IPL ತಂಡದ ಬ್ಯಾಟಿಂಗ್​​ ಕೋಚ್​ಗಳ ಸಂಬಳ ಎಷ್ಟು.. ಕನ್ನಡಿಗ ರಾಹುಲ್​ ದ್ರಾವಿಡ್​ಗೆ ಎಷ್ಟು ಕೋಟಿ ಹಣ ಕೊಡ್ತಾರೆ?

author-image
Bheemappa
Updated On
IPL ತಂಡದ ಬ್ಯಾಟಿಂಗ್​​ ಕೋಚ್​ಗಳ ಸಂಬಳ ಎಷ್ಟು.. ಕನ್ನಡಿಗ ರಾಹುಲ್​ ದ್ರಾವಿಡ್​ಗೆ ಎಷ್ಟು ಕೋಟಿ ಹಣ ಕೊಡ್ತಾರೆ?
Advertisment
  • ಅತಿ ಹೆಚ್ಚು ಸಂಭಾವನೆ ಪಡೆಯುವ ಐಪಿಎಲ್ ತಂಡದ ಕೋಚ್?
  • ಟ್ರೋಫಿ ಗೆಲುವಿಗೆ ಮುಗಿ ಬಿದ್ದಿರುವ ಎಲ್ಲ ಐಪಿಎಲ್​ ತಂಡಗಳು
  • ಕಡಿಮೆ ಸಂಬಳ ಪಡೆಯುತ್ತಿರುವ ಐಪಿಎಲ್ ತಂಡದ ಕೋಚ್..?

2025ರ ಐಪಿಎಲ್ ಸೀಸನ್​- 18 ಯಶಸ್ವಿಯಾಗಿ ನಡೆಯುತ್ತಿದೆ. ಎಲ್ಲ 10 ಫ್ರಾಂಚೈಸಿಗಳು ಟ್ರೋಫಿಗಾಗಿ ಪೈಪೋಟಿ ನಡೆಸುತ್ತಿವೆ. ಪಾಯಿಂಟ್ ಟೇಬಲ್​ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ತಂಡ 10 ಅಂಕಗಳಿಂದ ಟಾಪ್​ನಲ್ಲಿದ್ರೆ ಚೆನ್ನೈ ಸೂಪರ್ ಕಿಂಗ್ಸ್​ ತಂಡ 5 ಪಂದ್ಯ ಸೋತು 4 ಅಂಕಗಳಿಂದ ಕೊನೆ ಸ್ಥಾನಕ್ಕೆ ತೃಪ್ತಿ ಪಟ್ಟಿದೆ. ಇದರ ಜೊತೆ ಇದೀಗ ಈ ಐಪಿಎಲ್ ತಂಡದ ಕೋಚ್​ಗಳಿಗೆ ಎಷ್ಟು ಕೋಟಿ ದುಡ್ಡು ನೀಡುತ್ತಾರೆ ಎನ್ನುವ ಮಾಹಿತಿ ಇದೀಗ ವೈರಲ್ ಆಗಿದೆ.

publive-image

ರಾಜಸ್ಥಾನ್ ರಾಯಲ್ಸ್​ ತಂಡದ ಬ್ಯಾಟಿಂಗ್ ಕೋಚ್ ಆಗಿರುವ ಕನ್ನಡಿ ರಾಹುಲ್ ದ್ರಾವಿಡ್ ಅವರು ಈ ಬಾರಿ 5 ಕೋಟಿ ರೂಪಾಯಿ ಸಂಭಾವನೆ ಪಡೆಯುತ್ತಿದ್ದಾರೆ. ದ್ರಾವಿಡ್​ ಬಿಟ್ಟರೇ ಚೆನ್ನೈ ತಂಡದ ಕೋಚ್ ಸ್ಟೀಫನ್ ಫ್ಲೆಮಿಂಗ್ ಅವರು 5 ಕೋಟಿ ಹಣ ಪಡೆಯುತ್ತಿದ್ದಾರೆ. ಇನ್ನೊಂದು ವಿಶೇಷ ಎಂದರೆ ಈ ಬಾರಿಯ ಐಪಿಎಲ್​ನ ಪಾಯಿಂಟ್ ಟೇಬಲ್​ನಲ್ಲಿ ಟಾಪ್​ನಲ್ಲಿರುವ ಡೆಲ್ಲಿ ತಂಡದ ಕೋಚ್ ಹೇಮಂಗ್ ಬದಾನಿ ಅವರು 1.5 ಕೋಟಿ ಹಣ ಪಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಆರ್​ಸಿಬಿ ತಂಡದ ಬ್ಯಾಟಿಂಗ್ ಕೋಚ್ ಆಗಿರುವ ಆ್ಯಂಡಿ ಫ್ಲವರ್ ಅವರ ಸಂಬಳ 3.5 ಕೋಟಿ ರೂಪಾಯಿ ಎನ್ನಲಾಗ್ತಿದೆ. ಮುಂಬೈ ತಂಡದ ಕೋಚ್ ಮಹೇಲಾ ಜಯವರ್ಧನೆ 4 ಕೋಟಿ ಸಂಭಾವನೆ ಆಗಿದೆ. ಪಂಜಾಬ್ ತಂಡದ ಕೋಚ್ ರಿಕಿ ಪಾಟಿಂಗ್ 3.5 ಕೋಟಿ ಹಣ ಜೇಬಿಗಿಳಿಸುತ್ತಿದ್ದಾರೆ. ಇವರನ್ನು ಬಿಟ್ರೇ, ಹಾಲಿ ಚಾಂಪಿಯನ್​ ಕೆಕೆಆರ್ ಟೀಮ್​ನ ಚಂದ್ರಕಾಂತ್ ಪಂಡಿತ್ ಅವರು 3.5 ಕೋಟಿ ಹಣ ಪಡೆಯುತ್ತಿದ್ದಾರೆ.

ಇದನ್ನೂ ಓದಿ:KL ರಾಹುಲ್ ಮಗಳ ಹೆಸರೇನು..? ತನ್ನ ಹುಟ್ಟುಹಬ್ಬದ ದಿನವೇ ಮುದ್ದಾದ ಕಂದಮ್ಮನ ಹೆಸರಿಟ್ಟ ಕನ್ನಡಿಗ

publive-image

ಇನ್ನುಳಿದಂತೆ ಗುಜರಾತ್ ಟೈಟನ್ಸ್​ ಟೀಮ್​ನ ಕೋಚ್ ಆಗಿರುವ ಜೊತೆಗೆ ಒಂದು ಬಾರಿ ಟ್ರೋಫಿಗೂ ಕಾರಣರಾಗಿರುವ ಆಶಿಶ್ ನೆಹ್ರಾ ಅವರು ಕೇವಲ 3 ಕೋಟಿ ಸಂಭಾವನೆ ಪಡೆಯುತ್ತಿದ್ದಾರೆ. ಡೆನಿಯಲ್ ವೆಟೋರಿ ಹೈದ್ರಾಬಾದ್ ತಂಡಕ್ಕೆ ಕೋಚ್ ಆಗಿದ್ದು 2.5 ಕೋಟಿ ರೂಪಾಯಿ ಪಡೆಯುತ್ತಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಎಲ್ಲ ಕೋಚ್​ಗಳು ಫೋಟೋ ಹಾಗೂ ಸಂಭಾವನೆ ಇರುವ ಫೋಟೋವೊಂದು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment