newsfirstkannada.com

IPLಗೆ ಕೊಹ್ಲಿನೇ ರಾಜ! 6ನೇ ಬಾರಿ 500+ ರನ್​ ಬಾರಿಸಿ ಘರ್ಜಿಸಿದ ವಿರಾಟ್​

Share :

21-05-2023

    ಜುಲೈ 2022 TO ಮೇ 2023, 11 ತಿಂಗಳಲ್ಲಿ ಎಲ್ಲದಕ್ಕೂ ಆನ್ಸರ್​

    1490 ದಿನಗಳ ಕೊರಗಿಗೆ ಹೈದ್ರಾಬಾದ್​ನಲ್ಲಿ ಬಿತ್ತು ಬ್ರೇಕ್​

    6ನೇ ಬಾರಿ 500+ ರನ್​, ಐಪಿಎಲ್​ಗೆ ಕೊಹ್ಲಿ ರಾಜ

ವಿರಾಟ್​​ ಕೊಹ್ಲಿಯ ಕರಿಯರ್​ ಖತಂ..! ತುಂಬಾ ಹಿಂದಲ್ಲ.. ಜಸ್ಟ್​ 11 ತಿಂಗಳ ಹಿಂದೆ ಚಾಲ್ತಿಯಲ್ಲಿದ್ದ ಮಾತಿದು. ಅಂದಾದ ಅವಮಾನಗಳಿಗೆಲ್ಲಾ ಈಗ ಉತ್ತರ ಸಿಕ್ಕಿದೆ. ಟೀಕೆ – ಟಿಪ್ಪಣಿಗಳನ್ನ ಕೇಳಿ ಕೇಳಿ ಗಾಯಗೊಂಡ ಸಿಂಹದಂತಾಗಿದ್ದ ಕೊಹ್ಲಿ ಈಗ ಭಯಂಕರವಾಗಿ ಘರ್ಜಿಸಿದ್ದಾರೆ. ಕೊಹ್ಲಿಯ ವಿರಾಟ ರೂಪಕ್ಕೆ ಎಲ್ಲಾ ಬೆಸ್ತು ಬಿದ್ದಿದ್ದಾರೆ.

ಐಪಿಎಲ್​ನಲ್ಲಿ ಕಿಂಗ್​ ಕೊಹ್ಲಿ ಆರ್ಭಟ ಮುಂದುವರೆದಿದೆ. ಕಳೆದ ವರ್ಷದ ಏಷ್ಯಾಕಪ್​ ಟೂರ್ನಿಯಲ್ಲಿ ಸೆಂಚುರಿ ಸಿಡಿಸಿದ್ದೇ ಸಿಡಿಸಿದ್ದು, ಆ ಬಳಿಕ ವಿರಾಟ್ ಉಗ್ರವತಾರ ಎತ್ತಿದ್ದಾರೆ. ಅಲ್ಲಿಂದ ಇಲ್ಲಿವರೆಗೆ ಆಡಿದ ಎಲ್ಲಾ ಟೂರ್ನಿಯಲ್ಲಿ ಆರ್ಭಟಿಸಿರೋ ಕೊಹ್ಲಿ, ಇದೀಗ ಐಪಿಎಲ್​ ಅಖಾಡದಲ್ಲೂ ರನ್​ ಭೇಟೆಯಾಡ್ತಿದ್ದಾರೆ. ಇಷ್ಟೇ ಅಲ್ಲ. ಸೆಂಚುರಿ ಸಿಡಿಸೋ ಮೂಲಕ ಐಪಿಎಲ್​​ ಅನ್ನೋ ಕಿಂಗ್​​ಡಮ್​ಗೆ ನಾನೇ ಕಿಂಗ್​ ಅನ್ನೋ ಸಂದೇಶವನ್ನ ದೊಡ್ಡದಾಗಿ ರವಾನಿಸಿದ್ದಾರೆ.

ಜುಲೈ 2022 TO ಮೇ 2023, 11 ತಿಂಗಳಲ್ಲಿ ಎಲ್ಲದಕ್ಕೂ ಆನ್ಸರ್.!

2019ರ ನವೆಂಬರ್​​ನಲ್ಲಿ ಬಾಂಗ್ಲಾದೇಶ ವಿರುದ್ಧ ಶತಕ ಸಿಡಿಸಿದ್ದ ವಿರಾಟ್​ ಕೊಹ್ಲಿ ಆ ಬಳಿಕ ಮೂರಂಕಿ ಗಡಿದಾಟೋಕೆ ಸರ್ಕಸ್​ ನಡೆಸಿದ್ರು. ಬರೋಬ್ಬರಿ 3 ವರ್ಷಗಳ ಕಾಲ ಅನುಭವಿಸಿದ್ದು ಅಕ್ಷರಶಃ ನರಕ ಯಾತನೆ..! ಇದೀಗ, ಜಸ್ಟ್​ 11 ತಿಂಗಳಲ್ಲಿ ಎಲ್ಲಾ ಫಾರ್ಮೆಟ್​ನಲ್ಲೂ ಸೆಂಚುರಿ ಸಿಡಿಸಿ ಎಲ್ಲದಕ್ಕೂ ಆನ್ಸರ್​ ಕೊಟ್ಟಿದ್ದಾರೆ. ಅಫ್ಘಾನಿಸ್ತಾನ ವಿರುದ್ಧ ಟಿ20 ಸೆಂಚುರಿಯೊಂದಿಗೆ ಆರಂಭವಾದ ಕೊಹ್ಲಿಯ ಸೆಂಚುರಿ ಭೇಟೆ, ಏಕದಿನ, ಟೆಸ್ಟ್​​, ಮುಗಿಸಿ ಇದೀಗ ಐಪಿಎಲ್​ ಅಖಾಡದಲ್ಲೂ ನಡೆದಿದೆ.

1490 ದಿನಗಳ ಕೊರಗಿಗೆ ಹೈದ್ರಾಬಾದ್ನಲ್ಲಿ ಬಿತ್ತು ಬ್ರೇಕ್..!

ವಿರಾಟ್​ ಕೊಹ್ಲಿ ಇಂಟರ್​ನ್ಯಾಷನಲ್​ ಕ್ರಿಕೆಟ್​​ನಲ್ಲಿ ಶತಕ ಸಿಡಿಸಿಲ್ಲ ಅನ್ನೋ ವಿಚಾರ ಅಂತಿಮವಾಗಿ ಕೊಹ್ಲಿಯ ಕರಿಯರೇ ಖತಂ ಅನ್ನೋ ತಿರುವನ್ನ ಪಡೆದಿತ್ತು. ಶತಕಗಳನ್ನ ನೀರು ಕುಡಿದಷ್ಟು ಸುಲಭಕ್ಕೆ ಸಿಡಿಸ್ತಾ ಇದ್ದ ಕೊಹ್ಲಿ ಒಂದೊಂದು ರನ್​ಗೆ ಪರದಾಡ್ತಿದ್ದ ರೀತಿ ಎಲ್ಲರನ್ನೂ ಆಶ್ಚರ್ಯಕ್ಕೆ ದೂಡಿತ್ತು. ಆದ್ರೆ, ಛಲದಂಕಮಲ್ಲ ಕೊಹ್ಲಿ,1021 ದಿನಗಳ ಬಳಿಕ ಸೆಂಚೂರಿ ಬರಕ್ಕೆ ಬ್ರೇಕ್​ ಹಾಕಿದ್ರು. ಅದರ ಬೆನ್ನಲೇ 1214 ದಿನಗಳ ಬಳಿಕ ಏಕದಿನ ಶತಕದ ಬರಕ್ಕೂ ಫುಲ್​ ಸ್ಟಾಫ್​ ಇಟ್ರು. ಇದೀಗ ಐಪಿಎಲ್​ನಲ್ಲೂ 1490 ದಿನಗಳ ಕೊರಗಿಗೆ ಬ್ರೇಕ್​ ಹಾಕಿದ್ದಾರೆ. ವಿಶೇಷ ಅಂದ್ರೆ, ಈ ಮೂರು ಶತಕಗಳನ್ನ ಕೊಹ್ಲಿ ಕಂಪ್ಲೀಟ್​ ಮಾಡಿದ್ದು, ಸಿಕ್ಸರ್​ ಸಿಡಿಸಿ.

6ನೇ ಬಾರಿ 500+ ರನ್ಐಪಿಎಲ್ಗೆ ಕೊಹ್ಲಿ ರಾಜ.!

ಸನ್​ರೈಸರ್ಸ್​​ ಹೈದ್ರಾಬಾದ್​ ವಿರುದ್ಧದ ಪಂದ್ಯದಲ್ಲಿ ಭರ್ಜರಿ ಸೆಂಚುರಿ ಚಚ್ಚಿದ ವಿರಾಟ್​ ಕೊಹ್ಲಿ 6ನೇ ಶತಕದ ಸಾಧನೆ ಮಾಡಿದ್ರು. ಈ ಮೂಲಕ ಐಪಿಎಲ್​ ಇತಿಹಾಸದಲ್ಲೇ ಅತಿ ಹೆಚ್ಚು ಶತಕ ಸಿಡಿಸಿದ ಭಾರತೀಯ ಬ್ಯಾಟ್ಸ್​ಮನ್​ ಅನ್ನೋ ದಾಖಲೆ ಬರೆದ್ರು. ಇಷ್ಟೇ ಅಲ್ಲ, ಈ ಸೀಸನ್​ನ ಐಪಿಎಲ್​ನಲ್ಲೂ 500+ ರನ್​ಗಳಿಸೋ ಮೂಲಕ ನಾನೇ ಐಪಿಎಲ್​ನ ರಾಜ ಅನ್ನೋದನ್ನ ಮತ್ತೆ ನಿರೂಪಿಸಿದ್ರು.

ಸೀಸನ್ನಲ್ಲಿ 500+ ರನ್

2011                           557

2013                           634

2015                           505

2016                           973

2018                           530

2023                           538*  

ಐಪಿಎಲ್ ಟೂರ್ನಿಯಲ್ಲಿ 2011ರಲ್ಲಿ ಮೊದಲ ಬಾರಿ 500 ರನ್​ ಗಡಿದಾಟಿದ್ದ ಕೊಹ್ಲಿ, ಆ ಸೀಸನ್​ನಲ್ಲಿ 557 ರನ್​ ಸಿಡಿಸಿದ್ರು. ಆ ಬಳಿಕ 2013ರಲ್ಲಿ 634, 2015ರಲ್ಲಿ 505 ರನ್​ಗಳಿಸಿದ್ರು. ರೆಡ್​​ ಹಾಟ್​ ಫಾರ್ಮ್​ನಲ್ಲಿದ್ದ 2016ರಲ್ಲಿ ದಾಖಲೆಯ 973 ರನ್​ ಕಲೆ ಹಾಕಿದ್ದ ವಿರಾಟ್​, 2018ರಲ್ಲಿ 530 ರನ್​ ಗಳಿಸಿದ್ರು. ಇದೀಗ ಈ ಸೀಸನ್​ನಲ್ಲಿ 538 ರನ್​​ ಗಳಿಸಿದ್ದಾರೆ.

ಚೇಸಿಂಗ್​ನಲ್ಲಿ ಕೊಹ್ಲಿಗೆ ಕೊಹ್ಲಿನೇ ಸಾಟಿ.!
ಈ ಮಾತನ್ನ ಯಾವೊಬ್ಬ ಕೂಡ ತೆಗೆದುಹಾಕುವಂತಿಲ್ಲ. ಎಂತದ್ದೇ ಪ್ರಶರ್​ ಸಿಚ್ಯುವೇಶನ್​ ಇರ್ಲಿ, ಎದುರಾಳಿ ತಂಡ ಯಾವುದೇ ಆಗಿರಲಿ. ಚೇಸಿಂಗ್​ ಅಂತಾ ಬಂದ್ರೆ ಕೊಹ್ಲಿ ಸಿಡಿದೇಳ್ತಾರೆ. ಅದಕ್ಕಾಗಿ ಅಲ್ವೇ ಕೊಹ್ಲಿಯನ್ನ ಚೇಸಿಂಗ್​ ಮಾಸ್ಟರ್​​ ಅನ್ನೋದು. ಇದೀಗ ಐಪಿಎಲ್​ನಲ್ಲೂ ಚೇಸಿಂಗ್​ಗೆ ನಾನೇ ಕಿಂಗ್​ ಅಂತಾ ಕೊಹ್ಲಿ ನಿರೂಪಿಸಿದ್ದಾರೆ. 185ಕ್ಕೂ ಹೆಚ್ಚು ರನ್​ ಚೇಸ್​ ಮಾಡೋ ಸಮಯದಲ್ಲಿ 32ಕ್ಕೂ ಹೆಚ್ಚು ಸರಾಸರಿ ಹೊಂದಿರೋ ಕೊಹ್ಲಿ, 2 ಶತಕ ಸಿಡಿಸಿ ಘರ್ಜಿಸಿದ್ದಾರೆ.

ಮೇ 18 ಎಂಬ ಬಿಡಿಸಲಾಗದ ಬಂಧ!
18 ಅನ್ನೋದು ಕೊಹ್ಲಿ ಪಾಲಿಗೆ ಸಿಕ್ಕಾಪಟ್ಟೆ ಸ್ಪೆಷಲ್​ ನಂಬರ್​ ಅನ್ನೋದು ನಿಮಗೆ ಗೊತ್ತೇಯಿದೆ. ಕೊಹ್ಲಿ ಡೆಬ್ಯೂ ಮಾಡಿದ್ದು, ಅವರ ತಂದೆ ತೀರಿ ಹೋಗಿದ್ದು, ಅವರ ಜೆರ್ಸಿ ಹಿಂದಿರೋದು ಇದೇ 18 ಅನ್ನೋ ಸಂಖ್ಯೆಯೇ. ಹೀಗಾಗಿಯೇ ಈ ನಂಬರ್​, ನನ್ನ ಜೀವನದ ಮೋಸ್ಟ್​ ಇಂಪಾರ್ಟೆಂಟ್​ ನಂಬರ್ ಅಂತಾ ಕೊಹ್ಲಿಯೇ ಹೇಳಿಕೊಂಡಿದ್ದಾರೆ. ಆದ್ರೆ, ಮೇ 18ಕ್ಕೂ, ಐಪಿಎಲ್​ನಲ್ಲಿ ಕೊಹ್ಲಿಗೂ ಸ್ಪೆಷಲ್​ ನಂಟಿದೆ.

2016ರ ಐಪಿಎಲ್​ನಲ್ಲಿ ಆರ್​​ಸಿಬಿ ಗೆಲ್ಲಲೇಬೇಕಾದ ಅನಿವಾರ್ಯತೆಗೆ ಸಿಲುಕಿತ್ತು. ಆ ಸಂದರ್ಭದಲ್ಲಿ, ಇಂಜುರಿಗೆ ತುತ್ತಾಗಿ ಕೈಗೆ ಸ್ಟಿಚ್​ ಹಾಕಿಸಿಕೊಂಡಿದ್ರೂ ಕೂಡ ಕಣಕ್ಕಿಳಿದ ಕೊಹ್ಲಿ, ಪಂಜಾಬ್​ ಬೌಲರ್​ಗಳ ಬೆಂಡೆತ್ತಿದ್ರು. ಶತಕ ಸಿಡಿಸಿ ಗೆಲುವಿನ ಉಡುಗೊರೆ ನೀಡಿದ್ರು. ಇದೀಗ ಮತ್ತೆ ಮೇ 18ರಂದು ಛಲ ಬಿಡದೆ ಹೋರಾಡಿರೋ ವಿರಾಟ್​​, ಮಸ್ಟ್​​ ವಿನ್​ ಗೇಮ್​ನಲ್ಲಿ ಸೆಂಚೂರಿ ಸಿಡಿಸಿ ಫ್ಯಾನ್ಸ್​ಗೆ ಜಯ ಗಿಫ್ಟ್​ ನೀಡಿದ್ದಾರೆ.

ಹೈದ್ರಾಬಾದ್​ ವಿರುದ್ಧ ಪಂದ್ಯದಲ್ಲಿ ಜಯ ಸಾಧಿಸಿದ ಮಾತ್ರಕ್ಕೆ ಎಲ್ಲವೂ ಮುಗಿದಿಲ್ಲ. ಆರ್​​ಸಿಬಿ ಚಾಂಪಿಯನ್​ ಪಟ್ಟಕ್ಕೇರಬೇಕಂದ್ರೆ, ಇನ್ನೂ 4 ಮಸ್ಟ್​​ ವಿನ್​ ಗೇಮ್​​ಗಳಲ್ಲಿ ಗೆಲ್ಲಲೇಬೇಕಿದೆ. ಒಂದೇ ಒಂದು ಪಂದ್ಯ ಸೋತ್ರೂ, ಕಪ್​ ಗೆಲುವಿನ ಕನಸು ಕನಸಾಗೇ ಉಳಿಯಲಿದೆ. ಹೀಗಾಗಿ ಮುಂದಿನ ಪಂದ್ಯಗಳಲ್ಲೂ ಕೊಹ್ಲಿ ರಣಭೇಟೆಗಾರನಂತೆ ಹೋರಾಡ್ಲಿ ಅನ್ನೋದೆ ಫ್ಯಾನ್ಸ್​ ಆಶಯವಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ 

IPLಗೆ ಕೊಹ್ಲಿನೇ ರಾಜ! 6ನೇ ಬಾರಿ 500+ ರನ್​ ಬಾರಿಸಿ ಘರ್ಜಿಸಿದ ವಿರಾಟ್​

https://newsfirstlive.com/wp-content/uploads/2023/05/Virat-Kohli-3.jpg

Load More