/newsfirstlive-kannada/media/post_attachments/wp-content/uploads/2025/04/Aniket-Verma.jpg)
ಇಂಡಿಯನ್ ಪ್ರೀಮಿಯರ್ ಲೀಗ್ ಅಂದ್ರೆನೇ ಪ್ರತಿಭಾನ್ವೇಷಣೆಯ ಕೇಂದ್ರ. ಟ್ಯಾಲೆಂಟೆಡ್ ಯಂಗ್ಸ್ಟರ್ಗಳ ಪಾಲಿಗೆ ಇದೊಂದು ಬಿಗ್ ಸ್ಟೇಜ್. ಪ್ರತಿ ಸೀಸನ್ನಲ್ಲೂ ಹೊಸ ಪ್ರತಿಭೆಗಳು ಹುಟ್ಟಿಕೊಳ್ತಾನೆ ಇರ್ತಾರೆ. ಇದೀಗ ಸೀಸನ್-18ರಲ್ಲೂ ಸಿಕ್ಸ್ ಹಿಟ್ಟಿಂಗ್ ಮಿಷನ್ನ ಉದಯವಾಗಿದೆ.
ಏನ್ ಬ್ಯಾಟಿಂಗ್ ಗುರು.. ಏನ್ ಶಾಟ್, ಏನ್ ಟೈಮಿಂಗ್, ಎಂಥಾ ಸಿಕ್ಸರ್ಗಳು.. ಫೆಂಟಾಸ್ಟಿಕ್. ಸನ್ ರೈಸರ್ಸ್ ಹೈದ್ರಾಬಾದ್ ಪಾಳಯದ ಈ ನಯಾ ಹೀರೋ ಸದ್ಯ ಸೆನ್ಸೇಷನ್ ಸೃಷ್ಟಿಸಿದ್ದಾನೆ.
ಈತನ ಬ್ಯಾಟಿಂಗ್ ಪರಿ ನೋಡಿದ ಎಲ್ಲರಲ್ಲೂ ಹುಟ್ಟಿದ ಪ್ರಶ್ನೆ ಯಾರೀತ ಅನ್ನೋದು.? ಯಾಕಂದ್ರೆ, ಆತನ ಬ್ಯಾಟ್ನಿಂದ ಸಿಡಿಯುತ್ತಿದ್ದ ಒಂದೊಂದು ಸಿಕ್ಸರ್, ಅಷ್ಟು ಪವರ್ ಪುಲ್ ಆಗಿತ್ತು. ಆದ್ರೆ, ನಯಾ ಸೂಪರ್ ಸ್ಟಾರ್ ಹಿಂದೆ ಕಣ್ಣೀರ ಕಥೆ ಇದೆ.
ಡೆಬ್ಯುನಲ್ಲಿ ಅನ್ಲಕ್.. 3ನೇ ಪಂದ್ಯದಲ್ಲಿ ‘ವಂಡರ್’..!
IPLನ ನಯಾ ಸೆನ್ಸೇಷನ್ ಈ ಸಿಕ್ಸ್ ಹಿಟ್ಟಿಂಗ್ ಮಷಿನ್..!
ಪಾಂಡ್ಯ, ಕ್ಲಾಸೆನ್ ಆಟ ನೆನಪಿಸುತ್ತೆ ಈತನ ಹಿಟ್ಟಿಂಗ್..!
ರಾಜಸ್ಥಾನ್ ಎದುರಿನ ಮೊದಲ ಪಂದ್ಯದಲ್ಲೇ ಡೆಬ್ಯು ಮಾಡಿದ್ದ ಈತ, 7 ರನ್ಗೆ ಆಟ ಮುಗಿಸಿದ್ದರು. ಅವತ್ತಿನ ಪಂದ್ಯ ನೋಡಿದ ಬಹುತೇಕರು ಅನಿಕೇತ್ನ ಗಂಭೀರವಾಗಿ ಪರಿಗಣಿಸಿರಲಿಲ್ಲ. ಆದ್ರೆ, ಆ ನಂತರದ ಲಕ್ನೋ ಎದುರಿನ ಪಂದ್ಯದಲ್ಲಿ ಸಿಕ್ಸರ್ಗಳಿಂದಲೇ ರನ್ ಡೀಲ್ ಮಾಡಿ ಮಿಂಚಿದ. ಅದಾದ ಬಳಿಕ ಮೊನ್ನೆ ನಡೆದ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯದಲ್ಲಿ ಬೌಲರ್ಗಳನ್ನು ಅಕ್ಷರಶಃ ಚೆಂಡಾಡಿದ್ರು. ಮೈದಾನದ ಮೂಲೆ ಮೂಲೆಗೂ ಚೆಂಡಿನ ದರ್ಶನ ಮಾಡಿಸಿದ ಅನಿಕೇತ್ 41 ಎಸೆತಗಳಲ್ಲಿ 5 ಬೌಂಡರಿ, 6 ಸಿಕ್ಸರ್ಗಳು ಒಳಗೊಂಡ 74 ರನ್ ಚಚ್ಚಿದರು.
ಇದನ್ನೂ ಓದಿ: ರಿಷಭ್ ಪಂತ್ಗೆ ಕೊಕ್? ಈ ಎರಡು ತಂಡದ ನಾಯಕನ ಸ್ಥಾನಕ್ಕೆ ಕುತ್ತು; ಡಬಲ್ ಶಾಕಿಂಗ್ ನ್ಯೂಸ್!
ಅನಿಕೇತ್ ವರ್ಮರ ಫಿಯರ್ ಲೆಸ್ ಬ್ಯಾಟಿಂಗ್, ನಿಜಕ್ಕೂ ಅದ್ಬುತವಾಗಿದೆ. ಒಂದೊಂದು ಸ್ಟ್ರೋಕ್ ಕೂಡ ಪರ್ಫೆಕ್ಟ್. ಹಿಟ್ಟಿಂಗ್ ಎಬಿಲಿಟಿ ಅಂತೂ ಸೂಪರ್. ಈತನ ಪವರ್ ಹಿಟ್ಟಿಂಗ್ ಹಾರ್ದಿಕ್ ಪಾಂಡ್ಯ ಹಾಗೂ ಕ್ಲಾಸೆನ್ರನ್ನೇ ನೆನಪಿಸುತ್ತಿದೆ. ಈ ಸೂಪರ್ ಸೆನ್ಸೇಷನ್ ಹೀರೋನ ಜರ್ನಿ ನಿಜಕ್ಕೂ ಮನ ಕಲುಕುತ್ತೆ.
ಕಲ್ಲು-ಮುಳ್ಳಿನ ಹಾದಿ ದಾಟಿ ಬಂದ ಅನಿಕೇತ್ ವರ್ಮಾ
ಬಾಲ್ಯದಲ್ಲೇ ತಾಯಿ ಕಳೆದುಕೊಂಡ ನತದೃಷ್ಟ ಅನಿಕೇತ್
ಅನಿಕೇತ್ ವರ್ಮಾಗೆ ಕ್ರಿಕೆಟ್ ಕನಸಿಗೆ ನೀರೆರೆದ ಮಾವ
2002 ಫೆಬ್ರವರಿ 5ರಂದು ಉತ್ತರ ಪ್ರದೇಶದ ಜಾನ್ಸಿಯಲ್ಲಿ ಹುಟ್ಟಿದ ಅನಿಕೇತ್, ಕ್ರಿಕೆಟರ್ ಆಗೋ ಜರ್ನಿ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಬಾಲ್ಯದಲ್ಲೇ ಅಮ್ಮನ ಕಳೆದುಕೊಂಡು, ವಯಸ್ಸಲ್ಲದ ವಯಸ್ಸಿನಲ್ಲಿ ನೋವುಂಡಿದ್ರು. ಬಳಿಕ ತಾಯಿಯನ್ನ ಕಳೆದುಕೊಂಡ ತಬ್ಬಲಿಯ ಜವಾಬ್ದಾರಿ ವಹಿಸಿಕೊಂಡಿದ್ದೇ ಮಾವ ಅಮಿತ್ ವರ್ಮ.
ತಾಯಿ ಕಳೆದುಕೊಂಡ ಅನಿಕೇತ್ ವರ್ಮಾ ಓದಿನ ಜೊತೆಗೆ ಕ್ರಿಕೆಟ್ನತ್ತ ಹೆಚ್ಚು ಒಲವು ಹೊಂದಿದ್ರು. ಕ್ರಿಕೆಟ್ ಮೇಲೆ ಅತೀವ ಆಸಕ್ತಿ ಹೊಂದಿದ್ದ ಸೋದರ ಅಳಿಯನ ಬೆಂಬಲಕ್ಕೆ ಮಾವ ಅಮಿತ್ ವರ್ಮ ನಿಂತರು. ತಾನು ಅರ್ಥಿಕ ಸಂಕಷ್ಟದಲ್ಲಿದ್ರೂ, ಅನಿಕೇತ್ನ ಕ್ರಿಕೆಟ್ ಕೋಚಿಂಗ್ಗೆ ಸೇರಿಸಿದ್ರು. ಇದಕ್ಕಾಗಿ ಹಲವು ಕಡೆ ಸಾಲ ಕೂಡ ಮಾಡಿದ್ರು. ಸಂಕಷ್ಟದ ನಡುವೆ ಸಾಲ ಮಾಡಿ ಭೂಪಾಲ್‌ನಲ್ಲಿರೂ ಅಂಕುರ್ ಕ್ರಿಕೆಟ್ ಅಕಾಡೆಮಿಗೆ ಅನಿಕೇತ್ನ ಸೇರಿಸಿದ್ರು. ಇಲ್ಲಿಂದ ಶುರುವಾಗಿದ್ದು ಅಸಲಿ ಕ್ರಿಕೆಟ್ ಜರ್ನಿ.
ಕ್ಲಬ್ ಕ್ರಿಕೆಟ್ ಟು ಸ್ಟೇಟ್ ಟೀಮ್.. MPL ಟು IPL
ಅನಿಕೇತ್ ಬದುಕಿಗೆ ತಿರುವು ನೀಡಿದ ಕರ್ನಾಟಕ ಪಂದ್ಯ
ರೈಲ್ವೆ ಯೂಥ್ ಕ್ರಿಕೆಟ್ ಕ್ಲಬ್ನಿಂದ ಕ್ರಿಕೆಟ್ ಕರಿಯರ್ ಆರಂಭಿಸಿದ ಅನಿಕೇತ್, ನಂತರ ಫೈಥ್ ಕ್ರಿಕೆಟ್ ಕ್ಲಬ್ಗಾಗಿ ಆಡಿದ್ರು. ಇಲ್ಲಿ ಸಾಮರ್ಥ್ಯ ತೋರಿದ್ದ ಅನಿಕೇತ್ಗೆ ಮಧ್ಯಪ್ರದೇಶದಲ್ಲಿ ರಾಜ್ಯ ತಂಡ ಪ್ರತಿನಿಧಿಸುವ ಅವಕಾಶವೂ ಸಿಕ್ತು. ಅಂಡರ್-23 ತಂಡದ ಪರ ಕರ್ನಾಟಕ ಎದುರು ಕಣಕ್ಕಿಳಿದಿದ್ದ ಅನಿಕೇತ್ 75 ಎಸೆತಗಳಲ್ಲಿ 101 ರನ್ ಗಳಿಸಿ ಮಿಂಚಿದ್ರು. ಈ ಪಂದ್ಯ ಅನಿಕೇತ್ ಕ್ರಿಕೆಟ್ ಕರಿಯರ್ಗೆ ಮಹತ್ವದ ತಿರುವು ನೀಡಿತು.
2024ರ ಮಧ್ಯಪ್ರದೇಶ ಪ್ರೀಮಿಯರ್ ಲೀಗ್ನಲ್ಲಿ ಮಿಂಚಿನ ಪ್ರದರ್ಶನ ನೀಡಿದ ಅನಿಕೇತ್, ಭೋಪಾಲ್ ಲೆಪರ್ಡ್ಸ್ ಪರ ಆಡಿದ್ದ 5 ಇನ್ನಿಂಗ್ಸ್ನಿಂದ 273 ರನ್ ಸಿಡಿಸಿದ್ದರು. ಮಲ್ವಾ ಪ್ಯಾಂಥರ್ಸ್ ಎದುರಿನ ಪಂದ್ಯದಲ್ಲಿ 41 ಎಸೆತಗಳಲ್ಲೇ 123 ರನ್ ಕೊಳ್ಳೆ ಹೊಡೆದಿದ್ದರು. ಸೈಯದ್ ಮುಷ್ತಾಕ್ ಆಲಿ ಟೂರ್ನಿಯಲ್ಲಿ ಮಧ್ಯಪ್ರದೇಶ ಸೀನಿಯರ್ ಟೀಮ್ ಪರ ಆಡಿದ್ರು. ಸ್ಫೋಟಕ ಆಟದಿಂದ ಗಮನ ಸೆಳೆದಿದ್ದ ಈತನ ಮೇಲೆ ಸನ್ರೈಸರ್ಸ್ ತಂಡದ ಕಣ್ಣು ಬಿದ್ದಿತ್ತು. ಡೊಮೆಸ್ಟಿಕ್ ಪಂದ್ಯಗಳಲ್ಲಿ ಈತನನ್ನ ಕ್ಲೋಸ್ ಮಾನಿಟರ್ ಮಾಡಿದ್ದ ಫ್ರಾಂಚೈಸಿ ಫಿದಾ ಅಗಿತ್ತು. ಬಳಿಕ ಹರಾಜಿನಲ್ಲಿ 30 ಲಕ್ಷ ನೀಡಿ ಖರೀದಿಸಿತು.
ಈ ಐಪಿಎಲ್ಗೂ ಮುನ್ನ ನಡೆದ ಅಭ್ಯಾಸ ಹಾಗೂ ಇನ್ಟ್ರಾ ಸ್ಕಾಡ್ ಮ್ಯಾಚ್ಗಳಲ್ಲಿ ಹರ್ಷಲ್ ಪಟೇಲ್, ಕಮಿಂದು ಮೆಂಡಿಸ್ರಂಥ ಬೌಲರ್ಗಳ ಎದುರು ಅನಿಕೇತ್ ಅಬ್ಬರದ ಪರ್ಫಾಮೆನ್ಸ್ ನೀಡಿದ. ಇದ್ರಿಂದ ಮತ್ತಷ್ಟು ಇಂಪ್ರೆಸ್ ಆದ ಮ್ಯಾನೇಜ್ಮೆಂಟ್ ಈತನಿಗೆ ಐಪಿಎಲ್ನ ಆಡುವ ಅವಕಾಶವನ್ನು ನೀಡ್ತು. ಈ ಅವಕಾಶ ಸದ್ಬಳಕೆ ಮಾಡಿಕೊಂಡ ಅನಿಕೇತ್, ಈಗ ಸನ್ ರೈಸರ್ಸ್ ಹೈದ್ರಾಬಾದ್ನ ಹೀರೋ ಆಗಿದ್ದಾನೆ. ಐಪಿಎಲ್ನಲ್ಲಿ ಮತ್ತಷ್ಟು, ಮಗದಷ್ಟು ಸಂಚಲನ ಸೃಷ್ಟಿಸುವ ಭರವಸೆಯನ್ನು ಹುಟ್ಟು ಹಾಕಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ