/newsfirstlive-kannada/media/post_attachments/wp-content/uploads/2025/07/POOJA_SLEEP_NEW.jpg)
ಯಾರು ಯಾರಿಗೆ ಯಾವ ಯಾವ ರೀತಿಯಲ್ಲಿ ಅದೃಷ್ಟ ಲಕ್ಷ್ಮಿ ಒಲಿಯುತ್ತಾಳೆ ಎಂಬುದು ಗೊತ್ತಾಗುವುದಿಲ್ಲ. ಏಕೆಂದರೆ ಭೂಮಿ ಮೇಲೆ ಎಷ್ಟೋ ಜನರು ಹಣಕ್ಕಾಗಿ ನಿತ್ಯ ಏನೇನೋ ಮಾಡುತ್ತಾರೆ. ಕೆಲವರಂತೂ ದುಡ್ಡು ಬೇಕೆ ಬೇಕು ಎಂದು ಹಠ ಹಿಡಿದು ದುಡಿದರೂ ಹಣ ಸಿಗಲ್ಲ. ಆದರೆ ಇಲ್ಲೊಬ್ಬ ಮಹಿಳಾ ಐಪಿಎಸ್ ಆಕಾಂಕ್ಷಿಯೊಬ್ಬರು ಕೇವಲ ನಿದ್ದೆ ಮಾಡಿ ಲಕ್ಷ ಲಕ್ಷ ನಗದು ಬಹುಮಾನ ಗೆದ್ದುಕೊಂಡಿದ್ದಾರೆ.
ಬೆಂಗಳೂರಿನಲ್ಲಿ ನಡೆದ 60 ದಿನಗಳ ಸ್ಲೀಪ್ ಇಂಟರ್ನ್ಶಿಪ್ನಲ್ಲಿ ಪುಣೆ ಮೂಲದ ಐಪಿಎಸ್ ಆಕಾಂಕ್ಷಿ ಪೂಜಾ ಮಾಧವ್ ವಾವ್ಹಾಲ್ ಅವರು ‘ಸ್ಲೀಪ್ ಚಾಂಪಿಯನ್ ಆಫ್ ದಿ ಇಯರ್’ ಆಗಿ ಹೊರಹೊಮ್ಮಿದ್ದಾರೆ. ಎರಡು ತಿಂಗಳವರೆಗೆ ಪ್ರತಿರಾತ್ರಿ ಸರಾಸರಿ 9 ಗಂಟೆ ನಿದ್ದೆ ಮಾಡುವ ಮೂಲಕ ಎಲ್ಲರನ್ನೂ ಹಿಂದಿಕ್ಕಿ ಪೂಜಾ 9.1 ಲಕ್ಷ ರೂಪಾಯಿಗಳ ಕ್ಯಾಶ್ ಪ್ರೈಜ್ ಗೆದ್ದುಕೊಂಡಿದ್ದಾರೆ.
ಭಾರತದಲ್ಲಿ ನಿದ್ರೆಯನ್ನು ಎಷ್ಟು ಕೆಟ್ಟದಾಗಿ ನಿರ್ಲಕ್ಷಿಸಲಾಗುತ್ತದೆ ಎಂಬುದರ ಕುರಿತು ಜಾಗೃತಿ ಮೂಡಿಸಲು ಸ್ಲೀಪ್ ಚಾಂಪಿಯನ್ ಆಫ್ ದಿ ಇಯರ್ ಆಯೋಜನೆ ಮಾಡಲಾಗಿತ್ತು. ಈ ಬಾರಿ 4ನೇ ಆವೃತ್ತಿ ಆಗಿದ್ದು ಈ ಸೀಸನ್‌ನಲ್ಲಿ ಯಾರು ಗೆಲುವು ಪಡೆಯುತ್ತಾರೆ ಎಂಬುದು ಅತ್ಯಂತ ಕುತೂಹಲ ಮೂಡಿಸಿತ್ತು. ಏಕೆಂದರೆ ಇಡೀ ದೇಶದ್ಯಾಂತ ಒಟ್ಟು 1 ಲಕ್ಷ ಜನರು ಇಂಟರ್ನ್ಶಿಪ್ನಲ್ಲಿ ಭಾಗವಹಿಸಿದ್ದರು. ಇದರಲ್ಲಿ ಕೇವಲ 15 ಜನರು ಮಾತ್ರ ಆಯ್ಕೆ ಆಗಿದ್ದರು. ಇದರಲ್ಲಿ ಪೂಜಾ ಕೂಡ ಒಬ್ಬರಾಗಿದ್ದು ಕೊನೆಯಲ್ಲಿ ಜಯ ಸಾಧಿಸಿದ್ದಾರೆ.
ಇದನ್ನೂ ಓದಿ:ಸಿಎಸ್ಕೆಗೆ ಗುಮ್ಮಿದ RCB.. ಐಪಿಎಲ್ ಬ್ರ್ಯಾಂಡ್ ಮೌಲ್ಯ 1,58,000 ಕೋಟಿ ರೂಪಾಯಿಗೂ ಅಧಿಕ!
ಪೂಜಾ ಅವರು 91.36 ಅಂಕಗಳೊಂದಿಗೆ ಎಲ್ಲರನ್ನು ಹಿಂದಿಕ್ಕಿ ಪ್ರಥಮ ಸ್ಥಾನ ಪಡೆದು 9.1 ಲಕ್ಷ ರೂಪಾಯಿಗಳ ನಗದು ಬಹುಮಾನ ಪಡೆದುಕೊಂಡಿದ್ದಾರೆ. ಇವರ ಜೊತೆಗೆ ಎರಡು ತಿಂಗಳವರೆಗೆ ಫೈನಲ್ವರೆಗೆ ಪೈಪೋಟಿ ಕೊಟ್ಟಿದ್ದ 14 ಅಭ್ಯರ್ಥಿಗಳಿಗೆ ತಲಾ ಒಂದೊಂದು ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ