/newsfirstlive-kannada/media/post_attachments/wp-content/uploads/2024/10/KL_RAHUL_PANT.jpg)
2025ರ ಐಪಿಎಲ್​ ಟೂರ್ನಿಯಲ್ಲಿ ರಿಟೈಟ್, ರಿಲೀಸ್ ಕುರಿತು ಸಾಕಷ್ಟು ಚರ್ಚೆ ನಡೆಯುತ್ತದೆ. ಕ್ಷಣಕ್ಕೊಂದು ಸುದ್ದಿ ಬರುತ್ತಿದ್ದು ಆಟಗಾರರ ಎದೆಯಲ್ಲಿ ನಡುಕ ಹುಟ್ಟಿಸಿದೆ. ನಿಯಮದಂತೆ ಇಂದು ಎಲ್ಲ ಫ್ರಾಂಚೈಸಿಗಳು ತಮ್ಮ ರಿಟೈನ್ ಲಿಸ್ಟ್ ಅನ್ನು ಬಿಸಿಸಿಐಗೆ ಸಲ್ಲಿಸಬೇಕಾಗಿದೆ. ಸದ್ಯದ ಮಾಹಿತಿ ಪ್ರಕಾರ ಐಪಿಎಲ್​​ನ ​​ಸ್ಟಾರ್ ಪ್ಲೇಯರ್​ಗಳನ್ನೇ ಫ್ರಾಂಚೈಸಿಗಳು ರಿಲೀಸ್ ಮಾಡುವುದು ಬಹುತೇಕ ಗ್ಯಾರಂಟಿ ಇದೆ ಎಂದು ಹೇಳಲಾಗುತ್ತಿದೆ. ಆ ಸ್ಟಾರ್ ಆಟಗಾರರು ಯಾರೆಂಬುದು ಮಾಹಿತಿ ಇಲ್ಲಿದೆ.
ತಮ್ಮ ತಮ್ಮ ನಾಯಕರನ್ನು ಐಪಿಎಲ್​​ನ ಈ 3 ತಂಡಗಳ ಫ್ರಾಂಚೈಸಿ ಉಳಿಸಿಕೊಳ್ಳದೇ ಅವರನ್ನು ರಿಲೀಸ್ ಮಾಡಲು ಮುಂದಾಗಿವೆ ಎನ್ನಲಾಗಿದೆ. ಇದರ ಜೊತೆಗೆ ಇನ್ನಿಬ್ಬರು ಆಟಗಾರರನ್ನು ಇನ್ನೆರಡು ತಂಡಗಳ ಫ್ರಾಂಚೈಸಿ ರಿಲೀಸ್ ಮಾಡುವ ಸಾಧ್ಯತೆ ಇದೆ. ಹೀಗಾಗಿ ಈ ಆಟಗಾರರು ಮೆಗಾ ಆಕ್ಷನ್​ಗೆ ಹೋಗಬೇಕಾಗುತ್ತದೆ. ಅಲ್ಲಿ ಇವರ ಹೆಸರನ್ನು ಹರಾಜಿನಲ್ಲಿ ಕೂಗಿ ಬೇರೆ ಫ್ರಾಂಚೈಸಿ ಖರೀದಿ ಮಾಡುತ್ತವೆ. ಹರಾಜಿನಲಿ ಎಷ್ಟು ಬೆಲೆಗೆ ಖರೀದಿ ಆಗುತ್ತಾರೋ ಎನ್ನುವ ಕುತೂಹಲ ಅಭಿಮಾನಿಗಳಲ್ಲಿ ಇರಲಿದೆ. ಸದ್ಯ ಯಾವ್ಯಾವ ಫ್ರಾಂಚೈಸಿ ತಮ್ಮ ತಮ್ಮ ತಂಡದ ನಾಯಕರನ್ನ, ಆಟಗಾರರನ್ನ ರಿಲೀಸ್ ಮಾಡುತ್ತಾರೆ ಎಂದು ನೋಡುವುದಾದ್ರೆ..
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಬಿರುಕು? ಗಂಭೀರ್-ರೋಹಿತ್ ಮಧ್ಯೆ ಜಗಳ..! 3 ಬಣವಾದ ತಂಡ!
- ಕೆ.ಎಲ್​ ರಾಹುಲ್​- ಲಕ್ನೋ ತಂಡದ ಹಾಲಿ ನಾಯಕ (ವಿಕೆಟ್​ ಕೀಪರ್, ಬ್ಯಾಟ್ಸ್​ಮನ್)
- ರಿಷಬ್ ಪಂತ್- ಡೆಲ್ಲಿ ಕ್ಯಾಪಿಟಲ್ಸ್​ ಹಾಲಿ ಕ್ಯಾಪ್ಟನ್ (ವಿಕೆಟ್​ ಕೀಪರ್, ಬ್ಯಾಟ್ಸ್​ಮನ್)
- ಶ್ರೇಯಸ್​ ಅಯ್ಯರ್- ಕೋಲ್ಕತ್ತಾ ಹಾಲಿ ನಾಯಕ (ಬ್ಯಾಟರ್)
- ಇಶನ್ ಕಿಶನ್- ಮುಂಬೈ ಇಂಡಿಯನ್ಸ್​ (ವಿಕೆಟ್ ಕೀಪರ್, ಬ್ಯಾಟ್ಸ್​ಮನ್)
- ಮೊಹಮ್ಮದ್ ಸಿರಾಜ್- ಆರ್​ಸಿಬಿ (ಪೇಸ್ ಬೌಲರ್​)
ಐಪಿಎಲ್​ 2025ಗಾಗಿ ರಿಟೈನ್ಶನ್ ಅನೌನ್ಸ್​ಮೆಂಟ್​​ಗೆ ಇನ್ನೇನು ಕ್ಷಣಗಣನೆ ಶುರುವಾಗಿದೆ. ತಂಡಗಳಲ್ಲಿ ಯಾರು ಉಳಿಯುತ್ತಾರೋ, ಯಾರು ಹೊರ ನಡೆಯುತ್ತಾರೋ ಎಂಬ ಕುತೂಹಲ ಸ್ವತಹ ಆಟಗಾರರು ಸೇರಿದಂತೆ, ಫ್ಯಾನ್ಸ್​ ವಲಯದಲ್ಲೂ ಇದೆ. ಈ ಮೇಲಿನ ಪಟ್ಟಿಯಲ್ಲಿರುವ ಆಟಗಾರರ ಹೆಸರು ಹೆಚ್ಚಾಗಿ ಸುದ್ದಿಯಲ್ಲಿತ್ತು. ಹೀಗಾಗಿ ಇವರು ಬಹುತೇಕ ತಂಡದಿಂದ ಹೊರ ಬಂದು ಆಕ್ಷನ್​ಗೆ ಹೋಗಬಹುದೆಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ