/newsfirstlive-kannada/media/post_attachments/wp-content/uploads/2024/04/MODI-WARNING.jpg)
ಇಸ್ರೇಲ್ ಮೇಲೆ ಇರಾನ್ ಯುದ್ಧ ಘೋಷಿಸಿದ್ದು, 200ಕ್ಕೂ ಹೆಚ್ಚು ಡ್ರೋಣ್​​ಗಳು ಹಾಗೂ ಮಿಸೈಲ್​​​ಗಳನ್ನು ಉಡಾಯಿಸಿದೆ. ಈ ಮೂಲಕ ವಿಶ್ವದಲ್ಲಿ ಮತ್ತೊಂದು ಯುದ್ಧದ ಸಂದಿಗ್ಧತೆ ಸೃಷ್ಟಿಯಾಗಿದೆ. ಇಸ್ರೇಲ್ ಮೇಲಿನ ಇರಾನ್ ದಾಳಿಗೆ ಭಾರತ ಕಳವಳ ವ್ಯಕ್ತಪಡಿಸಿದೆ.
ದಾಳಿಯ ಬಗ್ಗೆ ಹಾಗೂ ಅಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆ ಕುರಿತು ಕಳವಳ ವ್ಯಕ್ತಪಡಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯ ಹೇಳಿಕೆ ನಿಡಿದೆ. ಇಸ್ರೇಲ್ ಮತ್ತು ಇರಾನ್ ನಡುವೆ ಹೆಚ್ಚುತ್ತಿರುವ ಹಗೆತನದಿಂದ ಈ ಪ್ರದೇಶದಲ್ಲಿ ಶಾಂತಿ ಮತ್ತು ಭದ್ರತೆಗೆ ಧಕ್ಕೆಯಾಗುತ್ತಿದೆ. ಕೂಡಲೇ ಉದ್ವಿಗ್ನತೆ, ಹಿಂಸಾಚಾರದಿಂದ ಹಿಂದೆ ಸರಿಯಲು ರಾಜತಾಂತ್ರಿಕತೆ ಮೂಲಕ ಭಾರತ ಕರೆ ನೀಡುತ್ತದೆ ಎಂದು ತಿಳಿಸಿದೆ.
ಇದನ್ನೂ ಓದಿ:ತಂಪೆರೆದ ಮಳೆರಾಯ.. ರಾಜ್ಯದ ಯಾವ್ಯಾವ ಜಿಲ್ಲೆಯಲ್ಲಿ ಭಾರೀ ಮಳೆ..?
ಪರಿಸ್ಥಿತಿಯನ್ನು ಭಾರತ ಸೂಕ್ಷ್ಮವಾಗಿ ಗಮನಿಸುತ್ತಿದೆ. ಅಲ್ಲಿನ ನಮ್ಮ ರಾಯಭಾರ ಕಚೇರಿಗಳು, ಭಾರತೀಯ ಸಮುದಾಯದೊಂದಿಗೆ ನಿಕಟ ಸಂಪರ್ಕದಲ್ಲಿದ್ದೇವೆ. ಈ ಪ್ರದೇಶದಲ್ಲಿ ಭದ್ರತೆ ಮತ್ತು ಸ್ಥಿರತೆಯನ್ನು ಕಾಪಾಡಿಕೊಳ್ಳುವುದು ಮುಖ್ಯವಾಗಿದೆ ಎಂದು ಭಾರತ ಹೇಳಿದೆ.
Statement on the situation in West Asia:https://t.co/kpJzqwTVWCpic.twitter.com/cSbJQrAjCC
— Randhir Jaiswal (@MEAIndia) April 14, 2024
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ