/newsfirstlive-kannada/media/post_attachments/wp-content/uploads/2025/06/IPS-SEEMANTH-KUMAR.jpg)
ಸೀಮಂತ್ ​ಕುಮಾರ್ ಸಿಂಗ್ ಅವರನ್ನು ಬೆಂಗಳೂರು ನೂತನ ಪೊಲೀಸ್ ಕಮಿಷನರ್ ಆಗಿ ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಬಿ.ದಯಾನಂದ್ ಅಮಾನತು ಬೆನ್ನಲ್ಲೇ ಸೀಮಂತ್​ಕುಮಾರ್ ಅವರನ್ನು ನೇಮಕ ಮಾಡಿದೆ.
ಯಾರು ಅವರು..?
ಸದ್ಯ ಸೀಮಂತ್​ ಕುಮಾರ್ ಎಸಿಬಿಯ ಎಡಿಜಿಪಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಿಎಂಟಿಎಫ್​ ಎಡಿಜಿಪಿಯಾಗಿಯೂ ಕಾರ್ಯನಿರ್ವಹಿಸಿರುವ ಅವರು, 1996ರ ಬ್ಯಾಚ್​ನ ಐಪಿಎಸ್​ ಅಧಿಕಾರಿ. 2000-2004ರವರೆಗೆ ದಕ್ಷಿಣ ಕನ್ನಡ ಎಸ್​ಪಿ ಆಗಿ ಸೇವೆ ಸಲ್ಲಿಸಿದ್ದಾರೆ. ಜೊತೆಗೆ 2010 ರಿಂದ 12ವರೆಗೆ ಮಂಗಳೂರು ನಗರ ಪೊಲೀಸ್​ ಆಯುಕ್ತರಾಗಿದ್ದರು. ಇವರು ಮೂಲತಹ ಜಾರ್ಖಂಡ್​ನ ರಾಂಚಿಯವರು.
ಜೂನ್ 3 ರಂದು ಐಪಿಎಲ್ ಫೈನಲ್ ಮ್ಯಾಚ್​ ನಡೆದಿತ್ತು. ಈ ಹೈ-ವೋಲ್ಟೇಜ್ ಪಂದ್ಯದಲ್ಲಿ ಆರ್​ಸಿಬಿ, ಪಂಜಾಬ್ ಕಿಂಗ್ಸ್​ ತಂಡವನ್ನು ಸೋಲಿಸಿ ಚಾಂಪಿಯನ್ ಆಗಿತ್ತು. ಬೆನ್ನಲ್ಲೇ, ಆರ್​ಸಿಬಿ ಮ್ಯಾನೇಜ್ಮೆಂಟ್​, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ವಿಕ್ಟರಿ ಮೆರವಣಿಗೆ ಆಯೋಜಿಸಿತ್ತು. ಈ ಕಾರ್ಯಕ್ರಮಕ್ಕೆ ಆರ್​ಸಿಬಿ ಅಭಿಮಾನಿಗಳನ್ನ ಆಯೋಜಿಸಿತ್ತು. ಯಾವುದೇ ಪೂರ್ವ ತಯಾರಿ ಇಲ್ಲದೇ ಕಾರ್ಯಕ್ರಮ ಆಯೋಜನೆಗೊಂಡ ಪರಿಣಾಮ ನಿರೀಕ್ಷೆಗೂ ಮೀರಿ ಅಭಿಮಾನಿಗಳು ಬಂದಿದ್ದರಿಂದ ಕಾಲ್ತುಳಿತ ಸಂಭವಿಸಿದೆ. ಇದರಿಂದ 11 ಮಂದಿಯ ಜೀವ ಹೋಗಿದೆ.
ಇದನ್ನೂ ಓದಿ: ಕಾಲ್ತುಳಿತ ಬಗ್ಗೆ ಗಂಭೀರ್ ಮೊದಲ ಪ್ರತಿಕ್ರಿಯೆ.. ಮುಖ್ಯ ಕೋಚ್​​ರಿಂದ ದೊಡ್ಡ ಹೇಳಿಕೆ..!
ದುರಂತ ನಂತರ ಎಚ್ಚೆತ್ತುಕೊಂಡಿರುವ ರಾಜ್ಯ ಸರ್ಕಾರ, ಪೊಲೀಸ್ ಇಲಾಖೆಯನ್ನೇ ನೇರವಾಗಿ ಹೊಣೆಗಾರರನ್ನಾಗಿ ಮಾಡಿದೆ. ಅಂತೆಯೇ ಬೆಂಗಳೂರು ಪೊಲೀಸ್ ಕಮಿಷನರ್ ಬಿ.ದಯಾನಂದ್ ಅವರನ್ನು ಅಮಾನತು ಮಾಡಿದೆ. ಮಾತ್ರವಲ್ಲ, ಎಸಿಪಿ ಬಾಲಕೃಷ್ಣ, ಹೆಚ್ಚುವರಿ ಪೊಲೀಸ್ ಆಯುಕ್ತ ವಿಕಾಸ್ ಕುಮಾರ್ ಅವರನ್ನ ಅಮಾನತು ಮಾಡಿ ಆದೇಶ ಮಾಡಿದೆ. ಜೊತೆಗೆ ಕಬ್ಬನ್ ​ಪಾರ್ಕ್ ಪೊಲೀಸ್ ಇನ್ಸ್​ಪೆಕ್ಟರ್, ಎಸಿಪಿ, ಸೆಂಟ್ರಲ್ ಡಿಸಿಪಿ, ಕ್ರಿಕೆಟ್ ಸ್ಟೇಡಿಯಂನ ಇನ್​ಚಾರ್ಜ್​ ಇವರನ್ನು ತತ್ ಕ್ಷಣದಿಂದ ಅಮಾನತು ಮಾಡಲಾಗಿದೆ.
ಇದನ್ನೂ ಓದಿ: ಕಬ್ಬನ್ ಪಾರ್ಕ್ ಠಾಣೆಯಲ್ಲಿ ದಾಖಲಾದ FIR ಸಿಐಡಿಗೆ ವರ್ಗಾವಣೆ -ಕಾಲ್ತುಳಿತದ ವಿರುದ್ಧ ಸರ್ಕಾರ 6 ಆದೇಶ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ