/newsfirstlive-kannada/media/post_attachments/wp-content/uploads/2024/06/IAS_DOUGHTER.jpg)
ಹೈದರಾಬಾದ್: ಪೊಲೀಸ್ ಅಕಾಡೆಮಿಗೆ ಟ್ರೈನಿ ಐಎಎಸ್ ಅಧಿಕಾರಿಯಾಗಿ ಬಂದ ಮಗಳಿಗೆ ಅದೇ ಅಕಾಡೆಮಿಯಲ್ಲಿ IPS ಆಗಿ ಕರ್ತವ್ಯದಲ್ಲಿದ್ದ ತಂದೆ ಗೌರವದಿಂದ ಸೆಲ್ಯೂಟ್ ಮಾಡಿದ್ದಾರೆ. ಬಳಿಕ ಹೂಗುಚ್ಛ ನೀಡಿ ಶುಭ ಹಾರೈಸಿದ್ದಾರೆ. ಈ ಅಪರೂಪದ ಘಟನೆ ತೆಲಂಗಾಣದ ಚಿಲ್ಕೂರು ಪ್ರದೇಶದ ರಾಜ್ ಬಹದ್ದೂರ್ ವೆಂಕಟರಂಗಾರೆಡ್ಡಿ ತೆಲಂಗಾಣ ಪೊಲೀಸ್ ಅಕಾಡೆಮಿಯಲ್ಲಿ ನಡೆದಿದೆ.
ಇದನ್ನೂ ಓದಿ: ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಯಾವಾಗಿನಿಂದ..? ಸಂಜೆಯಿಂದಲೇ ಸುಲಿಗೆಗೆ ನಿಂತ ಬಂಕ್ಗಳು
ತೆಲಂಗಾಣದ ಉಮಾಹರತಿ ಅವರು ಯುಪಿಎಸ್ಸಿ ಸಿವಿಲ್ಸ್-2022ರ ಪರೀಕ್ಷೆಗಳಲ್ಲಿ ಇಡೀ ದೇಶದಲ್ಲೇ 3ನೇ ಶ್ರೇಯಾಂಕವನ್ನು ಪಡೆದುಕೊಂಡಿದ್ದರು. ಈ ಹಿಂದೆ ನಾರಾಯಣಪೇಟ್ ಜಿಲ್ಲೆಯ ಎಸ್ಪಿಯಾಗಿ ಕೆಲಸ ಮಾಡಿದ್ದ ಆಕೆಯ ತಂದೆ ವೆಂಕಟೇಶ್ವರಲು ಪ್ರಸ್ತುತ ತೆಲಂಗಾಣದ ಪೊಲೀಸ್ ಅಕಾಡೆಮಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ಇದೇ ಅಕಾಡೆಗೆ ಉಮಾಹರತಿ ಅವರು ಟ್ರೈನಿ ಐಎಎಸ್ ಅಧಿಕಾರಿಯಾಗಿ ಬರುತ್ತಿದ್ದಂತೆ ಕರ್ತವ್ಯದಲ್ಲಿದ್ದ ತಂದೆ ಮಗಳನ್ನು ಕಂಡು ಎದೆಗುಂದದೇ ಬಿಗ್ ಸೆಲ್ಯೂಟ್ ಮಾಡಿದ್ದಾರೆ. ಬಳಿಕ ನಮಸ್ಕಾರ ಮಾಡಿ ಮಗಳಿಗೆ ಹೂಗುಚ್ಛ ನೀಡಿ ಸ್ವಾಗತ ಕೋರಿದ್ದಾರೆ. ಮಗಳನ್ನು ಉನ್ನತ ಸ್ಥಾನದಲ್ಲಿ ತಂದೆ ಹೆಮ್ಮೆ ಪಟ್ಟುಕೊಂಡಿದ್ದಾರೆ. ಸದ್ಯ ಈ ಸಂಬಂಧದ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿವೆ.
ಇದನ್ನೂ ಓದಿ:ಮಾಜಿ ಸಿಎಂ HD ಕುಮಾರಸ್ವಾಮಿ, ಬೊಮ್ಮಾಯಿ, ತುಕಾರಾಂ ರಾಜೀನಾಮೆ.. ಬೈ ಎಲೆಕ್ಷನ್ ಯಾವಾಗ?
Proud father, who is SP rank police officer, salutes his trainee IAS daughter N Uma Harathi when she visited #Telangana Police Academy #TGPA today. N Venkateshwarlu works as Deputy Director, TGPA, while his daughter topped #UPSC civils exam 2022 securing All India 3rd rank. pic.twitter.com/xM1haCHO2m
— L Venkat Ram Reddy (@LVReddy73)
Proud father, who is SP rank police officer, salutes his trainee IAS daughter N Uma Harathi when she visited #Telangana Police Academy #TGPA today. N Venkateshwarlu works as Deputy Director, TGPA, while his daughter topped #UPSC civils exam 2022 securing All India 3rd rank. pic.twitter.com/xM1haCHO2m
— L Venkat Ram Reddy (@LVReddy73) June 15, 2024
">June 15, 2024
7 ಪ್ರೊಬೇಷನರಿ ಐಎಎಸ್ ಅಧಿಕಾರಿಗಳು RBVRR TGPAಗೆ ಪ್ರಾಯೋಗಿಕ ತರಬೇತಿಗಾಗಿ ಬಂದಿದ್ದರು. ಇದರಲ್ಲಿ ಐಪಿಎಸ್ ವೆಂಕಟೇಶ್ವರಲು ಮಗಳು ಕೂಡ ಒಬ್ಬರಾಗಿದ್ದಾರೆ. ಈ 7 ಟ್ರೈನಿ ಐಎಎಸ್ ಅಧಿಕಾರಿಗಳನ್ನ ಪೊಲೀಸ್ ಅಕಾಡೆಮಿ ನಿರ್ದೇಶಕ ಅಭಿಲಾಷ್ ಬಿಷ್ತ್ ಬದಲಿಗೆ ಜಂಟಿ ನಿರ್ದೇಶಕ ಡಿ ಮುರಳೀಧರ್ ಮತ್ತು ಉಪ ನಿರ್ದೇಶಕ ವೆಂಕಟೇಶ್ವರಲು ಸ್ವಾಗತ ಕೋರಿದರು. ನಂತರ ಅಕಾಡೆಮಿಯ ಇನ್ನೋರ್ವ ಉಪ ನಿರ್ದೇಶಕಿ ಸಿ ನರ್ಮದಾ ಅವರು ಪ್ರೊಬೇಷನರಿ ಐಎಎಸ್ ಅಧಿಕಾರಿಗಳಿಗೆ ಸಂಕ್ಷಿಪ್ತ ವಿವರಣೆ ಇದೇ ವೇಳೆ ನೀಡಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ