/newsfirstlive-kannada/media/post_attachments/wp-content/uploads/2025/03/KOHLI-2-1.jpg)
ಚೆನ್ನೈ ಸೂಪರ್​ ಕಿಂಗ್ಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ಆರ್​ಸಿಬಿಗೆ, ಪ್ಲೇ-ಆಫ್ ಪ್ರವೇಶ ಮಾಡಲು ತುಂಬಾನೇ ಸಹಾಯ ಆಗಲಿದೆ. ನಿನ್ನೆಯ ದಿನ ಸಿಎಸ್​ಕೆ ವಿರುದ್ಧ 50 ರನ್​ಗಳ ಅಂತರದಿಂದ ಗೆಲುವು ದಾಖಲಿಸುತ್ತಿದ್ದಂತೆಯೇ, ಐಪಿಎಲ್ ಪಾಯಿಂಟ್ಸ್​ ಪಟ್ಟಿಯಲ್ಲಿ ಭಾರೀ ಬದಲಾವಣೆ ಆಗಿದೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಟಾಪ್​ನಲ್ಲಿ ಬಂದಿದೆ.
ಎರಡನೇ ಸ್ಥಾನದಲ್ಲಿದ್ದ ಆರ್​ಸಿಬಿ ಮೊದಲ ಸ್ಥಾನಕ್ಕೆ ಬಂದು ಕೂತಿದೆ. ಸತತ ಎರಡು ಪಂದ್ಯಗಳನ್ನು ಗೆದ್ದುಕೊಂಡಿರುವ ಆರ್​ಸಿಬಿ 4 ಅಂಕದೊಂದಿಗೆ ಅಗ್ರಸ್ಥಾನದಲ್ಲಿದೆ. ಇನ್ನು, ಇದುವರೆಗೆ ಆಡಿದ ಎರಡು ಪಂದ್ಯಗಳಲ್ಲಿ ಆರ್​ಸಿಬಿ ಹೊರತುಪಡಿಸಿ ಯಾವ ತಂಡವೂ, ಎರಡೂ ಪಂದ್ಯಗಳನ್ನು ಗೆದ್ದುಕೊಂಡಿಲ್ಲ.
ಇದನ್ನೂ ಓದಿ: CSK ಸೋಲಿಸಿದ್ದು ಆಯ್ತು.. ಆರ್​ಸಿಬಿ ಮುಂದಿನ ಟಾರ್ಗೆಟ್​ ಯಾರು..?
/newsfirstlive-kannada/media/post_attachments/wp-content/uploads/2025/03/RAJAT-2.jpg)
ಒಂದು ಪಂದ್ಯವನ್ನು ಗೆದ್ದಿರುವ ಎಲ್​​ಎಸ್​ಜಿ ಉತ್ತಮ ರನ್​ರೇಟ್​ನೊಂದಿಗೆ ಎರಡನೇ ಸ್ಥಾನದಲ್ಲಿದೆ. ಪಂಜಾಬ್ ಕಿಂಗ್ಸ್​, ಡೆಲ್ಲಿ ಕ್ಯಾಪಿಟಲ್ಸ್, ಎಸ್​ಆರ್​​ಹೆಚ್​, ಕೆಕೆಆರ್​ ಕ್ರಮವಾಗಿ ಮೂರು, ನಾಲ್ಕು, ಐದು, ಆರನೇ ಸ್ಥಾನದಲ್ಲಿವೆ. ಒಂದು ಪಂದ್ಯವನ್ನು ಗೆದ್ದಿರುವ ಸಿಎಸ್​ಕೆ 7ನೇ ಸ್ಥಾನದಲ್ಲಿದ್ದರೆ, ಮುಂಬೈ ಇಂಡಿಯನ್ಸ್ 8, ಗುಜರಾತ್ 9ನೇ ಸ್ಥಾನದಲ್ಲಿದೆ. ಎರಡು ಪಂದ್ಯಗಳನ್ನು ಆಡಿ, ಎರಡರಲ್ಲೂ ಸೋತಿರುವ ರಾಜಸ್ಥಾನ್ ರಾಯಲ್ಸ್ ಕೊನೆಯ ಸ್ಥಾನದಲ್ಲಿದೆ.
ಇನ್ನು ನಿನ್ನೆಯ ಪಂದ್ಯದಲ್ಲಿ ಸಿಎಸ್​ಕೆ ವಿರುದ್ಧ ಭರ್ಜರಿ ಅಂದರೆ 50 ರನ್​ಗಳ ಅಂತರದಲ್ಲಿ ಗೆಲುವು ಸಾಧಿಸಿದೆ. ಟಾಸ್​ ಗೆದ್ದು ಬ್ಯಾಟ್ ಮಾಡಿದ್ದ ಆರ್​ಸಿಬಿ 7 ವಿಕೆಟ್ ಕಳೆದುಕೊಂಡು 196 ರನ್​ಗಳಿಸಿತ್ತು. ಈ ಗುರಿಯನ್ನು ಬೆನ್ನು ಹತ್ತಿದ್ದ ಸಿಎಸ್​ಕೆ 8 ವಿಕೆಟ್ ಕಳೆದುಕೊಂಡು 146 ರನ್​​ಗಳಿಸಿ ಸೋಲಿಗೆ ಶರಣಾಯ್ತು.
ಇದನ್ನೂ ಓದಿ: CSK ವಿರುದ್ಧ ಭರ್ಜರಿ ಗೆಲುವು; ಕ್ಯಾಪ್ಟನ್ ಪಾಟೀದಾರ್​ ಕ್ರೆಡಿಟ್ ಕೊಟ್ಟಿದ್ದು ಯಾರಿಗೆ..?
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us