/newsfirstlive-kannada/media/post_attachments/wp-content/uploads/2025/04/KOHLI_RCB.jpg)
ಸೀಸನ್-18ರ ಐಪಿಎಲ್ ಮರು ಆರಂಭಕ್ಕೆ ಕೌಂಟ್ಡೌನ್ ಶುರುವಾಗ್ತಿದೆ. ಪ್ಲೇ ಆಫ್ ಲೆಕ್ಕಾಚಾರಗಳ ಚರ್ಚೆಯ ಬಿಸಿ ಕಾವೇರುತ್ತಿದೆ. ಮರು ಆಯೋಜನೆಯ ಐಪಿಎಲ್ನಲ್ಲಿ ಶುಭಾರಂಭ ಮಾಡೋ ಲೆಕ್ಕಾಚಾರದಲ್ಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, 2ನೇ ಹಂತದ ಐಪಿಎಲ್ನಲ್ಲೂ ಬೊಂಬಾಟ್ ಆಡೋ ವಿಶ್ವಾಸದಲ್ಲೇ ರಣರಂಗಕ್ಕಿಳಿಯುತ್ತಿದೆ. ಐಪಿಎಲ್ನ ಅಖಾಡಕ್ಕೆ ರೀ ಎಂಟ್ರಿ ಕೊಡುತ್ತಿರುವ ಆರ್ಸಿಬಿಗೆ ಟಾರ್ಗೆಟ್, ಪ್ಲೇ ಆಫ್ ಮಾತ್ರವಲ್ಲ.
ಆರ್ಸಿಬಿ ಟಾರ್ಗೆಟ್ ಟಾಪ್-2..
ಪ್ರಸಕ್ತ ಆವೃತ್ತಿಯಲ್ಲಿ ಸಾಲಿಡ್ ಆಟವಾಡ್ತಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ಲೇ ಆಫ್ ಪ್ರವೇಶಕ್ಕೆ ತುದಿಗಾಲಲ್ಲಿ ನಿಂತಿದೆ. 11ರ ಪೈಕಿ 8 ಮ್ಯಾಚ್ ಗೆದ್ದಿರುವ ಆರ್ಸಿಬಿ, ಇನ್ನೊಂದು ಮ್ಯಾಚ್ ಗೆದ್ದರೆ ಸಾಕು ಅಧಿಕೃತವಾಗಿ ಪ್ಲೇ ಆಫ್ಗೆ ಎಂಟ್ರಿ ನೀಡಲಿದೆ. ಆರ್ಸಿಬಿ ಆಟಗಾರರ ಒಗ್ಗಟ್ಟಿನ ಆಟ ನೋಡಿದ್ರೆ ಪ್ಲೇ ಆಫ್ ಸ್ಥಾನ ಮಿಸ್ಸಾಗುವ ಚಾನ್ಸೇ ಇಲ್ಲ. ಆರ್ಸಿಬಿ ಟಾರ್ಗೆಟ್ ಜಸ್ಟ್ ಪ್ಲೇ ಆಫ್ ಎಂಟ್ರಿ ಅಲ್ಲ. ಆರ್ಸಿಬಿ ಟಾರ್ಗೆಟ್ ಅಂಕಪಟ್ಟಿಯ ಟಾಪ್-2 ಪ್ಲೇಸ್.
ಇದನ್ನೂ ಓದಿ: ಅಭಿಮಾನಿಗಳ ಆತಂಕ ದೂರ, ಆರ್ಸಿಬಿಗೆ ಬಂತು ಆನೆಬಲ.. ವಿಡಿಯೋ ಹಂಚಿಕೊಂಡ ಫ್ರಾಂಚೈಸಿ
ಆರ್ಸಿಬಿ ಮಾಸ್ಟರ್ ಪ್ಲಾನ್
ಆರ್ಸಿಬಿ ಪ್ಲೇ ಆಫ್ ಕಷ್ಟವೇನಿಲ್ಲ ನಿಜ. ಆದ್ರೆ ಆರ್ಸಿಬಿ ಟಾರ್ಗೆಟ್ ಜಸ್ಟ್ ಪ್ಲೇ ಆಫ್ ಮಾತ್ರವಾಗಿಲ್ಲ. ಪಾಯಿಂಟ್ ಟೇಬಲ್ನ ಅಗ್ರ ಎರಡು ಸ್ಥಾನಗಳಾಗಿವೆ. ಹೀಗಾಗಿ ಮುಂದಿನ ಮೂರು ಪಂದ್ಯಗಳನ್ನ ಗೆಲ್ಲಲು ಆರ್ಸಿಬಿ ಪಣತೊಟ್ಟಿದೆ. ಇದಕ್ಕಾಗಿಯೇ ಗೇಮ್ಪ್ಲಾನ್ ಆ್ಯಂಡ್ ಸ್ಟ್ರಾಟರ್ಜಿ ರೂಪಿಸಿ ಹೋರಾಟ ನಡೆಸ್ತಿದೆ. ಇದಕ್ಕೆ ಕಾರಣ ಐಪಿಎಲ್ ಫೈನಲ್ ಸಿನಾರಿಯೋ.
ಟೇಬಲ್ ಟಾಪರ್ಸ್ಗೆ ಬಿಗ್ ಅಡ್ವಾಂಟೇಜ್..!
ಪ್ಲೇ ಆಫ್ನಲ್ಲಿ ಯಾರಿಗೆ ಅಡ್ವಾಂಟೇಜ್ ಇರುತ್ತೋ ಇಲ್ವೋ. ಪಾಯಿಂಟ್ ಟೇಬಲ್ನಲ್ಲಿ ಅಗ್ರ ತಂಡಗಳಿಗೆ ಮಾತ್ರ ಅಡ್ವಾಂಟೇಜ್ ಇರುತ್ತದೆ. ಈ ಟೇಬಲ್ ಟಾಪರ್ಸ್ ಒಂದು ಪಂದ್ಯ ಸೋತು, ಮತ್ತೊಂದು ಪಂದ್ಯ ಗೆದ್ದರೂ ಫೈನಲ್ಗೆ ಎಂಟ್ರಿ ನೀಡುವ ಚಾನ್ಸ್ ಇರುತ್ತೆ. ಇದನ್ನ ಎನ್ಕ್ಯಾಶ್ ಮಾಡಿಕೊಳ್ಳುವುದೇ ಆರ್ಸಿಬಿ ತಂಡದ ಅಜೆಂಡಾ.
ಪ್ಲೇ ಆಫ್ ಟು ಫೈನಲ್ ಹೇಗಿರುತ್ತೆ?
ಟೇಬಲ್ ಟಾಪ್-2 ತಂಡಗಳು ಮೊದಲ ಕ್ವಾಲಿಫೈಯರ್ನಲ್ಲಿ ಸೆಣಸಾಡಲಿವೆ. ಇಲ್ಲಿ ಗೆದ್ದ ತಂಡ ನೇರವಾಗಿ ಫೈನಲ್ಗೆ ಎಂಟ್ರಿ ನೀಡುತ್ತೆ. ಕ್ವಾಲಿಫೈಯರ್-1ರಲ್ಲಿ ಸೋತ ತಂಡಕ್ಕೆ ಕ್ವಾಲಿಫೈಯರ್-2ನಲ್ಲಿ ಎಲಿಮಿನೇಟರ್ನಲ್ಲಿ ಗೆದ್ದ ತಂಡದ ಎದುರು ಆಡೋಕೆ 2ನೇ ಅವಕಾಶ ಸಿಗುತ್ತೆ. ಈ ಅವಕಾಶದಲ್ಲಿ ಗೆದ್ದು ಫೈನಲ್ಗೆ ಎಂಟ್ರಿ ನೀಡಬಹುದಾಗಿದೆ.
ಇದನ್ನೂ ಓದಿ: RCBಗೆ ಸ್ಫೋಟಕ ಬ್ಯಾಟರ್ಸ್, ಆಲ್ರೌಂಡರ್ಸ್ ಕಮ್ಬ್ಯಾಕ್.. ಮತ್ತೆ ಬೆಂಗಳೂರು ತಂಡ ಬಲಿಷ್ಠ
ಪಾಯಿಂಟ್ ಟೇಬಲ್ನ 3 ಹಾಗೂ 4ನೇ ತಂಡಗಳಿಗೆ ಇಂಥ ಅಡ್ವಾಂಟೇಜ್ ಇಲ್ಲ. ಎಲಿಮಿನೇಟರ್ನಲ್ಲಿ ಸೋತವರು ಟೂರ್ನಿಯಿಂದ ಔಟ್ ಆಗ್ತಾರೆ. ಗೆದ್ದರೆ ಕ್ವಾಲಿಫೈಯರ್ 2ಗೆ ಅರ್ಹತೆ ಗಿಟ್ಟಿಸ್ತಾರೆ. ಅಲ್ಲಿ ಮತ್ತೆ ಗೆದ್ದು, ಬಳಿಕ ಫೈನಲ್ ಗೆದ್ದರೆ ಮಾತ್ರ ಕಪ್ ಸಿಗುತ್ತೆ. ಟೇಬಲ್ ಟಾಪರ್ಗಳಾದ್ರೆ, ಮೊದಲ ಪಂದ್ಯದಲ್ಲಿ ಸೋತ್ರೂ, ನಂತರದ ಪಂದ್ಯದಲ್ಲಿ ತಪ್ಪುಗಳನ್ನು ತಿದ್ದಿಕೊಳ್ಳಬಹುದು. ಮತ್ತೆ ಕಮ್ಬ್ಯಾಕ್ಗೆ ಅವಕಾಶ ಇರುತ್ತೆ. ಹೀಗಾಗಿಯೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಕಣ್ಣು ಟಾಪ್-2 ಮೇಲಿದೆ.
ಸುಲಭ ಇಲ್ಲ ಆರ್ಸಿಬಿಯ ಟಾಪ್-2 ಕನಸು
ಮೊದಲ ಹಂದದಲ್ಲಿ ಅದ್ಭುತ ಆಟವಾಡಿರುವ ಆರ್ಸಿಬಿ, ಪಾಯಿಂಟ್ ಟೇಬಲ್ನ ಅಗ್ರ ಎರಡು ಸ್ಥಾನಗಳ ಮೇಲೆ ಕಣ್ಣಿಟ್ಟಿದೆ ನಿಜ. ಈ ಸ್ಥಾನ ಉಳಿಸಿಕೊಳ್ಳುವುದು ನಿಜಕ್ಕೂ ಸುಲಭದಿಲ್ಲ. ಈಗಾಗಲೇ ನಂಬರ್.1 ಸ್ಥಾನದಲ್ಲಿರುವ ಗುಜರಾತ್ ಟೈಟನ್ಸ್, ಆರ್ಸಿಬಿಯಷ್ಟೇ ಪಂದ್ಯ ಗೆದ್ದಿದೆ. ರನ್ರೇಟ್ ಹೆಚ್ಚಿದೆ. ಇನ್ನು 3ನೇ ಸ್ಥಾನದಲ್ಲಿರುವ ಪಂಜಾಬ್ ಸಖತ್ ಸ್ಟ್ರಾಂಗ್ ಇದೆ. ಈ ಮೂರು ತಂಡಗಳ ಗುರಿ ಒಂದೇ.. ಅದೇ ಟಾಪ್-2 ಕಾಯ್ದುಕೊಳ್ಳುವುದು. ಹೀಗಾಗಿ ಆರ್ಸಿಬಿ ಟಾಪ್-2ನಲ್ಲಿ ಉಳಿಯಬೇಕಾದ್ರೆ, ಇನ್ನುಳಿದ ಮೂರಕ್ಕೆ 2 ಮ್ಯಾಚ್ ಗೆಲ್ಲುವುದರ ಜೊತೆಗೆ ರನ್ರೇಟ್ ಉಳಿಸಿಕೊಳ್ಳಬೇಕು. ಆಗಷ್ಟೇ ಪಾಯಿಂಟ್ ಟೇಬಲ್ನ ಟಾಪ್ನಲ್ಲಿರುವ ಸಾಧ್ಯ.
ಇದನ್ನೂ ಓದಿ: ಕನ್ನಡಿಗ ಪಡಿಕ್ಕಲ್ RCB ತಂಡದಲ್ಲಿ ಆಡ್ತಾರಾ.. ಮಯಾಂಕ್ ಅಗರ್ವಾಲ್ಗೆ ಎಷ್ಟು ಕೋಟಿ ಹಣ ಕೊಡಲಾಗಿದೆ?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್