IPL ಟ್ರೇಡ್​ ವಿಂಡೋ ಓಪನ್​​.. ಬಲಿಷ್ಠ ತಂಡಕ್ಕಾಗಿ ಪ್ಲಾನ್​, ಚೆನ್ನೈಗೆ ಹೊಸ ವಿಕೆಟ್​ ಕೀಪರ್?​

author-image
Bheemappa
Updated On
IPL ಟ್ರೇಡ್​ ವಿಂಡೋ ಓಪನ್​​.. ಬಲಿಷ್ಠ ತಂಡಕ್ಕಾಗಿ ಪ್ಲಾನ್​, ಚೆನ್ನೈಗೆ ಹೊಸ ವಿಕೆಟ್​ ಕೀಪರ್?​
Advertisment
  • ಇಬ್ಬರು ಸ್ಟಾರ್ ಆಟಗಾರರನ್ನ ತಂಡದಿಂದ ಕಳೀಸಲು ಚರ್ಚೆಗಳು
  • ಒಬ್ಬ ವಿಕೆಟ್​ ಕೀಪರ್​ಗಾಗಿ ಇಬ್ಬರು ಆಟಗಾರರ ಟ್ರೇಡ್ ಯಾಕೆ​.?
  • ಈಗಾಗಲೇ ವಿಕೆಟ್​ ಕೀಪರ್​, ಬ್ಯಾಟರ್​​ನ ಸಂಪರ್ಕಿಸಿರುವ ಫ್ರಾಂಚೈಸಿ

ಐಪಿಎಲ್​ ಸೀಸನ್​​ 18 ಮುಗಿದು ತಿಂಗಳು ಕಳೆದಿಲ್ಲ. ಅದಾಗಲೇ ಮುಂದಿನ ಐಪಿಎಲ್​ನ ಬಿಗ್​ ಅಪ್​​​ಡೇಟ್​ ಹೊರಬಿದ್ದಿದೆ. ತೆರೆಮರೆಯಲ್ಲೇ ಮುಂದಿನ ಐಪಿಎಲ್​ಗೆ ಬಲಿಷ್ಠ ತಂಡ ಕಟ್ಟೋ ಸಿದ್ಧತೆಗಳು ಆರಂಭವಾಗಿವೆ. ಸೀಸನ್​​ 18ರ ಐಪಿಎಲ್​ನಲ್ಲಿ ಹೀನಾಯ ಪ್ರದರ್ಶನ ನೀಡಿದ ಚೆನ್ನೈ ಸೂಪರ್​​ ಕಿಂಗ್ಸ್​ ಈ ವಿಚಾರದಲ್ಲಿ ಎಲ್ಲರಿಗಿಂತ ಮುಂದಿದೆ.

ಐಪಿಎಲ್​ ಸೀಸನ್​ 18ರಲ್ಲಿ ಯಾರೂ ನಿರೀಕ್ಷೆಯೂ ಮಾಡಿರಲಿಲ್ಲ. ಅಂತಾ ಕಳಪೆ ಪ್ರದರ್ಶನವನ್ನ ಚೆನ್ನೈ ಸೂಪರ್ ಕಿಂಗ್ಸ್​ ನೀಡ್ತು. ಸಾಲು ಸಾಲು ಪಂದ್ಯಗಳನ್ನ ಸೋತ ಚೆನ್ನೈ ಅಂಕಪಟ್ಟಿಯಲ್ಲಿ ಕೊನೆ ಸ್ಥಾನಿಯಾಗಿ ಟೂರ್ನಿಗೆ ಗುಡ್​ ಬೈ ಹೇಳ್ತು. ಇದ್ರ ಬೆನ್ನಲ್ಲೇ ಮುಂದಿನ ಸೀಸನ್​ಗೆ ಸಿದ್ಧತೆ ಆರಂಭಿಸಿದೆ. ಬಲಿಷ್ಠ ತಂಡ ಕಟ್ಟೋಕೆ ಮೆಗಾ ಪ್ಲಾನ್​ ರೂಪಿಸಿದೆ.

publive-image

ತಂಡವನ್ನ ಬಲಿಷ್ಠಗೊಳಿಸಲು CSK ಮೆಗಾ ಪ್ಲಾನ್​.!

ಐಪಿಎಲ್​ ಅಂತ್ಯದ ಬೆನ್ನಲ್ಲೇ ಟ್ರೇಡ್​ ವಿಂಡೋ ಓಪನ್​ ಆಗಿದೆ. ಇದ್ರ ಮೂಲಕ ಒಂದು ಫ್ರಾಂಚೈಸಿಯಿಂದ ಇನ್ನೊಂದು ಫ್ರಾಂಚೈಸಿಗೆ ಆಟಗಾರರ ವರ್ಗಾವಣೆ ಮಾಡಿಕೊಳ್ಳಬಹುದಾಗಿದೆ. ಟ್ರೇಡ್​ ವಿಂಡೋ ಅವಕಾಶವನ್ನ ಎನ್​ಕ್ಯಾಶ್ ಮಾಡಿ​ಕೊಳ್ಳಲು ಚೆನ್ನೈ ಸೂಪರ್​ ಕಿಂಗ್ಸ್​ ಮುಂದಾಗಿದೆ. ಈ ಸೀಸನ್​ನಲ್ಲಿ ನಿರೀಕ್ಷಿತ ಪರ್ಫಾಮೆನ್ಸ್​ ನೀಡದ ಆಟಗಾರರನ್ನ ರಿಲೀಸ್​​ ಮಾಡಲು ಚೆನ್ನೈ ನಿರ್ಧರಿಸಿದೆ. ಇಷ್ಟೇ ಅಲ್ಲ.. ತಂಡಕ್ಕೆ ಹೊಸ ವಿಕೆಟ್​ ಕೀಪರ್​ ಬ್ಯಾಟರ್​​ನ ಕರೆ ತರೋಕೂ ಪ್ಲಾನ್​ ರೂಪಿಸಿಕೊಂಡಿದೆ.

ಅಶ್ವಿನ್​​ ಆಪ್ತನಿಂದ ಹೊರಬಿತ್ತು ಬಿಗ್​ ಅಪ್​​ಡೇಟ್​​.!

ವಿಕೆಟ್​ ಕೀಪರ್​​ ಹುಡುಕಾಟದಲ್ಲಿರೋ ಚೆನ್ನೈ ಸೂಪರ್​ ಕಿಂಗ್ಸ್​ ತಂಡ ಟ್ರೇಟ್​​ ವಿಂಡೋ ಅಡಿ ಆಟಗಾರರ ಬದಲಾವಣೆ ಈಗಾಗಲೇ ಬೇರೋಂದು ಫ್ರಾಂಚೈಸಿ ಜೊತೆ ಮಾತುಕತೆ ನಡೆಸ್ತಿದೆ ಅನ್ನೋದು ಲೇಟೆಸ್ಟ್​ ಅಪ್​ಡೇಟ್​. ಒಬ್ಬ ವಿಕೆಟ್​ ಕೀಪರ್​ಗಾಗಿ ತಂಡದಲ್ಲಿರೋ ಆಫ್​​ಸ್ಪಿನ್ನರ್​ ಮತ್ತು ಲೆಫ್ಟ್​ ಹ್ಯಾಂಡ್​ ಮಿಡಲ್​ ಆರ್ಡರ್​​ ಬ್ಯಾಟ್ಸ್​ಮನ್​, ಇಬ್ಬರನ್ನ ನೀಡಲು ಫ್ರಾಂಚೈಸಿ ಮುಂದಾಗಿದ್ಯಂತೆ. ಈ ಬಗ್ಗೆ ಫ್ರಾಂಚೈಸಿಯೊಂದರಲ್ಲಿ ಚರ್ಚೆ ನಡೀತಿವೆ ಅಂತಾ ಅಶ್ವಿನ್​ ಆಪ್ತ, ಸೌತ್​ ಆಫ್ರಿಕಾ ತಂಡದ ಮಾಜಿ ಅನಾಲಿಸ್ಟ್​​ ಪ್ರಸನ್ನ ಅಘೋರಮ್​​ ಟ್ವೀಟ್​ ಮಾಡಿದ್ದಾರೆ. ಅಶ್ವಿನ್​ ಆಪ್ತ ಆಗಿರೋದ್ರಿಂದ ಈ ಸುದ್ದಿ ಚೆನ್ನೈ ಫ್ರಾಂಚೈಸಿಗೆ ಸಂಬಂಧಿಸಿದ್ದು ಅನ್ನೋ ಚರ್ಚೆ ಸದ್ಯ ಕ್ರಿಕೆಟ್​ ವಲಯದಲ್ಲಿದೆ.

CSKಯಿಂದ ಅಶ್ವಿನ್​, ಶಿವಂ ದುಬೆ ವರ್ಗಾವಣೆ​​​​​.?

ಚೆನ್ನೈ ಸೂಪರ್​​ ಕಿಂಗ್ಸ್​ ತಂಡದಲ್ಲಿರೋ ಆಫ್​ ಸ್ಪಿನ್ನರ್​ ಅಂದ್ರೆ ಅದು ಆರ್​.ಅಶ್ವಿನ್​, ಲೆಫ್ಟ್​ ಆರ್ಮ್​​ ಮಿಡಲ್​ ಆರ್ಡರ್​ ಬ್ಯಾಟರ್​​ ಅಂದ್ರೆ ಅದು ಶಿವಂ ದುಬೆ. ಈ ಸೀಸನ್​ನಲ್ಲಿ ನಿರೀಕ್ಷೆಗೆ ತಕ್ಕ ಪರ್ಫಾಮೆನ್ಸ್​ ನೀಡುವಲ್ಲಿ ಇಬ್ಬರೂ ಎಡವಿದ್ರು. ಅಶ್ವಿನ್​ 9 ಪಂದ್ಯವನ್ನಾಡಿ ಕೇವಲ 7 ವಿಕೆಟ್​ ಉರುಳಿಸಿದ್ರು. ಶಿವಂ ದುಬೆ 32.45ರ ಸರಾಸರಿಯಲ್ಲಿ ರನ್​​ಗಳಿಸಿದ್ರಷ್ಟೇ. ವೈಫಲ್ಯ ಕಂಡಿರೋ ಇವರಿಬ್ಬರನ್ನೇ ಚೆನ್ನೈ ಫ್ರಾಂಚೈಸಿ ರಿಲೀಸ್​ ಮಾಡಲು ಮುಂದಾಗಿದೆ ಅನ್ನೋ ಚರ್ಚೆಗಳು ಆರಂಭವಾಗಿವೆ. ಸಿಎಸ್​​ಕೆ ತಂಡದಲ್ಲಿರೋ ಮತ್ತೊಬ್ಬ ಮಿಡಲ್​ ಆರ್ಡರ್​ನ ಲೆಫ್ಟ್​​ ಆರ್ಮ್​​​ ಬ್ಯಾಟ್ಸ್​​ಮನ್​ ಅಂದ್ರೆ ಅದು ರವೀಂದ್ರ ಜಡೇಜಾ.! ಹೀಗಾಗಿ ಈ ಜಡೇಜಾ ಹೆಸರು ಕೂಡ ಈ ವಿಚಾರದಲ್ಲಿ ಚರ್ಚೆಯಲ್ಲಿದೆ.

ಇದು MS ಧೋನಿ ನಿವೃತ್ತಿಯ ಮುನ್ಸೂಚನೆಯಾ.?

ಶತಾಯಗತಾಯ ವಿಕೆಟ್​​ ಕೀಪರ್​​ನ ತಂಡಕ್ಕೆ ತರಲೇಬೇಕೆಂದು ಸಿಎಸ್​ಕೆ ಪಣತೊಟ್ಟಂತಿದೆ. ಒಬ್ಬ ವಿಕೆಟ್​ ಕೀಪರ್​​ಗಾಗಿ ಇಬ್ಬರು ಆಟಗಾರರನ್ನ ಟ್ರೇಡ್​ ಮಾಡೋಕೆ ಚೆನ್ನೈ ತಂಡ ಸಿದ್ಧವಾಗಿದೆ. ಅದೂ ಪ್ರಮುಖ ಆಟಗಾರರನ್ನ ಈ ಬಿಗ್​ ಡಿಶಿಷನ್​ಗೆ ಕೇವಲ ಕಳಪೆ ಆಟ ಮಾತ್ರ ಕಾರಣಾನಾ.? ಅಲ್ಲ.. ಇದಕ್ಕೆ ಮತ್ತೊಂದು ಕಾರಣವಿದೆ ಅಂತಿದ್ದಾರೆ ಕ್ರಿಕೆಟ್​ ಎಕ್ಸ್​​ಪರ್ಟ್ಸ್​​. ಸದ್ಯ ವಿಕೆಟ್​ ಕೀಪಿಂಗ್​ ಜವಾಬ್ದಾರಿ ನಿಭಾಯಿಸ್ತಿರೋ ಧೋನಿ ವಿದಾಯದ ಸುಳಿವು ಫ್ರಾಂಚೈಸಿಗೆ ಸಿಕ್ಕಂತಿದೆ ಅನ್ನೋದು ಹಲವರ ಅಭಿಪ್ರಾಯವಾಗಿದೆ. ಧೋನಿ ಮುಂದಿನ ಸೀಸನ್​​ಗೂ ಮುನ್ನ ಗುಡ್​ ಬೈ ಹೇಳಿದ್ರೆ, ಸ್ಥಾನ ತುಂಬಬಲ್ಲ ಸಮರ್ಥ ವಿಕೆಟ್​ ಕೀಪರ್​ ಬ್ಯಾಟರ್​​​ ತಂಡದಲ್ಲಿಲ್ಲ. ಹೀಗಾಗಿಯೇ ಚೆನ್ನೈ ಫ್ರಾಂಚೈಸಿ ವಿಕೆಟ್​ ಕೀಪರ್​ ಹಿಂದೆ ಬಿದ್ದಿರೋದು.

ಇದನ್ನೂ ಓದಿ:ಶೆಫಾಲಿ ಜರಿವಾಲಾ ಮಾಜಿ ಬಾಯ್​ಫ್ರೆಂಡ್.. ಬಿಗ್​ಬಾಸ್​ ವಿನ್ನರ್​ ಕೂಡ​ ಈ ಹಿಂದೆ ಹೃದಯಾಘಾತದಿಂದ ನಿಧನ!

publive-image

ಚೆನ್ನೈ ಸೂಪರ್​ ಕಿಂಗ್ಸ್​ ಸೇರ್ತಾರಾ ಸಂಜು ಸ್ಯಾಮ್ಸನ್​.?

ಕಳೆದ ಸೀಸನ್​ನ ವೇಳೆ ಫ್ರಾಂಚೈಸಿ, ಮ್ಯಾನೇಜ್​​ಮೆಂಟ್​ ಹಾಗೂ ಸಂಜು ನಡುವೆ ಕೆಲ ವಿಚಾರಗಳಲ್ಲಿ ಭಿನ್ನಾಭಿಪ್ರಾಯ ಉಂಟಾಗಿತ್ತು. ಇದ್ರಿಂದ ಸಂಜು ಸ್ಯಾಮ್ಸನ್​ ಬೇಸರಗೊಂಡಿದ್ರು. ಇದೀಗ ಚೆನ್ನೈ ಸೂಪರ್​​ ಕಿಂಗ್ಸ್​ ತಂಡ ಬಿಗ್​ಫಿಶ್​​ ಸಂಜು​ಗೆ ಗಾಳ ಹಾಕಿದೆ. ಸಂಜು ತಂಡಕ್ಕೆ ಆಗಮಿಸಿದ್ರೆ, ವಿಕೆಟ್​ ಕೀಪರ್​ ಸಿಕ್ಕಂತಾಗುತ್ತೆ. ಬ್ಯಾಟಿಂಗ್​ ಸ್ಟ್ರೆಂಥ್​ ಕೂಡ​ ಹೆಚ್ಚಾಗುತ್ತೆ. ಈ ಎಲ್ಲಾ ಲೆಕ್ಕಾಚರವನ್ನ ಹಾಕಿರೋ ಫ್ರಾಂಚೈಸಿ ಈಗಾಗಲೇ ಸಂಜು ಜೊತೆಗೆ ಒಂದು ರೌಂಡ್​​ ಮಾತುಕತೆ ನಡೆಸಿದೆ ಅನ್ನೋದು ಲೇಟೆಸ್ಟ್​ ಅಪ್​ಡೇಟ್​​.

ಐಪಿಎಲ್​ ಅಂತ್ಯದ ಬೆನ್ನಲ್ಲೇ ಸಂಜು ಸ್ಯಾಮ್ಸನ್​​ ರಾಜಸ್ಥಾನ್ ತಂಡಕ್ಕೆ ಗುಡ್​ ಬೈ ಹೇಳ್ತಾರೆ ಎಂಬ ಸುದ್ದಿ ಹಬ್ಬಿತ್ತು. ಅದಾದ ಬಳಿಕ ಸಿಎಸ್​ಕೆ ಸಂಜು ಸ್ಯಾಮ್ಸನ್​​​ ಸಂಪರ್ಕಿಸಿದ ಸುದ್ದಿಯೂ ಹೊರಬಿದ್ದಿತ್ತು. ಇದೀಗ ಅಶ್ವಿನ್​ ಆಪ್ತ ಮಾಡಿರೋ ಆಟಗಾರರ ಟ್ರೇಡ್​ ಬಗೆಗಿನ ಟ್ವೀಟ್​​​ ಈ ಹಿಂದಿನ ಸುದ್ದಿಗಳಿಗೆ ಮತ್ತೆ ಜೀವ ನೀಡಿದೆ. ಐಪಿಎಲ್​ ಮಿನಿ ಆಕ್ಷನ್​ ಡಿಸೆಂಬರ್​​ನಲ್ಲಿ ನಡೆಯಲಿದೆ. ಅಷ್ಟರೊಳಗೆ ಏನೆಲ್ಲಾ ಆಗುತ್ತೆ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment