ಅಗ್ರ ಸ್ಥಾನದಲ್ಲಿ 2 ತಂಡಗಳದ್ದೇ ದರ್ಬಾರ್​.. ಪಾಯಿಂಟ್ಸ್​ ಟೇಬಲ್​​ನಲ್ಲಿ ಸುಲ್ತಾನರ ಪೈಪೋಟಿ ಹೇಗಿದೆ..?

author-image
Ganesh
Updated On
RCB ಫ್ಯಾನ್ಸ್‌ಗೆ ಡಬಲ್ ಖುಷಿಯ ಸುದ್ದಿ.. ಮುಂದಿನ ವಾರದಿಂದ ಮತ್ತೆ IPL ಪಂದ್ಯಗಳು ಆರಂಭ?
Advertisment
  • ನಾಳೆಯಿಂದ ಐಪಿಎಲ್​ನ ಎರಡನೇ ಇನ್ನಿಂಗ್ಸ್ ಆರಂಭ
  • ಕೋಲ್ಕತ್ತ ತಂಡವನ್ನು ಎದುರಿಸಲಿರುವ ನಮ್ಮ ಆರ್​ಸಿಬಿ
  • ಕೊನೆಯ ಸ್ಥಾನದಲ್ಲಿರುವ ಚೆನ್ನೈ ಸೂಪರ್ ಕಿಂಗ್ಸ್

ನಾಳೆಯಿಂದ ಐಪಿಎಲ್​​ನ ಎರಡನೇ ಇನ್ನಿಂಗ್ಸ್​​ನ ಮುಂದುವರಿದ ಭಾಗ ಆರಂಭವಾಗಲಿದೆ. 10 ತಂಡಗಳ ಪೈಕಿ ನಾಲ್ಕು ತಂಡಗಳು ಈಗಾಗಲೇ ಐಪಿಎಲ್​ ಟ್ರೋಫಿಯ ಕನಸ್ಸನ್ನು ಬಿಟ್ಟಿವೆ. ಇನ್ನುಳಿದ 6 ತಂಡಗಳು ಟ್ರೋಫಿಯ ಸಮೀಪಕ್ಕೆ ಹತ್ತಿರ ಹತ್ತಿರ ಬರುತ್ತಿದ್ದು, ಅದನ್ನು ಪಡೆಯಬೇಕು ಅಂದರೆ ಮುಂದಿನ ಎಲ್ಲಾ ಪಂದ್ಯಗಳಲ್ಲೂ ಮಾಡು ಇಲ್ಲವೇ ಮಡಿ ಎಂಬ ಹೋರಾಟ ಮಾಡಬೇಕಿದೆ.

ಐಪಿಎಲ್ ಪಾಯಿಂಟ್ಸ್ ಟೇಬಲ್ ಪ್ರಕಾರ, 10 ತಂಡಗಳಲ್ಲಿ ನಾಲ್ಕು ತಂಡಗಳು ಮಾತ್ರ ಪ್ಲೇ-ಆಫ್​ಗೆ ಅರ್ಹತೆ ಪಡೆಯಲಿವೆ. ಅವುಗಳಲ್ಲಿ ಪ್ರಮುಖವಾಗಿ ಗುಜರಾತ್ ಟೈಟನ್ಸ್ 11 ಪಂದ್ಯಗಳನ್ನ ಆಡಿ, 8 ರಲ್ಲಿ ಗೆದ್ದು, 16 ಅಂಕಗಳೊಂದಿಗೆ ನೆಟ್​ ರನ್​ ರೇಟ್ ಆಧಾರದ ಮೇಲೆ ಮೊದಲ ಸ್ಥಾನದಲ್ಲಿದೆ. ಇನ್ನು ಆರ್​ಸಿಬಿ ಕೂಡ 11 ಪಂದ್ಯಗಳಲ್ಲಿ 8 ಪಂದ್ಯ ಗೆದ್ದು ಎರಡನೇ ಸ್ಥಾನವನ್ನು ಅಲಂಕರಿಸಿದೆ. ಆ ಮೂಲಕ ಈ ಎರಡು ತಂಡಗಳು ಪಾಯಿಂಟ್ಸ್​ ಟೇಬಲ್​​ನಲ್ಲಿ ಸದ್ಯ ದರ್ಬಾರ್ ಮಾಡ್ತಿವೆ.

ಇದನ್ನೂ ಓದಿ: ಅಭಿಮಾನಿಗಳ ಆತಂಕ ದೂರ, ಆರ್​ಸಿಬಿಗೆ ಬಂತು ಆನೆಬಲ.. ವಿಡಿಯೋ ಹಂಚಿಕೊಂಡ ಫ್ರಾಂಚೈಸಿ

publive-image

ಅಂತೆಯೇ 11 ರಲ್ಲಿ 7 ಪಂದ್ಯ ಗೆದ್ದಿರುವ ಪಂಜಾಬ್ ಕಿಂಗ್ಸ್ ಮೂರನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 12 ಪಂದ್ಯಗಳಲ್ಲಿ 7 ಮ್ಯಾಚ್ ಗೆದ್ದು ನಾಲ್ಕನೇ ಸ್ಥಾನದಲ್ಲಿದೆ. ಇನ್ನು ಪಂಜಾಬ್, ಮುಂಬೈ ಇಂಡಿಯನ್ಸ್​ಗೆ ತೀವ್ರ ಪೈಪೋಟಿ ನೀಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್, 11 ಪಂದ್ಯಗಳಲ್ಲಿ ಆರು ಮ್ಯಾಚ್ ಗೆದ್ದು ಐದನೇ ಸ್ಥಾನದಲ್ಲಿದೆ.

ಇನ್ನುಳಿದಂತೆ ಕೋಲ್ಕತ್ತ ನೈಟ್ ರೈಡರ್ಸ್ ಆರನೇ ಸ್ಥಾನದಲ್ಲಿದ್ದರೆ, ಎಲ್​ಎಸ್​ಜಿ 7ನೇ ಸ್ಥಾನದಲ್ಲಿದೆ. ಇನ್ನು ಸನ್​ ರೈಸರ್ಸ್​​ ಹೈದರಾಬಾದ್​ 8ನೇ ಮತ್ತು ರಾಜಸ್ಥಾನ್ ರಾಯಲ್ಸ್ 9ನೇ ಸ್ಥಾನದಲ್ಲಿದೆ. ಈ ಬಾರಿ ಧೋನಿ ನೇತೃತ್ವದಲ್ಲಿ ಚೆನ್ನೈ ಸೂಪರ್​ ಕಿಂಗ್ಸ್​ ಕೊನೆಯ ಸ್ಥಾನದಲ್ಲಿದೆ.

ಇದನ್ನೂ ಓದಿ: KKR ವಿರುದ್ಧ ಚಿನ್ನಸ್ವಾಮಿಯಲ್ಲಿ ಆರ್​ಸಿಬಿಗೆ ಕಹಿ ನೆನಪು.. ಗೆದ್ದಿದ್ದು ಯಾವಾಗ ಗೊತ್ತಾ..?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment