/newsfirstlive-kannada/media/post_attachments/wp-content/uploads/2025/06/KOHLI_SALT_RCB.jpg)
ರಜತ್ ಪಾಟಿದಾರ್ ನೇತೃತ್ವದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಟೀಮ್ ಕೊನೆಗೂ ಐಪಿಎಲ್ನ ಕಪ್ ಅನ್ನು ಪಡೆದುಕೊಂಡಿದೆ. ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ಆರ್ಸಿಬಿ ಪ್ಲೇಯರ್ಸ್ ಸೇರಿದಂತೆ ಅಲ್ಲಿದ್ದವರೆಲ್ಲರೂ ಗೆಲುವಿನ ಸಂಭ್ರಮದಲ್ಲಿ ಮುಳುಗಿದ್ದರು. ಟ್ರೋಫಿ ಕೈಗೆ ಸಿಕ್ಕಾಗ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ ಅವರು ಅದರೊಳಗೆ ಏನ್ ಇರಬಹುದು ಎಂದು ಚೆಕ್ ಮಾಡಿದ್ದಾರೆ.
ಗುಜರಾತ್ನ ಅಹಮದಾಬಾದ್ ಸ್ಟೇಡಿಯಂನಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಹಲವು ವರ್ಷಗಳ ಕನಸಿಗೆ ಅಂತಿಮವಾಗಿ ಆರ್ಸಿಬಿ ಬ್ರೇಕ್ ಹಾಕಿತು. ಐಸಿಸಿ ಅಧ್ಯಕ್ಷ ಜಯ್ ಶಾ ಹಾಗೂ ಬಿಸಿಸಿಐ ಅಧ್ಯಕ್ಷ ರೋಜರ್ ಬಿನ್ನಿ ಅವರಿಂದ ಐಪಿಎಲ್ ಟ್ರೋಫಿಯನ್ನು ನಾಯಕ ರಜತ್ ಪಾಟಿದಾರ್ ಪಡೆದುಕೊಂಡರು. ಇದಾದ ಮೇಲೆ ಎಲ್ಲ ಆಟಗಾರರಿಗೂ ಟ್ರೋಫಿಯನ್ನು ನೀಡಲಾಗಿತ್ತು. ಅದರಂತೆ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಅವರ ಕೈಗೂ ಟ್ರೋಫಿ ನೀಡಲಾಗಿತ್ತು.
ಇದನ್ನೂ ಓದಿ:RCB ಟ್ರೋಫಿ ಗೆದ್ದ ಖುಷಿ.. ವಿರಾಟ್ ಕೊಹ್ಲಿ, ಅನುಷ್ಕಾ ಶರ್ಮಾ ಟಾಪ್- 10 ಫೋಟೋಸ್!
ಆದರೆ ಈ ವೇಳೆ ಆ ಟ್ರೋಫಿ ಒಳಗೆ ಏನಿರಬಹುದು ಎನ್ನುವ ಕುತೂಹಲ ವಿರಾಟ್ ಕೊಹ್ಲಿ, ಫಿಲ್ ಸಾಲ್ಟ್ಗೆ ಮೂಡಿದೆ. ಮೈದಾನದಲ್ಲಿ ಸೆಲೆಬ್ರೆಟ್ ಮಾಡುವಾಗಲೇ ವಿರಾಟ್ ಕೊಹ್ಲಿ ಕಪ್ ಮೇಲೆ ಇರುವಂತಹದ್ದನ್ನು ತೆಗೆದು ಒಳಗೆ ಏನಿದೆ ಎಂದು ನೋಡಿದ್ದಾರೆ. ಆಗ ಒಳಗೆ ನೋಡಿ ಇಬ್ಬರೂ ಜೋರಾಗಿಯೇ ನಕ್ಕಿದ್ದಾರೆ. ಆದರೆ ಟ್ರೋಫಿಯ ಮೇಲಿನದ್ದನ್ನು ಓಪನ್ ಮಾಡಿದಾಗ ಅದರೊಳಗೆ ಏನಿತ್ತೋ, ಏನೋ ಗೊತ್ತಿಲ್ಲ. ಆದರೆ ಕೊಹ್ಲಿ, ಸಾಲ್ಟ್ ಒಳಗೆ ನೋಡಿ ನಗಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ.
ಇನ್ನು ಈ ಪಂದ್ಯದಲ್ಲಿ ಆರಂಭಿಕರಾಗಿ ಕಣಕ್ಕೆ ಇಳಿದಿದ್ದ ವಿರಾಟ್ ಕೊಹ್ಲಿ ಹಾಗೂ ಫಿಲ್ ಸಾಲ್ಟ್ ಉತ್ತಮ ಬ್ಯಾಟಿಂಗ್ ಮಾಡಿದ್ದರು. ಫಿಲ್ ಸಾಲ್ಟ್ ಕೇವಲ 9 ಬಾಲ್ಗಳಲ್ಲಿ 1 ಸಿಕ್ಸರ್ 2 ಬೌಂಡರಿಗಳಿಂದ 16 ರನ್ ಗಳಿಸಿದ್ದರು. ವಿರಾಟ್ ಕೊಹ್ಲಿ ಅವರು 35 ಎಸೆತಗಳಲ್ಲಿ 3 ಫೋರ್ಗಳಿಂದ 43 ರನ್ ಗಳಿಸಿ ತಂಡಕ್ಕೆ ನೆರವಾಗಿದ್ದರು. ಕೊನೆಗೆ ಆರ್ಸಿಬಿ ಫೈನಲ್ನಲ್ಲಿ ಜಯಭೇರಿ ಬಾರಿಸಿತ್ತು.
Kohli checking what's inside the trophy 😭 pic.twitter.com/SuW0AyW21g
— Rishi (@was_rishi) June 4, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ