/newsfirstlive-kannada/media/post_attachments/wp-content/uploads/2025/03/ROHITH_KOHLI_IPL_SIXES.jpg)
ಗ್ರ್ಯಾಂಡ್ ಐಪಿಎಲ್ ಟೂರ್ನಿಯನ್ನು ಮತ್ತೆ ಆರಂಭಿಸಲಾಗುವುದು ಎನ್ನುವ ಸುದ್ದಿ ಹೊರ ಬಿದ್ದಿದ್ದು ಅಭಿಮಾನಿಗಳಲ್ಲಿ ಸಂತಸ ದುಪ್ಪಟ್ಟಾಗಿದೆ. ಭಾರತ ಮತ್ತು ಪಾಕ್ ನಡುವಿನ ಘರ್ಷಣೆಯಿಂದ ಐಪಿಎಲ್ ಪಂದ್ಯಗಳನ್ನು ಒಂದು ವಾರ ಸ್ಥಗಿತ ಮಾಡಲಾಗಿತ್ತು. ಆದರೆ ಇದೀಗ ಉಳಿದ ಪಂದ್ಯಗಳನ್ನು ಆಡಿಸಲಾಗುವುದು ಎಂದು ಹೇಳಲಾಗುತ್ತಿದೆ.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (ಬಿಸಿಸಿಐ) ಮೇ 16 ರಿಂದ ಮೇ 30 ರವರೆಗೆ ಪಂದ್ಯಗಳನ್ನು ಆಯೋಜನೆ ಮಾಡಲು ಯೋಜನೆ ರೂಪಿಸುತ್ತಿದೆ. ಉಳಿದ 16 ಪಂದ್ಯಗಳನ್ನು ದಕ್ಷಿಣ ಭಾರತದ ನಗರದಗಳಾದ ಬೆಂಗಳೂರು, ಚೆನ್ನೈ ಹಾಗೂ ಹೈದರಾಬಾದ್ನ ಪ್ರತಿಷ್ಠಿತ ಕ್ರಿಕೆಟ್ ಸ್ಟೇಡಿಯಂಗಳಲ್ಲಿ ನಡೆಸಲಾಗುವುದು ಎಂದು ಬಿಸಿಸಿಐ ಹೇಳಿದೆ.
ಇದನ್ನೂ ಓದಿ: IPL ಅಭಿಮಾನಿಗಳಿಗೆ ಗುಡ್ನ್ಯೂಸ್; ಈ ದಿನಾಂಕದಿಂದ ಪಂದ್ಯಗಳು ನಡೆಯೋದು ಫಿಕ್ಸ್!
ಇನ್ನುಳಿದಂತೆ ಇಂದು ಸಂಜೆಯೊಳಗೆ ಹೊಸ ವೇಳಾಪಟ್ಟಿಯ ಕುರಿತು ಐಪಿಎಲ್ ಫ್ರಾಂಚೈಸಿಗಳಿಗೆ ಮಾಹಿತಿ ನೀಡಲಾಗುವುದು. ಉಳಿದ ಎಲ್ಲ ಪಂದ್ಯಗಳನ್ನು ಆಡಿಸಲು ಎರಡು ವಾರಗಳು ಬೇಕಾಗುವ ಸಾಧ್ಯತೆ ಇದೆ. ಇದರಿಂದ ಡಬಲ್ ಹೆಡ್ಡರ್ ಪಂದ್ಯಗಳನ್ನು ಹೆಚ್ಚು ಆಯೋಜಿಸಲು ಪ್ಲಾನ್ ಮಾಡಲಾಗುತ್ತಿದೆ ಎಂದ ಬಿಸಿಸಿಐ ಹೇಳಿದೆ.
ಐಪಿಎಲ್ ಅಧ್ಯಕ್ಷ ಅರುಣ್ ಧುಮಾಲ್ ಮಾತನಾಡಿ, ಐಪಿಎಲ್ ಪುನರಾರಂಭಿಸಿ ಮುಕ್ತಾಯ ಮಾಡುವ ಸಾಧ್ಯತೆ ಬಹುತೇಕವಿದೆ. ಸ್ಥಿಗಿತಗೊಂಡ ಟೂರ್ನಿಯನ್ನು ಮತ್ತೆ ಆರಂಭಿಸಲು ಸಾಧ್ಯವಾದರೆ ಪಂದ್ಯ ನಡೆಯುವ ಸ್ಥಳ, ದಿನಾಂಕ ಸೇರಿ ಎಲ್ಲವನ್ನೂ ನಿರ್ಧರಿಸಬೇಕಾಗಿದೆ. ಇದರ ಜೊತೆ ತಂಡದ ಮಾಲೀಕರು, ಪ್ರಸಾರಕರು ಸೇರಿದಂತೆ ಎಲ್ಲಾ ಪಾಲುದಾರರೊಂದಿಗೆ ಚರ್ಚೆ ಮಾಡುತ್ತೇವೆ. ಮುಖ್ಯವಾದ ಅಂಶ ಎಂದರೆ ಭಾರತ ಸರ್ಕಾರ ಜೊತೆ ಮಾತನಾಡಬೇಕು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ