IPS ಅಧಿಕಾರಿಗೆ ಸಂಬಳ ಎಷ್ಟು.. ಯಾವ ಪೋಸ್ಟ್​​ಗೆ ಹೆಚ್ಚು ಸ್ಯಾಲರಿ ನೀಡುತ್ತೆ ಸರ್ಕಾರ?

author-image
Bheemappa
Updated On
IPS ಅಧಿಕಾರಿಗೆ ಸಂಬಳ ಎಷ್ಟು.. ಯಾವ ಪೋಸ್ಟ್​​ಗೆ ಹೆಚ್ಚು ಸ್ಯಾಲರಿ ನೀಡುತ್ತೆ ಸರ್ಕಾರ?
Advertisment
  • ಐಪಿಎಸ್​ ಆದರೆ ಬದುಕಲ್ಲಿ ಆ ಖದರ್ ಬೇರೆಯದ್ದೆ ಇರುತ್ತೆ
  • ಈ ಆಕರ್ಷಕ ಜಾಬ್​ಗೆ ಪೈಪೋಟಿ ಇರುತ್ತದೆ, ಶ್ರಮಬೇಕು
  • ಒಟ್ಟು ಎಷ್ಟು ಸ್ಯಾಲರಿಯನ್ನು ಸರ್ಕಾರ ಅಧಿಕಾರಿಗೆ ನೀಡುತ್ತೆ?

ಐಎಎಸ್, ಐಪಿಎಸ್​, ಐಎಫ್​ಎಸ್​ ಅಧಿಕಾರಿಗಳು ಆದರೆ ಬದುಕಲ್ಲಿ ಆ ಖದರ್, ಆ ಭಾಷೆ, ನೀತಿ, ನಿಯಮಗಳು ಬೇರೆ ರೀತಿಯೇ ಇರುತ್ತೆ. ಇಂತಹ ಮಹತ್ವದ ಹುದ್ದೆಯಲ್ಲಿ ಕಾರ್ಯನಿರ್ವಹಿಸಬೇಕು ಎಂದರೆ ಹಗಲಿರಳು ಇಷ್ಟವನ್ನೇ ಕಷ್ಟಪಟ್ಟು ಶ್ರಮಿಸಬೇಕು, ಓದಬೇಕು. ಆಗ ಮಾತ್ರ ಆ ಕೆಲಸದ ಜವಾಬ್ದಾರಿ ನಮಗೆ ಒಲಿದು ಬರುತ್ತದೆ. ಇಂತಹ ಪೋಸ್ಟ್​ಗೆ ಹೋಗಬೇಕಾದರೆ ಸ್ಯಾಲರಿ ಬಗ್ಗೆ ಚಿಂತೆ ಮಾಡಲ್ಲ. ಆದರೆ ಸದ್ಯ ಐಪಿಎಸ್​ ಆದರೆ ಮೊದಲು ಎಷ್ಟು ಸಂಬಳ ಇರುತ್ತದೆ ಎಂದು ಸಣ್ಣದಾಗಿ ಕ್ಷಣದಲ್ಲಿ ತಿಳಿದುಕೊಳ್ಳೋಣ.

ಇದನ್ನೂ ಓದಿ: ಸರ್ಕಾರಿ ಅಧಿಕಾರಿಗಳಿಗೆ ಬಿಗ್ ಶಾಕ್​.. ಆಸ್ತಿ ವಿವರ ಘೋಷಿಸಿಲ್ಲ ಎಂದ್ರೆ ಈ ತಿಂಗಳ ಸಂಬಳ ಕಟ್

ಇಂಡಿಯನ್ ಪೊಲೀಸ್​ ಸರ್ವೀಸ್​ (ಐಪಿಎಸ್)ಗೆ ಸೇರಬೇಕೆಂದರೆ ವಿದ್ಯೆ, ಬುದ್ಧಿ ಜೊತೆಗೆ ನಮ್ಮ ಪಿಸಿಕಲ್ (ಕಟ್ಟು ಮಸ್ತಾದ ದೇಹ) ಕೆಪಾಸಿಟಿಯು ಫುಲ್ ಫಿಟ್ ಆಗಿರಬೇಕು. ನೋಡಲು ಒಳ್ಳೆ ಆರಡಿ ಇದ್ದು ಸದೃಢ ದೇಹ ಹೊಂದಿರಬೇಕು. ಅಬ್ಬಾ ಪೊಲೀಸ್ ಅಂದರೆ ಹೀಗಿರಬೇಕು ಎನ್ನಬೇಕು. ಆ ರೀತಿ ಐಪಿಎಸ್ ಆಫೀಸರ್ ಇರಬೇಕು. ಇದು ಆಕರ್ಷಕ ಜಾಬ್ ಆಗಿದ್ದರಿಂದ ಪರೀಕ್ಷೆ, ಸಂದರ್ಶನದಲ್ಲಿ ಇದಕ್ಕೆ ಪೈಪೋಟಿ ಇರುತ್ತದೆ. ಅಲ್ಲಿ ಆಯ್ಕೆಯಾಗಿ ಟ್ರೈನಿಂಗ್ ಪೂರ್ಣವಾದ ನಂತರ ಐಪಿಎಸ್​ ಆಫೀಸರ್ ಆಗಬಹುದು. ಈ ಹುದ್ದೆಗೆ ಆಯ್ಕೆಯಾದ ಅಧಿಕಾರಿಗೆ ಮೊದಲು ಸ್ಯಾಲರಿ 56,100 ರೂಪಾಯಿಗಳು ಆಗಿರುತ್ತದೆ.

ಇದನ್ನೂ ಓದಿ: SSLC, ಪಿಯುಸಿ, ITI, ಪದವಿ ಮುಗಿಸಿದವ್ರಿಗೆ ಗುಡ್​ನ್ಯೂಸ್.. ಸರ್ಕಾರಿ ಹುದ್ದೆಗಳಿಗೆ ಅರ್ಜಿ ಆಹ್ವಾನ, ಸಂಬಳ ಎಷ್ಟು?

publive-image

7 ನೇ ವೇತನ ಆಯೋಗವು ನಿಗದಿಪಡಿಸಿದ ಮಾರ್ಗಸೂಚಿಗಳ ಅನುಸಾರ 2023ರ ಪ್ರಕಾರ ಐಪಿಎಸ್​ ಅಧಿಕಾರಿಯ ವೇತನ ನಿರ್ಧರಿಸಲಾಗುತ್ತದೆ. ಈ ಆಯೋಗದ ಪ್ರಕಾರ ಅವರಿಗೆ ಪ್ರತಿ ತಿಂಗಳು 56,100 ರೂಪಾಯಿಗಳು ನೀಡಲಾಗುತ್ತದೆ. ಇದರಲ್ಲಿ ವಿವಿಧ ಭತ್ಯೆಗಳು ಮತ್ತು ಸವಲತ್ತುಗಳನ್ನ ಒಳಗೊಂಡಿರುತ್ತದೆ. ಈ ಎಲ್ಲವೂಗಳನ್ನ ಸೇರಿಸಿದರೆ ಅಂದಾಜು ಒಟ್ಟು 71,000 ದಿಂದ 72,000 ರೂವರೆಗೆ ವೇತನ ಶ್ರೇಣಿ ಇರುತ್ತದೆ. ವೃತ್ತಿಯಲ್ಲಿ ಹಾಗೇ ಉನ್ನತ ಹುದ್ದೆಗಳಿಗೆ ಪ್ರಮೋಷನ್ ಆದಾಗ ಈ ಸಂಬಳ ಬದಲಾವಣೆ ಆಗುತ್ತಿರುತ್ತದೆ. ಈ ಶ್ರೇಣಿಯಲ್ಲಿ ಡೈರೆಕ್ಟರ್ ಜನೆರಲ್ ಆಫ್ ಪೊಲೀಸ್/ ಡೈರೆಕ್ಟರ್ ಆಫ್ ಐಬಿ ಅಥವಾ ಸಿಬಿಐ ಹುದ್ದೆಗೆ ಏರುವವರಿಗೆ ₹2,25,000 ಸಂಬಳ ಇರುತ್ತದೆ.

ಸ್ಯಾಲರಿ ಜೊತೆಗೆ ಅಧಿಕಾರಿ ಏನೇನು ನೀಡಲಾಗುತ್ತೆ?

ಬೇಸಿಕ್ ಸ್ಯಾಲರಿ 56,100 ರೂಪಾಯಿಗಳು ಅಲ್ಲದೇ ಇವರಿಗೆ ಪ್ರತ್ಯೇಕವಾಗಿ ಮನೆ, ಮನೆ ಕೆಲಸದವರು, ಅಡುಗೆಯವರು, ಭದ್ರತೆ, ಕಾರು, ಪೆಟ್ರೋಲ್ ಹಾಗೂ ಡ್ರೈವರ್ ಸೌಲಭ್ಯಗಳನ್ನ ನೀಡಲಾಗುತ್ತದೆ. ಇವಕ್ಕೆ ಸರ್ಕಾರ ಹಣ ಪಾವತಿ ಮಾಡುತ್ತದೆ.

ಶ್ರೇಣಿ (ರ್ಯಾಂಕ್​) ಪ್ರಕಾರ IPS ಸಂಬಳ ಬೇರೆ ಬೇರೆಯಾಗಿರುತ್ತದೆ.

ಡೈರೆಕ್ಟರ್ ಜನೆರಲ್ ಆಫ್ ಪೊಲೀಸ್/ ಡೈರೆಕ್ಟರ್ ಆಫ್ ಐಬಿ ಅಥವಾ ಸಿಬಿಐ- ₹2,25,000
ಡೈರೆಕ್ಟರ್ ಜನೆರಲ್ ಆಫ್ ಪೊಲೀಸ್- ₹2,05,400
ಇನ್​ಸ್ಪೆಕ್ಟರ್ ಜನೆರಲ್ ಆಫ್ ಪೊಲೀಸ್- ₹1,44,200
ಡೆಪ್ಯೂಟಿ ಇನ್​ಸ್ಪೆಕ್ಟರ್ ಜನೆರಲ್ ಆಫ್ ಪೊಲೀಸ್- ₹1,31,100
ಸೀನಿಯರ್ ಸುಪರಿಟಿಂಡೆಂಟ್ ಆಫ್ ಪೊಲೀಸ್- ₹78,800
ಅಡಿಷನಲ್ ಸುಪರಿಟಿಂಡೆಂಟ್ ಆಫ್ ಪೊಲೀಸ್- ₹67,700
ಡೆಪ್ಯೂಟಿ ಸುಪರಿಟಿಂಡೆಂಟ್ ಆಫ್ ಪೊಲೀಸ್- ₹56,100

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment