/newsfirstlive-kannada/media/post_attachments/wp-content/uploads/2025/04/SALT_SIRAJ.jpg)
ವರ್ಷಗಳು ಉರುಳಿವೆ. ಕಾಲ ಕಾಲಕ್ಕೆ ಆಟಗಾರರು ಬದಲಾಗಿದ್ದಾರೆ. ಆದರೆ ಆರ್ಸಿಬಿ ಆಟದ ವೈಖರಿ ಮಾತ್ರ ಇನ್ನೂ ಬದಲಾಗಿಲ್ಲ. ಇದಕ್ಕೆ ಕಾರಣ ಇವತ್ತಿಗೂ ಆರ್ಸಿಬಿ ಗೆಲುವಿನ ಸೂತ್ರ. ಆರ್ಸಿಬಿ ನಂಬಿಕೊಂಡಿರುವ ಸೂತ್ರವೇ ಮುಳ್ಳಾಗಿ ಪರಿಣಮಿಸಿದೆ. ಆ ಸೂತ್ರವೇನು? ಆರ್ಸಿಬಿ ಸೋಲುಗಳಿಗೆ ಕಾರಣವೇನು?
ಐಪಿಎಲ್ ಸೀಸನ್-18ರ ಫಸ್ಟ್ ಹಾಫ್ ಪಂದ್ಯಗಳು ಮುಗೀತು. ಪ್ಲೇ-ಆಫ್ ಲೆಕ್ಕಾಚಾರಗಳು ಶುರುವಾದವು. ತಂಡಗಳ ಸ್ಟ್ರ್ಯಾಟರ್ಜಿಗಳು ಬದಲಾಗ್ತಿವೆ. ಆದ್ರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಸೂತ್ರ ಮಾತ್ರ ಬದಲಾಗಲೇ ಇಲ್ಲ. ಕಳೆದ 17 ಸೀಸನ್ಗಳಲ್ಲಿ ಮಾಡಿದ ತಪ್ಪನ್ನೇ ಸೀಸನ್-18ರಲ್ಲೂ ಮುಂದುವರಿಸಿದ ಆರ್ಸಿಬಿ, ಈಗ ಟ್ರೋಫಿ ಗೆಲ್ಲುತ್ತಾ ಎಂಬ ಪ್ರಶ್ನೆಯನ್ನೇ ಉದ್ಬವಿಸುಂತೆ ಮಾಡಿದೆ. ಇದಕ್ಕೆ ಕಾರಣ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಗೆಲುವಿನ ಮಂತ್ರ.
ಕೊಹ್ಲಿ, ಸಾಲ್ಟ್, ಪಟಿದಾರ್ ಮೇಲೆಯೇ ಓವರ್ ಡಿಪೆಂಡ್..!
ಗೆಲುವಿಗೆ ಈ ತ್ರಿಮೂರ್ತಿಗಳನ್ನೇ ನೆಚ್ಚಿಕೊಳ್ತಾ ರೆಡ್ ಆರ್ಮಿ?
ಆರ್ಸಿಬಿಯ ಫಸ್ಟ್ ಹಾಫ್ ಮ್ಯಾಚ್ಗಳು ಮುಗಿದಿವೆ. 7 ಪಂದ್ಯಗಳ ಪೈಕಿ 4ರಲ್ಲಿ ಗೆದ್ದು ಬೀಗಿರುವ ಆರ್ಸಿಬಿ, ಮೂರು ಪಂದ್ಯಗಳನ್ನು ಸೋತಿದೆ. ಆದ್ರೆ, ಈ ನಾಲ್ಕು ಪಂದ್ಯಗಳ ಗೆಲುವಿನಲ್ಲಿ ಕಾಮನ್ ಫಾಕ್ಟರ್. ಓಪನರ್ಸ್ ಫಿಲ್ ಸಾಲ್ಟ್, ವಿರಾಟ್ ಕೊಹ್ಲಿ ಆ್ಯಂಡ್ ರಜತ್ ಪಾಟಿದಾರ್ ಆಟ.
ಆರ್ಸಿಬಿ ಗೆಲ್ಲಬೇಕು ಅಂದ್ರೆ, ವಿರಾಟ್ ಆಟಬೇಕು.. ಇಲ್ಲ ಫಿಲ್ ಸಾಲ್ಟ್ ಆ್ಯಂಡ್ ರಜತ್ ಅಬ್ಬರಿಸಬೇಕು. ಈ ಮೂವರು ಕೈ ಕೊಟ್ರೆ, ಆರ್ಸಿಬಿಯ ಸೋಲು ಫಿಕ್ಸ್. ಇದು ಜಸ್ಟ್ ನಾವ್ ಹೇಳ್ತಿರುವ ಮಾತಲ್ಲ. ಆರ್ಸಿಬಿ ತಂಡದ ಫಲಿತಾಂಶವೇ ನುಡಿಯುತ್ತಿರುವ ಕಟು ಸತ್ಯ. ಇದಕ್ಕೆ ಬೆಸ್ಟ್ ಎಕ್ಸಾಂಪಲ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಫಲಿತಾಂಶಗಳು.
ಕೊಹ್ಲಿ, ಸಾಲ್ಟ್, ಪಟಿದಾರ್ ಸಿಡಿದರಷ್ಟೇ ಆರ್ಸಿಬಿ ಗೆಲುವು!
ಆರ್ಸಿಬಿ ಕೊಲ್ಕತ್ತಾ ನೈಟ್ ರೈಡರ್ಸ್, ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಎದುರು ಗೆದ್ದು ಬೀಗಿದೆ. ಆದ್ರೆ, ಈ ಗೆಲುವಿಗೆ ಕಾರಣ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಆಟದ ಜೊತೆಗೆ ನಾಯಕ ರಜತ್ ಪಾಟಿದಾರ್ ಆಟವೇ ಆಗಿದೆ.
ಕೊಲ್ಕತ್ತಾ ನೈಟ್ ರೈಡರ್ಸ್, ಮುಂಬೈ ಇಂಡಿಯನ್ಸ್, ರಾಜಸ್ಥಾನ್ ರಾಯಲ್ಸ್ ಎದುರು ಕೊಹ್ಲಿ ಅರ್ಧಶತಕ ಸಿಡಿಸಿದ್ರೆ. ಕೊಲ್ಕತ್ತಾ ನೈಟ್ ರೈಡರ್ಸ್, ರಾಜಸ್ಥಾನ್ ರಾಯಲ್ಸ್ ಎದುರು ಫಿಲ್ ಸಾಲ್ಟ್ ಅರ್ಧಶತಕ ಸಿಡಿಸಿ ಮಿಂಚಿದ್ದರು. ಚೆನ್ನೈ ಹಾಗೂ ಮುಂಬೈ ಎದುರು ರಜತ್ ಪಟಿದಾರ್ ಹಾಫ್ ಸೆಂಚುರು ಸಿಡಿಸಿದ್ದರು. ಈ ಮೂವರ ಒಗ್ಗಟ್ಟಿನ ಆಟ ಆರ್ಸಿಬಿಯನ್ನು ಗೆಲುವಿನ ದಡ ಸೇರಿಸಿತ್ತು. ಆದ್ರೆ, ತ್ರಿವಳಿಗಳು ವೈಫಲ್ಯ ಅನುಭವಿಸಿದ ಗುಜರಾತ್, ಡೆಲ್ಲಿ, ಪಂಜಾಬ್ ಎದುರು ಹೀನಾಯ ಸೋಲು ಅನುಭವಿಸಬೇಕಾಯ್ತು. ಹೀಗಾಗಿ ಈ ಮೂವರು ಆಡಿದ್ರಷ್ಟೇ ಆರ್ಸಿಬಿಗೆ ಗೆಲುವು ಎಂಬಂತಾಗಿದೆ.
ಸೀಸನ್ 18ರಲ್ಲಿ ಕೊಹ್ಲಿ, ಸಾಲ್ಟ್, ಪಟಿದಾರ್!
ಈ ಸೀಸನ್‌ನ 7 ಪಂದ್ಯಗಳಿಂದ ವಿರಾಟ್, 141.47ರ ಸ್ಟ್ರೈಕ್ರೇಟ್ನಲ್ಲಿ 249 ರನ್ ಸಿಡಿಸಿದ್ದಾರೆ. ಈ ಪೈಕಿ 3 ಅರ್ಧಶತಕ ದಾಖಲಿಸಿದ್ದಾರೆ. ಇಷ್ಟೇ ಪಂದ್ಯಗಳನ್ನಾಡಿರುವ ಸಾಲ್ಟ್, 212 ರನ್ ಗಳಿಸಿದ್ದಾರೆ. 2 ಅರ್ಧಶತಕ ಸಿಡಿಸಿರುವ ಸಾಲ್ಟ್, 182.75ರ ಬ್ಯಾಟಿಂಗ್ ಸ್ಟ್ರೈಕ್ರೇಟ್ನಲ್ಲಿ ರನ್ ಗಳಿಸಿದ್ದಾರೆ. 209 ರನ್ ಕಲೆಹಾಕಿರುವ ರಜತ್ ಪಟಿದಾರ್, 2 ಅರ್ಧಶತಕ ಗಳಿಸಿದ್ದಾರೆ. 157.14ರ ಬ್ಯಾಟಿಂಗ್ ಸ್ಟ್ರೈಕ್ರೇಟ್ ಹೊಂದಿದ್ದಾರೆ.
ಇವರನ್ನು ಬಿಟ್ರೆ, ಆರ್ಸಿಬಿ ಪರ ರನ್ ಗಳಿಸಿದ ಒನ್ ಆ್ಯಂಡ್ ಒನ್ಲಿ ಬ್ಯಾಟರ್ ಟಿಮ್ ಡೇವಿಡ್. ಆದ್ರೆ, ಇವರನ್ನು ಬಿಟ್ರೆ, ಉಳಿದವರೆಲ್ಲ.. ಆರ್ಸಿಬಿಗೆ ಮುಪ್ಪಾಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ