ಬೆಂಗಳೂರಲ್ಲಿ ಬೆಂಡ್ ಆದ RCB.. ರಜತ್​ ಪಡೆಯ ಹ್ಯಾಟ್ರಿಕ್ ಗೆಲುವಿನ ಕನಸು ನುಚ್ಚುನೂರು, ಗಿಲ್​ಗೆ ನಗೆ

author-image
Bheemappa
Updated On
ಪ್ಲೇ ಆಫ್​ ಅಲ್ಲವೇ ಅಲ್ಲ, RCB ಟಾರ್ಗೆಟ್ ‘ಮಿಷನ್ ಟಾಪ್​- 2’.. ಇದು ಫೈನಲ್ ಲೆಕ್ಕಾಚಾರ!
Advertisment
  • ತನ್ನ ನೆಲದಲ್ಲಿಯೇ ತಲೆ ಬಾಗಿದ ರಾಯಲ್ ಚಾಲೆಂಜರ್ಸ್​ ಬೆಂಗಳೂರು
  • ಗುಜರಾತ್​ ಎದುರಿಗೆ ಆರ್​ಸಿಬಿಯ ಬ್ಯಾಟರ್​ಗಳಿಗೆ ಭಾರೀ ಮುಖಭಂಗ
  • ಜೋಶ್​ ಬಟ್ಲರ್​, ಲಿವಿಂಗ್​​ಸ್ಟನ್ ಬ್ಯಾಟಿಂಗ್ ಅಬ್ಬರ, ಹಾಫ್​ಸೆಂಚುರಿ

ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಐಪಿಎಲ್​ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್​ ಬೆಂಗಳೂರು ತಂಡವನ್ನು ಗುಜರಾತ್ ಟೈಟನ್ಸ್ ಬಗ್ಗು ಬಡಿದಿದೆ. ಜೋಶ್ ಬಟ್ಲರ್ (73) ಅವರ ಅಮೋಘ ಅರ್ಧಶತಕದ ನೆರವಿನಿಂದ ಗುಜರಾತ್ ಗೆಲುವಿನ ನಗೆ ಬೀರಿದೆ.

ಗುಜರಾತ್ ತಂಡದ ನಾಯಕ ಶುಭ್​ಮನ್ ಗಿಲ್ ಅವರು ಪಂದ್ಯದ ಆರಂಭದಲ್ಲಿ ಟಾಸ್ ಗೆದ್ದು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡರು. ಆರ್​ಸಿಬಿ ಪರವಾಗಿ ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ಫಿಲ್ ಸಾಲ್ಟ್, ಕೊಹ್ಲಿಯ ಬ್ಯಾಟಿಂಗ್ ಆರಂಭ ಚೆನ್ನಾಗಿರಲಿಲ್ಲ. ಕೊಹ್ಲಿ ಕೇವಲ 7 ರನ್​ಗೆ ಔಟ್ ಆದರು. ದೇವದತ್​ ಪಡಿಕ್ಕಲ್ 3 ಎಸೆತಗಳಲ್ಲಿ 1 ಬೌಂಡರಿ ಬಾರಿಸಿ ವಿಕೆಟ್ ಒಪ್ಪಿಸಿದರು. ಇದೇ ಆರಂಭದಲ್ಲಿ ತಂಡದ ಹಿನ್ನಡೆಗೆ ಕಾರಣವಾಯಿತು. ಸಾಲ್ಟ್​ 14 ರನ್​ ಗಳಿಸಿ ಆಡುವಾಗ ಮೊಹಮ್ಮದ್ ಸಿರಾಜ್​ ಬೌಲಿಂಗ್​ನಲ್ಲಿ ಕ್ಲೀನ್ ಬೋಲ್ಡ್​ ಆಗಿ ಪೆವಿಲಿಯನ್​ಗೆ ನಡೆದರು. ಕ್ಯಾಪ್ಟನ್​ ರಜತ್ ಪಾಟಿದಾರ್ (12) ಕೂಡ ಬಂದಷ್ಟೇ ವೇಗವಾಗಿ ಹೊರ ನಡೆದರು.

publive-image

ಆದರೆ ಲೈಮ್ ಲಿವಿಂಗ್​ಸ್ಟನ್​, ಗುಜರಾತ್ ಬೌಲರ್​ಗಳನ್ನ ಚಚ್ಚಿದರು. 40 ಎಸೆತ ಎದುರಿಸಿದ ಲಿವಿಂಗ್​ಸ್ಟನ್, 1 ಬೌಂಡರಿ, 5 ಅದ್ಭುತವಾದ ಸಿಕ್ಸರ್​ಗಳಿಂದ 54 ರನ್ ಬಾರಿಸಿದರು. ಜಿತೇಶ್ ಶರ್ಮಾ 33, ಕೃನಾಲ್ ಪಾಂಡ್ಯ 5, ಟಿಮ್ ಡೇವಿಡ್ 32 ರನ್​ ನೆರವಿನಿಂದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 7 ವಿಕೆಟ್​ಗೆ 170 ರನ್​ಗಳ ಟಾರ್ಗೆಟ್​ ಗುಜರಾತ್​ಗೆ ನೀಡಿತ್ತು.

ಈ ಟಾರ್ಗೆಟ್ ಬೆನ್ನು ಹತ್ತಿದ ಗುಜರಾತ್ 8 ವಿಕೆಟ್​ಗಳಿಂದ​ ಸುಲಭವಾಗಿ ಜಯ ಸಾಧಿಸಿತು. ಗುಜರಾತ್ ಪರವಾಗಿ ಓಪನರ್ ಆಗಿ ಕ್ರೀಸ್​ಗೆ ಆಗಮಿಸಿದ ನಾಯಕ ಗಿಲ್ ಹಾಗೂ ಸಾಯಿ ಸುದರ್ಶನ್ ಒಳ್ಳೆಯ ಬ್ಯಾಟಿಂಗ್ ಮಾಡಿದರು. ಆದರೆ ಶುಭ್​ಮನ್ ಗಿಲ್​ ಹೆಚ್ಚು ಹೊತ್ತು ಕ್ರೀಸ್​ನಲ್ಲಿ ನಿಲ್ಲಲಿಲ್ಲ. ಕೇವಲ 14 ರನ್​ ರನ್​ಗೆ ಭುವನೇಶ್ವರ್ ಬೌಲಿಂಗ್​ನಲ್ಲಿ ಕ್ಯಾಚ್ ಕೊಟ್ಟರು.

ಇದನ್ನೂ ಓದಿ:ತವರಲ್ಲಿ RCBಗೆ ಭಾರೀ ಅವಮಾನ.. ಸ್ಫೋಟಕ ಬ್ಯಾಟರ್ ಸಾಲ್ಟ್​ ಕ್ಲೀನ್ ಬೋಲ್ಡ್​

publive-image

ಗಿಲ್ ನಂತರ ಕ್ರೀಸ್​ಗೆ ಆಗಮಿಸಿದ ಜೋಶ್ ಬಟ್ಲರ್, ಸಾಯಿ ಸುದರ್ಶನ್​ ಜೊತೆ ಒಳ್ಳೆಯ ಇನ್ನಿಂಗ್ಸ್​ ಕಟ್ಟಿದರು. ಹೀಗಾಗಿ ಸಾಯಿ ಸುದರ್ಶನ್​ ಕೇವಲ 36 ಎಸೆತಗಳಲ್ಲಿ 7 ಬೌಂಡರಿ, 1 ಸಿಕ್ಸರ್​ನಿಂದ 49 ರನ್​ಗಳಿಸಿ ಬ್ಯಾಟಿಂಗ್ ಮಾಡುವಾಗ ಕೀಪರ್ ಜಿತೇಶ್ ಶರ್ಮಾಗೆ ಕ್ಯಾಚ್​ ಕೊಟ್ಟು ಹೊರ ನಡೆದರು. ಕೇವಲ 1 ರನ್​ನಿಂದ ಹಾಫ್ ಸೆಂಚುರಿ ಮಿಸ್ ಮಾಡಿಕೊಂಡರು.

ಸುದರ್ಶನ್ ಬಳಿಕ ಬ್ಯಾಟಿಂಗ್​​ಗೆ ಬಂದ ಶೆರ್ಫೇನ್ ರುದರ್ಫೋರ್ಡ್ ತಂಡ ಗೆಲ್ಲುವವರೆಗೆ ಜೋಶ್​ ಬಟ್ಲರ್​ಗೆ ಸಾಥ್ ಕೊಟ್ಟರು. ಬಟ್ಲರ್​ ಅಜೇಯರಾಗಿ 39 ಎಸೆತಗಳಲ್ಲಿ 5 ಫೋರ್, 6 ಅದ್ಭುತವಾದ ಸಿಕ್ಸರ್​ಗಳಿಂದ 73 ರನ್​ ಬಾರಿಸಿ ಗುಜರಾತ್ ತಂಡವನ್ನು ಗೆಲ್ಲಿಸಿದರು. 17.5 ಓವರ್​ಗಳಲ್ಲಿ 2 ವಿಕೆಟ್​ ನಷ್ಟಕ್ಕೆ 170 ರನ್​ ಗಳಿಸುವ ಮೂಲಕ ಗುಜರಾತ್ ಜಯಭೇರಿ ಬಾರಿಸಿತು. ಹ್ಯಾಟ್ರಿಕ್​ ಗೆಲುವಿನ ಕನಸು ಕಾಣುತ್ತಿದ್ದ ಆರ್​ಸಿಬಿಗೆ ಈ ಟೂರ್ನಿಯ ಮೊದಲ ಮುಖಭಂಗವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment