newsfirstkannada.com

RCB ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್..? ಚಾಂಪಿಯನ್ ಕೋಚ್​ಗೆ​ ಡಿಮ್ಯಾಂಡಪ್ಪೋ ಡಿಮ್ಯಾಂಡ್!

Share :

Published July 9, 2024 at 12:07pm

  ದ್ರೋಣಾಚಾರ್ಯ ರಾಹುಲ್ ದ್ರಾವಿಡ್​​ ಸೆಳೆಯಲು ಹೇಗಿದೆ ಕಸರತ್ತು?

  ಐಪಿಎಲ್​ನ 4 ತಂಡಗಳಿಂದ ರಾಹುಲ್ ದ್ರಾವಿಡ್​ಗಾಗಿ ಬಿಗ್ ಫೈಟ್

  RCB ಮಾಜಿ ನಾಯಕ ತನ್ನ ತವರಿನ ತಂಡದ ಕೋಚ್ ಆಗುತ್ತಾರಾ?

ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದೆದ್ದೇ ಗೆದ್ದಿದ್ದು, ನಿರ್ಗಮಿತ ಹೆಡ್​ಕೋಚ್ ರಾಹುಲ್ ದ್ರಾವಿಡ್​​ಗೆ ಫುಲ್​ ಡಿಮ್ಯಾಂಡ್ ಬಂದಿದೆ. ಐತಿಹಾಸಿಕ ಟ್ರೋಫಿ ಗೆಲ್ಲಿಸಿಕೊಟ್ಟ ಬೆನ್ನಲ್ಲೆ ದಿ ವಾಲ್​​ ಐಪಿಎಲ್​​​ನತ್ತ ಕಣ್ಣಾಯಿಸಿದ್ದು, ಚಾಂಪಿಯನ್ ಕೋಚ್​​​​​​ ಸೆಳೆಯಲು ಫ್ರಾಂಚೈಸಿಗಳು ಮುಗಿಬಿದ್ದಿವೆ.

IPLಗೆ ಟೀಮ್ ಇಂಡಿಯಾ ನಿರ್ಗಮಿತ ಕೋಚ್​​ ದ್ರಾವಿಡ್​ ಎಂಟ್ರಿ..?

ವಿದೇಶಿ ಕೋಚ್​ಗಳಿಂದ ಮಾತ್ರ ಟೀಮ್ ಇಂಡಿಯಾ ಐಸಿಸಿ ಟ್ರೋಫಿ ಗೆಲ್ಲುತ್ತೆ ಅನ್ನೋ ಮಾತಿತ್ತು. ಆದ್ರೀಗ ಆ ಮಾತನ್ನ ನಿರ್ಗಮಿತ ಹೆಡ್​ಕೋಚ್​​​ ರಾಹುಲ್​ ದ್ರಾವಿಡ್​ ಸುಳ್ಳಾಗಿಸಿದ್ದಾರೆ. ಓರ್ವ ದೇಶಿ ಕೂಡ ತಂಡವನ್ನ ಚಾಂಪಿಯನ್​ ಪಟ್ಟಕ್ಕೇರಿಸಬಹುದು ಅನ್ನೋದನ್ನ ಟಿ20 ವಿಶ್ವಕಪ್ ಗೆಲ್ಲಿಸಿ ತೋರಿಸಿಕೊಟ್ಟಿದ್ದಾರೆ. 17 ವರ್ಷಗಳ ಕಪ್​​​​ ಬರ ನೀಗಿಸಿ, ಭಾರತದ ಕೀರ್ತಿಯನ್ನ ಪತಾಕೆಯನ್ನ ಜಗದಗಲಕ್ಕೆ ಪಸರಿಸಿದ ಚಾಂಪಿಯನ್​​​ ಕ್ಯಾಪ್ಟನ್ ರಾಹುಲ್​​ ದ್ರಾವಿಡ್​​ ಅವರಿಗೆ ಇನ್ನಿಲ್ಲದ ಡಿಮ್ಯಾಂಡ್ ಬಂದಿದೆ.

ಇದನ್ನೂ ಓದಿ: ದರ್ಶನ್ ಜೈಲು ಸೇರಿದಕ್ಕೆ ನೋವಲ್ಲಿರೋ ಡೈನಾಮಿಕ್ ಫ್ಯಾಮಿಲಿ.. ದಾಸನ ಪರ ಬ್ಯಾಟ್​ ಬೀಸ್ತಿರೋ ಸ್ಯಾಂಡಲ್​ವುಡ್

ಭಾರತಕ್ಕೆ ಟ್ರೋಫಿ ಗೆಲ್ಲಿಸಿ ಹೆಡ್​ಕೋಚ್​ ಹುದ್ದೆಗೆ ಗುಡ್​ಬೈ ಹೇಳಿದ ದ್ರಾವಿಡ್​ ಐಪಿಎಲ್​​​​​​ನತ್ತ ಚಿತ್ತ ಹರಿಸಿದ್ದಾರೆ. ದಿ ವಾಲ್​ ಟೀಮ್ ಇಂಡಿಯಾ ಹೆಡ್​​​​ಕೋಚ್ ಆಗಿ ಸಕ್ಸಸ್ ಕಂಡ ಬೆನ್ನಲ್ಲೇ ಕಲರ್​ಫುಲ್​​ ಟೂರ್ನಿಗೆ ಎಂಟ್ರಿಕೊಡಲಿದ್ದಾರೆ ಎಂದು ವರದಿಯಾಗಿದೆ. ಇದು ಗೊತ್ತಾದ ಬೆನ್ನಲ್ಲೆ ಈ 4 ಫ್ರಾಂಚೈಸಿಗಳು ದ್ರಾವಿಡ್​ರನ್ನ ಸೆಳೆಯಲು ತೆರೆಮರೆಯಲ್ಲೆ ಕಸರತ್ತು ಆರಂಭಿಸಿವೆ.

ಮರಳಿ ರಾಜಸ್ಥಾನ ಕೋಚ್​​ ಆಗ್ತಾರಾ ದ್ರಾವಿಡ್​​..?

ಪಂದ್ಯಾವಳಿಯಲ್ಲಿ ಒಮ್ಮೆ ಟ್ರೋಫಿ ಗೆದ್ದಿರೋ ರಾಜಸ್ಥಾನ ತಂಡಕ್ಕೆ 16 ವರ್ಷಗಳಿಂದ ಕಪ್​​​ ದೂರವಾಗಿದೆ. ಮತ್ತೊಮ್ಮೆ ಎತ್ತಿ ಹಿಡಿಯಲು ಚಾಂಪಿಯನ್​​ ಕ್ಯಾಪ್ಟನ್​​ ದ್ರಾವಿಡ್​​​ರನ್ನ ಫ್ರಾಂಚೈಸಿಗೆ ಸೆಳೆಯಲು ಚಿಂತನೆ ನಡೆಸಿದೆ. ಕುಮಾರ್​​​ ಸಂಗಕ್ಕರ ಏಕಕಾಲಕ್ಕೆ ಹೆಡ್​ಕೋಚ್ ಜೊತೆ ಡೈರೆಕ್ಟರ್​​​ ಆಫ್​ ಕ್ರಿಕೆಟ್ ರೋಲ್ ನಿಭಾಯಿಸ್ತಿದ್ದಾರೆ. ಈ ಪೈಕಿ ಒಂದನ್ನ ದ್ರಾವಿಡ್​​​ಗೆ ವಹಿಸಲು ಫ್ರಾಂಚೈಸಿ ಚಿಂತಿಸ್ತಿದೆ. ಈ ಹಿಂದೆ ದ್ರಾವಿಡ್​​​ ರಾಜಸ್ಥಾನ ತಂಡ ಮೆಂಟರ್​ ಆಗಿ ಕಾರ್ಯ ನಿರ್ವಹಿಸಿದ್ದು, ಫ್ರಾಂಚೈಸಿ ಜೊತೆ ಉತ್ತಮ ಒಡನಾಟವಿದೆ. ಹೀಗಾಗಿ ದ್ರಾವಿಡ್​​ ರಾಜಸ್ಥಾನ ಸೇರುವ ಅವಕಾಶ ಹೆಚ್ಚಿದೆ ಎಂದು ಹೇಳಲಾಗ್ತಿದೆ.

ತವರಿನ ತಂಡದ ಕೋಚ್ ಹುದ್ದೆಗೇರ್ತಾರಾ ಮಾಜಿ ನಾಯಕ..?

ಆ್ಯಂಡಿ ಫ್ಲವರ್​​ ಆರ್​ಸಿಬಿ ತಂಡದ ಹೆಡ್​ಕೋಚ್ ಆದ್ರು ಆರ್​ಸಿಬಿ ಹಣೆಬರಹ ಮಾತ್ರ ಬದಲಾಗ್ಲಿಲ್ಲ. ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್ ಕೂಡ ವೈಫಲ್ಯ ಕಂಡಿದ್ದಾರೆ. ಹೀಗಾಗಿ ಮುಂದಿನ ಆವೃತ್ತಿಯಲ್ಲಿ ಆರ್​ಸಿಬಿ ​​ಮೇಜರ್​ ಸರ್ಜರಿ ನಡೆಸ್ತಿದೆ ಎಂದು ಹೇಳಲಾಗ್ತಿದೆ. ಹಾಗೊಂದು ವೇಳೆ ಮಾಡಿದ್ದೆ ಆದ್ರೆ ಚಾಂಪಿಯನ್ ಕ್ಯಾಪ್ಟನ್​​​ ದ್ರಾವಿಡ್​ಗೆ ಅದೃಷ್ಟದ ಬಾಗಿಲು ತೆರೆಯಲಿದೆ. ಆರ್​ಸಿಬಿ ಮಾಜಿ ನಾಯಕನಾಗಿರೋ ದ್ರಾವಿಡ್​​​, ತವರಿನ ತಂಡ ಸೇರ್ಪಡೆಗೊಂಡ್ರೆ 2025 ರಲ್ಲಿ ಹೊಸ ಅಧ್ಯಾಯಕ್ಕೆ ಮುನ್ನುಡಿ ಬರೆಯಬಹುದು.

ಮೆಂಟರ್ ಹುದ್ದೆ ಖಾಲಿ..ಕೆಕೆಆರ್ ಪಾಲಾಗ್ತಾರಾ ದಿ ವಾಲ್​​ ?

ರಾಜಸ್ಥಾನ ಬಿಟ್ರೆ ಹಾಲಿ ಚಾಂಪಿಯನ್​​ ಕೆಕೆಆರ್ ಕೂಡ ರಾಹುಲ್​ ದ್ರಾವಿಡ್ ಮೇಲೆ ಕಣ್ಣಿಟ್ಟಿದೆ. ಯಾಕಂದ್ರೆ ಮೆಂಟರ್ ಆಗಿದ್ದ ಗೌತಮ್ ಗಂಭೀರ್​​​ ಟೀಮ್ ಇಂಡಿಯಾದ ನೂತನ ಕೋಚ್ ಆಗುವ ಸಾಧ್ಯತೆ ದಟ್ಟವಾಗಿದೆ. ಒಂದು ವೇಳೆ ಗಂಭೀರ್​ ಹುದ್ದೆ ತೊರೆದ್ರೆ ಆ ಸ್ಥಾನಕ್ಕೆ ದ್ರಾವಿಡ್​ರನ್ನ ನೇಮಿಸಲು ಕೆಕೆಆರ್​​​ ಫ್ರಾಂಚೈಸಿ ಚಿಂತಿಸ್ತಿದೆ.

ಇದನ್ನೂ ಓದಿ: ಒಂದೇ ಶಾಲೆಯ ಹತ್ತಾರು ವಿದ್ಯಾರ್ಥಿನಿಯರ ಮೇಲೆ ಲೈಂಗಿಕ ದೌರ್ಜನ್ಯ.. ಕಿರಾತಕ ಯಾರನ್ನ ಟಾರ್ಗೆಟ್ ಮಾಡ್ತಿದ್ದ?

ದ್ರಾವಿಡ್ ಮನವೊಲಿಸಿ ಡೆಲ್ಲಿಗೆ ಸೇರಿಸಿಕೊಳ್ತಾರಾ ಗಂಗೂಲಿ..?

ಇನ್ನು ಕೆಕೆಆರ್​​, ಆರ್​ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್​​​​​ ತಂಡಗಳಷ್ಟೇ ಅಲ್ಲ, ಡೆಲ್ಲಿ ಕ್ಯಾಪಿಟಲ್ಸ್ ಕೂಡ ದ್ರಾವಿಡ್​​​​​​​​ ಮೇಲೆ ಕಣ್ಣಿಟ್ಟಿದೆ. ಡೆಲ್ಲಿ ಕಳೆದ 4 ಸೀಸನ್​ಗಳಿಂದ ಫ್ಲೇಆಫ್​ ಪ್ರವೇಶಿಸಿಲ್ಲ. ಹೆಡ್​ಕೋಚ್​​ ರಿಕಿ ಪಾಂಟಿಂಗ್​​​​ ಮ್ಯಾನೇಜ್​ಮೆಂಟ್​​​​​​ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಸದ್ಯ ಸೌರವ್ ಗಂಗೂಲಿ ಡೆಲ್ಲಿಗೆ ಡೈರೆಕ್ಟರ್​ ಆಫ್​ ಕ್ರಿಕೆಟ್​​ ಆಗಿದ್ದು, ದ್ರಾವಿಡ್​ ಜೊತೆ ಉತ್ತಮ ಒಡನಾಟ ಹೊಂದಿದ್ದಾರೆ. ಮನವೊಲಿಸುವಲ್ಲಿ ಸಕ್ಸಸ್ ಆದ್ರೆ ಡೆಲ್ಲಿ ತಂಡದಲ್ಲಿ ದ್ರಾವಿಡ್ ದರ್ಬಾರ್ ಶುರುವಾಗಲಿದೆ.

ಇದನ್ನೂ ಓದಿ: ಜೀವಂತ ಹಾವನ್ನೇ ತಿಂದ ಡಕಾಯಿತ.. ಸುಲಿಗೆ, ಲೂಟಿ ಮಾಡ್ತಿದ್ದವನಿಂದ ಭಯಾನಕ ಕೃತ್ಯ

ಫೈನಲಿ ಆರಂಭದಲ್ಲೆ ಹೇಳಿದಂತೆ ಟಿ20 ವಿಶ್ವಕಪ್ ಗೆಲ್ಲಿಸಿದ ಬಳಿಕ ರಾಹುಲ್​ ದ್ರಾವಿಡ್​​​​​​​ಗೆ ಐಪಿಎಲ್​​ ಕೋಚ್​ ಆಗಲು ಫುಲ್ ಡಿಮ್ಯಾಂಡ್ ಬಂದಿದೆ. ಆದ್ರೆ ಚಾಂಪಿಯನ್ ಕೋಚ್​​​​​​ ಫ್ರಾಂಚೈಸಿಗಳ ಪ್ರೊಪೊಸಲ್​ ಅನ್ನ ಒಪ್ಪಿಕೊಳ್ತಾರಾ ? ಇಲ್ಲ ತಿರಸ್ಕರಿಸಿ ಸುಮ್ಮನಾಗ್ತಾರಾ ಅನ್ನೋದನ್ನ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

RCB ಕೋಚ್ ಆಗ್ತಾರಾ ರಾಹುಲ್ ದ್ರಾವಿಡ್..? ಚಾಂಪಿಯನ್ ಕೋಚ್​ಗೆ​ ಡಿಮ್ಯಾಂಡಪ್ಪೋ ಡಿಮ್ಯಾಂಡ್!

https://newsfirstlive.com/wp-content/uploads/2024/07/RAHUL_DRAVID_KOHLI.jpg

Load More