/newsfirstlive-kannada/media/post_attachments/wp-content/uploads/2025/05/rcb-10.jpg)
ಐಪಿಎಲ್ನಲ್ಲಿ ಇವತ್ತು ಗುಜರಾತ್ ಟೈಟನ್ಸ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ಸೆಣಸಾಟ ನಡೆಸಲಿವೆ. ಚೆನ್ನೈ ಸೂಪರ್ ಕಿಂಗ್ಸ್ ಈಗಾಗಲೇ ಟೂರ್ನಿಯಿಂದ ಹೊರ ಬಿದ್ದಿರುವ ಹಿನ್ನೆಲೆಯಲ್ಲಿ ಇವತ್ತಿನ ಪಂದ್ಯ ಅದಕ್ಕೆ ಕೇವಲ ಸಾಂಕೇತಿಕವಾಗಿದೆ. ಆದರೆ ಗುಜರಾತ್ ಟೈಟನ್ಸ್ಗೆ ಗೆಲುವು ಅನಿವಾರ್ಯವಾಗಿದೆ.
ಈಗಾಗಲೇ ಪ್ಲೇ-ಆಫ್ ಪ್ರವೇಶ ಮಾಡಿರುವ ಗುಜರಾತ್ ತಂಡ, ಪಾಯಿಂಟ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನದಲ್ಲಿದೆ. ಒಂದು ವೇಳೆ ಇಂದು ಗೆದ್ದರೆ, 18 ಅಂಕಗಳೊಂದಿಗೆ ಮೊದಲ ಸ್ಥಾನವನ್ನು ಮತ್ತಷ್ಟು ಭದ್ರಪಡಿಸಿಕೊಳ್ಳಲಿದೆ. ಒಂದು ವೇಳೆ ಇಂದಿನ ಪಂದ್ಯ ಸೋತರೆ, ಪಾಯಿಂಟ್ಸ್ ಪಟ್ಟಿಯಲ್ಲಿ ಗುಜರಾತ್ ಸ್ಥಾನ ಹಾಗೆಯೇ ಇರಲಿದೆ. ಇದರಿಂದ ಆರ್ಸಿಬಿಗೆ, ಪಾಯಿಂಟ್ಸ್ ಪಟ್ಟಿಯಲ್ಲಿ ಎರಡನೇ ಅಥವಾ ಮೊದಲ ಸ್ಥಾನಕ್ಕೆ ಏರಲು ಅವಕಾಶ ಇದೆ.
ಅದು ಹೇಗೆ ಅಂದರೆ ಆರ್ಸಿಬಿ ಮುಂದೆ ಇನ್ನು ಒಂದು ಪಂದ್ಯ ಇದೆ. ಮೇ 27 ರಂದು ಎಲ್ಎಸ್ಜಿಯನ್ನು ಎದುರಿಸಲಿದೆ. ಆ ಪಂದ್ಯವನ್ನು ಗೆದ್ದರೆ ಆರ್ಸಿಬಿ, 19 ಅಂಕದೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಮುನ್ನಡೆ ಕಾಯ್ದುಕೊಳ್ಳಬಹುದು.
ಇದನ್ನೂ ಓದಿ: SRH ವಿರುದ್ಧ ಸೋಲಿನಿಂದ ಅಂಕಪಟ್ಟಿಯಲ್ಲಿ ಕುಸಿತ.. ಬೆನ್ನಲ್ಲೇ ಆರ್ಸಿಬಿಗೆ ಮತ್ತೊಂದು ಶಾಕ್..!
ಈಗಾಗಲೇ ಎರಡನೇ ಸ್ಥಾನದಲ್ಲಿರುವ ಪಂಜಾಬ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ವಿರುದ್ಧ ಗೆದ್ದರೂ, 19 ಅಂಕದೊಂದಿಗೆ ಮೊದಲ ಸ್ಥಾನ ಅಲಂಕರಿಸುವ ಸಾಧ್ಯತೆ ಇದೆ. ಪಂಜಾಬ್ ಕಿಂಗ್ಸ್ ಮೊದಲ ಸ್ಥಾನಕ್ಕೆ ಬಂದರೂ, ಆರ್ಸಿಬಿಗೆ ಎಲ್ಎಸ್ಜಿ ವಿರುದ್ಧ ಗೆಲುವು ಸಿಕ್ಕರೆ ಸುಲಭವಾಗಿ ಎರಡನೇ ಸ್ಥಾನಕ್ಕೆ ಬರಬಹುದು. ಅಲ್ಲದೇ, ಪಂಜಾಬ ಮುಂಬೈ ಇಂಡಿನ್ಸ್ ವಿರುದ್ಧ ಸೋತರೆ, ಆರ್ಸಿಬಿ ಸುಲಭವಾಗಿ ಮೊದಲ ಸ್ಥಾನದಲ್ಲಿ ನಿಲ್ಲಲಿದೆ. ಆ ಮೂಲಕ ಆರ್ಸಿಬಿ ಫೈನಲ್ ಪ್ರವೇಶಕ್ಕೆ ಎರಡು ಅವಕಾಶವನ್ನು ಪಡೆಯಲಿದೆ.
ಅಂದರೆ ಮೊದಲ ಎರಡು ಸ್ಥಾನಕ್ಕಾಗಿ ಆರ್ಸಿಬಿ, ಪಂಜಾಬ್ ಮತ್ತು ಗುಜರಾತ್ ಟೈಟನ್ಸ್ ತಂಡಗಳು ತೀವ್ರ ಪೈಪೋಟಿ ನಡೆಸ್ತಿವೆ. ಈ ಮೂರು ತಂಡಗಳ ಸೋಲು, ಗೆಲುವಿನ ಆಧಾರದ ಮೇಲೆ ಮೊದಲ ಎರಡು ಸ್ಥಾನಗಳು ಯಾರಿಗೆ ಎಂದು ತಿಳಿಯಲಿದೆ.
ಇದನ್ನೂ ಓದಿ: ಇಂಗ್ಲೆಂಡ್ ಪ್ರವಾಸ.. ಕೊಹ್ಲಿ, ರೋಹಿತ್ ಸ್ಥಾನಕ್ಕೆ ಇಬ್ಬರು ಸ್ಟಾರ್ಗಳ ಆಯ್ಕೆ..! ಯಾರು ಅವರು?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್