡಿದೆ. ಈ ಮೂರು ಫೈನಲ್ನಲ್ಲಿ ಡೆಕ್ಕನ್ ಚಾರ್ಜಸ್, ಚೆನ್ನೈ ಹಾಗೂ ಹೈದ್ರಾಬಾದ್ ವಿರುದ್ಧ ಕ್ರಮವಾಗಿ ಆರ್ಸಿಬಿ ಸೋತು, ಕಪ್ ಆಸೆ ಕೈ ಬಿಟ್ಟಿತ್ತು.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ