/newsfirstlive-kannada/media/post_attachments/wp-content/uploads/2025/06/IRAN-3.jpg)
ಇರಾನ್-ಇಸ್ರೇಲ್ ನಡುವಿನ ಸಂಘರ್ಷ ಮಧ್ಯ ಪ್ರಾಚ್ಯದಲ್ಲಿ 3ನೇ ಮಹಾಯುದ್ಧದ ಕಾರ್ಮೋಡ ಆವರಿಸಿದೆ. ಕಳೆದ 6 ದಿನಗಳಿಂದಲೂ ಇರಾನ್ ಮತ್ತು ಇಸ್ರೇಲ್ ದೇಶಗಳ ನಡುವೆ ಕ್ಷಿಪಣಿ ದಾಳಿ ತಾರಕಕ್ಕೇರಿದೆ. ಇರಾನ್ ಹೈಪರ್ಸಾನಿಕ್ ಮಿಸೈಲ್ ಅನ್ನು ಬಳಸಿ ಟೆಲ್ ಅವೀವ್ ಮೇಲೆ ದಾಳಿ ಮಾಡಿದ್ದು, ಇಸ್ರೇಲ್ನನ್ನು ಮತ್ತಷ್ಟು ಕೆಣಕಿದೆ. ಇದರಿಂದ ಇಸ್ರೇಲ್ ತನ್ನ ದಾಳಿಯನ್ನು ಮತ್ತಷ್ಟು ಅಗ್ರೆಸಿವ್ ಗೊಳಿಸಿದ್ದು, ಇರಾನ್‌ನ ವಾಯುನೆಲೆಗಳ ಮೇಲೆ ಅಟ್ಯಾಕ್ ಮಾಡಿದೆ.
ಇರಾನ್‌ನ ವಾಯುನೆಲೆಗಳ ಮೇಲೆ ಇಸ್ರೇಲ್ ಅಟ್ಯಾಕ್
ಕಳೆದ ರಾತ್ರಿ ಇಸ್ರೇಲ್ ಮೇಲೆ ಇರಾನ್ ಹೈಪರ್ಸಾನಿಕ್ ಕ್ಷಿಪಣಿ.. ಫತಾಹ್-1 ಅನ್ನು ಪ್ರಯೋಗ ಮಾಡಿತ್ತು. ಇದು ಇಸ್ರೇಲ್ನ ಟೆಲ್ಅವೀವ್ನಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಸಿತ್ತು. ಇದರಿಂದ ಕೆರಳಿದ ಇಸ್ರೇಲ್ 60 ಫೈಟರ್ ಜೆಟ್ಗಳನ್ನು ಇರಾನ್ಗೆ ನುಗ್ಗಿಸಿದೆ. ಈ ಯುದ್ಧ ವಿಮಾನಗಳು ಟೆಹ್ರಾನ್ ಸೇರಿದಂತೆ ಹಲವೆಡೆ ವಾಯು ನೆಲೆಗಳ ಮೇಲೆ ದಾಳಿ ಮಾಡಿದೆ. ಇದರಲ್ಲಿ ಇರಾನ್‌ನ ಮೂರು ವಾರ್ ಹೆಲಿಕಾಫ್ಟರ್ಗಳು ಹಾನಿಗೊಳಗಾಗಿವೆ. ಇದಷ್ಟೇ ಅಲ್ಲ, ಸುಮಾರು 20 ಅಣ್ವಸ್ತಗಾರ ಮತ್ತು ಯುದ್ಧೋಪಕರಣಗಳ ಘಟವನ್ನು ಉಡೀಸ್ ಮಾಡಿದೆ. ಇರಾನ್‌ನ ಆಂತರಿಕ ಭದ್ರತಾ ಪ್ರಧಾನ ಕಚೇರಿಯನ್ನು ಇಸ್ರೇಲ್ ಧ್ವಂಸಗೊಳಿಸಿದೆ.
ನಜಾಫಾಬಾದ್‌ನಲ್ಲಿ ವಾಹನವೊಂದರ ಮೇಲೆ ಇಸ್ರೇಲಿ ನಡೆಸಿದ ವೈಮಾನಿಕ ದಾಳಿಯಲ್ಲಿ ಬಾಣಂತಿ ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ.
ಇದನ್ನೂ ಓದಿ: ವಿಶ್ವದ ಬೆಸ್ಟ್ ಏರ್ಲೈನ್ ಯಾವುದು..? ಕತಾರ್ ಏರ್ವೇಸ್ಗೆ ಸಾಲು ಸಾಲು ಪ್ರಶಸ್ತಿಗಳು
ಇಸ್ರೇಲ್ನ ಡ್ರೋಣ್ ಹೊಡೆದುರುಳಿಸಿದ ಇರಾನ್
ಇಸ್ರೇಲ್ನ ದಾಳಿಗೆ ಇರಾನ್ ಕೂಡ ತಕ್ಕ ಪ್ರತ್ಯುತ್ತರವನ್ನೇ ನೀಡ್ತಿದೆ. ಇರಾನ್‌ನ ಇಸ್ಫಹಾನ್ ನಗರದ ಬಳಿ ಇಸ್ರೇಲ್ನ ಡ್ರೋಣ್ ಅನ್ನು ಹೊಡೆದು ಹಾಕಿದ್ದು, ಅದರ ಅವಶೇಷಗಳು ಪತ್ತೆ ಆಗಿವೆ. ಇನ್ನು ಇಸ್ರೇಲ್ ಮೇಲೆ ಮತ್ತೆ ಹೈಪರ್ ಸಾನಿಕ್ ಕ್ಷಿಪಣಿಯನ್ನು ಪ್ರಯೋಗಿಸಿರುವುದಾಗಿ ಇರಾನ್ ಹೇಳಿಕೊಂಡಿದೆ. ಇತ್ತ ಇರಾನ್ ಕ್ಷಿಪಣಿಯನ್ನು ಲಾಂಚ್ ಮಾಡ್ತಿದ್ತಂತೆ ಅತ್ತ ಇಸ್ರೇಲ್ನಲ್ಲಿ ಹಲವು ಭಾಗಗಳನ್ನು ಸೈರನ್ ಮೊಳಗಿದೆ.
ಟ್ರಂಪ್ ವಾರ್ನಿಂಗ್ಗೆ ಇರಾನ್ ಸುಪ್ರೀಂ ಡೋಂಟ್ಕೇರ್
ಇರಾನ್-ಇಸ್ರೇಲ್ ನಡುವಿನ ಸಂಘರ್ಷದಲ್ಲಿ ಅಮೆರಿಕ ಎಂಟ್ರಿ ಕೊಟ್ಟ ನಂತರ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ. ಇರಾನ್ ಬೇಷರತ್ತಾಗಿ ಶರಣಾಗಬೇಕು, ಇಲ್ಲದಿದ್ದರೆ ದೊಡ್ಡದು ಸಂಭವಿಸಲಿದೆ ಎಂಬ ಟ್ರಂಪ್ ವಾರ್ನಿಂಗ್ ಇರಾನ್ ಸುಪ್ರೀಂ ಲೀಡರ್ ಸೊಪ್ಪು ಹಾಕಿಲ್ಲ.. ಬದಲಾಗಿ, ಇಸ್ರೇಲ್ ದಾಳಿಗೆ ಅಮೆರಿಕ ಬೆಂಬಲ ನೀಡಿದರೆ ಆ ಎರಡೂ ದೇಶಗಳಿಗೆ ದೊಡ್ಡ ಹಾನಿಯಾಗಲಿದೆ ಎಂದು ಖಮೇನಿ ಗುಡುಗಿದ್ದಾರೆ.
ಇದನ್ನೂ ಓದಿ: ಶರಣಾಗಲು ಇರಾನ್ಗೆ ಟ್ರಂಪ್ ಧಮ್ಕಿ.. ಮಧ್ಯಪ್ರಾಚ್ಯಕ್ಕೆ ಯುದ್ಧ ವಿಮಾನಗಳ ಕಳುಹಿಸಿದ ಅಮೆರಿಕ..
ಇದಕ್ಕೆ ರಿಯಾಕ್ಟ್ ಮಾಡಿರುವ ಅಮೆರಿಕಾ ಅಧ್ಯಕ್ಷ ಟ್ರಂಪ್.. ಇರಾನ್ಗೆ ಮತ್ತೊಮ್ಮೆ ಎಚ್ಚರಿಕೆ ಸಂದೇಶ ರವಾನಿಸಿದ್ದಾರೆ. ಮಾತುಕತೆ ಹಂತ ಮುಗಿದು ಹೋಗಿದೆ. ನಾನು ಯುದ್ಧವನ್ನು ಮಾಡಬಹುದು.. ಮಾಡದೇ ಇರಬಹುದು ಎಂದು.. ಆದ್ರೆ ನಾನು ಏನ್ ಮಾಡ್ತೀನಿ ಎಂದು ಯಾರಿಗೂ ತಿಳಿದಿಲ್ಲ.. ಮುಂದಿನ ದಿನಗಳ ನಿರ್ಣಾಯವಾಗಿರುತ್ತವೆ ಎಂದಿದ್ದಾರೆ ಎಂದು ಟ್ರಂಪ್ ಎಚ್ಚರಿಕೆ ಕೊಟ್ಟಿದ್ದಾರೆ.
ಈಗಾಗಲೇ ಅಮೆರಿಕಾ ಇರಾನ್-ಇಸ್ರೇಲ್ ನಡುವಿನ ಸಂಘರ್ಷದ ಮಧ್ಯೆ ಎಂಟ್ರಿಕೊಟ್ಟಿದೆ. ಒಂದ್ವೇಳೆ ವಿಶ್ವದ ದೊಡ್ಡಣ್ಣ ರಣರಂಗಕ್ಕೆ ಇಳಿದ್ರೆ, ಅತ್ತ ಇರಾನ್ ಪರ ರಷ್ಯಾ ಕೂಡ ಅಖಾಡಕ್ಕಿಳಿರುವ ಸಾಧ್ಯತೆ ಇದೆ. ಹೀಗಾಗಿ ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷ ಮಧ್ಯಪ್ರಾಚ್ಯದಲ್ಲಿ ಆತಂಕದ ವಾತಾವರಣ ಮೂಡಿಸಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ