/newsfirstlive-kannada/media/post_attachments/wp-content/uploads/2025/04/RCB-16.jpg)
ಹೋಮ್ಗ್ರೌಂಡ್ ಚಿನ್ನಸ್ವಾಮಿಯಲ್ಲಿ ಆಡಿದ ಮೊದಲ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ಗಿಳಿದ ಆರ್ಸಿಬಿ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಗುಜರಾತ್ ಟೈಟನ್ಸ್ ಬೌಲರ್ಗಳ ಟೈಟ್ ಸ್ಪೆಲ್ ಮುಂದೆ ಆರ್ಸಿಬಿಯ ಸೂಪರ್ ಸ್ಟಾರ್ ಆಟಗಾರರೆಲ್ಲಾ ಪೆವಿಲಿಯನ್ ಪರೇಡ್ ನಡೆಸಿದ್ರು. ಹೋಮ್ಗ್ರೌಂಡ್ನಲ್ಲಿ ಬೆಂಗಳೂರು ಬಾಯ್ಸ್ ಪರದಾಡಿದ್ರೆ ಗುಜರಾತ್ ಟೈಟನ್ಸ್ ಗೆದ್ದು ಬೀಗಿದರು.
ಇನ್ನು ಆರ್ಸಿಬಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ. ಮೂರು ಪಂದ್ಯಗಳಲ್ಲಿ ಗೆದ್ದುಕೊಂಡಿರುವ ಆರ್ಸಿಬಿ, ನಾಲ್ಕು ಅಂಕದೊಂದಿಗೆ ಮೂರನೇ ಸ್ಥಾನದಲ್ಲಿದೆ. ಇನ್ನು, ಎರಡು ಪಂದ್ಯಗಳಲ್ಲಿ ಎರಡನ್ನೂ ಗೆದ್ದಿರುವ ಶ್ರೇಯಸ್ ಅಯ್ಯರ್ ಪಡೆ, 4 ಅಂಕಗಳೊಂದಿಗೆ ನೆಟ್ ರನ್ ರೇಟ್ ಆಧಾರದ ಮೇಲೆ ಮೊದಲ ಸ್ಥಾನದಲ್ಲಿದೆ. ಅದೇ ರೀತಿ ಎರಡೂ ಪಂದ್ಯಗಳಲ್ಲಿ ಗೆದ್ದಿರುವ ಡೆಲ್ಲಿ ಹುಡುಗರು ಎರಡನೇ ಸ್ಥಾನದಲ್ಲಿದ್ದಾರೆ.
ಇದನ್ನೂ ಓದಿ: 6, 6, 6, 6, 6! ಸಿರಾಜ್ ಸೇಡಿನ ಅಸ್ತ್ರದ ಮಧ್ಯೆಯೂ ಲಿವಿಂಗ್ಸ್ಟೋನ್ ಸೊಗಸಾದ ಬ್ಯಾಟಿಂಗ್..!
ಇನ್ನು ನಿನ್ನೆ ಆರ್ಸಿಬಿ ವಿರುದ್ಧ ಗೆದ್ದಿರುವ ಗುಜರಾತ್ ಟೈಟನ್ಸ್ ನಾಲ್ಕನೇ ಸ್ಥಾನದಲ್ಲಿದೆ. ಆದರೆ ಆರ್ಸಿಬಿ ನೆಟ್ರನ್ ರೇಟ್ಗಿಂದ ಜಿಟಿ ಹಿಂದಿದೆ. ಐದನೇ ಸ್ಥಾನದಲ್ಲಿ ಮುಂಬೈ ಇಂಡಿಯನ್ಸ್ ಇದ್ದರೆ, ಎಲ್ಎಸ್ಜಿ ಆರನೇ ಸ್ಥಾನದಲ್ಲಿದೆ. ಸಿಎಸ್ಕೆ, ಎಸ್ಆರ್ಹೆಚ್, ರಾಜಸ್ಥಾನ್ ರಾಯಲ್ಸ್, ಕೆಕೆಆರ್ ಕ್ರಮವಾಗಿ ಸ್ಥಾನಗಳನ್ನು ಹಂಚಿಕೊಂಡಿವೆ.
ಮೊದಲ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿದಿರುವ ಆರ್ಸಿಬಿ ಮುಂದಿನ ಎಲ್ಲಾ ಪಂದ್ಯಗಳನ್ನ ಗೆಲ್ಲಬೇಕು. ಇಲ್ಲದಿದ್ದರೆ ಪ್ಲೇ-ಆಫ್ ಹಾದಿ ಕಷ್ಟವಾಗಲಿದೆ. ಹೀಗಾಗಿ ರಜತ್ ಪಾಟೀದಾರ್ ಪಡೆ ಮುಂಬರುವ ಪಂದ್ಯಗಳನ್ನು ಗೆಲ್ಲಲು ಸ್ಟ್ರಾಂಗ್ ಆಗಿ ಕಂಬ್ಯಾಕ್ ಮಾಡಬೇಕಿದೆ.
ಇದನ್ನೂ ಓದಿ: ಮುಂಬೈಗೆ ಬಿಗ್ ಶಾಕ್ ಕೊಟ್ಟ ಜೈಸ್ವಾಲ್.. ಬೇರೆ ತಂಡ ಕೂಡಿಕೊಂಡ ಸ್ಟಾರ್ ಓಪನರ್..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್