/newsfirstlive-kannada/media/post_attachments/wp-content/uploads/2025/05/RCB_TEAM-4.jpg)
ಚೆನ್ನೈ ಸೂಪರ್ ಕಿಂಗ್ಸ್ ಅಲ್ಲ, ಐಪಿಎಲ್ನಲ್ಲಿ ಆರ್ಸಿಬಿ ಪಾಲಿಗೆ ಬಿಗ್ಗೆಸ್ಟ್ ವಿಲನ್ ಅಂದ್ರೆ ಅದು ಸನ್ರೈಸರ್ಸ್ ಹೈದ್ರಾಬಾದ್. ಈ ಸೀಸನ್ನಲ್ಲಿ ಟಾಪ್ 2 ಸ್ಥಾನದ ಮೇಲೆ ಕಣ್ಣಿಟ್ಟಿರೋ ಆರ್ಸಿಬಿ ನಾಳೆ ಹೈದ್ರಾಬಾದ್ ವಿರುದ್ಧ ಸೆಣೆಸಲಿದೆ. ಹೈದ್ರಾಬಾದ್ ಮಣಿಸಿ ಟಾಪ್- 2 ಸ್ಥಾನ ಭದ್ರಪಡಿಸಿಕೊಳ್ಳೋ ಆತ್ಮವಿಶ್ವಾಸದಲ್ಲಿ ಆರ್ಸಿಬಿ ಇದೆ. ಇದರ ನಡುವೆ ಆತಂಕವೂ ಕಾಡ್ತಿದೆ. ಮಳೆ ಕಾಟದಿಂದ ತಪ್ಪಿಸಿಕೊಂಡ ಆರ್ಸಿಬಿ, ಹೈದ್ರಾಬಾದ್ ಕಂಟಕದಿಂದ ಬಚಾವ್ ಆಗುತ್ತಾ ಅನ್ನೋ ಪ್ರಶ್ನೆ ಎದುರಾಗಿದೆ.
2025 ಐಪಿಎಲ್ ಟೂರ್ನಿಯಲ್ಲಿ ಪ್ಲೇ ಆಫ್ಗೆ ರಾಯಲ್ ಎಂಟ್ರಿ ನೀಡಿರುವ ಆರ್ಸಿಬಿ, ಟಾಪ್ 2 ಸ್ಥಾನದ ಫೈಟ್ಗಿಳಿದಿದೆ. ಮುಂದಿನ 2 ಪಂದ್ಯ ಗೆದ್ದು ಟೇಬಲ್ ಟಾಪ್ 2 ಸ್ಥಾನಗಳನ್ನ ಭದ್ರ ಪಡಿಸಿಕೊಳ್ಳೋ ಲೆಕ್ಕಾಚಾರ ಆರ್ಸಿಬಿಯದ್ದಾಗಿದೆ. ಬೆಂಗಳೂರಿನಲ್ಲಿ ಮಳೆ ಕಾಡಿದ್ರೆ ಈ ಕನಸು ನುಚ್ಚು ನೂರಾಗುತ್ತೆ ಎಂದು ಅರಿತ ಆರ್ಸಿಬಿ, ಹೈದ್ರಾಬಾದ್ ವಿರುದ್ಧದ ಪಂದ್ಯವನ್ನ ಹೋಮ್ಗ್ರೌಂಡ್ನಿಂದ ಲಕ್ನೋಗೆ ಶಿಫ್ಟ್ ಮಾಡಿಸಿಕೊಂಡಿದೆ. ಈ ಮೂಲಕ ಮಳೆ ಕಾಟದಿಂದ ಆರ್ಸಿಬಿ ತಪ್ಪಿಸಿಕೊಂಡಿದೆ. ಆದ್ರೆ, ಸನ್ರೈಸರ್ಸ್ ಹೈದ್ರಾಬಾದ್ ಕಾಟದಿಂದ ಆರ್ಸಿಬಿ ಬಚಾವ್ ಆಗುತ್ತಾ ಅನ್ನೋದು ದೊಡ್ಡ ಪ್ರಶ್ನೆಯಾಗಿದೆ.
ಸೀಸನ್ 2ರಿಂದಲೂ ಹೈದ್ರಾಬಾದ್ನದ್ದೇ ಅಡ್ಡಗಾಲು.!
ಐಪಿಎಲ್ನಲ್ಲಿ ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್ ಆರ್ಸಿಬಿ ಬದ್ಧವೈರಿಗಳು ಎಂಬಂತೆ ಬಿಂಬಿತವಾಗಿವೆ. ಆದ್ರೆ, ಆರ್ಸಿಬಿಯ ಅಸಲಿ ವಿಲನ್ ಸನ್ರೈಸರ್ಸ್ ಹೈದ್ರಾಬಾದ್. 2009ರ ಸೀಸನ್ನಿಂದ ಹಿಡಿದು 2021ರವರೆಗೆ ಆರ್ಸಿಬಿ ಕನಸನ್ನ ಈ ಹೈದ್ರಾಬಾದ್ ತಂಡ ಹಲವು ಬಾರಿ ನುಚ್ಚು ನೂರು ಮಾಡಿದೆ.
2 ಬಾರಿ ಫೈನಲ್ನಲ್ಲಿ ಕಪ್ ಗೆಲುವಿಗೆ ವಿಲನ್.!
IPL ಇತಿಹಾಸದಲ್ಲಿ 3 ಬಾರಿ ಆರ್ಸಿಬಿ ಐಪಿಎಲ್ ಫೈನಲ್ಗೆ ಎಂಟ್ರಿ ಕೊಟ್ಟಿದೆ. ಈ ಪೈಕಿ 2 ಬಾರಿ ಇದೇ ಹೈದ್ರಾಬಾದ್ ತಂಡ ಕಪ್ ಕನಸಿಗೆ ಕೊಳ್ಳಿ ಇಟ್ಟಿದೆ. 2009ರಲ್ಲಿ ನಡೆದ 2ನೇ ಸೀಸನ್ನಲ್ಲೇ ಆರ್ಸಿಬಿ ಐಪಿಎಲ್ ಫೈನಲ್ಗೆ ಭರ್ಜರಿ ಎಂಟ್ರಿ ನೀಡಿತ್ತು. ಕಪ್ ಗೆಲ್ಲೋ ಭರವಸೆಯನ್ನೂ ಹುಟ್ಟು ಹಾಕಿತ್ತು. ಆದ್ರೆ, ಆ ಅಂದಿನ ಡೆಕ್ಕನ್ ಚಾರ್ಜಸ್ ತಂಡ ಫೈನಲ್ನಲ್ಲಿ ಆರ್ಸಿಬಿಯನ್ನ ಸೋಲಿಸಿ ಕಪ್ ಕನಸನ್ನ ಛಿದ್ರಗೊಳಿಸಿತ್ತು.
2016ರಲ್ಲಿ ಬೆಂಗಳೂರಿನ ನಮ್ಮ ಹೋಮ್ಗ್ರೌಂಡ್ನಲ್ಲೇ ಹೈದ್ರಾಬಾದ್ ಅಸಂಖ್ಯ ಅಭಿಮಾನಿಗಳ ಕನಸನ್ನ ನುಚ್ಚು ನೂರು ಮಾಡಿತ್ತು. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಫೈನಲ್ ಫೈಟ್ನಲ್ಲಿ ಗೆದ್ದು ಚಾಂಪಿಯನ್ ಪಟ್ಟದ ಕನಸನ್ನ ಕಸಿದುಕೊಂಡಿತ್ತು.
2 ಸೀಸನ್ಗಳಲ್ಲಿ ಟಾಪ್-2 ಕನಸಿಗೆ ಕೊಳ್ಳಿ ಇಟ್ಟ SRH.!
UAEನಲ್ಲಿ ನಡೆದಿದ್ದ 2020ರ ಐಪಿಎಲ್ನಲ್ಲೂ ಆರ್ಸಿಬಿ ಇದೇ ರೀತಿ ಟಾಪ್ 2 ಸ್ಥಾನದ ಕನಸು ಕಾಣ್ತಿತ್ತು. ಆದ್ರೆ, ಲೀಗ್ ಹಂತದ ಕೊನೆಯ 2 ಪಂದ್ಯಗಳಲ್ಲಿ ಸೋತಿದ್ದು ಮುಳುವಾಯ್ತು. 5 ವಿಕೆಟ್ಗಳ ಭಾರೀ ಅಂತರದಲ್ಲಿ ಸೋಲಿಸಿದ ಹೈದ್ರಾಬಾದ್ ಆರ್ಸಿಬಿಯ ಟಾಪ್ 2 ಸ್ಥಾನಕ್ಕೇರೋ ಕನಸಿಗೆ ಕೊಳ್ಳಿ ಇಟ್ಟಿತ್ತು.
ಇಷ್ಟೇ ಅಲ್ಲ.. ಆ ಬಳಿಕ ಪ್ಲೇ ಆಫ್ ಹಂತದಲ್ಲೂ ಕಾಟ ಕೊಡ್ತು. ಎಲಿಮಿನೇಟರ್ ಕದನದಲ್ಲಿ ಸೋಲಿಸಿ ಆರ್ಸಿಬಿಯನ್ನ ಎಲಿಮಿನೇಟ್ ಮಾಡ್ತು. ಇದ್ರೊಂದಿಗೆ ಟ್ರೋಫಿ ಕನಸು ನುಚ್ಚು ನೂರಾಯ್ತು.
2021ರ ಐಪಿಎಲ್ನಲ್ಲಿ ಆರ್ಸಿಬಿ ಟಾಪ್ 2 ಸ್ಥಾನಕ್ಕೇರಲು ಕೊನೆಯ 2 ಲೀಗ್ ಪಂದ್ಯಗಳಲ್ಲಿ ಗೆಲ್ಲಲೇಬೇಕಿತ್ತು. ಆ ಪೈಕಿ ಒಂದು ಪಂದ್ಯ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಇತ್ತು. ಆ ಸೀಸನ್ನಲ್ಲೂ ಕಳಪೆ ಪರ್ಫಾಮೆನ್ಸ್ ನೀಡಿದ್ದ ಹೈದ್ರಾಬಾದ್ ಅದಾಗಲೇ ಎಲಿಮಿನೇಟ್ ಆಗಿತ್ತು. ಆದ್ರೂ, ಆರ್ಸಿಬಿ ವಿರುದ್ಧದ ಪಂದ್ಯದಲ್ಲಿ ಜಿದ್ದಿನ ಹೋರಾಟ ನಡೆಸಿದ್ದ ಹೈದ್ರಾಬಾದ್ ಗೆದ್ದಿ ಆರ್ಸಿಬಿಯ ಟಾಪ್ 2 ಕನಸಿಗೆ ಕೊಳ್ಳಿ ಇಟ್ಟಿತ್ತು.
ಇದನ್ನೂ ಓದಿ:ಕಾನ್ ಚಿತ್ರೋತ್ಸವದಲ್ಲಿ ಹಣೆಗೆ ‘ಸಿಂಧೂರ’ವಿಟ್ಟು ಐಶ್ವರ್ಯ ರೈ ಹೊಸ ಲುಕ್.. ಇದರ ಅರ್ಥ ಏನು?
ಈ ಸೀಸನ್ನಲ್ಲೂ ಕಾಟ ಕೊಡುತ್ತಾ ಹೈದ್ರಾಬಾದ್.?
ಈ ಸೀಸನ್ನಲ್ಲೂ ಟಾಪ್ 2 ಸ್ಥಾನ ಭದ್ರ ಪಡಿಸಿಕೊಳ್ಳಲು ಆರ್ಸಿಬಿ ತಂಡ ಕೊನೆಯ 2 ಪಂದ್ಯಗಳನ್ನ ಗೆಲ್ಲಬೇಕಿದೆ. ಅದ್ರಲ್ಲಿ ಒಂದು ಪಂದ್ಯ ಇದೇ ಸನ್ರೈಸರ್ಸ್ ಹೈದ್ರಾಬಾದ್ ವಿರುದ್ಧ ಇದೆ. ನಾಳೆ ಲಕ್ನೋನ ಎಕಾನ ಮೈದಾನದಲ್ಲಿ ಹೈದ್ರಾಬಾದ್ -ಬೆಂಗಳೂರಿನ ಕಾಳಗ ನಡೆಯಲಿದೆ. ಈ ಪಂದ್ಯದಲ್ಲೂ ಹೈದ್ರಾಬಾದ್ spoilsport ಆಡುತ್ತಾ ಅನ್ನೋ ಆತಂಕ ಅಭಿಮಾನಿಗಳಲ್ಲಿದೆ.
ಈ ಸೀಸನ್ನಲ್ಲಿ ಆರ್ಸಿಬಿ ಆಡಿರೋ ಆಟ ನೋಡಿದ್ರೆ, ಹೈದ್ರಾಬಾದ್ನ ಮಣಿಸೋದು ಕಷ್ಟದ ವಿಚಾರವೇನಲ್ಲ. ಆದ್ರೂ, ಆರ್ಸಿಬಿ ಎಚ್ಚರಿಕೆಯ ಹೆಜ್ಜೆ ಇಡಬೇಕಿದೆ. ಸ್ವಲ್ಪ ಯಾಮಾರಿದ್ರೂ ಟಾಪ್ 2 ಕನಸು ಮತ್ತೊಮ್ಮೆ ಛಿದ್ರವಾಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ