Advertisment

3ನೇ ಮಹಾಯುದ್ಧದ ಆತಂಕ.. ಇಸ್ರೇಲ್​ ಮೇಲೆ 200 ಡ್ರೋನ್​, ಭಾರೀ ಮಿಸೈಲ್ಸ್​ ಉಡಾಯಿಸಿದ ಇರಾನ್

author-image
Bheemappa
Updated On
ಇರಾನ್ ಹಿಡಿತದಲ್ಲಿ 17 ಭಾರತೀಯರು; ಇಸ್ರೇಲ್-ಇರಾನ್ ಸಂಘರ್ಷ ಹೆಚ್ಚಾದ್ರೆ ಭಾರತಕ್ಕೆ ದೊಡ್ಡ ಸಮಸ್ಯೆ, ಯಾಕೆ ಗೊತ್ತಾ?
Advertisment
  • ಹಡಗಿನಲ್ಲಿದ್ದ 25ರ ಪೈಕಿ 17 ಮಂದಿ ಭಾರತೀಯ ಸಿಬ್ಬಂದಿ ಲಾಕ್!
  • ಯಾವುದೇ ಕ್ಷಣದಲ್ಲಾದ್ರು ಇಸ್ರೇಲ್- ಇರಾನ್ ಮಧ್ಯೆ ಯುದ್ಧ ಆರಂಭ
  • ಇರಾನ್ ವಶಕ್ಕೆ ಪಡೆದ ಹಡಗಿನಲ್ಲಿನ 17 ಸಿಬ್ಬಂದಿ ಭಾರತೀಯರಾ..?

ಇಸ್ರೇಲ್​​-ಹಮಾಸ್​​​​ ಯುದ್ಧದ ತಣ್ಣಗಾಗುವ ಮುನ್ನವೇ ಮಧ್ಯ ಪ್ರಾಚ್ಯದಲ್ಲಿ ಮತ್ತೆ ಭೀಕರ ಯುದ್ಧದ ಛಾಯೆ ಆವರಿಸಿದೆ. ಸಿರಿಯಾ ರಾಜಧಾನಿ ಡಮಾಸ್ಕಸ್‌ನಲ್ಲಿನ ಇರಾನ್‌ ರಾಯಭಾರ ಕಚೇರಿ ಮೇಲೆ ಇಸ್ರೇಲ್‌ ವಾಯು ದಾಳಿ ನಡೆಸಿ, ಹಿರಿಯ ಅಧಿಕಾರಿಗಳನ್ನು ಹತ್ಯೆಗೈದ ಬಳಿಕ ಪ್ರತೀಕಾರದ ದಾಳಿಗೆ ಇರಾನ್‌ ಸಜ್ಜಾಗಿದೆ. ಇದರ ಮಧ್ಯೆ ಅಮೆರಿಕ ಕೂಡ ಎಂಟ್ರಿ ಕೊಟ್ಟಿದ್ದು ಮತ್ತೊಂದು ಘೋರ ಯುದ್ಧದ ಆತಂಕ ಎದುರಾಗಿದೆ.

Advertisment

ಈಗಾಗಲೇ ಇರಾನ್​ 200 ಡ್ರೋನ್​, ಬ್ಯಾಲಿಸ್ಟಿಕ್ ಮತ್ತು ಕ್ರೂಷಿಯಲ್ ಮಿಸೈಲ್​ಗಳನ್ನು ಇಸ್ರೇಲ್ ಮೇಲೆ ಉಡಾಯಿಸಿದೆ. ಇವುಗಳನ್ನು ಗಡಿ ಭಾಗದಲ್ಲೇ ನಮ್ಮ ರಕ್ಷಣಾ ಪಡೆಗಳು ತಡೆ ಹಿಡಿದಿವೆ ಎಂದು ಇಸ್ರೇಲ್ ಹೇಳಿದೆ. ಇದರಿಂದ ನಮಗೆ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ ಅಷ್ಟೇ ಎಂದು ಹೇಳಿದೆ. ಇನ್ನು ವಿಶ್ವಸಂಸ್ಥೆಯ ಸೆಕ್ರೆಟರಿ-ಜನರಲ್ ಆಂಟೋನಿಯೊ ಗುಟೆರೆಸ್ ಇದನ್ನು ಗಂಭೀರವಾಗಿ ಖಂಡಿಸಿದ್ದಾರೆ.

publive-image

ಇರಾನ್, ಇಸ್ರೇಲ್ ಮೇಲೆ ದಾಳಿ ಮಾಡಿದ್ದು ಈ ಭಯಾನಕ ಘಟನೆಯಲ್ಲಿ ಎಷ್ಟು ಸಾವು, ನೋವು ಆಗಿದ್ದಾವೆ ಎಂದು ಇನ್ನು ತಿಳಿದು ಬಂದಿಲ್ಲ. ನಿನ್ನೆಯಿಂದಲೂ ಇರಾನ್, ಇಸ್ರೇಲ್ ಮೇಲೆ ಭಯಾನಕವಾಗಿ ಡ್ರೋನ್​, ಬ್ಯಾಲಿಸ್ಟಿಕ್ ಮತ್ತು ಕ್ರೂಷಿಯಲ್ ಮಿಸೈಲ್​ಗಳ ಮೂಲಕ ಅಟ್ಯಾಕ್ ಮಾಡುತ್ತಿದೆ. ಇದರಿಂದ ಜನರಲ್ಲಿ ಭಾರೀ ಆತಂಕ ವ್ಯಕ್ತವಾಗುತ್ತಿದೆ.

ಇಸ್ರೇಲ್-ಪ್ಯಾಲೆಸ್ತೈನ್ ನಡುವಿನ ಯುದ್ಧಕ್ಕೆ ಇರಾನ್​ ಮತ್ತು ಅಮೆರಿಕ ಎಂಟ್ರಿ

ಇಸ್ರೇಲ್​​ ಹಾಗೂ ಇರಾನ್​ ನಡುವೆ ಯುದ್ಧ ಆರಂಭವಾಗುವ ಎಲ್ಲ ಲಕ್ಷಣಗಳು ಕಾಣಿಸುತ್ತಿವೆ, ಕಳೆದ 6 ತಿಂಗಳ ಹಿಂದೆ ಇಸ್ರೇಲ್​-ಪ್ಯಾಲೇಸ್ತೈನ್​​ ನಡುವಿನ ಯುದ್ಧದಲ್ಲಿ ಲಕ್ಷಾಂತರ ಜನರ ಮಾರಣ ಹೋಮ ನಡೆದಿತ್ತು. ಈಗ ಬೂದಿ ಮುಚ್ಚಿದ ಕೆಂಡದಂತಿದ್ದ ಇಸ್ರೇಲ್-ಪ್ಯಾಲೆಸ್ತೈನ್ ನಡುವಿನ ಯುದ್ಧಕ್ಕೆ ಇರಾನ್​ ಮತ್ತು ಅಮೆರಿಕ ಎಂಟ್ರಿ ಕೊಟ್ಟಿದ್ದು, ಆತಂಕಕ್ಕೆ ಕಾರಣವಾಗಿದೆ. ಮತ್ತೆ ಮಧ್ಯ ಪ್ರಾಚ್ಯ ದೇಶಗಳಲ್ಲಿ ರಕ್ತದೋಕುಳಿ ಹರಿಯುವ ಸಾಧ್ಯತೆ ಇದೆ.

Advertisment

ಇರಾನ್‌ ಪಡೆಯಿಂದ ಇಸ್ರೇಲಿ-ಸಂಯೋಜಿತ ಸರಕು ಹಡಗು ವಶ!

ಇಸ್ರೇಲ್ ಹಾಗೂ ಇರಾನ್ ನಡುವೆ ಯಾವುದೇ ಕ್ಷಣದಲ್ಲೂ ಯುದ್ಧ ಆರಂಭಗೊಳ್ಳುವ ಸಾಧ್ಯತೆ ಇದೆ. ಮುಂದಿನ ಕೆಲ ಗಂಟೆಗಲ್ಲಿ ಇರಾನ್ ಮೇಲೆ ಇಸ್ರೇಲ್ ದಾಳಿ ನಡೆಸುವ ಸಾಧ್ಯತೆಯನ್ನ ಹಲವು ಮೂಲಗಳು ಹೇಳುತ್ತಿದೆ. ಈ ಎಚ್ಚರಿಕೆ ನಡುವೆ ಇರಾನ್ ಈಗಾಗಲೇ ಟಾರ್ಗೆಟ್ ದಾಳಿ ಆರಂಭಿಸಿದೆ. ಇಸ್ರೇಲ್ ಮೂಲದ ಸರಕು ಹಡಗನ್ನು ಯುಎಇ ಸಮುದ್ರ ತೀರದಲ್ಲಿ ಇರಾನ್ ಸೇನೆ ವಶಕ್ಕೆ ಪಡೆದಿದೆ. ಹೆಲಿಕಾಪ್ಟರ್ ಮೂಲಕ ಹಡಗು ಚೇಸ್ ಮಾಡಿದ ಇರಾನ್ ಸೇನೆ ಸೈನಿಕರನ್ನು ಸರಕು ಹಡಗಿನ ಮೇಲೆ ಇಳಿಸಿ ವಶಕ್ಕೆ ಪಡೆದಿದೆ. ಈ ಹಡಗಿನ 25 ಸಿಬ್ಬಂದಿ ಪೈಕಿ 17 ಸಿಬ್ಬಂದಿ ಭಾರತೀಯರು ಅನ್ನೋ ಮಾಹಿತಿ ಲಭ್ಯವಾಗಿದೆ.

ಇಸ್ರೇಲ್​ ಬೆನ್ನಿಗೆ ನಿಂತ ವಿಶ್ವದ ದೊಡ್ಡಣ್ಣ.. ಇರಾನ್​​ಗೆ ವಾರ್ನ್​!

ಮತ್ತೊಂದೆಡೆ, ಇರಾನ್​​ ಮತ್ತು ಇಸ್ರೇಲ್​ ನಡುವಿನ ಉದ್ವಿಗ್ನತೆ ಬಗ್ಗೆ ಪ್ರತಿಕ್ರಿಸಿರುವ ಅಮೆರಿಕ ಅಧ್ಯಕ್ಷ ಜೋ ಬೈಡನ್​​​, ಇದು ಸೂಕ್ಷ್ಮ ವಾತಾವರಣವನ್ನು ಸೃಷ್ಟಿಸಿದೆ. ಜೊತೆಗೆ ಯುದ್ಧಕ್ಕೆ ಮುಂದಾಗಬೇಡಿ ಅಂತ ಇರಾನ್​ಗೂ ​ಎಚ್ಚರಿಕೆಯ ಸಂದೇಶ ನೀಡಿದ್ದಾರೆ. ಮತ್ತೊಂದು ಕಡೆ ಇಸ್ರೇಲ್​ ಪರ ಬ್ಯಾಟ್​​ ಬೀಸಿರುವ ಅಮೆರಿಕ ಅಧ್ಯಕ್ಷ ಬೈಡನ್​​, ಯುದ್ಧದಲ್ಲಿ ಇಸ್ರೇಲ್​ ಪರ ನಮ್ಮ ಬೆಂಬಲ ಇದೆ. ಯುದ್ಧಕ್ಕೆ ಬೇಕಾದ ಎಲ್ಲ ಸಹಾಯ ಮಾಡಲಿದ್ದೇವೆ ಅಂತ ಹೇಳಿರುವುದು ಹಮಾಸ್​​​ ವಿರುದ್ಧ ಯುದ್ಧ ಮಾಡಿ ಕಂಗೆಟ್ಟು ಹೋಗಿರುವ ಇಸ್ರೇಲ್​ಗೆ ಆನೆ ಬಲ ಬಂದತಾಗಿದೆ.

ಇದನ್ನೂ ಓದಿ: ಇಬ್ಬರು ಮಕ್ಕಳ ಹತ್ಯೆ ಮಾಡಿ ಜೈಲು ಸೇರಿದ್ದ ತಾಯಿ.. ಪರಪ್ಪನ ಅಗ್ರಹಾರ ಜೈಲಿನಲ್ಲಿ ಆ**ತ್ಯೆ

Advertisment

ತನ್ನ ಯುದ್ಧ ನೌಕೆಯನ್ನ ಇಸ್ರೇಲ್‌ ನೆಲಕ್ಕೆ ಕಳುಹಿಸಿದ ಅಮೆರಿಕ

ಇಸ್ರೇಲ್‌ ಮೇಲೆ ಇರಾನ್‌ ದಾಳಿ ಮಾಡುವ ಸಾಧ್ಯತೆ ಇರುವ ಕಾರಣ ಅಮೆರಿಕ ಈಗ ತನ್ನ ಯುದ್ಧ ನೌಕೆಯನ್ನು ಇಸ್ರೇಲ್‌ಗೆ ಕಳುಹಿಸಿದೆ. ಸಂಭವನೀಯ ಇರಾನ್ ದಾಳಿ ಎದುರಿಸಲು ಅಮೆರಿಕ ಸನ್ನದ್ಧವಾಗಿದೆ. ಇಸ್ರೇಲ್ ಹಾಗೂ ಅಮೆರಿಕದ ಪಡೆಗಳ ರಕ್ಷಣೆಗಾಗಿ ಯುದ್ಧ ನೌಕೆಗಳು ಧಾವಿಸಿವೆ ಎಂದು ಅಂತಾರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಇಸ್ರೇಲ್ ಮತ್ತು ಅಮೆರಿಕನ್ ಪಡೆಗಳನ್ನು ರಕ್ಷಿಸಲು ಯುಎಸ್ ಹೆಚ್ಚುವರಿ ಮಿಲಿಟರಿ ಸೇನೆಯ ಜೊತೆ 2 ಯುದ್ಧ ನೌಕೆಗಳನ್ನು ಪೂರ್ವ ಮೆಡಿಟರೇನಿಯನ್‌ ಸಮುದ್ರಕ್ಕೆ ಕಳುಹಿಸಿದೆ. ಕ್ಷಿಪಣಿ ಮತ್ತು ಡ್ರೋನ್‌ ಮೂಲಕ ಇರಾನ್‌ ಇಸ್ರೇಲ್‌ ಮೇಲೆ ದಾಳಿ ನಡೆಸುವ ಸಾಧ್ಯತೆಯಿದೆ. ಇರಾನ್‌ ಬಳಿ ಬ್ಯಾಲಿಸ್ಟಿಕ್‌ ಮತ್ತು ಕ್ರೂಸ್‌ ಕ್ಷಿಪಣಿಗಳಿವೆ. ಇವು 2 ಸಾವಿರ ಕಿ.ಮೀ ದೂರದಲ್ಲಿರುವ ಗುರಿಯನ್ನು ಧ್ವಂಸ ಮಾಡುವ ಸಾಮರ್ಥ್ಯ ಹೊಂದಿದೆ.

ಇದನ್ನೂ ಓದಿ: BJP Manifesto: ಮೋದಿಯಿಂದ ಇಂದು ಪ್ರಣಾಳಿಕೆ ಬಿಡುಗಡೆ; ಸರ್ಪ್ರೈಸ್ ಘೋಷಣೆಗಳ ನಿರೀಕ್ಷೆಯಲ್ಲಿ ಜನ..!

Advertisment

ಇಸ್ರೇಲ್​​ ಮೇಲೆ ಇರಾನ್​​​ ಯಾವ ಕ್ಷಣದಲ್ಲಿ ಬೇಕಾದರು ದಾಳಿ ಮಾಡುವ ಲಕ್ಷಣವಿದ್ದು, ಈ ಯುದ್ಧದಿಂದ 3ನೇ ವಿಶ್ವ ಯುದ್ಧ ಆರಂಭವಾಗುವ ಭೀತಿ ಎದುರಾಗಿದೆ. ಇವರಿಬ್ಬರ ನಡುವೆ ಅಮೆರಿಕ ಎಂಟ್ರಿ ಕೊಟ್ಟಿರುವುದು ಸಂಚಲನ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment