/newsfirstlive-kannada/media/post_attachments/wp-content/uploads/2025/04/KOHLI-RCB-1.jpg)
ಚಂಡಿಗಡದಲ್ಲಿ ನಡೆದ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಆರ್ಸಿಬಿಐ 7 ವಿಕೆಟ್ಗಳಿಂದ ಮಣಿಸಿದೆ. ಆ ಮೂಲಕ ಚಿನ್ನಸ್ವಾಮಿಯಲ್ಲಿ ಆಗಿದ್ದ ಅವಮಾನಕ್ಕೆ ಸೇಡು ತೀರಿಸಿಕೊಂಡಿದೆ.
ಭರ್ಜರಿ ಗುಡ್ನ್ಯೂಸ್
ಪಂಜಾಬ್ ವಿರುದ್ಧ ಗೆಲ್ತಿದ್ದಂತೆಯೇ ಆರ್ಸಿಬಿ ಅಂಕಪಟ್ಟಿಯಲ್ಲಿ ಬಡ್ತಿ ಪಡೆದುಕೊಂಡಿದೆ. ಐದನೇ ಸ್ಥಾನಕ್ಕೆ ಕುಸಿದ್ದಿದ್ದ ಆರ್ಸಿಬಿ, ದಿಢೀರ್ ಅಂತಾ ಮೂರನೇ ಸ್ಥಾನಕ್ಕೆ ಜಿಗಿದಿದೆ. ಇನ್ನು, ನಿನ್ನೆ ಸೋತಿರುವ ಪಂಜಾಬ್ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಒಟ್ಟು 8 ಪಂದ್ಯಗಳನ್ನು ಆಡಿರುವ ಆರ್ಸಿಬಿ, ಐದು ಪಂದ್ಯಗಳನ್ನು ಗೆದ್ದು, ರನ್ರೇಟ್ ಆಧಾರದ ಮೇಲೆ ಮೂರನೇ ಸ್ಥಾನ ಅಲಂಕರಿಸಿದೆ.
ಇದನ್ನೂ ಓದಿ: ಓಂಪ್ರಕಾಶ್ ಹತ್ಯೆಗೆ ಮೊದಲೇ ಪ್ಲಾನ್.. ಅನುಮಾನ ಹೆಚ್ಚಿಸಿದ ಪತ್ನಿ, ಪುತ್ರಿಯ ಈ ನಡೆ..
ಇನ್ನು 7 ಪಂದ್ಯಗಳಲ್ಲಿ ಐದು ಗುಜರಾತ್ ಟೈಟಾನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಕ್ರಮವಾಗಿ ಮೊದಲ ಎರಡು ಸ್ಥಾನದಲ್ಲಿವೆ. ಪಂತ್ ನೇತೃತ್ವದ ಎಲ್ಎಸ್ಜಿ ಐದನೇ ಸ್ಥಾನದಲ್ಲಿದ್ದರೆ, ಮುಂಬೈ ನಾಲ್ಕು ಪಂದ್ಯ ಗೆದ್ದು ಆರನೇ ಸ್ಥಾನದಲ್ಲಿದೆ. ಕೆಕೆಆರ್ 7, ರಾಜಸ್ಥಾನ್ ರಾಯಲ್ಸ್ 8, ಸನ್ ರೈಸರ್ಸ್ ಹೈದ್ರಾಬಾದ್ 9 ಹಾಗೂ ಚೆನ್ನೈ ಸೂಪರ್ ಕಿಂಗ್ಸ್ 10ನೇ ಸ್ಥಾನದಲ್ಲಿದೆ.
ಇದನ್ನೂ ಓದಿ: ಪಂಜಾಬ್ಗೆ ನುಗ್ಗಿ ಹೊಡೆದ RCB.. ಅಭಿಮಾನಿಗಳು ಮರೆಯಲಾಗದ 5 ಕ್ಷಣಗಳು..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್